ವಿಡಿಯೋ ಸಂದರ್ಶನ | ಸಿದ್ದಲಿಂಗಯ್ಯ ಅವರ ಹೊಸ ‘ಊರು-ಕೇರಿ’ಯಲ್ಲೊಂದು ಸುತ್ತಾಟ

ಕವಿ ಸಿದ್ದಲಿಂಗಯ್ಯ ಅವರು ಇತ್ತೀಚಿನ ದಶಕಗಳಲ್ಲಿ ಆತ್ಮಕತೆ ಬರೆಯುವುದರ ಕಡೆ ಹೆಚ್ಚಿನ ಒಲವು ತೋರಿದಂತೆ ಕಾಣುತ್ತಿದ್ದು, ಸರಣಿ ರೂಪದ ಅವರ ಆತ್ಮಕತೆ ‘ಊರು-ಕೇರಿ ಭಾಗ-೩’ ಭಾನುವಾರ ಬಿಡುಗಡೆ ಆಗುತ್ತಿದೆ. ಈ ಹಿನ್ನೆಲೆಯಲ್ಲಿ ಅವರ ‘ಊರು-ಕೇರಿ’ಯಲ್ಲಿ ‘ದಿ ಸ್ಟೇಟ್’ ನಡೆಸಿದ ‘ಸುತ್ತಾಟ’ ಇಲ್ಲಿದೆ

ಕೆಂಡದಂಥ ಕವಿತೆಗಳನ್ನು ರಚಿಸುವ ಮೂಲಕ ದಲಿತರ ಆತ್ಮಾಭಿಮಾನವನ್ನು ಬಡಿದೆಬ್ಬಿಸಿದ, ನಾಡಿನಲ್ಲಿ ದಲಿತ ಚಳವಳಿಗೆ ಒಂದೊಮ್ಮೆ ಪ್ರೇರಣೆ ನೀಡಿದ ಕವಿ ಸಿದ್ದಲಿಂಗಯ್ಯ. ಸಾಹಿತ್ಯದ ಹಲವು ಪ್ರಕಾರಗಳಲ್ಲಿ ಅವರು ತಮ್ಮನ್ನು ತೊಡಗಿಸಿಕೊಂಡರೂ ಖ್ಯಾತಿ ಗಳಿಸಿದ್ದು ಮಾತ್ರ ಕವಿಯಾಗಿ. ಇದೇ ವೇಳೆ, ಅವರ ಅನುಭವ ಕಥನಗಳ ಆತ್ಮಚರಿತ್ರೆ ಮಾದರಿಯ ‘ಊರು-ಕೇರಿ’ ಸಮಾಜದ ವಾಸ್ತವಗಳನ್ನು ಹಾಸ್ಯಲೇಪಿತ ವಿಷಾದದಿಂದಲೇ ತಣ್ಣಗೆ ಹೇಳುವ ಮೂಲಕ ಚರ್ಚೆಗೆ ಕಾರಣವಾಗಿತ್ತು.

ಇದೀಗ ‘ಊರು-ಕೇರಿ ಭಾಗ-೩’ ಉಳಿದ ಎರಡು ಭಾಗಗಳಿಗಿಂತ ಹೇಗೆ ಭಿನ್ನವಾಗಿದೆ ಎನ್ನುವ ಪ್ರಶ್ನೆಯೊಂದಿಗೆ ಸಿದ್ದಲಿಂಗಯ್ಯ ಅವರು ‘ದಿ ಸ್ಟೇಟ್‌’ನೊಂದಿಗೆ ಮಾತಿಗಿಳಿದಿದ್ದಾರೆ. “ಊರು-ಕೇರಿ ಭಾಗ ಒಂದು ಹಾಗೂ ಎರಡರಲ್ಲಿ ನನ್ನ ಬಾಲ್ಯ, ಕವಿಯಾಗಿ ಬೆಳೆದ ಬಗೆ ಮತ್ತು ಉದ್ಯೋಗ ಪಡೆದುಕೊಂಡ ವಿವರಗಳು ಇವೆ. ಭಾಗ ಮೂರರಲ್ಲಿ ಉದ್ಯೋಗದ ನಂತರ ಮತ್ತು ರಾಜಕೀಯ ಜೀವನ ಕುರಿತ ಅನುಭವಗಳು ಇವೆ,” ಎನ್ನುತ್ತಾರೆ ಸಿದ್ದಲಿಂಗಯ್ಯ.

ಇದನ್ನೂ ಓದಿ : ಸಿದ್ದಲಿಂಗಯ್ಯ ಮನದ ಮಾತು | ವಿಷಯ ಅರಿಯದೆ ನನ್ನ ವಿರೋಧಿಸುವವರು ಮನುಷ್ಯರಾ?

ಆತ್ಮಕತೆಗೆ ಹೆಚ್ಚಿನ ಒಲವು ತೋರಿರುವ ಕುರಿತು ಅವರು ವಿವರಿಸುತ್ತ, “ಕತೆ, ಕಾದಂಬರಿ ಬರೆಯಲು ವ್ಯವದಾನ ಬಹಳ ಬೇಕಾಗುತ್ತದೆ. ಆ ವ್ಯವದಾನ ನನ್ನಲ್ಲಿ ಬರಲಿಲ್ಲ. ಹಾಗಾಗಿ ಕವಿತೆ ಮತ್ತು ಅನುಭವ ಕಥನಗಳನ್ನು ಬರೆಯುತ್ತಿರುವೆ,” ಎನ್ನುತ್ತಾರೆ. ಈ ಸುತ್ತಾಟದಲ್ಲಿ ಅವರು ತಮ್ಮ ಮೊದಲ ಸನ್ಮಾನ ಕುರಿತು ಹೇಳುವ ಘಟನೆ ಮನ ಕಲಕುತ್ತದೆ. ಅದೇ ರೀತಿ, ಪ್ರೇಯಸಿಗೆ ಸಹಾಯ ಮಾಡಿದ್ದು, ಫೋನ್ ಕಳೆದುಕೊಂಡಿದ್ದ ಘಟನೆ ಓದುಗರನ್ನು ನಗೆಗಡಲಲ್ಲಿ ತೇಲಿಸುತ್ತದೆ. ‘ಊರು-ಕೇರಿ ಭಾಗ-೩’ರ ಕೆಲ ಪ್ರಸಂಗಗಳು ಇಲ್ಲಿವೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More