ಭಾರತದ ವಾತಾವರಣದಲ್ಲಿರುವ ಗಾಳಿ ಆಕಾಶದಿಂದ ಏಕೆ ಭಿನ್ನವಾಗಿ ಕಾಣುತ್ತದೆ?

ಮಾಲಿನ್ಯದಿಂದಾಗಿ ವಾತಾವರಣದಲ್ಲಿ ಸಾಕಷ್ಟು ಬದಲಾವಣೆ ಆಗುತ್ತಲೇ ಇರುತ್ತದೆ. ನಮ್ಮ ಕಣ್ಣಿಗೆ ಕಾಣುವುದು ಒಂದಿಷ್ಟಾದರೆ, ಕಾಣದೆ ಇರುವುದು ಸಾಕಷ್ಟು ಇರುತ್ತದೆ. ಆದರೆ, ಉಪಗ್ರಹದ ಮೂಲಕ ಪತ್ತೆಯಾಗಿರುವ ಅಂಥದ್ದೇ ಒಂದು ಅಂಶ ಇದೀಗ ವಿಜ್ಞಾನಿಗಳ ಆತಂಕಕ್ಕೆ ಕಾರಣವಾಗಿದೆ

ಯುರೋಪಿನಿಂದ ಕಳೆದ ಅಕ್ಟೋಬರ್‌ನಲ್ಲಿ ಉಡಾಯಿಸಲಾದ ಸೆಂಟಿನೆಲ್‌-೫ಪಿ ಉಪಗ್ರಹ ಜಗತ್ತಿನಾದ್ಯಂತ ಭೂಪ್ರದೇಶದಲ್ಲಿ ಗಾಳಿಯ ಗುಣಮಟ್ಟ ಅಧ್ಯಯನಕ್ಕೆಂದೇ ಮೀಸಲಾಗಿದೆ. ಅದು ಸೆರೆಹಿಡಿಯುವ ಮಾಹಿತಿಯನ್ನು ಆಧರಿಸಿ ವಾತಾವರಣವನ್ನು ಶುದ್ಧವಾಗಿಟ್ಟುಕೊಳ್ಳುವುದಕ್ಕೆ ಅಗತ್ಯವಿರುವ ನೀತಿಗಳನ್ನು ರೂಪಿಸುವುದು ಉದ್ದೇಶ.

ಈ ಉಪಗ್ರಹ ಇತ್ತೀಚೆಗೆ ದಕ್ಷಿಣ ಏಷ್ಯಾ ದೇಶಗಳ ಚಿತ್ರಗಳನ್ನು ಸೆರೆಹಿಡಿದಿದ್ದು, ಈ ಪೈಕಿ ಭಾರತದ ಚಿತ್ರವೇ ಆತಂಕದಿಂದ ನೋಡುವಂತೆ ಮಾಡಿದೆ. ಭಾರತ ಭೂಪ್ರದೇಶದಲ್ಲಿರುವ ಗಾಳಿಯಲ್ಲಿ ಫಾರ್ಮಾಲ್ಡಿಹೈಡ್‌ ಪ್ರಮಾಣ ಹೆಚ್ಚಿದೆ ಎಂಬುದನ್ನು ಉಪಗ್ರಹದ ಚಿತ್ರಗಳನ್ನು ಗುರುತಿಸಿವೆ. ಫಾರ್ಮಾಲ್ಡಿಹೈಡ್‌ ಸಾಮಾನ್ಯವಾಗಿ ಭೂಮಿಯ ಮೇಲಿನ ಹಸಿರಿನಿಂದಲೂ ಹೊರಬೀಳುತ್ತದೆ. ಆದರೆ, ಈ ಪ್ರಮಾಣವನ್ನು ಆತಂಕಕಾರಿಯಾಗಿ ಹೆಚ್ಚಿಸಲು ಕಾರಣವಾಗಿರುವುದು, ಅತಿಯಾಗಿರುವ ಮಲಿನಕಾರಿ ಚಟುವಟಿಕೆಗಳು.

ಹಸಿರಿನಿಂದ ಜೈವಿಕವಾಗಿ ಉತ್ಪತ್ತಿಯಾಗುವ ಫಾರ್ಮಾಲ್ಡಿಹೈಡ್‌ ಸಾಮಾನ್ಯವಾಗಿ ಶೇ.೫೦ರಿಂದ ಶೇ.೮೦ರಷ್ಟಿರುತ್ತದೆ. ಆದರೆ, ಅದಕ್ಕಿಂತ ಹೆಚ್ಚಾಗಿದ್ದರೆ, ಕಾಡ್ಗಿಚ್ಚು ಅಥವಾ ಇತರ ಬೆಂಕಿಗಳಿಂದ ವ್ಯಾಪಿಸುವ ಮಲಿನಕಾರಕಗಳು ಹೆಚ್ಚುತ್ತಿವೆ ಎಂದರ್ಥ.

ಆವಿಯಾಗುವಂತಹ ಸಂಯುಕ್ತಗಳು ನೈಟ್ರೋಜನ್‌ ಡೈ ಆಕ್ಸೈಡ್‌ ಜೊತೆಗೆ ಸಂಯೋಗ ಹೊಂದಿ, ಆ ರಾಸಾಯನಿಕ ಪ್ರಕ್ರಿಯೆ ಸೂರ್ಯನ ಕಿರಣಗಳಿಗೆ ತೆರೆದು, ಭೂಮಿಗೆ ಹತ್ತಿರವಾದ ಓಝೋನ್‌ ಪದರವನ್ನು ಸೃಷ್ಟಿಸುತ್ತದೆ. ಇದು ಅಪಾಯಕಾರಿ. ಉಸಿರಾಟಕ್ಕೆ ತೊಂದರೆ ಉಂಟುಮಾಡುವುದರ ಜೊತೆಗೆ ಗಂಭೀರ ಆರೋಗ್ಯ ಸಮಸ್ಯೆಗಳನ್ನು ತಂದೊಡ್ಡುತ್ತದೆ.

ಇದನ್ನೂ ಓದಿ : ಹವಾಮಾನ ವೈಪರೀತ್ಯದಿಂದ ನಾಶವಾಗದೇ ಉಳಿಯುವಂಥದ್ದೇನಾದರೂ ಇದೆಯೇ?

ಈಶಾನ್ಯ ಭಾರತ ಪ್ರದೇಶದಲ್ಲಿ ಫಾರ್ಮಾಲ್ಡಿಹೈಡ್‌ ಪ್ರಮಾಣ ಕಡಿಮೆ ಇದ್ದರೆ, ರಾಜಸ್ಥಾನದಲ್ಲಿ ಅತಿ ಹೆಚ್ಚಿದೆ ಎಂಬುದನ್ನು ಉಪಗ್ರಹದ ಮಾಹಿತಿ ಹೇಳುತ್ತದೆ. ಉಪಗ್ರಹವು ಟ್ರೊಪೊಮಿ ಎಂಬ ಉಪಕರಣದ ಮೂಲಕ ಈ ಮಾಹಿತಿ ಸಂಗ್ರಹಿಸುತ್ತಿದ್ದು, ಫಾರ್ಮಾಲ್ಡಿಹೈಡ್‌, ನೈಟ್ರೋಜನ್‌ ಆಕ್ಸೈಡ್‌, ಓಝೋನ್‌, ಸಲ್ಫರ್‌ ಡೈ ಆಕ್ಸೈಡ್‌, ಮೀಥೇನ್‌, ಕಾರ್ಬನ್‌ ಮಾನಾಕ್ಸೈಡ್‌ ಅನಿಲಗಳ ಪ್ರಮಾಣವನ್ನು ಗುರುತಿಸುತ್ತದೆ. ಇವೆಲ್ಲವೂ ನಾವು ಉಸಿರಾಡುವ ಗಾಳಿಯ ಮೇಲೆ ದುಷ್ಪರಿಣಾಮ ಬೀರುತ್ತವೆ ಎಂದು ಮಾಹಿತಿಯನ್ನು ವಿಶ್ಲೇಷಿಸಿರುವ ತಜ್ಞರು ಹೇಳುತ್ತಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More