ವೈರಲ್ ಆದ ದಶಕದ ಹಿಂದಿನ ಆದಿವಾಸಿ ಮಹಿಳೆಯ ಪ್ರತಿಭಟನೆಯ ಫೋಟೋ

ಗುವಾಹಾಟಿಯ ಬೀದಿಯಲ್ಲಿ ಆದಿವಾಸಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ದಶಕದ ಹಿಂದಿನ ಫೋಟೋವೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗ ವೈರಲ್ ಆಗಿರುವುದಕ್ಕೆ ಕಾರಣ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕವನ್ನು ದೂಷಿಸುವುದಾಗಿದೆ

ಗುವಾಹಾಟಿಯ ಬೀದಿಯಲ್ಲಿ ಆದಿವಾಸಿ ಮಹಿಳೆಯೊಬ್ಬರ ಮೇಲೆ ಹಲ್ಲೆ ನಡೆಸುತ್ತಿರುವ ದಶಕಗಳ ಹಿಂದಿನ ಫೋಟೋವೊಂದು ಇದೀಗ ಮತ್ತೆ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಅಂದಹಾಗೆ 2007ರ ಘಟನೆಯ ಫೋಟೋ ಇದೀಗ ವೈರಲ್ ಆಗಿರುವುದಕ್ಕೆ ಕಾರಣ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಘಟಕವನ್ನು ದೂಷಿಸುವುದಾಗಿದೆ.

ಅಸ್ಸಾಂನಲ್ಲಿ 2007ರ ನವೆಂಬರ್ ನಲ್ಲಿ ನಡೆದ ಈ ಘಟನೆ, ರಾಜಕೀಯ ದುರುದ್ದೇಶದಿಂದ ಇದೀಗ ಬೆಂಗಾಲ್ ಗೆ ಶಿಫ್ಟ್‌ ಆಗಿದ್ದು, ಹಿಂದೂ ಅಖಿಲೇಶ್ ಗುಪ್ತಾ ಸೇರಿದಂತೆ ಹಲವು ಫೇಸ್ ಬುಕ್ ಪೇಜ್ ನಲ್ಲಿ ಈ ಸುದ್ದಿ ಹರಿದಾಡುತ್ತಿದೆ.

"ಪಶ್ಚಿಮ ಬಂಗಾಳದಲ್ಲಿ ಮಹಿಳೆಯೊಬ್ಬರ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಕಾಂಗ್ರೆಸ್ ಜಾಥಾದ ಸಂದರ್ಭದಲ್ಲಿ, ಮಹಿಳೆಯೊಬ್ಬಳು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರಮೋದಿ ಪರ ಘೋಷಣೆ ಕೂಗಿದ ಕಾರಣಕ್ಕಾಗಿ ಆಕೆಯ ಮೇಲೆ ಹಲ್ಲೆ ನಡೆಯಿತು. ಕಾಂಗ್ರೆಸ್ ಜಾಥಾದಲ್ಲಿ ಆಕೆ 'ಮೋದಿ ಜಿಂದಾಬಾದ್' ಎಂದು ಘೋಷಣೆ ಕೂಗಿದ್ದರಿಂದ, ಕಾಂಗ್ರೆಸ್ ಕಾರ್ಯಕರ್ತರು ಆಕೆಯ ಮೇಲೆ ಮನಬಂದಂತೆ ಹಲ್ಲೆ ನಡೆಸಿದ್ದಾರೆ" ಈ ಫೋಟೋವನ್ನು ಶೇರ್ ಮಾಡಿ, ಕಾಂಗ್ರೆಸ್ ನ ನೈಜ ಮುಖವನ್ನು ಜಗತ್ತಿಗೆ ಪರಿಚಯಿಸಿ" ಎಂಬ ಶೀರ್ಷಿಕೆಯಡಿ ಈ ಪೋಸ್ಟ್ ಪೋಸ್ಟ್ ಆಗಿದ್ಜು, 15 ಸಾವಿರಕ್ಕೂ ಅಧಿಕ ಬಾರಿ ಶೇರ್ ಆಗಿದೆ. ಅಷ್ಟೇ ಅಲ್ಲದೆ ವಾಟ್ಸಾಪ್ ನಲ್ಲೂ ಹರಿದಾಡುತ್ತಿದೆ.

ಸುದ್ದಿಯ ಹಿನ್ನೆಲೆ

ನಾರ್ಥ್ ಈಸ್ಟ್ ವೆಬ್ ಸೈಟ್ ಸದ್ಯಕ್ಕೆ ವೈರಲ್ ಆಗುತ್ತಿರುವ ಫೋಟೋದ ಹಿಂದಿನ ನೈಜತೆಯನ್ನು ಬಹಿರಂಗಪಡಿಸಿದೆ.

2007ರ ನವೆಂಬರ್ ನಲ್ಲಿ ಅಸ್ಸಾಂ ನ ಆದಿವಾಸಿ ವಿದ್ಯಾರ್ಥಿ ಸಂಘ ತಮ್ಮ ಸಮುದಾಯವನ್ನು ಹಿಂದುಳಿದ ವರ್ಗದ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿತ್ತು. ಈ ಸಂದರ್ಭ ಅಸ್ಸಾಂನ ಬುಡಕಟ್ಟು ಯುವತಿ , ಬಟ್ಟೆಯನ್ನು ಹರಿದುಕೊಂಡು, ರಸ್ತೆ ಮೇಲೆ ಬೆತ್ತಲೆ ಪ್ರತಿಭಟನೆ ನಡೆಸಲು ಆರಂಭಿಸಿದಳು. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಕಲ್ಲುತೂರಾಟ ನಡೆಸಿದ್ದಲ್ಲದೆ, ಆಕೆಯ ಮೇಲೆ ಹಲ್ಲೆ ನಡೆಸಿದ್ದರು. ಬಳಿಕ ಪೊಲೀಸರು ಆಕೆಯನ್ನು ರಕ್ಷಿಸಿದ್ದರು.

ಆದರೆ ಅದೇ ಫೋಟೋವನ್ನು ಬಳಸಿಕೊಂಡು ಇದೀಗ ಸಾಮಾಜಿಕ ಜಾಲತಾಣದಲ್ಲಿ, ಪಶ್ಚಿಮ ಬಂಗಾಳದ ಕಾಂಗ್ರೆಸ್ ಮೇಲೆ ಆರೋಪ ಹೊರಿಸುವ ಸಲುವಾಗಿ ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
Editor’s Pick More