ಅಮ್ಮಂದಿರ ದಿನ | ತಾಯಿ ಪದಕ್ಕೆ ಅನ್ವರ್ಥಕ ಗದಗದ ಈ ಮಹಾತಾಯಿ ಬೇಗಂ

71 ವರ್ಷದ ಈ ವೃದ್ಧೆ, 51 ವಯಸ್ಸಿನ ಆಸುಪಾಸುನಲ್ಲಿರುವ ತನ್ನಿಬ್ಬರು ವಿಕಲಚೇತನ ಮಕ್ಕಳಿಗೆ ಒಡಲು ನೀಡಿದ್ದಾರೆ. ಈ ಮೂಲಕ ಇಳಿವಯಸ್ಸಿನಲ್ಲಿ ಮಕ್ಕಳ ಆರೈಕೆಯಲ್ಲಿರಬೇಕಾದ ತಾಯಿ, ಬದುಕಿನ ಇಳಿವಯಸ್ಸಲ್ಲೂ ಮಕ್ಕಳ ಪಾಲನೆ, ಪೋಷಣೆ ಮಾಡುವಂತಾಗಿದ್ದು, ಜನಮೆಚ್ಚುಗೆ ಪಡೆದಿದ್ದಾರೆ

ಅಮ್ಮಂದಿರ ದಿನದಂದು ಒಮ್ಮೆ ಈ ಮಹಾತಾಯಿಯನ್ನು ನಾವು ನೆನಪಿಸಿಕೊಳ್ಳಲೇಬೇಕು. ಇಳಿವಯಸ್ಸಿನಲ್ಲಿ ಬಹು ಅಂಗಾಂಗ ವೈಕಲ್ಯಕ್ಕೆ ಒಳಗಾಗಿರುವ ಮಕ್ಕಳನ್ನು ಪೋಷಿಸುವ ಜವಾಬ್ದಾರಿಯನ್ನು ಹೊತ್ತವರು ಇವರು. ಮಕ್ಕಳು ಇಳಿವಯಸ್ಸಿನಲ್ಲಿ ಹೆತ್ತವರಿಗೆ ಆಸರೆಯಾಗಿರುತ್ತಾರೆ ಎನ್ನುವ ವಿಶ್ವಾಸ ಸಾಮಾನ್ಯವಾಗಿ ಇರುತ್ತದೆ. ಆದರೆ ಈ ಮಹಾತಾಯಿ ತಮ್ಮ ಇಳಿ ವಯಸ್ಸಿನಲ್ಲಿ ತಮ್ಮದೇ ಮಕ್ಕಳಿಗೆ ಆಸರೆಯಾಗಿದ್ದಾರೆ.

71 ವರ್ಷದ ಈ ವೃದ್ಧೆ 51 ವಯಸ್ಸಿನ ಆಸುಪಾಸುನಲ್ಲಿರುವ ತನ್ನಿಬ್ಬರು ವಿಕಲಚೇತನ ಮಕ್ಕಳಿಗೆ ಒಡಲು ನೀಡಿದ್ದಾರೆ. ಈ ಮೂಲಕ ಇಳಿವಯಸ್ಸಿನಲ್ಲಿ ಮಕ್ಕಳ ಆರೈಕೆಯಲ್ಲಿರಬೇಕಾದ ತಾಯಿ, ಬದುಕಿನ ಇಳಿವಯಸ್ಸಲ್ಲೂ ಮಕ್ಕಳ ಪಾಲನೆ, ಪೋಷಣೆ ಮಾಡುವಂತಾಗಿದೆ. ಗದಗ ನಗರದ ವಿವೇಕಾನಂದ ರಸ್ತೆಯ ಈದ್ಗಾ ಕಾಂಪ್ಲೆಕ್ಸ್ ಬಳಿ ಇವರ ಮನೆ. ಇವರ ಹೆಸರು ಬೇಗಂ. ದಾಂಪತ್ಯ ಬದುಕಿನಲ್ಲಿ ಬಹುಬೇಗನೇ ಏಕಾಂಗಿಯಾದ ಇವರಿಗೆ ಮಕ್ಕಳೂ ಭಾರವಾದರು.

ಬೇಗಂ ಅವರಿಗೆ ಇಬ್ಬರು ಹೆಣ್ಣುಮಕ್ಕಳು. ಮೊದಲನೇ ಮಗಳು 51 ವರ್ಷದ ಮೆಹರುನ್ನಿಸಾ, ಎರಡನೇ ಮಗಳು 48 ವರ್ಷದ ನಜಮುನ್ನಿಸಾ. ಇಬ್ಬರೂ ಬುದ್ಧಿಮಾಂದ್ಯ ಹಾಗೂ ಬಹು ಅಂಗಾಂಗ ವೈಕಲ್ಯರು. ಎರಡನೇ ಮಗಳು ನಜಮುನ್ನಿಸಾ ನಾಲ್ಕು ತಿಂಗಳ ಕೂಸಾಗಿದ್ದಾಗಲೇ ಪತಿ ಹುಸೇನಸಾಬ್ ನಿಧನ ಹೊಂದಿದರು. ಪತಿ ಹುಸೇನಸಾಬ್ ರೈಲ್ವೆ ಇಲಾಖೆ ಉದ್ಯೋಗಿಯಾಗಿದ್ದ ಕಾರಣ ಅನುಕಂಪದ ಆಧಾರದಲ್ಲಿ ಮೂರನೇ ತರಗತಿ ಓದಿದ್ದ ಬೇಗಂ ಅವರಿಗೆ ನೌಕರಿ ಸಿಕ್ಕಿತು. ಇದೀಗ ಬೇಗಂ ಅವರು ನಿವೃತ್ತಿಯಾಗಿ 11 ವರ್ಷಗಳಾಗಿವೆ. ಆದರೆ, ಇಳಿವಯಸ್ಸಿನಲ್ಲೂ ಮಕ್ಕಳನ್ನು ಸಾಕಿ ಸಲಹುವ ಭಾರ ಅವರದು.

ನನಗೆ ಈಗ ನನ್ನ ಆರೋಗ್ಯದ ಚಿಂತೆ ಕಾಡುತ್ತಿದೆ. ನನ್ನ ಇಳಿ ವಯಸ್ಸಿನಲ್ಲಿ ನನ್ನ ಆರೋಗ್ಯದ ಜೊತೆಗೆ ಮಕ್ಕಳದ್ದೇ ಚಿಂತೆಯಾಗಿದೆ. ನಾನಿರುವವರೆಗೂ ಮಕ್ಕಳನ್ನು ನಾನೇ ಸಾಕುತ್ತೇನೆ. ಮುಂದೆ ನನ್ನ ಮಕ್ಕಳ ಸ್ಥಿತಿ ನೆನೆದು ಆತಂಕವಾಗುತ್ತಿದೆ.
ಬೇಗಂ
ಇದನ್ನೂ ಓದಿ : ಅದ್ಧೂರಿ, ಅಬ್ಬರದ ಮಧ್ಯೆ ಕಳೆದುಹೋಗುತ್ತಿರುವ ಕನ್ನಡ ಚಿತ್ರಗಳ ಅಮ್ಮ
ಬೇಗಂ ನಿಜಕ್ಕೂ ಮಹಾತಾಯಿ. ಬೇಗಂ ಅವರು ಇಳಿವಯಸ್ಸಿನಲ್ಲಾದರೂ ಸ್ವಲ್ಪ ನೆಮ್ಮದಿಯ ಜೀವನ ನಡೆಸಬೇಕೆಂದರೆ ಅವರ ಮಕ್ಕಳ ಪೋಷಣೆಗೆ ಇತರರ ಸಹಕಾರ ಅಗತ್ಯ. ಸಂಘಸಂಸ್ಥೆಗಳು ಇವರಿಗೆ ನೆರವು ನೀಡಬೇಕಿದೆ.
ಕವಿತಾ, ಸ್ಥಳೀಯರು

ನಿತ್ಯ ಬೆಳಿಗ್ಗೆಯಿಂದ ಕಣ್ಣಿಗೆ ನಿದ್ದೆ ಬರೋ ತನಕ ಮಕ್ಕಳ ಪೋಷಣೆಯಲ್ಲೆ ತೊಡಗುವ ಬೇಗಂ ಕಾರ್ಯ ಓಣಿಯ ಜನರ ಮೆಚ್ಚುಗೆ ಹಾಗೂ ಅನುಕಂಪಕ್ಕೂ ಕಾರಣವಾಗಿದೆ. ಹೀಗಾಗಿ ಸಂಘ, ಸಂಸ್ಥೆಗಳು ಮಕ್ಕಳಿಗೆ ನೆರವು ನೀಡುವುದಾಗಿ ಹೇಳಿವೆ. ನೆರವು ಸಿಕ್ಕರೆ ಬೇಗಂ ಅವರ ಅರ್ಧ ಹೊರೆ ಇಳಿಯುತ್ತದೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More