ನೊಬೆಲ್ಅನ್ನು ಒಂದು ಅಗ್ರಮಾನ್ಯ ಕಿರೀಟ ಸಾಧನೆಯಾಗಿ ನೋಡುವ ಅವಶ್ಯಕತೆ ಇಲ್ಲ

ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಯಾವ ಮಾನದಂಡಗಳನ್ನು ಇಟ್ಟುಕೊಂಡು ವಿಜ್ಞಾನಿಗಳನ್ನು ಆಯ್ಕೆ ಮಾಡುತ್ತೀರಿ ಹಾಗೂ ಹೇಗೆ ಆಯ್ಕೆಯ ವಿಷಯದಲ್ಲಿ ನ್ಯಾಯವನ್ನು ಹಾಗೂ ವಿಶ್ವಾಸಾರ್ಹತೆಯನ್ನು ಮಂಡಿಸುತ್ತೀರಿ ಎಂದು ಪ್ರಶ್ನಸಿದರೆ ಕೊನೆಗೆ ಸಿಗುವ ಉತ್ತರ, ಎಷ್ಟು ಸಂಶೋಧನಾ ಬರಹಗಳು ಪ್ರಕಟಗೊಂಡಿವೆ? ಈ ಕುರಿತು ದಿ ವೈರ್ ಪ್ರಕಟಿಸಿದ ಲೇಖನದ ಭಾವಾನುವಾದ ಇಲ್ಲಿದೆ

ಈ ಬಾರಿಯ ನೊಬೆಲ್ ಪ್ರಶಸ್ತಿಗಳೇನೋ ಘೋಷಣೆಯಾಗುತ್ತಿವೆ. ಹೊಸ ಹೊಸ ಅನ್ವೇಷಣಾಕಾರರನ್ನು ಹುಡುಕಲು, ವಿಜ್ಞಾನಿಗಳ ಸಂಶೋಧನೆಯನ್ನು ಗುರುತಿಸಲು ಇಂದೊದು ಉತ್ತಮ ಅವಕಾಶ. ಆದರೆ ಈ ಸಾಧಕರನ್ನು ಹುಡುಕುವ ಪ್ರಯತ್ನದಷ್ಟೇ ಮುಖ್ಯವಾಗಿ ಯಾವೆಲ್ಲ ಮಹತ್ವದ ಸಂಶೋಧನೆಗಳು ಪುರಸ್ಕಾರಕ್ಕೆ ಅರ್ಹವಾಗಿಲ್ಲ ಎಂಬುದನ್ನು ಗುರುತಿಸುವುದು ಸಹ ಅಷ್ಟೇ ಮುಖ್ಯ ಎಂದೆನಿಸುತ್ತದೆ.

ಆರಂಭಿಕ ವಿಜ್ಞಾನಾಸಕ್ತರಿಗೆ ನೊಬೆಲ್ ಪ್ರಶಸ್ತಿಗಳೇನು ಜ್ಞಾನವನ್ನು ವಿಸ್ತರಿಸಿಕೊಳ್ಳುವ ಮಾರ್ಗಗಳಲ್ಲ; ಬದಲಿಗೆ ವಿಜ್ಞಾನದೆಡೆಗೆ ಆಸಕ್ತಿ ಬೆಳೆಸಿಕೊಳ್ಳಲು ಹಾಗೂ ವೈಜ್ಞಾನಿಕ ಕ್ಷೇತ್ರದಲ್ಲಿನ ನೂತನ ಬೆಳವಣಿಗೆಗಳ ಬಗ್ಗೆ ಅರಿಯಲು ಒಂದು ಅವಕಾಶ. ವಿಜ್ಞಾನಿಗಳಿಗೂ ವಿಜ್ಞಾನೇತರರಿಗೂ ಈ ಪ್ರಶಸ್ತಿಗಳು ಮುಖ್ಯವಾದರೂ ನೊಬೆಲ್ ಪ್ರಶಸ್ತಿಗಳನ್ನು ಗಂಭೀರವಾಗಿ ಪರಿಗಣಿಸುವ ಅವಶ್ಯಕತೆ ಇಲ್ಲ. ಇಲ್ಲಿಯವರೆಗಿನ ನೊಬೆಲ್ ಪ್ರಶಸ್ತಿಗಳ ಇತಿಹಾಸವನ್ನು ನೋಡಿದರೆ ವೈದ್ಯಕೀಯ, ರಾಸಾಯನ ಹಾಗೂ ಭೌತಶಾಸ್ತ್ರ ವಿಭಾಗದಲ್ಲಿ ಯುರೋಪ್ ಹಾಗೂ ಅಮೆರಿಕ ದೇಶದ ಬಿಳಿಯರೇ ಹೆಚ್ಚು ಬಾರಿ ಗೌರವಕ್ಕೆ ಪಾತ್ರರಾಗಿದ್ದಾರೆ.

ಇದು ಜಗತ್ತಿನಲ್ಲಿ ವೈಜ್ಞಾನಿಕ ಸಂಶೋಧನೆ ಹೇಗೆ ನಡೆದಿದೆಎಂಬುದರ ಬಗ್ಗೆ ಅಸಮತೋಲಿತ ದೃಷ್ಟಿಕೋನವನ್ನು ನಮ್ಮ ಮುಂದಿಡುತ್ತದೆ. ಹಲವು ಸರ್ಕಾರಗಳು ತಮ್ಮ ಪ್ರಜೆಗಳ ಪೈಕಿ ಒಬ್ಬರಿಗೆ ಈ ಬಹುಮಾನವನ್ನು ನೀಡಲಾಗಿದೆ ಎಂಬ ಸುದ್ದಿಯನ್ನೇ ಇಟ್ಟುಕೊಂಡು ಹೆಮ್ಮೆ ಪಡುತ್ತವೆ ಮತ್ತು ಅವರ ಸಂಶೋಧನೆಯನ್ನು ಪ್ರಚಾರ ಮಾಡುವುದಲ್ಲದೇ ಅವರು ಪ್ರತಿನಿಧಿಸುವ ಸಮುದಾಯವನ್ನು ಮುನ್ನೆಲೆಗೆ ತರುತ್ತವೆ. ಹೀಗೆ ನೊಬೆಲ್ ಬಹುಮಾನಗಳು ಶ್ರೇಷ್ಠತೆ ಹೊಂದುವ ಮೆಟ್ಟಿಲಾಗಿ ಮಾರ್ಪಟ್ಟಿದೆ.

ಆದರೆ ಈ ನೊಬೆಲ್ ಪ್ರಶಸ್ತಿಗಳು ಇತರೆ ವಿಜ್ಞಾನಿಗಳು ಮಾಡುತ್ತಿರುವ ಮಹತ್ತರ ಕಾರ್ಯವನ್ನು ಎಲೆ ಮರೆಕಾಯಿಯಂತೆ ಹಿಂದೆ ತಳ್ಳಿ ಜಗತ್ತನ್ನು ಕುರುಡಾಗಿಸಬಾರದು. ಪ್ರಸಿದ್ಧರಲ್ಲದೇ, ಉನ್ನತ ಸಂಸ್ಥೆಗಳ, ಸಂಶೋಧನಾ ಕೇಂದ್ರಗಳ ಬೆಂಬವಿಲ್ಲದೆಯೂ ಅನೇಕ ವ್ಯಕ್ತಿಗಳು ತಮ್ಮದೇ ಮಿತಿಯಲ್ಲಿ ಉತ್ತಮ, ಮಹತ್ತರ ಅನ್ವೇಷಣೆಗಳನ್ನು ಜಗತ್ತಿನ ಮೂಲೆಗಳಲ್ಲಿ ಮಾಡುತ್ತಿದ್ದಾರೆ ಎಂಬುದನ್ನು ಮರೆಯಬಾರದು. ನೊಬೆಲ್ ಪ್ರಶಸ್ತಿ ಗಳಿಸುವುದು ಶ್ರೇಷ್ಠತೆ ಎಂದು ಕೆಲ ಸಂಶೋಧನಾ ಸಂಸ್ಥೆಗಳು ಬಿಂಬಿಸುತ್ತಿವೆ. ಉದಾಹರಣೆಗೆ ನೋಡುವುದಾದರೆ ನ್ಯೂಜೆರ್ಸಿಯ ಪ್ರಿನ್ಸ್ಟನ್ ವಿಶ್ವವಿದ್ಯಾಲಯದ ಇನ್ಸ್ಟಿಟ್ಯೂಟ್ ಫಾರ್ ಅಡ್ವಾನ್ಸ್ಡ್ ಸ್ಟಡಿ ತನ್ನ ವೆಬ್‌ಸೈಟಿನಲ್ಲಿ ಪ್ರಕಟಿಸಿಕೊಂಡಂತೆ ಅಸಾಧಾರಣ ದಾಖಲೆಯನ್ನು ನಿರ್ಮಿಸಿದೆ. ಆ ಸಂಸ್ಥೆಯ ಭೋಧಕ ಸಿಬ್ಬಂದಿಗಳು ಮತ್ತು ಇತರೆ ಸದಸ್ಯರ ಪೈಕಿ 33 ನೊಬೆಲ್ ಪ್ರಶಸ್ತಿ ವಿಜೇತರು, 60 ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸಾಧನೆ ಮಾಡಿದ ೪೨ ಪದಕ ವಿಜೇತರು, 19 ೧೭ ಜನರು ಅಬೆಲ್ ಪ್ರಶಸ್ತಿ (ನಾರ್ವೆ ದೇಶ, ಗಣಿತ ಕ್ಷೇತ್ರದಲ್ಲಿ ಗಣನೀಯ ಸಾಧನೆ ಮಾಡುವವರಿಗೆ ಕೊಡಮಾಡುವ ಪ್ರಶಸ್ತಿ) ವಿಜೇತರು, ಮತ್ತು ಅನೇಕ ಮ್ಯಾಕ್ಆರ್ಥರ್ ಫೆಲೋಗಳು ಮತ್ತು ವುಲ್ಫ್ ಪ್ರಶಸ್ತಿ (ಇಸ್ರೇಲ್ ದೇಶ, ವೈದ್ಯಕೀಯ, ರಸಾಯನ, ಭೌತ ಹಾಗೂ ಗಣಿತ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಕೊಡಮಾಡುವ ಪ್ರಶಸ್ತಿ) ವಿಜೇತರು ಎಂದು ಬರೆದುಕೊಳ್ಳಲಾಗಿದೆ.

ನೊಬೆಲ್ ಪ್ರಶಸ್ತಿಯನ್ನು ಗೆಲ್ಲುವುದು ಖುಷಿಯ ವಿಚಾರವಾದರೂ ಹಾಗೆಂದು ಪ್ರಶಸ್ತಿಯನ್ನು ಗೆಲ್ಲಲಿಲ್ಲ ಎನ್ನುವುದೇನು ವಿಷಾದದ ಸಂಗತಿಯಲ್ಲ. ಈ ದೃಷ್ಟಿಕೋನ ವೈಜ್ಞಾನಿಕ ಸಂಶೋಧನೆಗಳ ಗುಣಮಟ್ಟದ ಕುರಿತಾಗಿ ಮಾತಾಡುವಾಗ ಕಳೆದುಹೋಗಿದೆ. ಭಾರತ ಸರ್ಕಾರವೂ ಕೂಡ ಮುಂದಿನ ದಶಕಗಳಲ್ಲಿ ಭಾರತದವರು ನೊಬೆಲ್ ಪ್ರಶಸ್ತಿಗೆ ಭಾಜನರಾಗುತ್ತಾರೆ ಎಂಬ ಕನಸನ್ನು ಹೊಂದಿದೆ. ಆದರೆ, ಜಗತ್ತಿನ ಇತರೆ ವೇದಿಕೆಗಳನ್ನು ಬಳಸಿಕೊಂಡು ಪ್ರಸ್ತುತ ಪಡಿಸಬಹುದು.

ವಿಜ್ಞಾನಿಗಳನ್ನು ಪ್ರಚಾರಕ್ಕಾಗಿ ಬಳಸುವಾಗ ಹಾಗೂ ಆಯ್ಕೆ ಮಾಡುವಾಗ, ಮೌಲ್ಯಮಾಪಕರು ಸಾಮಾನ್ಯವಾಗಿ ‘ಸೆಲ್’, ‘ನೇಚರ್’, ‘ಸೈನ್ಸ್’ ನಂತಹ ಅಂತಾರಾಷ್ಟ್ರೀಯ ಪ್ರತಿಷ್ಠಿತ ಪತ್ರಿಕೆಗಳಲ್ಲಿ ನಿಮ್ಮ ಸಂಶೋಧನಾ ಲೇಖನಗಳನ್ನು ಪ್ರಕಟಿಸಿದ್ದಿರೇ ಎಂದು ಕೇಳುತ್ತಾರೆ. ಅಂದರೆ ಅಲ್ಲಿಗೆ ಅವರು ಉತ್ತಮ ಸಂಶೋಧನೆ ನಡೆಸುತ್ತಿದ್ದಾರೆ ಎಂದರ್ಥ. ಇಲ್ಲಿ ಲೇಖನವನ್ನು ಪ್ರಕಟಿಸುವುದೇ ಮುಖ್ಯವಾಗುತ್ತದೆಯೇ ವಿನಃ ಪ್ರಕಟಿಸಿದ ಲೇಖನಗಳ ಪರಿಶೀಲನೆಗೆ ಹೆಚ್ಚು ಒತ್ತು ಕೊಡುವುದಿಲ್ಲ. ಇಲ್ಲಿ ನಾವು ಗಮನಿಸಬೇಕಾದ ಅಂಶವೆಂದರೆ ನಿಯತಕಾಲಿಕೆಗಳಲ್ಲಿ ಪ್ರಕಟಿಸಿ ತಮ್ಮ ವಿಜ್ಞಾನದ ಗುಣಮಟ್ಟವನ್ನು ತೋರ್ಪಡಿಸುವವರಿಗೆ ಹೆಚ್ಚಿನ ಗಮನವನ್ನು ಕೊಡುವುದಕ್ಕಿಂತ ನೇರವಾಗಿ ಸಂಶೋಧನೆಯನ್ನು ಕೈಗೊಳ್ಳುವವರ ಬಗೆಗೆ ನಮ್ಮ ಗಮನ ಹರಿಯಬೇಕಿದೆ. ಅಂತೆಯೇ ಯಾವ ಸಮುದಾಯಕ್ಕೆ ಸೇರಿದ್ದಾರೆಂಬುದನ್ನು ಮುನ್ನೆಲೆಗೆ ತಂದು ಪ್ರಚಾರ ಗಿಟ್ಟಿಸಿಕೊಳ್ಳುವ ನೊಬೆಲ್ ಪುರಸ್ಕೃತರತ್ತಲೂ ಕಡಿಮೆ ಗಮನ ಹರಿಸಬೇಕಿದೆ.

ಇಲ್ಲಿವರೆಗಿನ ನೊಬೆಲ್ ಪುರಸ್ಕೃತ ಸಾಧಕರನ್ನು ಮೆಲುಕು ಹಾಕಿದಾಗ

ಜಾಗತಿಕ ಪ್ರಾತಿನಿಧ್ಯಗಳಲ್ಲಿ ಒಂದಾದ ನೊಬೆಲ್ ಫೌಂಡೇಶನ್ ಕೂಡ ತನ್ನ ಸ್ಥಾನಮಾನವನ್ನು ಕಳೆದುಕೊಳ್ಳುತ್ತಿದೆ ಎಂದೆನಿಸದೇ ಇರದು. ನೊಬೆಲ್ ತನ್ನ ಪ್ರತಿಷ್ಠೆಯನ್ನು ಕಾಯ್ದುಕೊಂಡಿದಿಯೇ ವಿನಃ ಸಾಧಕರ ಆಯ್ಕೆ ವಿಷಯದಲ್ಲಿ ಜಗತ್ತಿನ ಇತರೆ ಮೂಲೆಗಳನ್ನು ಪರಿಗಣಿಸಿದೆ ಎಂದು ಏಕಕಾಲದಲ್ಲಿ ಖಚಿತಪಡಿಸಲು ಸಾಧ್ಯವಿಲ್ಲ. ನೊಬೆಲ್ ಫೌಂಡೇಶನ್ ಯುರೋಪ್ ಹಾಗೂ ಅಮೆರಿಕದ ಬಿಳಿಯ ವಿಜ್ಞಾನಿಗಳನ್ನು ಹೆಚ್ಚು ಪರಿಗಣಿಸಿದೆ. ಇತರೆ ಜನಾಂಗಗಳೆಡೆಗೆ ಅದರ ನೋಟ ಕಡಿಮೆಯೇ. ಅದೇ ರೀತಿ ಅಪಾರ ಕೊಡುಗೆ ನೀಡಿದ ಮಹಿಳೆಯರನ್ನು ಸಹ ಅದು ಈವರೆಗೆ ಪರಿಗಣನೆಗೆ ತೆಗೆದುಕೊಂಡಿಲ್ಲ. ಇಲ್ಲಿಯವರೆಗೆ ಭೌತಶಾಸ್ತ್ರದಲ್ಲಿ ನೀಡಿದ ೨೦೬ ನೊಬೆಲ್ ಪ್ರಶಸ್ತಿಗಳಲ್ಲಿ ಕೇವಲ ೨, ರಾಸಾಯನಶಾಸ್ತ್ರದಲ್ಲಿ ೧೧೭ ರಲ್ಲಿ ಕೇವಲ ೪, ವೈದ್ಯಕೀಯದಲ್ಲಿ ೨೧೪ ರಲ್ಲಿ ೧೨ ಮಹಿಳೆಯರು ಮಾತ್ರ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಬಹುಮಾನ-ಆಯ್ಕೆ ಮಾಡುವವರು ಮತ್ತು ಈ ಹಿಂದೆ ಆಯ್ಕೆಗೊಂಡವರೆಲ್ಲ ಸ್ವೀಡಿಷ್ ವಿಜ್ಞಾನಿಗಳ ಸಮಿತಿಯಿಂದ ಆಯ್ಕೆಯಾದವರು ಎನ್ನುವುದನ್ನು ಗಮನಿಸಬೇಕು. ಈ ಗುಂಪು ಈಗಾಗಲೇ ಪರಿಚಿತವಾಗಿರುವ ಸಂಶೋಧನೆ ಮತ್ತು ತನ್ನ ಸದಸ್ಯರು ಕೇಳಿದ ಜನರ ಹೆಸರುಗಳನ್ನುಆಧರಿಸಿ ಅರ್ಹರನ್ನು ಆಯ್ಕೆ ಮಾಡುತ್ತದೆ. ಅದರ ಸದಸ್ಯರು ಹೊಂದಿರುವ ಮಿತಿಗಳನ್ನು ಸಹಜವಾಗಿಯೇ ಸಮಿತಿಯೂ ಹೊಂದಿರುತ್ತದೆ. ಅದರ ಸದಸ್ಯರ ನೋಟದ ಪರಿಧಿಯಾಚೆಗಿನ ವಿಷಯಗಳನ್ನು ಅರಿಯಲು ಯಾವುದೇ ಮಾರ್ಗಗಳನ್ನು ಅದು ಹೊಂದಿಲ್ಲ. ಅಲ್ಲದೇ ಸಮಿತಿಯು ಪ್ರಜಾಪ್ರಭುತ್ವದ ಮೌಲ್ಯಗಳನ್ನು ಹೊಂದಿದ ಸಂಘಟನೆಯಲ್ಲ. ಈ ನಿರ್ದಿಷ್ಟ ವಿದ್ಯಮಾನವನ್ನು ಈಗಾಗಲೇ ವೈಜ್ಞಾನಿಕ ನಿಯತಕಾಲಿಕಗಳ ಸಂಪಾದಕೀಯ ಮಂಡಳಿಗಳಲ್ಲಿ ದಾಖಲಿಸಲಾಗಿದೆ.

ಇದನ್ನೂ ಓದಿ : ಟ್ವಿಟರ್ ಸ್ಟೇಟ್ | ರವಿಶಂಕರ್ ಹೇಳಿಕೆಗೆ ನೊಬೆಲ್ ಸಿಗುವುದಿಲ್ಲ ಎಂದು ಅಣಕಿಸಿದ ಟ್ವೀಟಿಗರು

ನೊಬೆಲ್ ಪ್ರಶಸ್ತಿ ಆಯ್ಕೆ ಸಮಿತಿಯನ್ನು ಯಾವ ಮಾನದಂಡಗಳನ್ನು ಇಟ್ಟುಕೊಂಡು ವಿಜ್ಞಾನಿಗಳನ್ನು ಆಯ್ಕೆ ಮಾಡುತ್ತೀರಿ ಹಾಗೂ ಹೇಗೆ ಆಯ್ಕೆಯ ವಿಷಯದಲ್ಲಿ ನ್ಯಾಯವನ್ನು ಹಾಗೂ ವಿಶ್ವಾಸಾರ್ಹತೆಯನ್ನು ಮಂಡಿಸುತ್ತೀರಿ ಎಂದು ಪ್ರಶ್ನಸಿದರೆ ಕೊನೆಗೆ ಅವರ ಉತ್ತರ ಬಂದು ನಿಲ್ಲುವುದು ಪ್ರತಿಷ್ಟಿತ ನಿಯತಕಾಲಿಕೆಗಳಲ್ಲಿ ವಿಜ್ಞಾನಿಗಳ ಎಷ್ಟು ಸಂಶೋಧನಾ ಬರಹಗಳು ಪ್ರಕಟಗೊಂಡಿವೆ? ಎಷ್ಟು ವಿಜ್ಞಾನಿಗಳು ಅವರ ಹೆಸರನ್ನು ಅನುಮೋದಿಸಿದ್ದಾರೆ ಎಂಬ ಸರಳ ಸಿದ್ದ ಉತ್ತರಗಳಿಗೆ. ಹಾಗಾಗಿ ನಿಯತಕಾಲಿಕೆಗಳಿಂದ ದೂರ ಉಳಿಯುವ ಸಂಶೋಧಕರು, ವಿಜ್ಞಾನಿಗಳು ಆಯ್ಕೆ ಸಮಿತಿ ಪರಿಧಿಯಿಂದಲೂ ದೂರ ಉಳಿಯುತ್ತಾರೆ.

ಒಟ್ಟಾರೆಯಾಗಿ ನೊಬೆಲ್ ಪ್ರಶಸ್ತಿಗಳು ಘೋಷಣೆಯಾದಂತೆ ಅದು ಒಳಗೊಂಡಿರುವ ಈ ಮೇಲಿನ ಮಿತಿಗಳನ್ನು ನಾವು ಮತ್ತೊಮ್ಮೆ ಗಮನಿಸಬೇಕಾಗುತ್ತದೆ. ಜಗತ್ತಿನ ಒಂದು ಮೂಲೆಯಿಂದ ಮಾತ್ರ ಆ ಪುರಸ್ಕಾರಕ್ಕೆ ಆಯ್ಕೆಯಾಗುತ್ತಿದ್ದಾರೆ ಎಂಬುದನ್ನು ಈ ಮಿತಿಗಳು ಎತ್ತಿ ತೋರಿಸುತ್ತವೆ ಹಾಗಾಗಿ ನೊಬೆಲ್ ಪ್ರಶಸ್ತಿಯನ್ನು ಒಂದು ಅಗ್ರಮಾನ್ಯ ಕಿರೀಟ ಸಾಧನೆಯಾಗಿ ನೋಡುವ ಅವಶ್ಯಕತೆ ಇಲ್ಲ.

ಸಂಧ್ಯಾ ದೇವಿ ಕವಿತೆ | ಗರ್ಭದೊಳಗೆ
ಪುರಾಣದ ಮೂಲಕ ಅಂಬೇಡ್ಕರ್ ಚಿಂತನೆ ಪ್ರಚುರಪಡಿಸಲು ಚಿಂತಿಸಿದ್ದ ತೋಂಟದಾರ್ಯ ಶ್ರೀ
ಐರ್ಲೆಂಡ್‌ ಲೇಖಕಿ ಆ್ಯನಾ ಬರ್ನ್ಸ್‌ ಕಾದಂಬರಿ ‘ಮಿಲ್ಕ್‌ಮ್ಯಾನ್‌’ಗೆ ೨೦೧೮ರ ಮ್ಯಾನ್‌ಬುಕರ್‌
Editor’s Pick More