‘ಬಿಸಿನೆಸ್‌ ಇನ್‌ಸೈಡರ್‌’ ಸಮೀಕ್ಷೆ; ಜನರ ವಿಶ್ವಾಸ ಕಳೆದುಕೊಂಡ ಫೇಸ್‌ಬುಕ್

ಕೇಂಬ್ರಿಡ್ಜ್‌ ಅನಾಲಿಟಿಕಾ ಪ್ರಕರಣ ಹಾಗೂ ಮಾರ್ಕ್‌ ಝುಕರ್‌ಬರ್ಗ್‌ ವಿಚಾರಣೆ ಹಿನ್ನೆಲೆಯಲ್ಲಿ ಖಾಸಗಿತನ ಮತ್ತು ಮಾಹಿತಿ ಸುರಕ್ಷತೆಯ ಕುರಿತು ದೊಡ್ಡ ಚರ್ಚೆಯೇ ಆರಂಭವಾಗಿದೆ. ಈ ಹಿನ್ನೆಲೆಯಲ್ಲಿ ಬಿಸಿನೆಸ್‌ ಇನ್‌ಸೈಡರ್‌ ನಡೆಸಿದ ಸಮೀಕ್ಷೆ ಫೇಸ್‌ಬುಕ್‌ಗೆ ಆತಂಕ ಹುಟ್ಟಿಸುವಂತಿದೆ

ಪ್ರತಿಷ್ಠಿತ ವಾಣಿಜ್ಯ ನಿಯತಕಾಲಿಕೆ ‘ಬಿಸಿನೆಸ್‌ ಇನ್‌ಸೈಡರ್‌’ ನಡೆಸಿದ ಇತ್ತೀಚಿನ ಡಿಜಿಟಲ್‌ ಲೋಕದಲ್ಲಿ ವಿಶ್ವಾಸಾರ್ಹತೆಯ ಸಮೀಕ್ಷೆಯಲ್ಲಿ ಪ್ರಾಥಮಿಕ ಹಂತದ ಫಲಿತಾಂಶದಲ್ಲಿ ಶೇ.೮೧ರಷ್ಟು ಬಳಕೆದಾರರು ಫೇಸ್‌ಬುಕ್‌ನಲ್ಲಿ ತಮ್ಮ ಮಾಹಿತಿ ಸುರಕ್ಷತೆ ಮತ್ತು ಖಾಸಗಿತನದ ವಿಷಯದಲ್ಲಿ ನಂಬಿಕೆ ಕಳೆದುಕೊಂಡಿರುವುದಾಗಿ ಹೇಳಿಕೊಂಡಿದ್ದಾರೆ.

ಇತರ ಸಾಮಾಜಿಕ ಜಾಲತಾಣಗಳಲ್ಲಿ ಮಾಹಿತಿ ಸುರಕ್ಷತೆಯನ್ನು ಹೋಲಿಕೆ ಮಾಡಿದ್ದು, ಶೇ.೫೮ ಮಂದಿ ಸಂಪೂರ್ಣ ವಿಶ್ವಾಸ ಕಳೆದುಕೊಂಡಿರುವುದಾಗಿ, ಶೇ.೨೩ರಷ್ಟು ಮಂದಿ ಕೊಂಚ ಮಟ್ಟಿನ ವಿಶ್ವಾಸವಿದೆ ಎಂದು ಹೇಳಿದ್ದಾರೆ. ಆದರೆ, ಮಾಹಿತಿ ಸೋರಿಕೆಯ ಬಗ್ಗೆ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಕೇಂಬ್ರಿಡ್ಜ್‌ ಅನಾಲಿಟಿಕಾ ೮೭ ಕೋಟಿ ಬಳಕೆದಾರರ ಮಾಹಿತಿಯನ್ನು ಫೇಸ್‌ಬುಕ್‌ನಿಂದ ಅಕ್ರಮವಾಗಿ ಸಂಗ್ರಹಿಸಿದ ಸುದ್ದಿ ಕಳೆದ ತಿಂಗಳು ಆತಂಕ ಸೃಷ್ಟಿಸಿತ್ತು. ಬಳಕೆದಾರರು ತಮ್ಮ ಮಾಹಿತಿ ಬಹಿರಂಗವಾಗಿರುವ ಭೀತಿಯಲ್ಲಿದ್ದರೆ, ಫೇಸ್‌ಬುಕ್‌ ಸುರಕ್ಷತೆಯ ಲೋಪದ ವಿಷಯದಲ್ಲಿ ದೊಡ್ಡ ಪೆಟ್ಟು ತಿಂದು ನಷ್ಟದ ಭೀತಿಯಲ್ಲಿದೆ. ಈ ಸಂದರ್ಭದಲ್ಲಿ ‘ಬಿಸಿನೆಸ್‌ ಇನ್‌ಸೈಡರ್‌’ ಸಮೀಕ್ಷೆ ಇನ್ನಷ್ಟು ಮಹತ್ವದ ಸಂಗತಿಗಳನ್ನು ಬಯಲು ಮಾಡಿದೆ.

  • ಕೊಂಚ ಮಟ್ಟಿನ ಕುಸಿತವನ್ನು ಕಾಣಬಹುದು ಎಂದು ಸಮೀಕ್ಷೆ ಅಂಶಗಳು ಹೇಳುತ್ತವೆ. ಅಮೆರಿಕದಲ್ಲಿ ಶೇ.೭೭ರಷ್ಟು ಸಕ್ರಿಯ ಬಳಕೆದಾರರಿದ್ದಾರೆ. ಕೋಟ್ಯಂತರ ಬಳಕೆದಾರರ ಈ ನಿತ್ಯವೂ ಬಳಸುವ ರೂಢಿ ಅಷ್ಟು ಸುಲಭವಾಗಿ ಬದಲಾಗದು. ಆದರೆ ‘DeleteFacebook’ ಅಭಿಯಾನ, ಅನಾಲಿಟಿಕಾ ಪ್ರಕರಣದ ಭೀತಿಯಿಂದ ಈ ವರ್ಷವಿಡೀ ಬಳಕೆಯಲ್ಲಿ ವ್ಯತ್ಯಾಸವಾಗುವುದು ಖಚಿತ.
  • ಜಾಹೀರಾತು ಕ್ಯಾಂಪೇನ್‌ಗಳು ಅಲ್ಪವಿರಾಮ ಘೋಷಿಸಬಹುದು. ಆದರೆ, ಆದಾಯದ ಮೇಲೆ ಯಾವುದೇ ಪರಿಣಾಮ ಬೀರುವುದಿಲ್ಲ. ಫೇಸ್‌ಬುಕ್‌ಗೆ ನೇರ ಗ್ರಾಹಕರನ್ನು ಉದ್ದೇಶಿಸಿ ಪ್ರಸಾರ ಮಾಡಲು ಯಾವುದೇ ತೊಡಕು ಇಲ್ಲದಿರುವುದರಿಂದ ಆದಾಯದಲ್ಲೂ ವ್ಯತ್ಯಾಸವಾಗುವುದಿಲ್ಲ.
ಇದನ್ನೂ ಓದಿ : ಮಾರ್ಕ್‌ ಝುಕರ್‌ಬರ್ಗ್‌ ವಿಚಾರಣೆ | ಉತ್ತರ ಸಿಗದೆ ಉಳಿದ ಐದು ಪ್ರಶ್ನೆಗಳು

ಆದರೆ ಬಳಕೆದಾರರಲ್ಲಿ ಮಾತ್ರ ಫೇಸ್‌ಬುಕ್‌ ವಿಷಯದಲ್ಲಿದ್ದ ನಂಬಿಕೆ ಕುಸಿಯುತ್ತಿದೆ ಎಂಬ ಅಂಶವನ್ನು ಸಮೀಕ್ಷೆ ಸ್ಪಷ್ಟವಾಗಿ ಹೇಳಿದೆ.

ಕಳೆದ ವರ್ಷವೂ, ಖಾಸಗಿತನ ಮತ್ತು ಮಾಹಿತಿ ಸುರಕ್ಷತೆಯ ಸಮೀಕ್ಷೆ ನಡೆಸಿದಾಗ, ಬಳಕೆದಾರರು ಹೆಚ್ಚು ವಿಶ್ವಾಸಾರ್ಹ ಸೇವೆ ಪಟ್ಟವನ್ನು ಲಿಂಕ್ಡ್‌ಇನ್‌ಗೆ ನೀಡಿದ್ದರು. ಶೇ. ೫೫ರಷ್ಟು ಮತಗಳು ಈ ಆಪ್‌ಗೆ ಸಿಕ್ಕಿತ್ತು. ಶೇ.೧೫ರಷ್ಟು ಮತಗಳೊಂದಿಗೆ ಎರಡನೆಯ ಸ್ಥಾನದಲ್ಲಿ ಇದ್ದದ್ದು ಫೇಸ್‌ಬುಕ್‌!

ಇದು ‘ಬಿಸಿನೆಸ್‌ ಇನ್‌ಸೈಡರ್’ ಆರಂಭಿಸಿರುವ ಸಮೀಕ್ಷೆಯ ಪ್ರಾಥಮಿಕ ಹಂತದ ಅಂಶಗಳಾಗಿದ್ದು, ಜೂನ್‌ ಹೊತ್ತಿಗೆ ಪೂರ್ಣಪ್ರಮಾಣದ ಫಲಿತಾಂಶ ಪ್ರಕಟವಾಗಲಿದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More