ಬಲಪಂಥೀಯ ರಾಜಕಾರಣದತ್ತ ಹೊರಳಿದ ಇಟಲಿ; ವಲಸಿಗರ ಸ್ಥಿತಿ ಮತ್ತಷ್ಟು ಚಿಂತಾಜನಕ?

ದೇಶವನ್ನು ಸಾಲದಿಂದ ಮುಕ್ತ ಮಾಡಲು ಸಾಧ್ಯವಾಗದುದಕ್ಕೆ ಜನರು ಹಲವು ಸರ್ಕಾರಗಳನ್ನು ತಿರಸ್ಕರಿಸುತ್ತ ಬಂದಿದ್ದಾರೆ. ಅಮೆರಿಕದಲ್ಲಿ ಟ್ರಂಪ್‍ಗೆ, ಬ್ರಿಟನ್‍ನಲ್ಲಿ ಬ್ರೆಕ್ಸಿಟ್‍ಗೆ ಬೆಂಬಲವಾಗಿ ಮತ ನೀಡಿದಂತೆ ಇದೀಗ ಇಟಲಿ ಜನರು ಬಲಪಂಥೀಯ ಪಕ್ಷಗಳ ಪರವಾಗಿ ಮತನೀಡಿ ಅಚ್ಚರಿ ನೀಡಿದ್ದಾರೆ

ಇಟಲಿಯ ಸಂಸತ್ತಿಗೆ ನಡೆದ ಚುನಾವಣೆಗಳಲ್ಲಿ ಯುರೋಪ್ ಒಕ್ಕೂಟ ಮತ್ತು ವಲಸೆಯ ವಿರುದ್ದದ ನೀತಿಗಳಿರುವ ಬಲಪಂಥೀಯ ರಾಜಕೀಯ ಪಕ್ಷಗಳಿಗೆ ಬೆಂಬಲಿಸುವ ಮೂಲಕ ಜನರು ಆಘಾತ ಉಂಟುಮಾಡಿದ್ದಾರೆ. ಆದರೆ ಯಾವುದೇ ಒಂದು ಪಕ್ಷಕ್ಕೆ ಬಹುಮತ ಸಿಕ್ಕಿಲ್ಲದೆ ಇರುವುದರಿಂದ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ. ಬಲಪಂಥೀಯ ಪಕ್ಷಗಳು ಮೈತ್ರಿ ಸಾಧಿಸಿ ಸರ್ಕಾರ ರಚಿಸುವುದು ಅನಿವಾರ್ಯವಾಗಿದೆ. ಆದ್ದರಿಂದ ಸರ್ಕಾರ ರಚನೆ ಸಾಕಷ್ಟು ತಡವಾಗುವ ಸಂಭವವಿದೆ.

ಇಟಲಿ ಆರ್ಥಿಕವಾಗಿ ತುಂಬಾ ಬಿಕ್ಕಟ್ಟಿನಲ್ಲಿದೆ. ದೇಶದ ಆದಾಯಕ್ಕಿಂತ ಮೂರು ಪಟ್ಟು ಹೆಚ್ಚು ಸಾಲವೇ ಇದೆ. ಇಟಲಿಗೆ ವಿಶ್ವಬ್ಯಾಂಕ್, ಐಎಂಎಫ್ ಸಾಲ ನೀಡಿ, ಮರುಹೊಂದಾಣಿಕೆ ಮಾಡಿ ಸಾಕಾಗಿ ಇನ್ನು ಕೊಡಲಾರದಂಥ ಸ್ಥಿತಿ ತಲುಪಿವೆ. ದೇಶವನ್ನು ಸಾಲದಿಂದ ಮುಕ್ತಮಾಡಲು ಸಾಧ್ಯವಾಗದುದಕ್ಕೆ ಜನರು ಹಲವು ಸರ್ಕಾರಗಳನ್ನು ತಿರಸ್ಕರಿಸುತ್ತ ಬಂದಿದ್ದಾರೆ. ಈಗಲೂ ಅಧಿಕಾರದಲ್ಲಿದ್ದ ಡೆಮಾಕ್ರಟಿಕ್ ಪಕ್ಷದ ಮಟ್ಟಿಯೋ ರೆಂಜಿ ಅವರ ಸರ್ಕಾರವನ್ನೂ ಜನರು ತಿರಸ್ಕರಿಸಿದ್ದಾರೆ.

ಯೂರೋಪ್ ಒಕ್ಕೂಟದ ಪರಿಕಲ್ಪನೆಯನ್ನೇ ವಿರೋಧಿಸುವ ಮತ್ತು ದೇಶದೊಳಕ್ಕೆ ಬಂದಿರುವ ಆಫ್ರಿಕಾ ದೇಶಗಳ ವಲಸಿಗರನ್ನು ಹೊರಗಟ್ಟುವ ಭರವಸೆ ನೀಡಿದ್ದ ಬಂಲಪಂಥೀಯ ಫೈವ್ ಸ್ಟಾರ್ ಮೂವ್‍ಮೆಂಟ್‍ಗೆ ಶೇ. 32.3 ರಷ್ಟು ಜನಬೆಂಬಲ ವ್ಯಕ್ತವಾಗಿದೆ. ಈ ಪಕ್ಷಕ್ಕೆ 216ರಿಂದ 236 ಸ್ಥಾನಗಳು ಲಭಿಸಬಹುದೆಂದು ಊಹಿಸಲಾಗಿದೆ. ಮಾಜಿ ಪ್ರಧಾನಿ ಸಿಲ್ವಿಯೋ ಬರ್ಲುಸ್ಕಾನಿ ಅವರ ನೇತೃತ್ವದ ಬಲಪಂಥೀಯ ಮೈತ್ರಿ ಕೂಟ ಫಾರ್ಜ್ ಇಟಾಲಿಯಾಕ್ಕೆ ಶೇ.17.6 ರಷ್ಟು ಮತ ಸಿಕ್ಕಿದೆ. 248ರಿಂದ 268 ಸ್ಥಾನ ಗಳಿಸಬಹುದೆಂದು ಲೆಕ್ಕಾಚಾರ ಹಾಕಲಾಗಿದೆ. ಈಗ ಅಧಿಕಾರದಲ್ಲಿದ್ದ ರೆಂಜಿ ಅವರ ಎಡಪಂಥೀಯ ಪಕ್ಷ ಕೇವಲ 107ರಿಂದ 127 ಸ್ಥಾನ ಗಳಿಸಬಹುದೆಂದು ಊಹಿಸಲಾಗಿದೆ. ಬರ್ಲುಸ್ಕಾನಿ ಕೂಟ ಪೈವ್ ಸ್ಟಾರ್ ಗಿಂತ ಹೆಚ್ಚು ಸ್ಥಾನ ಗಳಿಸಿದೆ. ಆದರೆ ಫೈವ್ ಸ್ಟಾರ್ ಲೀಗ್ ಅತಿ ಹೆಚ್ಚು ಸ್ಥಾನ ಗಳಿಸಿದ ಪಕ್ಷವಾಗಿ ಹೊರಹೊಮ್ಮಿದೆ.

ಯಾವ ಪಕ್ಷದ ಜೊತೆಗೂ ಹೊಂದಾಣಿಕೆ ಮಾಡಿಕೊಳ್ಳದೆ ಈ ಪಕ್ಷ ಚುನಾವಣೆಯಲ್ಲಿ ಸ್ಪರ್ಧಿಸಿತ್ತು. ಆದರೆ ಈಗ ಹೊಂದಾಣಿಕೆ ಅನಿವಾರ್ಯವಾಗಿದೆ. ಬರ್ಲುಸ್ಕಾನಿ ಅವರೂ ಹೊಂದಾಣಿಕೆ ಮಾಡಿಕೊಳ್ಳದೆ ಸರ್ಕಾರ ರಚಿಸಲು ಸಾಧ್ಯವಿಲ್ಲ. ಆದರೆ ಫೈವ್‍ಸ್ಟಾರ್ ಪಕ್ಷ ಅವರ ಜೊತೆ ಹೊಂದಾಣಿಕೆಗೆ ಸಿದ್ಧವಿಲ್ಲ. ಆದರೆ ಬರ್ಲುಸ್ಕಾನಿ ಅವರು ನಾಯಕತ್ವದಿಂದ ದೂರ ಸರಿದರೆ ಮೈತ್ರಿ ಕೂಟದ ಮತ್ತೊಬ್ಬ ನಾಯಕ ಮಟ್ಟಿಯೋ ಸಲ್ವಿನ್ ಸರ್ಕಾರ ರಚನೆಗಾಗಿ ಮೈತ್ರಿಗೆ ಬೇರೆ ಪಕ್ಷಗಳ ಜೊತೆ ಮಾತುಕತೆ ನಡೆಸುವ ಸಾಧ್ಯತೆಗಳಿವೆ.

ಇದನ್ನೂ ಓದಿ : ವಿಶ್ವದ ಮುಂಚೂಣಿಯಲ್ಲಿದ್ದ ಅಮೆರಿಕವನ್ನು ದಿಢೀರನೆ ಹಿಂದಕ್ಕೆ ನೂಕಿದ ಡೊನಾಲ್ಡ್ ಟ್ರಂಪ್

ಬರ್ಲುಸ್ಕಾನಿ ಅವರು ತೆರಿಗೆ ಮೋಸ ಪ್ರಕರಣವೊಂದರಲ್ಲಿ ಜೈಲು ಶಿಕ್ಷೆ ಅನುಭವಿಸಿದ್ದಾರೆ. ಇದೇ ಕಾರಣದಿಂದ ಅವರು ಪ್ರಧಾನಿಯಾಗಿ ಮತ್ತೆ ಅಧಿಕಾರಕ್ಕೆ ಬರುವುದನ್ನು ಜನರು ಒಪ್ಪಲಾರರು. ಆದರೆ ಬರ್ಲುಸ್ಕಾನಿ ನುರಿತ ರಾಜಕಾರಣಿ. ಅಧಿಕಾರ ಹೇಗೆ ಗಳಿಸಬೇಕೆಂಬ ತಂತ್ರವನ್ನು ತಿಳಿದಿರುವವರು. ಅತಂತ್ರ ಸ್ಥಿತಿ ನಿರ್ಮಾಣವಾಗಿರುವುದರಿಂದ ಮುಂದೆ ಯಾವ ರೀತಿ ರಾಜಕೀಯ ಬೆಳವಣಿಗೆಗಳು ನಡೆಯುತ್ತವೆ ಎಂದು ಊಹಿಸುವುದು ಕಷ್ಟ. ಸರ್ಕಾರ ರಚಿಸಲು ಕನಿಷ್ಠ 316 ಸದಸ್ಯರ ಬೆಂಬಲ ಬೇಕಿದೆ.

ಯಾವುದೇ ಸರ್ಕಾರ ಬಂದರೂ ದೇಶ ಯೂರೋಪ್ ಒಕ್ಕೂಟದಿಂದ ಹೊರಹೋಗಬೇಕಾದ ಸ್ಥಿತಿ ಬರಬಹುದು. ಈಗಾಗಲೇ ಬ್ರಿಟನ್ ದೇಶ ಯುರೋಪ್ ಒಕ್ಕೂಟದಿಂದ ಹೊರಹೋಗಲು ನಿರ್ಧರಿಸಿ ಅನೇಕ ಸಂಕಷ್ಟಗಳನ್ನು ಎದುರಿಸುತ್ತಿದೆ. ಇಟಲಿಯ ಸ್ಥಿತಿ ಬ್ರಿಟನ್‍ಗಿಂದ ಹೆಚ್ಚು ಚಿಂತಾಜನಕವಾಗಬಹುದು. ವಲಸೆ ವಿರೋಧಿ ನೀತಿಯುಳ್ಳ ಪಕ್ಷಗಳು ಅಧಿಕಾರಕ್ಕೆ ಬರುವುದು ಖಚಿತವಾಗಿರುವುದರಿಂದಾಗಿಯೂ ಇಟಲಿ ಬಿಕ್ಕಟ್ಟನ್ನು ಎದುರಿಸಬೇಕಾಗುತ್ತದೆ. ಈಗಾಗಲೇ ದೇಶದಲ್ಲಿರುವ ಆರು ಲಕ್ಷ ವಲಸಿಗರನ್ನು ಹೊರಹಾಕುವ ವಿಚಾರದಲ್ಲಿ ಇಟಲಿ ದೊಡ್ಡ ಸಮಸ್ಯೆಯನ್ನು ಎದುರಿಸಬೇಕಾಗಬಹುದು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More