ಮಳೆಹನಿ ಬೀಳುವಾಗಲೂ ಸೌರಕೋಶದಿಂದ ವಿದ್ಯುತ್‌ ಉತ್ಪಾದಿಸುವುದು ಸಾಧ್ಯ!

ಸೌರಕೋಶಗಳನ್ನು ಬಳಸಿ ಸೂರ್ಯನ ಬೆಳಕಿನಿಂದ ವಿದ್ಯುತ್‌ ಉತ್ಪಾದಿಸಬಲ್ಲೆವು. ಆದರೆ, ಮೋಡ ಕವಿದ ದಿನಗಳಲ್ಲಿ, ಮಳೆಹನಿಗಳು ಬೀಳುವಾಗ ಈ ಸೌರಕೋಶಗಳು ನಿಷ್ಕ್ರಿಯವಾಗಿಬಿಡುತ್ತವೆ ಎಂದುಕೊಂಡಿದ್ದೆವು. ಆದರೆ ಅಂಥ ಸಂದರ್ಭಗಳಲ್ಲೂ ವಿದ್ಯುತ್‌ ಉತ್ಪಾದಿಸಬಹುದು ಎಂಬುದು ಸಾಬೀತಾಗಿದೆ!

ಸೌರಕೋಶಗಳು ಮಳೆ ಅಥವಾ ಮೋಡ ಕವಿದ ಪರಿಸರದಲ್ಲಿ ಉಪಯೋಗಕ್ಕೆ ಬರುವುದಿಲ್ಲ. ಸೌರಕೋಶಗಳು ಸೂರ್ಯನ ಬೆಳಕನ್ನು ವಿದ್ಯುತ್‌ ಆಗಿ ಪರಿವರ್ತಿಸುವಂತೆ ವಿನ್ಯಾಸ ಮಾಡಲಾಗಿದೆ. ಮಳೆ ಅಥವಾ ಮೋಡ ಕವಿದ ದಿನಗಳಲ್ಲಿ ಸೌರಕೋಶಗಳಿಂದ ಹೊರಬಂದ ವಿದ್ಯುತ್‌ ಅನ್ನು ಬ್ಯಾಟರಿಗಳಲ್ಲಿ ಸಂಗ್ರಹಿಸಿಡುವ ವ್ಯವಸ್ಥೆಯನ್ನು ಮಾಡಲಾಗಿದೆ. ಆದರೆ, ಇದು ದುಬಾರಿ ವ್ಯವಹಾರವಾಗುತ್ತದೆ. ಇನ್ನು, ಸೂರ್ಯನ ಬೆಳಕು ಸಮಪರ್ಕವಾಗಿ ಇಲ್ಲದ ಪ್ರದೇಶಗಳೂ ಇವೆ. ಅಂಥ ಭೌಗೋಳಿಕ ಪ್ರದೇಶಗಳಲ್ಲಿ ಸೌರಶಕ್ತಿ ಉಪಯೋಗಕ್ಕೆ ಬಾರದು. ಸೌರಶಕ್ತಿಯ ಕುರಿತು ಯೋಚಿಸುವಾಗ ನಮ್ಮ ತಲೆಗೆ ಬರುವ ವಿಚಾರಗಳಿವು. ಆದರೆ, ಸೂರ್ಯನ ಬೆಳಕು ಕಡಿಮೆ ಇರುವ, ಮಳೆ ಸುರಿಯುವ ದಿನಗಳಲ್ಲೂ ಸೌರಕೋಶಗಳಿಂದ ವಿದ್ಯುತ್ ಉತ್ಪಾದಿಸುವ ಸಾಧ್ಯತೆಯನ್ನು ಚೀನಾದ ಸೂಚೌ ವಿಶ್ವವಿದ್ಯಾಲಯದ ಸಂಶೋಧಕರು, ಸೌರಕೋಶಗಳಿಂದ ಮಳೆಗಾಲದಲ್ಲೂ ವಿದ್ಯುತ್‌ ಉತ್ಪಾದಿಸಬಹುದು ಎಂಬುದನ್ನು ಕಂಡುಕೊಂಡಿದ್ದಾರೆ.

ಎಸಿಎಸ್‌ ನ್ಯಾನೊ ವಿಜ್ಞಾನ ಪತ್ರಿಕೆಯಲ್ಲಿ ಪ್ರಕಟವಾಗಿರುವ ಸಂಶೋಧನಾ ಲೇಖನ ಹೇಳುವಂತೆ, ಟ್ರೈಬೊಎಲೆಕ್ಟ್ರಿಕ್‌ ನ್ಯಾನೊ ಜನರೇಟರ್‌ ತಂತ್ರಜ್ಞಾನ ಬಳಸುವುದರಿಂದ ಸೌರಕೋಶದ ಮೇಲೆ ಮಳೆಹನಿಗಳ ಚಲನದಿಂದಲೂ ವಿದ್ಯುತ್‌ ಪಡೆಯಬಹುದು!

ಇದನ್ನೂ ಓದಿ : ಹುಷಾರ್‌, ಕಾಪಿ-ಪೇಸ್ಟ್ ಮಾಡುವವರ ಖಾತೆಗಳಿಗೆ ಬೀಗ ಹಾಕಲಿದೆ ಟ್ವಿಟರ್!

ನ್ಯಾನೊ ಜನರೇಟರ್‌ಗಳು ಸರಳವಾಗಿ ಹೇಳುವುದಾದರೆ, ಯಾಂತ್ರಿಕವಾದ ಶಕ್ತಿಯನ್ನು ಅಥವಾ ಚಲನೆಯನ್ನು ಬಳಸಬಹುದಾದ ವಿದ್ಯುತ್‌ ಆಗಿ ಪರಿವರ್ತಿಸುವ ಸಾಧನಗಳು. ಇದು ಸಣ್ಣ ಹನಿಗಳ ಚಲನೆಯನ್ನು ವಿದ್ಯುತ್‌ ಆಗಿ ಪರಿವರ್ತಿಸುವಷ್ಟು ಸಮರ್ಥವಾಗಿ ಈ ನ್ಯಾನೊ ಜನರೇಟರ್‌ ಕಾರ್ಯನಿರ್ವಹಿಸುತ್ತವೆ.

ನ್ಯಾನೊ ಜನರೇಟರ್‌ ಅವಳವಡಿಸಿದ ಹೈಬ್ರೀಡ್‌ ಸೌರಕೋಶವನ್ನು ಸಿದ್ಧಪಡಿಸಿದ ಸಂಶೋಧಕರು, ಅಗ್ಗದ ದರದಲ್ಲಿ ಹಾಗೂ ಸಮರ್ಥ ಮತ್ತು ಪರಿಸರಸ್ನೇಹಿ ವಿದ್ಯುತ್‌ ಉತ್ಪಾದನೆಗೆ ಹೇಳಿ ಮಾಡಿಸಿದ ಮಾದರಿಯಾಗಿದೆ ಎಂದು ಪ್ರತಿಪಾದಿಸಿದ್ದಾರೆ.

ಅಂತಾರಾಷ್ಟ್ರೀಯ ಇಂಧನ ಘಟಕದ ಪ್ರಕಾರ, ಇನ್ನು ಇಪ್ಪತ್ತು ವರ್ಷಗಳಲ್ಲಿ ಭೂಮಿಯ ಮೇಲೆ ಶೇ.೪೦೯ರಷ್ಟು ವಿದ್ಯುತ್‌ ನವೀಕರಿಸಬಹುದಾದ ಮೂಲಗಳಿಂದ ಉತ್ಪಾದನೆಯಾಗುತ್ತದೆ. ಈಗಾಗಲೇ ಆಪಲ್‌, ವಾಲ್‌ಮಾರ್ಟ್‌, ಅಮೆಜಾನ್‌ನಂತಹ ದೈತ್ಯ ಕಂಪನಿಗಳು ಕೂಡ ಸೌರವಿದ್ಯುತ್‌ಗೆ ಹೆಚ್ಚಿನ ಆದ್ಯತೆ ಕೊಟ್ಟಿದ್ದ ಹೊಸ ತಂತ್ರಜ್ಞಾನ ಅಳವಡಿಸಿಕೊಳ್ಳುವುದಕ್ಕೆ ಉತ್ಸುಕತೆ ತೋರಿವೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More