ವಿಡಿಯೋ ಸ್ಟೋರಿ | ಲಾವಾರಸದ ಬೆಂಕಿಯಲ್ಲಿ ಮುರುಟಿದ ಗ್ವಾಟೆಮಾಲಾ ಜನರ ಬದುಕು

ಲ್ಯಾಟಿನ್ ಅಮೆರಿಕದ ಗ್ವಾಟೆಮಾಲಾ ರಾಜಧಾನಿಯ ಸುತ್ತ ೪೦ ಕಿಮೀ ದೂರಕ್ಕೆ ಲಾವಾರಸ ಹರಡಿ ೨೫ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಮನೆಯೊಳಗೆ ಬೆಂಕಿ ನೀರು ನುಗ್ಗಿ ಹಲವಾರು ಜನರು ಗಾಯಗೊಂಡಿದ್ದಾರೆ ಹಾಗೂ ನೂರಾರು ಜನರು ಕಾಣೆಯಾಗಿದ್ದಾರೆ. ಸಾವಿನ ಸಂಖ್ಯೆ ಹೆಚ್ಚುವ ಸಾಧ್ಯತೆಗಳಿವೆ

ಗ್ವಾಟೆಮಾಲಾ ಕೇವಲ ಒಂದು ಕೋಟಿಯಷ್ಟು ಜನಸಂಖ್ಯೆಯನ್ನು ಹೊಂದಿರುವ ದೇಶ. ಫಿಗೋ ಜ್ವಾಲಾಮುಖಿ ವಿಶ್ವದ ಅತ್ಯಂತ ಜೀವಂತ ಜ್ವಾಲಾಮುಖಿಗಳಲ್ಲಿ ಒಂದಾಗಿದ್ದು, ಹೀಗೆ ಅಬ್ಬರಿಸುವುದು ಅತಿ ಸಾಮಾನ್ಯ ಆಗಿಬಿಟ್ಟಿದೆ. ಆದರೆ, ಬಡ ದೇಶವಾಗಿರುವ ಗ್ವಾಟೆಮಾಲಾದಲ್ಲಿ ಫಿಗೋಗೆ ಜನರು ಸಾಯುತ್ತಲೇ ಇರುವುದು ದುರಂತ. ಈ ಬಾರಿಯ ಜ್ವಾಲಾಮುಖಿ ಸ್ಫೋಟದ ನಂತರದ ಕೆಲವು ಚಿತ್ರಗಳು ಇಲ್ಲಿವೆ.

ಇದನ್ನೂ ಓದಿ : ಸ್ಟೇಟ್ ಪಿಕ್ | ಜ್ವಾಲಾಮುಖಿ

ಈಗಿನ ಜ್ವಾಲಾಮುಖಿ ಆಕಾಶಕ್ಕೆ ೬ ಕಿಮೀ ಎತ್ತರಕ್ಕೆ ಚಾಚಿದೆ. ೧೯೦೨ರಲ್ಲೂ ಸಂತ ಮಾರಿಯಾ ಜ್ವಾಲಾಮುಖಿಯಿಂದ ಸಾವಿರಾರು ಜನರು ಸಾವನ್ನಪ್ಪಿದ್ದರು. ೧೯೭೪ರಲ್ಲಿ ಒಮ್ಮೆ ಲಾವಾರಸ ಆಕಾಶಕ್ಕೆ ಚಿಮ್ಮಿತ್ತು. ಆದರೆ, ಯಾವುದೇ ಸಾವಿನ ವರದಿಗಳು ದಾಖಲಾಗಿರಲಿಲ್ಲ. ಆದರೆ, ಈ ಬಾರಿ ಜನರ ಪರಿಸ್ಥಿತಿ ತೀವ್ರ ಹದಗೆಟ್ಟಿದೆ. ಮನೆಯೊಳಗೆ ಲಾವಾರಸ ನುಗ್ಗುದ್ದು, ಜನರು ಕಂಗಾಲಾಗಿದ್ದಾರೆ. ಹಲವಾರು ಜನ ಕಾಣೆಯಾಗಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More