ಮಾಲ್ಡೀವ್ಸ್‌ನಲ್ಲಿ ತುರ್ತು ಪರಿಸ್ಥಿತಿ; ಸುಪ್ರೀಂ ಕೋರ್ಟ್‌ ಸಿಜೆ ಬಂಧನ

ಮಾಲ್ಡೀವ್ಸ್‌ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ದೇಶದ ಹಿಂದಿನ ಅಧ್ಯಕ್ಷ ಮಮೂನ್ ಅಬ್ದುಲ್ ಗಯೂಮ್ ಅವರೂ ಇದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಸೇನಾಪಡೆಗಳು ಬೀಡುಬಿಟ್ಟಿವೆ

ಮಾಲ್ಡೀವ್ಸ್‌ನಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದ್ದು, ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿಗಳೂ ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಬಂಧಿತರಲ್ಲಿ ದೇಶದ ಹಿಂದಿನ ಅಧ್ಯಕ್ಷ ಮಮೂನ್ ಅಬ್ದುಲ್ ಗಯೂಮ್ ಅವರೂ ಇದ್ದಾರೆ. ಸುಪ್ರೀಂ ಕೋರ್ಟ್ ಮತ್ತು ಸಂಸತ್ ಭವನಕ್ಕೆ ಬೀಗ ಹಾಕಲಾಗಿದ್ದು, ಸೇನಾಪಡೆಗಳು ರಾಜಧಾನಿ ಮಾಲೆಯ ಆಯಕಟ್ಟಿನ ಸ್ಥಳಗಳಲ್ಲಿ ಬೀಡುಬಿಟ್ಟಿವೆ. ತುರ್ತುಪರಿಸ್ಥಿತಿ ಸದ್ಯಕ್ಕೆ ಹದಿನೈದು ದಿನಗಳ ಕಾಲ ಮಾತ್ರ ಎಂದು ಅಧ್ಯಕ್ಷ ಯಮೀನ್ ಅಬ್ದುಲ್ ಗಯೂಮ್ ಅವರ ವಕ್ತಾರರು ಪ್ರಕಟಿಸಿದ್ದಾರೆ. ತುರ್ತುಪರಿಸ್ಥಿತಿ ಜಾರಿಯಲ್ಲಿದ್ದರೂ ಜನರು ತಮ್ಮ ಮಾಮೂಲಿ ಚಟುವಟಿಕೆ ನಡೆಸಲು ಯಾವುದೇ ಅಡ್ಡಿ ಇಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ.

ಸುಪ್ರೀಂಕೋರ್ಟ್ ಮತ್ತು ಅಧ್ಯಕ್ಷ ಯಮೀನ್ ನಡುವಣ ಸಂಘರ್ಷವೇ ಈ ಪರಿಸ್ಥಿತಿಗೆ ಕಾರಣ. ಈ ಸಂಘರ್ಷ ಇತ್ತೀಚಿನ ವರ್ಷಗಳಲ್ಲಿ ರಾಜಕೀಯ ಸ್ವರೂಪ ಪಡೆದು, ದೇಶವನ್ನೇ ಬಿಕ್ಕಟ್ಟಿಗೆ ದೂಡಿದೆ. ಪ್ರಕರಣವೊಂದರಲ್ಲಿ ಹಿಂದಿನ ಅಧ್ಯಕ್ಷ ಮಹಮದ್ ನಸೀಬ್ ಮತ್ತಿತರರ ಬಿಡುಗಡೆಗೆ ಕಳೆದ ವಾರ ಸುಪ್ರೀಂಕೋರ್ಟ್ ಆದೇಶ ನೀಡಿತ್ತು. ಜೊತೆಗೆ ಅಧ್ಯಕ್ಷ ಯಮೀನ್ ನೇತೃತ್ವದ ಪಕ್ಷವನ್ನು ತ್ಯಜಿಸಿ ವಿರೋಧ ಪಕ್ಷಕ್ಕೆ ಬೆಂಬಲ ಘೋಷಿಸಿದ್ದ ೧೨ ಮಂದಿ ಸಂಸತ್ ಸದಸ್ಯರ ಸದಸ್ಯತ್ವವನ್ನು ರದ್ದುಮಾಡಿದ್ದ ಸ್ಪೀಕರ್ ಆದೇಶವನ್ನೂ ಸುಪ್ರೀಂ ಕೋರ್ಟ್ ವಜಾ ಮಾಡಿತ್ತು.

ಇದನ್ನೂ ಓದಿ : ಸಂಸತ್‌ಗೆ ಬೀಗ ಹಾಕಿಸಿದ ಅಧ್ಯಕ್ಷ; ಸುಪ್ರೀಂ ಕೋರ್ಟ್‌ನಲ್ಲೇ ಉಳಿದ ನ್ಯಾಯಮೂರ್ತಿ

ಸುಪ್ರೀಂಕೋರ್ಟ್‌ನ ಈ ಆದೇಶಗಳು ಸಹಜವಾಗಿಯೇ ಅಧಿಕಾರಾರೂಢರಿಗೆ ಹಿಡಿಸಲಿಲ್ಲ. ತಮ್ಮ ರಾಜಕೀಯ ವಿರೋದಿಯಾದ ನಸೀದ್ ಮತ್ತು ಅವರ ಬೆಂಬಲಿಗರನ್ನು ಬಿಡುಗಡೆ ಮಾಡುವುದಾಗಲಿ, ತಮ್ಮ ಪಕ್ಷ ತ್ಯಜಿಸಿದ ಸಂಸತ್ ಸದಸ್ಯರು ಮತ್ತೆ ಸಂಸತ್ ಪ್ರವೇಶಿಸುವುದಕ್ಕಾಗಲೀ ಒಪ್ಪದ ಯಮೀನ್ ಇಂಥ ಉಗ್ರ ಕ್ರಮಕ್ಕೆ ಮುಂದಾಗಿದ್ದಾರೆ. ನಸೀಬ್ ಬಿಡುಗಡೆಯಾದರೆ ಮುಂದಿನ ನವೆಂಬರ್ ತಿಂಗಳಲ್ಲಿ ನಡೆಯಲಿರುವ ಅಧ್ಯಕ್ಷ ಚುನಾವಣೆಯಲ್ಲಿ ಯಮೀನ್‌ಗೆ ಪ್ರಬಲ ಪೈಪೋಟಿ ಎದುರಾಗಲಿತ್ತು. ಆಡಳಿತ ಪಕ್ಷ ತ್ಯಜಿಸಿ ವಿರೋಧಿ ಪಾಳಯಕ್ಕೆ ಸೇರಿದ ೧೨ ಮಂದಿ ಸದಸ್ಯರು ಸಂಸತ್ತಿನಲ್ಲಿ ಬಲಾಬಲ ಪ್ರದರ್ಶನ ಕೋರಿದ ಪಕ್ಷದಲ್ಲಿ ಯಮೀನ್ ಪಕ್ಷ ಸೋಲುತ್ತಿತ್ತು. ಹೀಗಾಗಿ ಯಮೀನ್ ಅವರು ೧೨ ಮಂದಿ ಸಂಸತ್ ಸದಸ್ಯರ ವಿಚಾರದಲ್ಲಿ ಕಟುವಾದ ದೊರಣೆ ತಳೆದಿದ್ದಾರೆ. ಅಧಿಕಾರ ಕಳೆದುಕೊಳ್ಳಲು ಯಮೀನ್ ಸಿದ್ಧರಿಲ್ಲ. ಅದೇ ಇಂದಿನ ಬಿಕ್ಕಟ್ಟಿಗೆ ಕಾರಣ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More