ಮುಂಗಾರು ವಿಶೇಷ | ಮಳೆಯಲ್ಲಿ ತೋಯ್ದ ಸಮುದ್ರ ಹೇಗಿರುತ್ತದೆ ಗೊತ್ತಾ? 

ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಗಾಲದ ಸಮುದ್ರ ತೀರಗಳಲ್ಲಿ ಕಾಲ ಕಳೆಯಲೆಂದು ಬರುವವರು ನೀರಿಗಿಳಿದು ಆಡದಿದ್ದರೂ ಅಲೆಗಳ ಅಗಾಧ ವೈಭವವನ್ನು ನೋಡಿ ಸವಿಯುವುದಿದೆ. ಕೊಡೆ ಹಿಡಿದು ಮಳೆಯ ಸಿಂಚನದ ನಡುವೆ ತೀರದುದ್ದಕ್ಕೂ ಹೆಜ್ಜೆ ಹಾಕುವುದು ಆನಂದದ ಅನುಭವ

ಮಳೆಗಾಲದಲ್ಲಿ ಸಮುದ್ರ ತೀರಗಳತ್ತ ಪ್ರವಾಸ ಕೈಗೊಳ್ಳುತ್ತಾರೆ ಎಂಬ ಮಾತು ಹಳತು. ಸಮುದ್ರ ಮಳೆಗಾಲದಲ್ಲಿ ಮತ್ತೊಂದು ಬಗೆಯ ಆಕರ್ಷಣೆ. ಭೋರ್ಗರೆವ ಅಲೆಗಳು ತೀರವನ್ನೇ ನುಂಗಿ ಹಾಕುತ್ತ, ಬಂಡೆಗಳಿಗೆ ಅಪ್ಪಳಿಸುತ್ತ ರುದ್ರ ನರ್ತನ ಮಾಡುತ್ತ ನೋಡುಗರನ್ನು ಸೆಳೆಯುತ್ತವೆ. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗಳಲ್ಲಿ ಮಳೆಗಾಲದ ಸಮುದ್ರ ತೀರಗಳಲ್ಲಿ ಕಾಲ ಕಳೆಯಲೆಂದು ಬರುವವರು ನೀರಿಗಿಳಿದು ಆಡದಿದ್ದರೂ ಅಲೆಗಳ ಅಗಾಧ ವೈಭವವನ್ನು ನೋಡಿ ಸವಿಯುವುದಿದೆ. ಇನ್ನು, ನೀವು ತೀರದಲ್ಲಿದ್ದಾಗಲೇ ಮಳೆ ಸುರಿದರಂತೂ ಅದು ಇನ್ನೊಂದು ಬಗೆಯ ರಮಣೀಯ ಅನುಭವ ನೀಡಬಲ್ಲದು. ಕೊಡೆ ಹಿಡಿದು ಮಳೆಯ ಸಿಂಚನದ ನಡುವೆ ತೀರದುದ್ದಕ್ಕೂ ಹೆಜ್ಜೆ ಹಾಕಬಹುದು.

ನೀರಿನ ಜೊತೆ ಹುಚ್ಚಾಟವಾಡಬಾರದು ಎಂಬ ಎಚ್ಚರಿಕೆ ಮನದಲ್ಲಿದ್ದರೆ ಸಾಕು ರಂಜನೆಗೆ ಸಾಕಷ್ಟು ಅವಕಾಶಗಳು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸಮುದ್ರ ತೀರಗಳಲ್ಲಿ ಸಿಗುತ್ತವೆ. ಸೋಮೇಶ್ವರ, ಉಳ್ಳಾಲ, ತಣ್ಣಿರುಬಾವಿ, ಪಣಂಬೂರು, ಸುರತ್ಕಲ್, ಸಸಿಹಿತ್ಲು, ಕಾಪು, ಮಲ್ಪೆ ಹೀಗೆ ಪ್ರಮುಖ ತೀರಗಳಲ್ಲಿ ಕುಣಿದು ಕುಪ್ಪಳಿಸಬಹುದು. ಕಡಲತೀರದ ಹೋಟೆಲ್ ರೆಸ್ಟೋರೆಂಟ್ ಗಳಲ್ಲಿ ಮಳೆಗಾಲಕ್ಕೆ ತಕ್ಕಂತಹ ಭಕ್ಷ್ಯಗಳು ಕೂಡ ಲಭ್ಯ.

ಛಾಯಾಗ್ರಹಣ: ಕೆ ವೆಂಕಟೇಶ ನಾಯ್ಕ್

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More