‘ಯಶಸ್ಸು ಕಾಣುವ ಹಸಿವು’ ಎಂದು ಶಾಂತಿಯುವ ಆಕ್ರೋಶ ಮಾಡಿದವನ್ನು ಹುಡುಕಿಬಂದ ನೂರಾರು ಆಫರ್‌ಗಳು (ಸ್ಟೇಟ್

ಜನಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗದಿರುವುದು ಎಲ್ಲ ದೇಶಗಳ ಸಮಸ್ಯೆಯಾಗಿದೆ. ಉದ್ಯೋಗ ಮಾರುಕಟ್ಟೆ ಮುಕ್ತವಾಗಿದ್ದರೂ ಅದಕ್ಕಿರುವ ಸ್ಪರ್ಧೆಗೆ ಅಷ್ಟೇ ಪೈಪೋಟಿಯಿದೆ. ಹೀಗಾಗಿ ನಿರುದ್ಯೋಗ ಸಮಸ್ಯೆಗೆ ಬೇಸತ್ತು ಅಮೆರಿಕದ ಕ್ಯಾಲಿಫೋರ್ನಿಯಾ ಯುವಕನೊಬ್ಬ ಉದ್ಯೋಗ ಅರಸಲು ಹುಡುಕಿದ ದಾರಿ ಎಲ್ಲರನ್ನು ಅಚ್ಚರಿಗೆ ದೂಡಿದೆ

ಜನಸಂಖ್ಯೆ ಹೆಚ್ಚಳಕ್ಕೆ ತಕ್ಕಂತೆ ಉದ್ಯೋಗ ಸೃಷ್ಟಿಯಾಗದಿರುವುದು ಎಲ್ಲ ದೇಶಗಳ ಸಮಸ್ಯೆಯಾಗಿದೆ. ಉದ್ಯೋಗ ಮಾರುಕಟ್ಟೆ ಮುಕ್ತವಾಗಿದ್ದರೂ ಅದಕ್ಕಿರುವ ಸ್ಪರ್ಧೆಗೆ ಅಷ್ಟೇ ಪೈಪೋಟಿಯಿದೆ. ಹೀಗಾಗಿ ನಿರುದ್ಯೋಗ ಸಮಸ್ಯೆಗೆ ಬೇಸತ್ತು ಕ್ಯಾಲಿಫೋರ್ನಿಯಾದ ಯುವಕನೊಬ್ಬ ಉದ್ಯೋಗ ಅರಸಲು ಹುಡುಕಿದ ದಾರಿ ಎಲ್ಲರನ್ನು ಅಚ್ಚರಿ ಮೂಡಿಸುತ್ತದೆ.

ವೆಬ್‌ಸೈಟ್‌ಗಳನ್ನು ಅಭಿವೃದ್ಧಿಪಡಿಸುತ್ತಿದ್ದ ಡೇವಿಡ್ ಕಾರ್ಸೇಜ್ ದಾರಿಯುದ್ದಕ್ಕೂ ಪ್ಲಕಾರ್ಡ್ ಹಿಡಿದುಕೊಂಡು ತನ್ನ ನಿರುದ್ಯೋಗದ ಬಗ್ಗೆ ಸಾರ್ವಜನಿಕರ ಗಮನ ಸೆಳೆದಿದ್ದಾನೆ. ಪ್ಲಕಾರ್ಡ್ ಮೇಲೆ “ಹಂಗ್ರಿ ಫಾರ್ ಸಕ್ಸಸ್, ಟೇಕ್ ಎ ರೆಸ್ಯೂಮೆ’ ಎಂದು ಬರೆದುಕೊಂಡು ಉದ್ಯೋಗದ ಅಗತ್ಯತೆಯನ್ನು ಹೇಳಿಕೊಂಡಿದ್ದಾನೆ. ಹಾಗೇ ಬರೆದುಕೊಂಡು ರಸ್ತೆಯುದ್ದಕ್ಕೂ ನಿಂತು ತನ್ನ ರೆಸ್ಯೂಮ್‌ಗಳನ್ನು ಹಂಚಿದ್ದೇ ತಡ ಮರುದಿನದೊಳಗಾಗಿ ೨೦೦ ಕ್ಕೂ ಅಧಿಕ ಜಾಬ್ ಆಫರ್‌ಗಳು ಆತನನ್ನು ಹುಡುಕಿಕೊಂಡು ಬಂದಿವೆ.

ಇದನ್ನೂ ಓದಿ : ಐ ಡಿಬೇಟ್ 9 | ನಿರುದ್ಯೋಗ ಹೆಚ್ಚಳಕ್ಕೆ ಯಾರು ಕಾರಣ? ಸರ್ಕಾರಗಳೋ, ಸ್ವತಃ ಯುವಜನರೋ?

ಡೇವಿಡ್ ಕಾರ್ಸೇಜ್ ಮೌಂಟೇನ್‌ ವಿವ್ ಹತ್ತಿರದ ಪಾರ್ಕ್‌ನಲ್ಲಿಯೇ ಆತನ ದಿನಚರಿ. ಇರಲು ಮನೆಯಿಲ್ಲ, ಕೈಯಲ್ಲಿ ಕೆಲಸ ಇಲ್ಲ. ಕೆಲಸ ಸಿಗದೇ ರೋಸಿಹೋಗಿ ತನ್ನ ರೆಸ್ಯೂಮ್‌ಗಳನ್ನು ಕಂಡವರಿಗೆಲ್ಲ ಹಂಚಿದ. ಅವನ ರೆಸ್ಯೂಮಿನಲ್ಲಿದಂತೆ ಆತ ೨೦೧೪ ರಲ್ಲಿ ಟೆಕ್ಸಾಸ್ ಯೂನಿವರ್ಸಿಟಿಯಿಂದ ಮ್ಯಾನೇಜ್‌ಮೆಂಟ್ ಇನ್ಫೋರ್ಮೇಶನ್ ಸಿಸ್ಟಮ್‌ ವಿಷಯದಲ್ಲಿ ಪಧವೀಧರ. ರಸ್ತೆಯಲ್ಲಿ ಪ್ಲಕಾರ್ಡ್ ಹಿಡಿದು ನಿಂತಾಗ ಅಪರಿಚಿತೆಯೊಬ್ಬಳು ಆತನ ಬಳಿ ಬಂದು ಪ್ಲಕಾರ್ಡ್ ಹಿಡಿದು ನಿಂತ ಆತನ ಫೋಟೋ ತೆಗೆದು ಸಾಮಾಜಿಕ ಜಾಲತಾಣಗಳಲ್ಲಿ ಶೇರ್ ಮಾಡುತ್ತಾಳೆ. ಆತನ ಮನವಿಗೆ ಸಹಾಯ ಮಾಡುತ್ತಾಳೆ. ಟ್ವಿಟ್ಟರ್‌ನಲ್ಲಿ ಆತನ ಫೋಟೋ ೫೦೦೦೦ ಬಾರಿ ರೀಟ್ವೀಟ್ ಆಗುತ್ತದೆ. ನಂತರ ಹಲವಾರು ಕಂಪೆನಿಗಳು ಆತನಿಗೆಉದ್ಯೋಗ ನೀಡಲು ಮುಂದಾಗುತ್ತವೆ. ಈಗ ಆತನಿಗೆ ಯಾವ ಕೆಲಸಕ್ಕೆ ಹೋಗಲಿ ಎಂಬುದು ಈಗ ಡೇವಿಡ್‌ಗಿರುವ ಗೊಂದಲ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More