ಟ್ವಿಂಕಲ್‌ ಖನ್ನಾ ಕಾದಂಬರಿ ಬಿಡುಗಡೆ; ಸಿನಿಮಾ ಸ್ಟಾರ್‌ ಈಗ ಜನಪ್ರಿಯ ಲೇಖಕಿ

ಟ್ವಿಂಕಲ್‌ ಖನ್ನಾ ಅವರನ್ನು ನಟಿ ಎಂದು ಕರೆಯುವುದೇ ಅಪರೂಪ. 90ರ ದಶಕದ ಈ ನಟಿ ಈಗ ಲೇಖಕಿಯಾಗಿ ಜನಪ್ರಿಯ. ಸಾಮಾಜಿಕ ಜಾಲತಾಣಗಳಲ್ಲಿ ‘ಮಿಸೆಸ್‌ ಫನ್ನಿಬೋನ್‌’ ಎಂದು ಜನಪ್ರಿಯ ಆಗಿರುವ ಟ್ವಿಂಕಲ್‌, ಈಗ ತಮ್ಮ ಮೊದಲ ಕಾದಂಬರಿಯ ಮೂಲಕ ಗಮನ ಸೆಳೆದಿದ್ದಾರೆ

ಟ್ವಿಂಕಲ್‌ ಖನ್ನಾ ಎಂದಾಕ್ಷಣ ನೆನಪಾಗುವುದು ‘ಬರ್ಸಾತ್‌’ ಚಿತ್ರ. ಸೂಪರ್‌ ಸ್ಟಾರ್‌ ರಾಜೇಶ್‌ ಖನ್ನಾ ಮತ್ತು ಜನಪ್ರಿಯ ನಟಿ ಡಿಂಪಲ್‌ ಕಪಾಡಿಯಾ ಪುತ್ರಿಯಾಗಿ ಜನಿಸಿದ ಟ್ವಿಂಕಲ್‌, ತಂದೆ-ತಾಯಿಯಂತೆಯೇ ಬಣ್ಣದ ಲೋಕಕ್ಕೆ ಕಾಲಿಟ್ಟಿದ್ದರು. ಹದಿನೈದು ವರ್ಷಗಳಲ್ಲಿ ೧೫ಕ್ಕೂ ಚಿತ್ರಗಳಲ್ಲಿ ನಟಿಸಿ ಗಮನ ಸೆಳೆದರು. ಆದರೆ, ಅದಕ್ಕಿಂತ ಹೆಚ್ಚಾಗಿ ಈಗ ಗಮನ ಸೆಳೆಯುತ್ತಿರುವುದು ಲೇಖಕಿಯಾಗಿ.

ಐದು ವರ್ಷಗಳ ಹಿಂದೆ ಅಂಕಣಕಾರ್ತಿಯಾಗಿ ಇಂಗ್ಲಿಷ್‌ ಪತ್ರಿಕೆಯೊಂದರಲ್ಲಿ ಬರವಣಿಗೆ ಅರಂಭಿಸಿದ ಟ್ವಿಂಕಲ್‌ ಖನ್ನಾ, ಈಗ ಜನಪ್ರಿಯತೆಯಲ್ಲಿ ತೇಲುತ್ತಿದ್ದಾರೆ. ಪ್ರಸ್ತುತ, 'ಪೈಜಾಮಾಸ್‌ ಆರ್‌ ಫರ್ಗಿವಿಂಗ್' ಹೆಸರಿನ ಮೊದಲ ಕಾದಂಬರಿಯನ್ನು ಬರೆದಿದ್ದು, ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಅಪಾರ ಮೆಚ್ಚುಗೆ ಪಡೆದಿದ್ದಾರೆ.

ಶಾಲಾ ದಿನಗಳಲ್ಲಿ ಕವಿತೆಯೊಂದಿಗೆ ಶುರುವಾದ ಬರವಣಿಗೆ ಅಲ್ಪಕಾಲದಲ್ಲಿ ನಿಂತುಹೋಗಿತ್ತು. ನಂತರದ ಇಪ್ಪತ್ತು ವರ್ಷಗಳ ಕಾಲ ಒಂದಕ್ಷರವನ್ನೂ ಬರೆಯಲು ಆಗಲಿಲ್ಲ ಎಂದು ಸ್ವತಃ ಟ್ವಿಂಕಲ್‌ ಹೇಳಿಕೊಂಡಿದ್ದರು. ವೃತ್ತಿಜೀವನದ ತಿರುವಿನಲ್ಲಿದ್ದಾಗ ಕೈಹಿಡಿಯಿತು. ಅಂಕಣಕಾರ್ತಿಯಾಗಿ ವೃತ್ತಿಯ ಅನುಭವಗಳು, ಸಮಕಾಲೀನ ವಿಷಯಗಳು, ಮಹಿಳಾ ಕೇಂದ್ರಿತ ಬೆಳವಣಿಗೆಗೆ ಸ್ಪಂದಿಸುತ್ತ ಅಂಕಣ ಬರೆದರು.

ಇದನ್ನೂ ಓದಿ : ಮಾಧುರಿಯನ್ನು ಪ್ರೀತಿಸುತ್ತಿದ್ದರೇ ಸಂಜಯ್ ದತ್‌? ವಿವಾದ ಸೃಷ್ಟಿಸಿದ ಪುಸ್ತಕ

ಈ ಬರಹಗಳು ೨೦೧೫ರಲ್ಲಿ, 'ಮಿಸೆಸ್‌ ಫನ್ನಿಬೋನ್ಸ್‌- ಶಿ ಈಸ್‌ ಜಸ್ಟ್‌ ಲೈಕ್‌ ಯು ಅಂಡ್‌ ಎ ಲಾಸ್ಟ್‌ ಲೈಕ್‌ ಮಿ' ಹೆಸರಿನಲ್ಲಿ ಪ್ರಕಟವಾಯಿತು. ಇದು ಪ್ರಕಟವಾದ ಒಂದೇ ವರ್ಷದ ಅವಧಿಯಲ್ಲಿ ಒಂದು ಲಕ್ಷ ಪ್ರತಿಗಳು ಮಾರಾಟವಾದವು ಎಂದು ಪ್ರಕಾಶಕಿ, ಜಗರ್‌ನಾಟ್‌ನ ಮಾಲಕಿ ಚೀಕಿ ಸರ್ಕಾರ ಸಂದರ್ಶನವೊಂದರಲ್ಲಿ ಹೇಳಿದ್ದರು. ಇದಾದ ಮರುವರ್ಷ ಸಣ್ಣಕತೆಗಳ ಸಂಕಲನ, 'ದಿ ಲೆಜೆಂಡ್‌ ಆಫ್‌ ಲಕ್ಷ್ಮಿ ಪ್ರಸಾದ್' ಪ್ರಕಟವಾಯಿತು. ಇಪ್ಪತ್ತು ವರ್ಷಗಳ ಅವಧಿಯಲ್ಲಿ ಬರೆದ ಸಣ್ಣಕತೆಗಳನ್ನು ಸಂಗ್ರಹ ರೂಪದಲ್ಲಿ ಪ್ರಕಟಿಸಿದ್ದರು.

ಈಗ ಕಾದಂಬರಿ ಹೊರಬಂದಿದ್ದು, ಲೇಖಕಿಯಾಗಿ ಮತ್ತೊಂದು ಮಹತ್ವದ ಹೆಜ್ಜೆ ಇಟ್ಟ ಖುಷಿಯಾಗಿದೆ ಎಂದು ಟ್ವಿಂಕಲ್‌ ಖನ್ನಾ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಆಯುರ್ವೇದಿಕ್‌ ಸ್ಪಾ ಮತ್ತು ಅಲ್ಲಿನ ಒಬ್ಬ ಮಹಿಳೆಯ ಸುತ್ತ ಸಾಗುವ ಕತೆಯಲ್ಲಿ ಯೋಗ, ಆರೋಗ್ಯ ಮುಂತಾದ ವಿಷಯಗಳನ್ನು ತಂದಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More