ಭಾರತದ ಹಸಿವನ್ನು ಕಟ್ಟಿಕೊಡಲು ಇಟಲಿಯ ಛಾಯಾಗ್ರಾಹಕ ಮಾಡಿದ್ದೇನು?

ಭಾರತದ ಬಡತನವನ್ನು ಛಾಯಾಚಿತ್ರದ ಮೂಲಕ ಹೇಳಲು ಹೋದ ಇಟಲಿಯ ಛಾಯಾಗ್ರಾಹಕರೊಬ್ಬರು ವಿವಾದಕ್ಕೆ ಗುರಿಯಾಗಿದ್ದಾರೆ. ಈ ಚಿತ್ರಗಳನ್ನು ಉ.ಪ್ರದೇಶ, ಮಧ್ಯಪ್ರದೇಶದಲ್ಲಿ ಸೆರೆಹಿಡಿದಿದ್ದು ಈ ಎರಡೂ ರಾಜ್ಯಗಳು ಭಾರತದಲ್ಲಿ ಅತಿ ಬಡ ರಾಜ್ಯಗಳು ಎಂದು ಹೇಳಿದ್ದಾರೆ

ಭಾರತದಲ್ಲಿನ ಬಡತನ ಹಾಗೂ ಹಸಿವಿನ ಸಮಸ್ಯೆಯನ್ನು ಛಾಯಾಚಿತ್ರದ ಮೂಲಕ ಹೇಳಲು ಹೋದ ಇಟಲಿಯ ಛಾಯಾಗ್ರಾಹಕ ಸಾಮಾಜಿಕ ಜಾಲತಾಣಗಳಲ್ಲಿ ವಿವಾದಕ್ಕೆ ಗುರಿಯಾಗಿದ್ದಾರೆ. ಛಾಯಾಗ್ರಾಹಕ ಅಲೆಸಿಯೋ ಮಮೋ ಅವರು ತಮ್ಮ ಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಶೇರ್ ಮಾಡಿಕೊಂಡಿದ್ದರ ಉದ್ದೇಶ ಭಾರತವನ್ನು ಹಸಿವನ್ನು ತೋರುವುದೋ ಅಥವಾ ಪ್ರಶಸ್ತಿಯನ್ನು ಗಳಿಸಿಕೊಳ್ಳುವ ತಂತ್ರವೋ ಎಂಬ ಪ್ರಶ್ನೆಗಳು ಎದ್ದಿವೆ.

ಅಲೆಸ್ಸಿಯೊ ಮಮೋ ಅವರ ಫೋಟೊಗಳನ್ನು ‘ವರ್ಲ್ಡ್ ಪ್ರೆಸ್ ಫೋಟೋಸ್’ ಇನ್ಸ್ಟಾಗ್ರ್ಯಾಮ್ ಹ್ಯಾಂಡಲ್‌ನಲ್ಲಿ ಪ್ರಕಟಿಸಲಾಗಿತ್ತು. ಕೆಲ ಆಹಾರ ಪದಾರ್ಥಗಳನ್ನು ಟೇಬಲ್‌ ಮೇಲೆ ಇಟ್ಟು ಉತ್ತರ ಪ್ರದೇಶ ಹಾಗೂ ಮಧ್ಯಪ್ರದೇಶದ ಬಡಜನರಿಗೆ ಅದನ್ನು ನೋಡಿ ಮುಖ ಮುಚ್ಚಿಕೊಂಡು ಇಷ್ಟದ ಆಹಾರವನ್ನು ಹೇಳಿ ಎನ್ನಲಾಗಿತ್ತು. ಆ ಆಟದ ಸಮಯದಲ್ಲಿ ಈ ಚಿತ್ರಗಳನ್ನು ಸೆರೆಹಿಡಿಯಲಾಗಿತ್ತು.

ಅವರ ಛಾಯಾಗ್ರಹಣದ ಈ ಉದ್ದೇಶವೇ ಅವರನ್ನು ವಿವಾದಕ್ಕೆ ಗುರಿ ಮಾಡಿದೆ. ಮಮೋ ಅವರು ಆ ಚಿತ್ರಗಳನ್ನು ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದ ಸೆರೆಹಿಡಿದಿದ್ದು, ಆ ಎರಡೂ ರಾಜ್ಯಗಳು ಭಾರತದಲ್ಲಿ ಅತಿ ಬಡ ರಾಜ್ಯಗಳು ಎಂದು ಹೇಳಿದ್ದಾರೆ.

“ನಾನು ಇಟಾಲಿಯನ್ ಹವ್ಯಾಸಿ ಛಾಯಾಗ್ರಾಹಕ. ೨೦೦೮ರಲ್ಲಿ ನಾನು ನನ್ನ ಛಾಯಾಪತ್ರಿಕೋದ್ಯಮ ಆರಂಭಿಸಿದೆ. ಅದರಲ್ಲೂ ಮುಖ್ಯವಾಗಿ ಸಮಕಾಲೀನ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ನಿರಾಶ್ರಿತರ ಸಮಸ್ಯೆಗಳನ್ನು ಫೋಟೋ ತೆಗೆಯುತ್ತೆನೆ. ನಾನು ವರ್ಲ್ಡ್ ಪ್ರೆಸ್ ಫೋಟೋಗ್ರಫಿ ೨೦೧೮ರ ಉತ್ತಮ ಛಾಯಾಗ್ರಾಹಕ ಪ್ರಶಸ್ತಿಯನ್ನು ಪಡೆದುಕೊಂಡಿದ್ದೇನೆ. ಈ ಬಾರಿ ನನ್ನ ಭಾರತ ಕುರಿತಾದ ಚಿತ್ರಗಳನ್ನು ಇನ್ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದೇನೆ,” ಎಂದು ಅವರು ಬರೆದುಕೊಂಡಿದ್ದಾರೆ.

These photographs are from Uttar Pradesh and Madhya Pradesh two of the poorest states of India. From the series "Dreaming Food", a conceptual project about hunger issue in India. ⠀⠀⠀⠀⠀⠀⠀⠀⠀ [This project has been the subject of much online debate. Please read Alessio Mamo’s statement, released on 24 July 2018, giving more details and apologising for any offence: https://medium.com/@alessio.mamo/my-statement-on-dreaming-food-7169257d2c5c] ⠀⠀⠀⠀⠀⠀⠀⠀⠀ My name is Alessio Mamo (@alessio_mamo) an Italian freelance photographer based in Catania, Sicily. In 2008 I began my career in photojournalism focusing on contemporary social, political and economic issues. I extensively cover issues related to refugee displacement and migration starting in Sicily, and extending most recently to the Middle East. I was awarded 2nd prize in the People Singles category of #WPPh2018 and this week I’m taking over World Press Photo's Instagram account. ⠀⠀⠀⠀⠀⠀⠀⠀⠀ Despite economic growth, a majority of the Indian population still lives in extreme poverty and disease. Behind India’s new-found economic strength are 300 million poor people who live on less than $1 per day. Government figures may indicate a reduction in poverty. But the truth is, with increasing global food prices, poverty is spreading everywhere like a swarm of locusts. These pictures are taken in rural areas where conditions are worse than in the cities and where close to 70% of India’s population reside today. Statistics show that 2.1 million children under 5 years old die of malnutrition annually. The idea of this project was born after reading the statistics of how much food is thrown away in the West, especially during Christmas time. I brought with me a table and some fake food, and I told people to dream about some food that they would like to find on their table. ⠀⠀⠀⠀⠀⠀⠀⠀⠀ #WPPh2018#asia #dreamingfood #india

A post shared by World Press Photo Foundation (@worldpressphoto) on

“ಆರ್ಥಿಕವಾಗಿ ಭಾರತ ಮುಂಚೂಣಿಯಲ್ಲಿದ್ದರೂ ಬಡತನ ತೀವ್ರವಾಗಿದೆ. ಅಲ್ಲಿನ ೩೦ ಕೋಟಿಯಷ್ಟು ಜನರು ದಿನವೊಂದಕ್ಕೆ ಒಂದು ಡಾಲರ್‌ ಮೊತ್ತಕ್ಕಿಂತಲೂ ಕಡಿಮೆ ಬೆಲೆಯಲ್ಲಿ ಬದುಕುತ್ತಿದ್ದಾರೆ. ಜಾಗತಿಕವಾಗಿ ಆಹಾರದ ಬೆಲೆ ಏರಿದ ಕಾರಣ ಈ ರೀತಿಯ ಸಮಸ್ಯೆ ಹೆಚ್ಚಾಗುತ್ತಿದೆ. ವಾರ್ಷಿಕವಾಗಿ ೨.೧ ಮಿಲಿಯನ್‌ನಷ್ಟು ಐದು ವರ್ಷದ ಕೆಳಗಿನ ಮಕ್ಕಳು ಹಸಿವಿನಿಂದ ಸಾಯುತ್ತಿದ್ದಾರೆ. ಆ ಕಾರಣವಾಗಿ ನಾನು ಕೆಲ ನಕಲಿ ಆಹಾರವನ್ನು ಮಕ್ಕಳೆದುರಿಟ್ಟು ನಿಮ್ಮ ಆಸೆಯ ಆಹಾರವನ್ನು ಕಲ್ಪಿಸಿಕೊಂಡು ನಾನು ಟೇಬಲ್‌ ಮೇಲಿಟ್ಟ ಆಹಾರದಲ್ಲಿ ಹುಡುಕಿ ಎಂದು ಹೇಳಿದೆ,” ಎಂದು ಅವರು ಬರೆದುಕೊಂಡಿದ್ದಾರೆ.⠀⠀⠀⠀⠀⠀⠀⠀

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More