ನೀಲಿಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್‌ ಜತೆಗಿನ ಡೊನಾಲ್ಡ್‌ ಟ್ರಂಪ್ ಸಖ್ಯ ಸತ್ಯವೇನಾ?

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮೇಲಿನ ಲೈಂಗಿಕ ಅರೋಪಗಳಿಗೆ ಇದು ಇನ್ನೊಂದು ಸೇರ್ಪಡೆ. ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಜತೆಗೆ ಅವರ ಹೆಸರು ತಳಕು ಹಾಕಿಕೊಂಡಿದ್ದು, ಆಕೆಯ ಜತೆಗಿನ ಸಖ್ಯಕ್ಕಾಗಿ ಅಂದಾಜು ₹ ೮೫ ಲಕ್ಷ ರೂ. ತೆತ್ತಿದ್ದರೆಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ

ಬರೋಬ್ಬರಿ ೧೨ ವರ್ಷಗಳ ಹಿಂದಿನ ಪ್ರಕರಣವಿದು. ಬಾಳ ಸಂಗಾತಿ ಮೆಲಾನಿಯಾರನ್ನು ಕೈಹಿಡಿಯುವ ವರ್ಷದ ಹಿಂದಷ್ಟೇ ಅಂದರೆ, ೨೦೦೬ರಲ್ಲಿ ಡೊನಾಲ್ಡ್ ಟ್ರಂಪ್, ಮಾಜಿ ನೀಲಿ ಚಿತ್ರ ತಾರೆ ಸ್ಟಾರ್ಮಿ ಡೇನಿಯಲ್ಸ್ ಜತೆಗೆ ಲೈಂಗಿಕ ಸಂಪರ್ಕ ನಡೆಸಿದ್ದು, ಈ ಕುರಿತು ಬಾಯಿಬಿಡದಂತೆ ಕ್ಲಿಫರ್ಡ್ ಅವರಿಗೆ ಅವರು ₹ ೮೫ ಲಕ್ಷ ರೂ.ಗಳನ್ನು ನೀಡಿದ್ದರೆಂದು ಹೇಳಲಾಗಿದೆ. ಒಪ್ಪಂದದ ಪ್ರಕಾರ ಈ ಹಣವನ್ನು ಟ್ರಂಪ್ ಸಂಸ್ಥೆಯಲ್ಲಿ ಸರಿಸುಮಾರು ಎರಡು ದಶಕಗಳ ಕಾಲ ಸೇವೆ ಸಲ್ಲಿಸಿದ್ದ ವಕೀಲ ಮೈಕೆಲ್ ಕೋಹೆನ್ ಡೇನಿಯಲ್ಸ್‌ಗೆ ಸಲ್ಲಿಸಿದ್ದರೆಂದು ತಿಳಿದುಬಂದಿದೆ. ಆದರೆ, ಶುಕ್ರವಾರದ (ಜ.೧೨) ಸಂಚಿಕೆ ‘ವಾಲ್ ಸ್ಟ್ರೀಟ್‌ ಜರ್ನಲ್’ನಲ್ಲಿ ಬಂದಿರುವ ಈ ವರದಿಯಲ್ಲಿ ಯಾವುದೇ ಹುರುಳಿಲ್ಲ ಎಂದು ಕೋಹೆನ್ ಬಲವಾಗಿ ತಳ್ಳಿಹಾಕಿದ್ದಾರೆ. ಅಂದಹಾಗೆ, ೨೦೧೬ರ ಅಮೆರಿಕ ಅಧ್ಯಕ್ಷರ ಚುನಾವಣೆಯ ಕೊನೆಯ ದಿನಗಳಲ್ಲಿನ ಲೆಕ್ಕ ಪತ್ರಗಳನ್ನು ಪರಿಶೀಲಿಸುವ ವೇಳೆ ಈ ಸಂಗತಿ ತಿಳಿದುಬಂದಿದೆ ಎನ್ನಲಾಗಿದೆ.

ಕ್ಲಿಫರ್ಡ್ ಜತೆಗಿನ ಟ್ರಂಪ್ ಕಾಮಕೇಳಿಯ ಕುರಿತ ಪ್ರಶ್ನೆಗೆ ಕೂಡಲೇ ಉತ್ತರಿಸದ ಕೋಹೆನ್, ವರದಿ ಸಂಪೂರ್ಣ ಕಲ್ಪಿತ ಕತೆ ಹಾಗೂ ಇದರಲ್ಲಿ ಯಾವುದೇ ತಥ್ಯವಿಲ್ಲ ಎಂಬ ಹೇಳಿಕೆಯುಳ್ಳ ಕ್ಲಿಫರ್ಡ್ ಸಹಿ ಇರುವ ಹೇಳಿಕೆಯೊಂದನ್ನು ಜನವರಿ ೧೦ರಂದು ಬುಜ್‌ಫೀಡ್ ನ್ಯೂಸ್‌ಗೆ ಮೇ ಲ್ ಮಾಡಿದ್ದಾರೆ. ಇನ್ನು ವರದಿಯ ಬಗ್ಗೆ ಪ್ರತಿಕ್ರಿಯಿಸಿರುವ ಶ್ವೇತಭವನ, “ಇದು ಈಗಾಗಲೇ ಪ್ರಕಟವಾಗಿರುವ ಹಳೆಯ ಹಾಗೂ ಹುರುಳಿಲ್ಲದ ಸುದ್ದಿ. ಚುನಾವಣೆಗೆ ಮುಂಚೆಯೇ ಬೇಕೆಂತಲೇ ಇದನ್ನು ಪದೇ ಪದೇ ಬಳಸಲಾಗುತ್ತಿತ್ತು’’ ಎಂದು ಪ್ರತಿಕ್ರಿಯಿಸಿದೆ.

ಇದನ್ನೂ ಓದಿ : ಎಚ್1ಬಿ ವೀಸಾ ನಿರ್ಬಂಧ ಹೇರಿಕೆ ಕೈಬಿಟ್ಟ ಟ್ರಂಪ್ ಆಡಳಿತ, ಭಾರತೀಯರು ನಿರಾಳ

ಯಾರೀ ಸ್ಟಾರ್ಮಿ?

ಅಮೆರಿಕದ ನೀಲಿ ಚಿತ್ರ ತಾರೆ ಈ ಸ್ಟಾರ್ಮಿ ಡೇನಿಯಲ್ಸ್. ಈಕೆಯ ಮೂಲ ಹೆಸರು ಸ್ಟೆಫಾನಿ ಗ್ರೆಗೊರಿ ಕ್ಲಿಫರ್ಡ್. ಚಿತ್ರಕತೆಗಾರ್ತಿ ಹಾಗೂ ನಿರ್ದೇಶಕಿಯೂ ಆಗಿದ್ದ ಸ್ಟೆಫಾನಿ, ನೀಲಿ ಚಿತ್ರ ಲೋಕದಲ್ಲಿ ಸ್ಟಾರ್ಮಿ ಡೇನಿಯಲ್ಸ್ ಎಂದೇ ಕಾರ್ಯಾಚರಿಸುತ್ತಿದ್ದಾಕೆ. ಅಮೆರಿಕ ಅಧ್ಯಕ್ಷೀಯ ಚುನಾವಣೆಯ ಅಂತಿಮ ದಿನಗಳಲ್ಲಿ ಟ್ರಂಪ್ ಅವರನ್ನು ಸುತ್ತುವರೆದಿದ್ದ ಸರಣಿ ಲೈಂಗಿಕ ಹಗರಣಗಳ ಕುರಿತ ವರದಿಗಳು ರಂಗು ಪಡೆಯುತ್ತಿದ್ದವು. ಇದೇ ವೇಳೆ ‘ಗುಡ್ ಮಾರ್ನಿಂಗ್ ಅಮೆರಿಕ’ದ ಜತೆಗೆ ಮಾತನಾಡಿದ್ದ ಸ್ಟಾರ್ಮಿ, ಟ್ರಂಪ್ ಜತೆಗೆ ಲೈಂಗಿಕ ಕ್ರಿಯೆ ನಡೆಸಿರುವುದಾಗಿ ಹೇಳಿಕೊಂಡಿದ್ದರು. ಅಂದಹಾಗೆ, ೨೦೦೬ರ ಜುಲೈನಲ್ಲಿ ಟ್ರಂಪ್ ಜತೆಗೆ ಕ್ಲಿಫರ್ಡ್ ಕಾಣಿಸಿಕೊಂಡಿದ್ದ ಚಿತ್ರ ‘ಮೈಸ್ಪೇಸ್ ಡಾಟ್ ಕಾಂ ಅಕೌಂಟ್‌ನಲ್ಲಿ’ ಪ್ರಕಟಗೊಂಡಿತ್ತು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More