ಕ್ಯಾಶ್‌ಬ್ಯಾಕ್‌ ಕೊಡದೆ ಮಾತು ತಪ್ಪಿದ ಭೀಮ್‌ ಆ್ಯಪ್, ಎನ್‌ಸಿಪಿಐಗೆ ಗ್ರಾಹಕರ ದೂರು

ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ಪ್ರಧಾನಿ ನರೇಂದ್ರ ಮೋದಿ ಲೋಕಾರ್ಪಣೆ ಮಾಡಿದ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾದ ಭೀಮ್ (BHIM) ಅಪ್ಲಿಕೇಷನ್ ಗ್ರಾಹಕರಿಗೆ ಕೊಟ್ಟ ಭರವಸೆಯನ್ನು ಉಳಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ

ಸರ್ಕಾರಿ ಸ್ವಾಮ್ಯದ ರುಪೇ ಕಾರ್ಡ್ ಮತ್ತು ಭೀಮ್ ಅಪ್ಲಿಕೇಷನ್ ಬಳಸಿ, ಆನ್ ಲೈನ್ ಹಣ ಸಂದಾಯ ಮಾಡುವವರಿಗೆ ಪ್ರತಿಯಾಗಿ ಕೊಂಡುಕೊಂಡ ವಸ್ತುವಿನ ಜಿಎಸ್ ಟಿಯ ಶೇಕಡಾ 20ರಷ್ಟು ಕ್ಯಾಶ್ ಬ್ಯಾಕ್ ನೀಡಲು ಆಗಸ್ಟ್ 4 ರಂದು ನಡೆದ ಜಿಎಸ್ಟಿ ಮಂಡಳಿ ಸಭೆಯಲ್ಲಿ ಮಹತ್ವದ ನಿರ್ಧಾರ ಕೈಗೊಳ್ಳಲಾಗಿತ್ತು. ಜಿಎಸ್ ಟಿಯ ಮೇಲಿನ ಹಣದ ಮರುಪಾವತಿಯ ಕುರಿತಂತೆ ಗ್ರಾಹಕರು ಖುಷಿಯಲ್ಲಿರುವಂತೆಯೇ ಮತ್ತೊಂದೆಡೆ ನಗದು ರಹಿತ ವ್ಯವಹಾರಕ್ಕೆ ಉತ್ತೇಜನ ನೀಡುವ ಸಲುವಾಗಿ ಕೇಂದ್ರ ಸರ್ಕಾರ ಲೋಕಾರ್ಪಣೆ ಮಾಡಿರುವ ನ್ಯಾಷನಲ್ ಪೇಮೆಂಟ್ ಕಾರ್ಪೋರೇಷನ್ ಆಫ್ ಇಂಡಿಯಾದ ಭೀಮ್ (BHIM) ಅಪ್ಲಿಕೇಷನ್ ಗ್ರಾಹಕರಿಗೆ ಕೊಟ್ಟ ಭರವಸೆಯನ್ನು ಉಳಿಸಿಲ್ಲ ಎಂಬ ಮಾತುಗಳು ಕೇಳಿಬರುತ್ತಿದೆ.

ಹೆಚ್ಚಿನ ಬಳಕೆದಾರರನ್ನು ಸೆಳೆಯುವ ಸಲುವಾಗಿ ಭೀಮ್ ಆಪ್ಲಿಕೇಶನ್ ಆರಂಭದಲ್ಲಿ, ಬಳಕೆದಾರರಿಗೆ ಬಂಪರ್ ಆಫರ್ ನೀಡಿ, ಗ್ರಾಹಕರು ಪ್ರತಿ ತಿಂಗಳು 750 ರೂಪಾಯಿ ಮಿತಿಯೊಳಗೆ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವನ್ನು ಒದಗಿಸಿತ್ತು. ಅಲ್ಲದೆ ಹೊಸ ಬಳಕೆದಾರ ಮೊದಲ ಹಣದ ವರ್ಗಾವಣೆಗೆ 51 ರೂಪಾಯಿ ಕ್ಯಾಶ್ ಬ್ಯಾಕ್ ನೀಡಿತ್ತು. ಸಾಮಾನ್ಯ ಗ್ರಾಹಕರು ತಮ್ಮ ಪ್ರತಿ ನಗದು ವರ್ಗಾವಣೆಗೆ 100 ರೂಪಾಯಿಯಿಂದ 500 ರೂಪಾಯಿ ಮಿತಿಯವರೆಗೆ 25 ರೂಪಾಯಿ ಕ್ಯಾಶ್ ಬ್ಯಾಕ್ ಪಡೆಯುವ ಅವಕಾಶವನ್ನು ಕಲ್ಪಿಸಿತ್ತು. ಹೀಗಾಗಿ ಸಾಮಾನ್ಯ ಗ್ರಾಹಕ ತಿಂಗಳಿಗೆ 750 ರೂಪಾಯಿ ಬಹುಮಾನದ ಮೊತ್ತ ಪಡೆದರೆ, ವ್ಯಾಪಾರಸ್ಥರಿಗೆ ಇದರ ಮಿತಿಯನ್ನು ಒಂದು ಸಾವಿರ ರೂಪಾಯಿಗೆ ಹೆಚ್ಚಿಸಲಾಗಿತ್ತು.

ಸಂವಿಧಾನ ಶಿಲ್ಪಿ ಬಿ ಆರ್ ಅಂಬೇಡ್ಕರ್‌ ಅವರ 126ನೇ ಜಯಂತಿ ಸಂದರ್ಭದಲ್ಲಿ ಪ್ರಧಾನಿ ನರೇಂದ್ರಮೋದಿ ಲೋಕಾರ್ಪಣೆಗೊಳಿಸಿದ್ದ ಭೀಮ್ ಅಪ್ಲಿಕೇಷನ್ , ಮೂರೇ ದಿನದಲ್ಲಿ 50 ಲಕ್ಷಕ್ಕೂ ಅಧಿಕ ಮಂದಿ ಡೌನ್ ಲೋಡ್ ಮಾಡಿದ್ದರು. ಇದೀಗ ಈ ಅಪ್ಲಿಕೇಷನ್ ಬಳಕೆದಾರರ ಸಂಖ್ಯೆ 1 ಕೋಟಿಯಷ್ಟಿದೆ.

ಗ್ರಾಹಕರ ಸಂಖ್ಯೆ ಹೆಚ್ಚಾಗುತ್ತಲೇ ಕಳೆದ ಜುಲೈ 17ರಿಂದ ಹೊಸ ಬಳಕೆದಾರರಿಗೆ ಕ್ಯಾಶ್ ಬ್ಯಾಕ್ ಆಫರ್ ಅನ್ನು ಭೀಮ್ ನಿರ್ಭಂದಿಸಿದೆ ಎಂಬ ಆಪಾದನೆಗಳು ಕೇಳಿಬರುತ್ತಿದೆ. ಹಳೆ ಗ್ರಾಹಕರಿಗೂ ಯಾವುದೇ ರೀತಿಯ ಆಫರ್ ನೀಡಲಾಗುತ್ತಿಲ್ಲ ಎಂಬ ಚರ್ಚೆಗಳು ಸಾಗುತ್ತಿದ್ದು , ಭೀಮ್ ಅಪ್ಲಿಕೇಶನ್ ಕುರಿತಂತೆ ಗ್ರಾಹಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಕಳೆದ 40 ದಿನಗಳಿಂದ ಯಾವುದೇ ಕ್ಯಾಶ್ ಬ್ಯಾಕ್ ನೀಡಲಾಗುತ್ತಿಲ್ಲ. ಈ ಬಗ್ಗೆ ಇ- ಮೇಲ್ ಸಂದೇಶ ಕಳುಹಿಸಿದರು ಯಾವುದೇ ಉತ್ತರ ಸಿಕ್ಕಿಲ್ಲ ಎಂದು ಕೆಲವರು ದೂರಿದರೆ, ಮತ್ತೆ ಕೆಲವರು, ಇದೊಂದು ಕೇಂದ್ರ ಸರ್ಕಾರದ ವಿಫಲ ಯೋಜನೆಯಾಗಿದೆ ಎಂದಿದ್ದಾರೆ ಎಂದು ಡೈಲಿಹಂಟ್ ವರದಿ ಮಾಡಿದೆ.

ಇದನ್ನೂ ಓದಿ : ಮೋದಿ ದೇಶದ ಅತ್ಯಂತ ದುಬಾರಿ ಪ್ರಧಾನಿ; ವಿಮಾನ ಹಾರಾಟ ವೆಚ್ಚವೇ ₹1,484 ಕೋಟಿ

ಮಾರುಕಟ್ಟೆ ತಜ್ಞರ ಪ್ರಕಾರ, ಪೇಮೆಂಟ್ ಆಪ್ ಗಳು, ಕೆಲಸ ಮಾಡುವುದೇ ಇಂತಹ ಆಫರ್ ಗಳನ್ನು ನೀಡಿದಾಗ. ಬಳಕೆದಾರರು ಕ್ಯಾಶ್ ಬ್ಯಾಕ್ ಗಾಗಿ ಹಣ ಚಲಾವಣೆಗೆ ಮುಂದಾಗುತ್ತಾರೆ. ಹೀಗಾದಾಗ ಮಾತ್ರ ಆಪ್ ಗಳನ್ನು ಡೌನ್ ಲೋಡ್ ಮಾಡಲು ಹಾಗೂ ಹಣದ ವರ್ಗಾವಣೆಗಾಗಿ ಬಳಸುತ್ತಾರೆ. ಇದು ಕೇವಲ ಮಾರುಕಟ್ಟೆ ತಂತ್ರವಾಗಿದೆ ಎಂದಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More