ಪ್ಲೇ ವಿತ್ ಮಿ, ನಾಟ್ ವಿತ್ ಸ್ಮಾರ್ಟ್ ಫೋನ್; ಪೋಷಕರ ವಿರುದ್ಧ ಎಳೆಯರ ಆಕ್ರೋಶ

ಪೋಷಕರಲ್ಲಿ ಹೆಚ್ಚುತ್ತಿರುವ ಸ್ಮಾರ್ಟ್ ಫೋನ್ ಗೀಳಿನ ವಿರುದ್ಧ ಪುಟಾಣಿಗಳ ಆಕ್ರೋಶ ಸ್ಟೋಟಗೊಂಡಿದೆ. ಜರ್ಮನಿಯ ಪ್ರಮುಖ ಬೀದಿಗಳಲ್ಲಿ ‘ಪ್ಲೇ ವಿತ್ ಮಿ, ನಾಟ್ ವಿತ್ ಯುವರ್ ಸ್ಮಾರ್ಟ್ ಫೋನ್’ ಎಂಬ ಪ್ಲೆಕಾರ್ಡ್ ಹಿಡಿದ ಪುಟಾಣಿಗಳು, ಪೋಷಕರ ಸ್ಮಾರ್ಟ್ ಫೋನ್ ಗೀಳಿನ ವಿರುದ್ಧ ಧ್ವನಿ ಎತ್ತಿದ್ದಾರೆ

ಸ್ಮಾರ್ಟ್ ಫೋನ್ ಗೀಳಿನಿಂದಾಗಿ ಪೋಷಕರು ಮತ್ತು ಮಕ್ಕಳ ನಡುವಿನ ಅಂತರ ಹೆಚ್ಚಾಗಿದೆ ಎಂಬುದನ್ನು ಅಧ್ಯಯನಗಳು ಹೇಳುತ್ತಲೇ ಬಂದಿವೆ. ಇಷ್ಟಾದರೂ ಪೋಷಕರು ಸ್ಮಾರ್ಟ್ ಫೋನ್‌ನಿಂದ ದೂರವಾಗಿ, ಮಕ್ಕಳಿಗಾಗಿ ಸಮಯ ಮೀಸಲಿಡುವುದು ತೀರಾ ಕಡಿಮೆ. ಇದೀಗ ಪೋಷಕರ ಈ ಗೀಳಿನಿಂದ ಆಕ್ರೋಶಗೊಂಡಿರುವ ಪುಟಾಣಿಗಳು, ಜರ್ಮನಿಯಲ್ಲಿ ಬೀದಿಗಿಳಿದು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ಬೀದಿಗಳಿದ ಪುಟಾಣಿಗಳು 'ಪ್ಲೇ ವಿತ್ ಮಿ, ನಾಟ್ ವಿತ್ ಯುವರ್ ಸ್ಮಾರ್ಟ್ ಫೋನ್' ಎಂಬ ಪ್ಲೆಕಾರ್ಡ್ ಹಿಡಿದು ಜಾಥಾ ನಡೆಸಿದ ಪುಟಾಣಿಗಳು, ಪೋಷಕರಲ್ಲಿ ಹೆಚ್ಚಾಗುತ್ತಿರುವ ಸ್ಮಾರ್ಟ್ ಫೋನ್ ಗೀಳಿನ ವಿರುದ್ಧ ಧ್ವನಿ ಎತ್ತಿದ್ದಾರೆ.

ಏಳು ವರ್ಷದ ಪೋರ ಎಮಿಲ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ ನೂರಾರು ಪುಟಾಣಿಗಳು ಪಾಲ್ಗೊಂಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಎಮಿಲ್, "ಸ್ಮಾರ್ಟ್ ಫೋನ್ ಕ್ರಾಂತಿಯಿಂದಾಗಿ ಪೋಷಕರು ಮಕ್ಕಳೊಂದಿಗೆ ಕಳೆಯುವ ಸಮಯ ಅತಿ ಕಡಿಮೆಯಾಗಿದೆ,” ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ವಿಪರ್ಯಾಸ ಎಂದರೆ, ಟೆಲಿಕಾಂ ಕ್ಷೇತ್ರದಲ್ಲಿ ಆದ ಕ್ರಾಂತಿಯಿಂದಾಗಿ ಮೊಬೈಲ್ ಮಾತ್ರವಲ್ಲ, ಕರೆಗಳ ದರ, ಇಂಟರ್ನೆಟ್ ದರ ಗಣನೀಯವಾಗಿ ಇಳಿಕೆಯಾಗಿದ್ದು, ಇದರ ಪರಿಣಾಮ ಸ್ಮಾರ್ಟ್‌ ಫೋನ್‌ಗಳ ಬಳಕೆದಾರರ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ. ಸ್ಮಾರ್ಟ್ ಫೋನ್ ಎಂಬ ಬಲೆಯಲ್ಲಿ ಸಿಕ್ಕು ನರಳುತ್ತಿರುವ ಪೋಷಕರು, ತಮ್ಮ ಮಕ್ಕಳಿಗಿಂತ ಹೆಚ್ಚಾಗಿ, ಸ್ಮಾರ್ಟ್ ಫೋನ್ ಗೀಳಿಗೆ ಸಿಲುಕುತ್ತಿದ್ದಾರೆ.

ಸಮೀಕ್ಷೆಯೊಂದರ ಪ್ರಕಾರ, ಮೊಬೈಲ್‌ನಿಂದಾಗಿ ಮಗುವಿನ ಮೇಲೆ ಪೋಷಕರ ಗಮನ ಕಡಿಮೆ ಆಗುತ್ತಿದ್ದು, ಇದರಿಂದ ಮಗುವಿನ ಮಾನಸಿಕ ಬೆಳವಣಿಕೆ ಕುಗ್ಗುತ್ತದೆ. ಮಗು ಓವರ್ ಸೆನ್ಸಿಟಿವಿಟಿ, ಹೈಪರ್ ಆ್ಯಕ್ಟಿವ್ ಅಥವಾ ಮಂದತನಕ್ಕೆ ಒಳಗಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಇತ್ತೀಚಿನ ಪೋಷಕರು ಮಕ್ಕಳು ಅತ್ತಾಗ, ಮಕ್ಕಳಿಗೆ ಹಸಿವಾದಾಗ ಸ್ಮಾರ್ಟ್ ಫೋನ್ ತೋರಿಸಿ ಸಮಾಧಾನ ಮಾಡುವಂತಹ ಪರಿಪಾಠ ಬೆಳೆದಿದ್ದು ಕೂಡ ಅತ್ಯಂತ ಅಪಾಯಕಾರಿ ಬೆಳವಣಿಗೆ ಎಂದು ವೈದ್ಯರು ಎಚ್ಚರಿಕೆ ನೀಡಿದ್ದಾರೆ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More