ಪೈರೋಗ್ರಫಿ ಎಂಬ ವಿಶಿಷ್ಟ ಕಲಾಪ್ರಕಾರದ ಚಿತ್ರಕಲಾವಿದ ಸತೀಶ್ ಬಾಬು

ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ವಿಶೇಷ ಒಲವು ಬೆಳೆಸಿಕೊಂಡವರು ಸತೀಶ್. ಚಿತ್ರದುರ್ಗ ಜಿಲ್ಲೆಯ ಮರಡಿಹಳ್ಳಿಯವರಾದ ಇವರು ತಮ್ಮ ಹವ್ಯಾಸವನ್ನೇ ವೃತ್ತಿಯನ್ನಾಗಿ ಆಯ್ದುಕೊಂಡು ಕಠಿಣ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ. ಅವರ ಕಲಾ ಬದುಕಿನತ್ತ ಇಣುಕುನೋಟ ಇಲ್ಲಿದೆ

ಪೈರೋಗ್ರಫಿ ಎಂಬ ವಿಶಿಷ್ಟ ಕಲಾಪ್ರಕಾರದಿಂದ ತಮ್ಮದೇ ಆದ ಛಾಪು ಮೂಡಿಸುತ್ತಿರುವ ಚಿತ್ರ ಕಲಾವಿದ ಸತೀಶ್ ಬಾಬು. ಚಿಕ್ಕಂದಿನಿಂದಲೇ ಚಿತ್ರಕಲೆಯತ್ತ ವಿಶೇಷ ಒಲವು ಬೆಳೆಸಿಕೊಂಡವರು. ಮೂಲತಃ ಚಿತ್ರದುರ್ಗ ಜಿಲ್ಲೆಯ ಮರಡಿಹಳ್ಳಿಯವರಾದ ಸತೀಶ್ ತಮ್ಮ ಹವ್ಯಾಸವನ್ನೇ ವೃತ್ತಿ ಬದುಕನ್ನಾಗಿ ಆಯ್ದುಕೊಂಡು ಕಠಿಣ ಪರಿಶ್ರಮದಿಂದ ಬದುಕು ಕಟ್ಟಿಕೊಂಡಿದ್ದಾರೆ.

ಇದನ್ನೂ ಓದಿ : ‘ಎಲ್ಲರನ್ನೂ ಬೆಸೆಯುವ ಜಾತ್ಯತೀತ ಕಲೆ ರಂಗಭೂಮಿ ನನಗೆ ಆತ್ಮತೃಪ್ತಿ ಕೊಟ್ಟಿದೆ’

ಚಿತ್ರದುರ್ಗದ ಎಸ್‌ಜೆಎಂ ಚಿತ್ರಕಲಾ ಶಾಲೆಯಲ್ಲಿ ಡ್ರಾಯಿಂಗ್ ಮಾಸ್ಟರ್ ಕೋರ್ಸ್ ಕಲಿತ ಸತೀಶ್, ಮುಂದೆ ಆನಿಮೇಶನ್ ಕಲಾವಿದರಾಗಿ ಹೈದರಾಬಾದ್ ಮತ್ತು ಬೆಂಗಳೂರಿನ ಕೆಲವು ಆನಿಮೇಶನ್ ಸಂಸ್ಥೆಗಳಲ್ಲಿ ಕ್ಯಾರೆಕ್ಟರ್, ಸ್ಟೋರಿ ಬೋರ್ಡ್, ಲೇಔಟ್, ಬ್ಯಾಗ್ರೌಂಡ್ ಆರ್ಟಿಸ್ಟ್, ಹೀಗೆ ಹಲವು ವರ್ಷಗಳ ಕಾಲ ಕಾರ್ಯನಿರ್ವಹಿಸಿದ ಸತೀಶ್, ಪ್ರಸ್ತುತ ಪ್ರತಿಷ್ಠಿತ ಅರೆನಾ ಕಲಾಶಾಲೆಯಲ್ಲಿ ಹಿರಿಯ 2ಡಿ ಅಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More