ಶ್ರೀಲಂಕಾದಲ್ಲಿ ತುರ್ತುಪರಿಸ್ಥಿತಿ ಹೇರುವಷ್ಟು ಘರ್ಷಣೆ ಭುಗಿಲೆದ್ದಿದ್ದು ಏಕೆ?

ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಸಿಂಹಳೀಯರು ಮತ್ತು ತಮಿಳರ ನಡುವೆ ಸಂಘರ್ಷ ನಡೆಯುತ್ತದೆಂಬುದು ಸಾಮಾನ್ಯ ತಿಳಿವಳಿಕೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಂಘರ್ಷಗಳು ನಡೆಯುತ್ತಿರುವುದು ಬೌದ್ಧರು ಮತ್ತು ಮುಸ್ಲಿಮರ ನಡುವೆ. ಇದೀಗ ತುರ್ತು ಪರಿಸ್ಥಿತಿ ಜಾರಿಯಾಗಿರುವುದೂ ಇದೇ ಕಾರಣಕ್ಕೆ!

ಶ್ರೀಲಂಕಾದಲ್ಲಿ ಸಾಮಾನ್ಯವಾಗಿ ಸಿಂಹಳೀಯರು ಮತ್ತು ತಮಿಳರ ನಡುವೆ ಸಂಘರ್ಷ ನಡೆಯುತ್ತದೆಂಬುದು ಸಾಮಾನ್ಯ ತಿಳಿವಳಿಕೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಸಂಘರ್ಷಗಳು ನಡೆಯುತ್ತಿರುವುದು ಬೌದ್ಧರು ಮತ್ತು ಮುಸ್ಲಿಮರ ನಡುವೆ. ಇದೀಗ ದೇಶದಲ್ಲಿ ಹತ್ತು ದಿನಗಳ ಕಾಲ ತುರ್ತುಪರಿಸ್ಥಿತಿ ಜಾರಿಯಾಗಿರುವುದೂ ಇಂಥ ಸಂಘರ್ಷಗಳಿಂದಾಗಿಯೇ.

ಕಳೆದ ವಾರ ಕ್ಯಾಡಿ ಜಿಲ್ಲೆಯಲ್ಲಿ ಮುಸ್ಲಿಮ್ ಮತ್ತು ಬೌದ್ಧ ಧರ್ಮಕ್ಕೆ ಸೇರಿದವನೊಬ್ಬನ ನಡುವೆ ನಡೆದ ಜಗಳ ಮಿತಿ ಮೀರಿ ಒಬ್ಬ ಮುಸ್ಲಿಮ್ ವ್ಯಕ್ತಿಯ ಸಾವಿಗೆ ಕಾರಣವಾಯಿತು. ಇದೇ ಘಟನೆ ಕ್ಯಾಂಡಿ ಜಿಲ್ಲೆಯಲ್ಲಿ ವ್ಯಾಪಕ ಹಿಂಸಾಚಾರಕ್ಕೆ ಕಾರಣವಾಗಿದೆ. ಮುಸ್ಲಿಮರ ಪ್ರಕಾರ ಹತ್ತು ಪ್ರಾರ್ಥನಾ ಮಂದಿರಗಳನ್ನು 75ಕ್ಕೂ ಹೆಚ್ಚು ಅಂಗಡಿ ಮುಗ್ಗಟ್ಟುಗಳನ್ನು ಬೌದ್ಧರು ನಾಶಮಾಡಿದ್ದಾರೆ. ಜಿಲ್ಲೆಯಾದ್ಯಂತ ಹಲವರು ಗಾಯಗೊಂಡಿದ್ದಾರೆ ಎಂದು ವರದಿಯಾಗಿದೆ. ಮ್ಯಾನ್ಮಾರ್‌ನಿಂದ ವಲಸೆಬಂದಿರುವ ಕೆಲವು ರೊಹಿಂಗ್ಯಾ ಮುಸ್ಲಿಮರು ಬೌದ್ಧರನ್ನು ಮತಾಂತರಿಸಲು ಯತ್ನಿಸುತ್ತಿದ್ದಾರೆ ಎಂಬ ವದಂತಿ ಬೌದ್ಧ ಜನಾಂಗದಲ್ಲಿ ಕೋಲಾಹಲ ಎಬ್ಬಿಸಿದೆ. ಈ ಸಂಘರ್ಷ ಇದೀಗ ದೇಶದ ಇತರ ಭಾಗಗಳಿಗೂ ಹಬ್ಬುತ್ತಿರುವ ಹಿನ್ನೆಲೆಯಲ್ಲಿ ತುರ್ತುಪರಿಸ್ಥಿತಿ ಘೋಷಿಸಲಾಗಿದೆ. ಮೈತ್ರಿಪಾಲ ಸಿರಿಸೇನಾ ನೇತೃತ್ವದ ಸರ್ಕಾರ ಅಧಿಕಾರಕ್ಕೆ ಬಂದ ಮೂರು ವರ್ಷಗಳ ನಂತರ ಇದೇ ಮೊದಲ ಬಾರಿಗೆ ತುರ್ತುಪರಿಸ್ಥಿತಿ ಘೋಷಿಸಲಾಗಿದೆ.

ಇದನ್ನೂ ಓದಿ : ನೊಬೆಲ್‌ ಶಾಂತಿ ಪುರಸ್ಕೃತೆ ಸೂಕಿಗೆ ಕಳಂಕ ತರುವುದೇ ರೋಹಿಂಗ್ಯಾ ವಿವಾದ?

ಶ್ರೀಲಂಕಾದ 2 ಕೋಟಿ ಜನಸಂಖ್ಯೆಯಲ್ಲಿ ಶೇ.75ರಷ್ಟು ಬೌದ್ಧರು, ಶೇ.12ರಷ್ಟು ಹಿಂದೂಗಳು ಮತ್ತು ಶೇ.9ರಷ್ಟು ಮುಸ್ಲಿಮರು ಇದ್ದಾರೆ. ಪ್ರತ್ಯೇಕ ತಮಿಳು ದೇಶಕ್ಕಾಗಿ ಹೋರಾಡುತ್ತಿದ್ದ ಎಲ್‍ಟಿಟಿಇ ಹೋರಾಟವನ್ನು ಸರ್ಕಾರ ದಮನ ಮಾಡಿದ ನಂತರ ದೇಶದಲ್ಲಿ ಯಾವುದೇ ರೀತಿಯ ಜನಾಂಗೀಯ ಕಲಹ ದೊಡ್ಡ ಪ್ರಮಾಣದಲ್ಲಿ ನಡೆದಿಲ್ಲ. ಆದರೆ, ಎಲ್‍ಟಿಟಿಇ ಹೋರಾಟ ನಡೆಯುತ್ತಿದ್ದ ಸಂದರ್ಭದಲ್ಲಿ ಬೌದ್ಧರು ಅವರ ವಿರುದ್ಧ ನಿಲುವು ತಳೆದು ಸರ್ಕಾರದ ಪರವಾಗಿದ್ದರು. ಮೊದಮೊದಲು ಎಲ್‍ಟಿಟಿಇ ಬೆಂಬಲವಾಗಿದ್ದ ಮುಸ್ಲಿಮರು ಹೋರಾಟದ ಕೊನೆಯ ಹಂತದಲ್ಲಿ ಬದಲಾದದ್ದು ಈಗ ಇತಿಹಾಸ. ಎಲ್‍ಟಿಟಿ ನಾಯಕ ಪ್ರಭಾಕರನ್ ಸರ್ವಾಧಿಕಾರಿಯಾಗಿ ಪರಿವರ್ತಿತವಾಗಿದ್ದೇ ಈ ಬೆಳವಣಿಗೆಗಳಿಗೆ ಕಾರಣವಾಗಿತ್ತು.

ತಾರಕಕ್ಕೇರಿದ ಅಮೆರಿಕ-ಚೀನಾ ಶೀತಲ ಸಮರ; ಪರಸ್ಪರ ಎಚ್ಚರಿಕೆ ರವಾನೆ
ಹತಾಶ ಟ್ರಂಪ್, ಸರ್ಕಾರಿ ರಹಸ್ಯ ದಾಖಲೆಗಳ ಬಹಿರಂಗಕ್ಕೆ ಸೂಚನೆ
ಉಗ್ರ ಬಲಪಂಥದತ್ತ ಹಂಗೇರಿ; ಪ್ರಧಾನಿಗೆ ಛೀಮಾರಿ ಹಾಕಲು ಇಯು ನಿರ್ಧಾರ
Editor’s Pick More