ಫೆಮಿನಾ ಮಿಸ್ ಇಂಡಿಯಾ; ಕಿರೀಟ ಹೊತ್ತ ತಮಿಳುನಾಡಿನ ೧೯ ರ ನೀರೆ ಅನುಕ್ರೀತಿ ವಾಸ್

ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ ೨೦೧೮ರ ಕಿರೀಟವನ್ನು ತಮಿಳುನಾಡಿನ ಅನುಕ್ರೀತಿ ವಾಸ್ ಮುಡಿಗೇರಿಸಿಕೊಂಡಿದ್ದಾರೆ. ಹರಿಯಾಣದ ಮೀನಾಕ್ಷಿ ಚೌಧರಿ ಮೊದಲ ರನ್ನರ್‌ ಅಪ್‌ ಹಾಗೂ ಆಂಧ್ರ ಪ್ರದೇಶದ ಶ್ರೇಯಾ ರಾವ್‌ ಕಮವರಪು ಎರಡನೇ ರನ್ನರ್‌ ಅಪ್‌ ಸ್ಥಾನ ಗೆದ್ದುಕೊಂಡಿದ್ದಾರೆ

ಈ ಬಾರಿಯ ಫೆಮಿನಾ ಮಿಸ್ ಇಂಡಿಯಾ ೨೦೧೮ರ ಕಿರೀಟವನ್ನು ತಮಿಳುನಾಡಿನ ಅನುಕ್ರೀತಿ ವಾಸ್ ಮುಡಿಗೇರಿಸಿಕೊಂಡಿದ್ದಾರೆ. ನಟ ಆಯುಶ್ಮಾನ್ ಖುರಾನಾ ಹಾಗೂ ನಿರ್ದೇಶಕ ಕರಣ್ ಜೋಹರ್ ಪ್ರಸ್ತುತ ಪಡಿಸಿದ ಫೆಮಿನಾ ಮಿಸ್ ಇಂಡಿಯಾ ಕಾರ್ಯಕ್ರಮದಲ್ಲಿ ೨೦೧೭ರ ಮಿಸ್ ವರ್ಲ್ಡ್ ಮಾನು‍ಷಿ ಚಿಲ್ಲರ್ ಕಿರೀಟ ತೊಡಿಸಿದರು. ಮೂವತ್ತು ಜನ ಸ್ಪರ್ಧಿಗಳ ನಡುವೆ ಆರಿಸಿ ಬಂದ ಅನು ಈ ಹಿಂದೆ ಫೆಮಿನಾ ಮಿಸ್ ತಮಿಳುನಾಡು ಆಗಿ ಆಯ್ಕೆಯಾಗಿದ್ದರು.

೧೯ ವರ್ಷ ವಯಸ್ಸಿನ ಅನು ತಮಿಳುನಾಡು ಲೊಯೋಲಾ ಕಾಲೇಜಿನ ವಿದ್ಯಾರ್ಥಿ. ಈ ಮೊದಲು ಮಿಸ್ ಇಂಡಿಯಾ ಮಿಸ್ ಬ್ಯೂಟಿಫುಲ್ ಸ್ಮೈಲ್ ೨೦೧೮ ಹಾಗೂ ಇಂಡಿಯಾ ಮಿಸ್ ಫ್ಯಾಷನ್ ಐಕಾನ್(ದಕ್ಷಿಣ) ೨೦೧೮ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಫ್ರೆಂಚ್ ಭಾಷೆಯಲ್ಲಿ ಬ್ಯಾಚುಲರ್ ಆಫ್ ಆರ್ಟ್ ಕಲಿಯುತ್ತಿರುವ ಅನು ಅವರ ತಾಯಿಯ ಆಸೆಯಂತೆ ಫ್ರೆಂಚ್ ಭಾಷೆಯಲ್ಲಿ ಭಾಷಾಂತರಕಾರಳಾಗಬೇಕು, ರೂಪದರ್ಶಿಯೂ ಆಗಬೇಕು ಎಂಬ ಆಸೆಯೊಂದಿಗೆ ತಯಾರಿ ನಡೆಸಿದರಂತೆ. ಅನು ನೃತ್ಯಗಾರ್ತಿಯೂ ಆಗಿದ್ದು ರಾಜ್ಯ ಮಟ್ಟದ ಕ್ರೀಡಾಪಟು ಕೂಡ ಹೌದು. ಸೂಪರ್‌ ಮಾಡೆಲ್ ಆಗಬೇಕೆಂಬುದು ಆಕೆಯ ಕನಸು. ಮುಂದಿನ ೨೦೧೮ರ ಮಿಸ್ ವರ್ಲ್ಡ್ ಕಿರೀಟ ಬಾಚಿಕೊಳ್ಳಲು ತಯಾರಿ ನಡೆಸುತ್ತಿದ್ದಾರೆ.

ಒಳಗಿನಿಂದ ಹೊಳೆಯುವ ಬೆಳಕನ್ನು ಎಂದೂ ಕತ್ತರಿಸಲಾಗುವುದಿಲ್ಲ, ಮುಂದಿನ ಮಿಸ್ ವರ್ಲ್ಡ್‌ನಲ್ಲಿ ಭಾರತವನ್ನು ಪ್ರತಿನಿಧಿಸುವುದು ನನ್ನ ಮುಂದಿನ ಗುರಿ
ಅನುಕ್ರೀತಿ ವಾಸ್, ಫೆಮಿನಾ ಮಿಸ್ ಇಂಡಿಯಾ ೨೦೧೮
ಇದನ್ನೂ ಓದಿ : ‘ಕತ್ತಲೆಯ ಸರಿಯಾದ ನೆರಳು ನೀನು’ ಎಂದು ಟ್ರೋಲ್‌ಗೆ ಒಳಗಾದ ಮಾಡೆಲ್ ನಿಧಿ ಸುನಿಲ್

ಹರಿಯಾಣದ ಮೀನಾಕ್ಷಿ ಚೌಧರಿ ಮೊದಲ ರನ್ನರ್‌ ಅಪ್‌ ಹಾಗೂ ಆಂಧ್ರ ಪ್ರದೇಶದ ಶ್ರೇಯಾ ರಾವ್‌ ಕಮವರಪು ಎರಡನೇ ರನ್ನರ್‌ ಅಪ್‌ ಸ್ಥಾನ ಗೆದ್ದುಕೊಂಡಿದ್ದಾರೆ. ತೀರ್ಪುಗಾರರ ಸಮಿತಿಯಲ್ಲಿ ಕ್ರಿಕೆಟರ್‌ ಇರ್ಫಾನ್‌ ಪಠಾಣ್‌ ಮತ್ತು ಕೆಎಲ್‌ ರಾಹುಲ್‌, ಬಾಲಿವುಡ್‌ನ ಮಲೈಕಾ ಅರೋರ, ಬಾಬಿ ಡಿಯೋಲ್‌ ಮತ್ತು ಕುನಾಲ್‌ ಕಪೂರ್ ಇದ್ದರು.

ಫೆಮಿನಾ ಮಿಸ್‌ ಇಂಡಿಯಾ 2018 ಕಾರ್ಯಕ್ರಮದಲ್ಲಿ ಬಾಲಿವುಡ್ ನಟಿಯರಾದ ಮಾಧುರಿ ದೀಕ್ಷಿತ್, ಜಾಕ್ವಲಿನ್ ಫರ್ನಾಂಡಿಸ್ ಸೇರಿದಂತೆ ಹಲವು ನಟಿಯರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More