ವಾಟ್ಸಾಪ್ ವಿಡಿಯೋ ಪೋಸ್ಟ್ ಮಾಡಿ, ಪೇಚಿಗೆ ಸಿಲುಕಿದ ಮಾಜಿ ಸಂಸದೆ ರಮ್ಯಾ

ನಾನು ಪ್ರೌಢ ಶಾಲೆವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆಂದು ಪ್ರಧಾನಮಂತ್ರಿ ಮೋದಿಯವರು ಹೇಳಿಕೊಂಡ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಪೇಚಿಗೆ ಸಿಲುಕಿರುವ  ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ, ಬಳಿಕ ಮತ್ತೊಂದು ಟ್ವೀಟ್ ಮಾಡಿ ಇದು ವಾಟ್ಸಾಪ್ ನಿಂದಾಗಿರುವ ಯಡವಟ್ಟು ಎಂದು ಸ್ಪಷ್ಟಪಡಿಸಿದ್ದಾರೆ

ನಾನು ಪ್ರೌಢ ಶಾಲೆವರೆಗೆ ವಿದ್ಯಾಭ್ಯಾಸ ಮಾಡಿದ್ದೇನೆಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಹೇಳಿಕೊಂಡಿರುವ ವಿಡಿಯೋ ತುಣುಕೊಂದನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡುವ ಮೂಲಕ ಪೇಚಿಗೆ ಸಿಲುಕಿದ್ದ ಕಾಂಗ್ರೆಸ್ ಮಾಜಿ ಸಂಸದೆ ರಮ್ಯಾ , ತಮ್ಮ ತಪ್ಪಿನ ಅರಿವಾಗಿ ಮತ್ತೊಂದು ಟ್ವೀಟ್ ಮಾಡಿ ಇದು ಸಂದರ್ಶನದ ಸಂಪೂರ್ಣ ವಿಡಿಯೋ ಅಲ್ಲ, ವಾಟ್ಸ್ ಆಪ್ ನಿಂದಾದ ಯಡವಟ್ಟು ಎಂದು ಸ್ಪಷ್ಟಪಡಿಸಿದ್ದಾರೆ.

'ತುಂಬಾ ಕಷ್ಟಪಟ್ಟು ಈ ವಿಡಿಯೋವನ್ನು ಹುಡುಕಲಾಗಿದೆ. ಇದು 1998ರ ಸಂದರ್ಶನ. ಇದರಲ್ಲಿ ಸಾಹೇಬರು ಸ್ವತಃ ಹೇಳುವಂತೆ , ಅವರ ವಿಧ್ಯಾಭ್ಯಾಸ ಶಾಲೆವರೆಗೂ ಮಾತ್ರ ವಿದ್ಯಾಭ್ಯಾಸ ಮಾಡಿದ್ದೇನೆ ಎಂದು ಹೇಳಿದ್ದಾರೆ. ಆದರೆ, ಇಂದು ಸಾಹೇಬರ ಬಳಿ ಪದವಿ ಇದೆ. ಅವರು, 1979ರಲ್ಲಿ ಪದವಿ ಪಡೆದಿದ್ದಾರೆಂದು ವ್ಯಂಗ್ಯವಾಗಿ ಟ್ವೀಟ್ ಮಾಡಿದ್ದರು'.

ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿದ್ಯಾಭ್ಯಾಸ ಕುರಿತು ಕೇಂದ್ರ ಸರ್ಕಾರ ತಪ್ಪು ಮಾಹಿತಿ ನೀಡಿದೆ ಎಂದು ಹೇಳಲು ಯತ್ನಿಸಿ ರಮ್ಯಾ ಟ್ವೀಟ್ ಮಾಡಿರುವ ಈ ವಿಡಿಯೋ ತುಣುಕನ್ನು, 3 ಗಂಟೆಗಳಲ್ಲಿಯೇ 16,000ಕ್ಕೂ ಅಧಿಕ ಮಂದಿ ವೀಕ್ಷಿಸಿದ್ದಲ್ಲದೆ, 1,200ಕ್ಕೂ ಹೆಚ್ಚು ಬಾರಿ ರೀಟ್ವೀಟ್ ಆಗಿದೆ.

ಆದರೆ ತಮ್ಮ ವಿಡಿಯೋ ತುಣುಕು ಟ್ರೋಲ್ ಗೆ ಗುರಿಯಾಗುತ್ತಿದ್ದಂತೆ, ತಪ್ಪಿನ ಅರಿವಾಗಿರುವ ರಮ್ಯಾ, ಇದು ಸಂದರ್ಶನದ ಸಂಪೂರ್ಣ ವಿಡಿಯೋ ಅಲ್ಲ. ವಾಟ್ಸ್ ಆಪ್ ನಿಂದಾಗಿರುವ ಯಡವಟ್ಟು ಎಂದು ಸ್ಪಷ್ಟಪಡಿಸಿದ್ದಾರೆ.

ವಿಡಿಯೋ ಹಿಂದಿನ ಸತ್ಯ

ಇದು ಪ್ರಧಾನಿ ನರೇಂದ್ರ ಮೋದಿ ಅವರು, 1990ರಲ್ಲಿ ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದಾಗ ನೀಡಿದ ಸಂದರ್ಶನದ ತುಣುಕು. ಪತ್ರಕರ್ತ ರಾಜೀವ್‌ ಶುಕ್ಲಾ ಅವರು ‘ರು-ಬಾ-ರು’ ಹೆಸರಿನ ಸಂದರ್ಶನದಲ್ಲಿ ಪ್ರಧಾನಿ ಮೋದಿ ಅವರಿಗೆ ತಮ್ಮ ಶಿಕ್ಷಣ ಕುರಿತ ಪ್ರಶ್ನೆಗೆ ಮೋದಿ ಅವರು ಉತ್ತರಿಸಿರುವ 3೦ ಸೆಕೆಂಡ್‌ನ ವಿಡಿಯೋದಲ್ಲಿ ನರೇಂದ್ರ ಮೋದಿ ಅವರು ಶಾಲೆ ಶಿಕ್ಷಣ ಬಿಟ್ಟು ಬೇರೆಲ್ಲೂ ಓದಲಿಲ್ಲ ಎಂಬುದನ್ನು ತಾವೇ ಹೇಳುತ್ತಾರೆ. ಮೊದಲನೆಯದಾಗಿ ಹೇಳುವುದಾದರೆ ನಾನು ತುಂಬಾ ಓದಿರುವ, ಬರೆದಿರುವ ವ್ಯಕ್ತಿಯಲ್ಲ. ದೇವರ ಕೃಪೆಯಿಂದಾಗಿ ನನಗೆ ಹೊಸ ಹೊಸ ವಿಚಾರಗಳನ್ನು ಕಲಿಯುವ ಆಸಕ್ತಿ ಇತ್ತು. ಹೈಸ್ಕೂಲ್ ವಿಧ್ಯಾಭ್ಯಾಸ ಮುಗಿಸಿದ ಬಳಿಕ 17ನೇ ವಯಸ್ಸಿಗೆ ಮನೆ ಬಿಟ್ಟು ಹೊರಟುಬಂದೆ. ಅಲ್ಲಿಂದ ಹೊಸದನ್ನು ಕಲಿಯಲು ನಿರಂತರವಾಗಿ ಅಲೆದಾಡುತ್ತಿದ್ದೆ . “ನಾನು ಸಂಘ ಸೇರಿದ ನಂತರ ಅಲ್ಲಿನ ಕಾರ್ಯಕರ್ತರು ಓದುವಂತೆ ನನಗೆ ಒತ್ತಾಯ ಮಾಡಿದರು. ಅದರಂತೆ ದೆಹಲಿ ವಿಶ್ವವಿದ್ಯಾಲಯದಲ್ಲಿ ಬಾಹ್ಯ ವಿದ್ಯಾರ್ಥಿಯಾಗಿ ಬಿಎ ಪದವಿ ಪರೀಕ್ಷೆ ಕಟ್ಟಿ, ಪಾಸಾದೆ (1978). ನಂತರ ಅದೇ ಕಾರ್ಯಕರ್ತರು ಮುಂದೆ ಓದುವಂತೆ ಒತ್ತಾಯಿಸಿದಾಗ ಬಾಹ್ಯವಾಗಿಯೇ ಎಂಎ ಪರೀಕ್ಷೆ ಬರೆದು ಪಾಸಾದೆ. ಆದರೆ, ನಾನು ಒಂದು ದಿನವೂ ಕಾಲೇಜು ಗೇಟ್‌ ಕೂಡ ನೋಡಲಿಲ್ಲ,” ಎಂದು ಹೇಳುತ್ತಾರೆ.

ಆದರೆ, ವಿಡಿಯೋ ವೈರಲ್ ಆಗುತ್ತಿದ್ದಂತೆಯೇ ಸಂದರ್ಶನದ ನಿಜವಾದ ವಿಡಿಯೋ ಕುರಿತು ಚರ್ಚೆ ಆರಂಭವಾಗುತ್ತಿದ್ದಂತೆ, ಮತ್ತೊಂದು ಟ್ವೀಟ್ ಮಾಡಿರುವ ರಮ್ಯಾ, ಇದು ಸಂದರ್ಶನದ ಸಂಪೂರ್ಣ ವಿಡಿಯೋ ಇಲ್ಲ, ವಾಟ್ಸ್ ಆಪ್ ನಿಂದಾಗಿರುವ ಯಡವಟ್ಟು ಎಂದು ಸ್ಪಷ್ಟಪಡಿಸಿದ್ದಾರೆ.

ಪ್ರಧಾನಿ ಮೋದಿ ಅವರ ಶೈಕ್ಷಣಿಕ ವಿದ್ಯಾರ್ಹತೆ ಕುರಿತು ಸಾಕಷ್ಟು ವಿವಾದಗಳಿವೆ. 1978ರ ಬ್ಯಾಚ್‌ನಲ್ಲಿ ಪದವಿ ಪಡೆದವರ ಮಾಹಿತಿ ನೀಡಿ ಎಂದು ದೆಹಲಿ ವಿಶ್ವವಿದ್ಯಾಲಯಕ್ಕೆ ಆರ್‌ಟಿಐ ಕಾರ್ಯಕರ್ತರೊಬ್ಬರು ಮಾಹಿತಿ ಹಕ್ಕು ಕಾಯ್ದೆಯಡಿ ಅರ್ಜಿ ಸಲ್ಲಿಸಿದ್ದರು. ಆದರೆ, ವಿವಿ, ವಿದ್ಯಾರ್ಥಿಗಳ ಗೌಪ್ಯತೆ ದೃಷ್ಟಿಯಿಂದ ಮಾಹಿತಿ ನೀಡಲು ಸಾಧ್ಯವಿಲ್ಲ ಎಂದು ಹೇಳಿತ್ತು. ವಿವಿಯ ಈ ನಡೆ ಪ್ರಶ್ನಿಸಿ, ಆರ್‌ಟಿಐ ಕಾರ್ಯಕರ್ತ ಮಾಹಿತಿ ಆಯೋಗಕ್ಕೆ ಮೇಲ್ಮನವಿಯನ್ನೂ ಸಲ್ಲಿಸಿದ್ದರು.

ವಿಡಿಯೋ ಸ್ಟೋರಿ | ಕೆಮರೂನ್ ದೇಶದ ಮುಖವಾಡ ಬಯಲಿಗೆಳೆದ ‘ಬಿಬಿಸಿ’ ತನಿಖಾ ವರದಿ
ರಾಹುಲ್‌ ಗಾಂಧಿಗೆ ಆರೆಸ್ಸೆಸ್ ಕಾರ್ಯಕ್ರಮದ ಆಹ್ವಾನ ಬಂದಿದೆ ಎಂಬ ಸುದ್ದಿ ನಿಜವೇ?
‘ಚರಂಡಿಗೆ ಬಿದ್ದ ಕೊಡಗು ಜಿಲ್ಲಾಧಿಕಾರಿ’ ಎಂಬ ಶೀರ್ಷಿಕೆಯಡಿ ವೈರಲ್ ಆದ ವಿಡಿಯೋ ನಿಜವೇ?
Editor’s Pick More