ಉತ್ತರ ಕೊರಿಯಾವನ್ನು ನಂಬಬಹುದೇ? ಈಗ ಎಲ್ಲೆಡೆಯೂ ಇದೇ ಪ್ರಶ್ನೆ

ಅಮೆರಿಕದ ಜೊತೆ ಮಾತುಕತೆಗೆ ಸಿದ್ಧ ಎಂದು ಉತ್ತರ ಕೊರಿಯಾ ಹೇಳುವ ಮೂಲಕ ಅಮೆರಿಕ ಮಾತ್ರವಲ್ಲದೆ ಬಹುತೇಕ ಎಲ್ಲ ರಾಷ್ಟ್ರಗಳಿಗೂ ವಿಪರೀತ ಆಶ್ಚರ್ಯ ಹುಟ್ಟಿಸಿದೆ. ಆದರೆ ಉತ್ತರ ಕೊರಿಯಾದ ಈ ನಡೆಯನ್ನು ಯಾವ ಆಧಾರದ ಮೇಲೆ ನಂಬಬೇಕೆಂದು ಯಾರಿಗೂ ಗೊತ್ತಾಗುತ್ತಿಲ್ಲ!

ಉತ್ತರ ಕೊರಿಯಾ ಮತ್ತು ದಕ್ಷಿಣ ಕೊರಿಯಾಗಳ ನಡುವೆ ನಡೆದ ಮಾತುಕತೆಗಳು ಒಂದು ರೀತಿಯಲ್ಲಿ ಅನಿರೀಕ್ಷಿತ ಬೆಳವಣಿಗೆಗೆ ಕಾರಣವಾಗಿವೆ. ಉತ್ತರ ಕೊರಿಯಾದ ಅಧ್ಯಕ್ಷ ಕಿಮ್ ಜಾಂಗ್ ಉನ್ ಅವರು ಅಮೆರಿಕದ ಅಧ್ಕಷರ ಜೊತೆ ಮಾತುಕತೆಗೆ ಸಿದ್ಧವಿದ್ದಾರೆ ಎಂದು ಅವರ ಜೊತೆ ಮಾತನಾಡಿದ ದಕ್ಷಿಣ ಕೊರಿಯಾದ ರಾಷ್ಟ್ರೀಯ ಭದ್ರತಾ ಮುಖ್ಯಸ್ಥ ಚುಂಗ್ ಯಿ ಯಾಂಗ್ ಅವರು ಪ್ರಕಟಿಸಿದ್ದಾರೆ. ಕಿಮ್ ಅವರ ಈ ಅಭಿಪ್ರಾಯವನ್ನು ಅಮೆರಿಕದ ಅಧ್ಯಕ್ಷರಿಗೆ ಖುದ್ದು ತಿಳಿಸಲು ವಾಷಿಂಗ್ಟನ್ನಿಗೆ ಗುರುವಾರ ತೆರೆಳಿದ್ದಾರೆ. ಉತ್ತರ ಕೊರಿಯಾಕ್ಕೆ ಸೂಕ್ತ ಭದ್ರತೆ ನೀಡುವದಾದರೆ ಪರಮಾಣು ಕಾರ್ಯಕ್ರಮವನ್ನು ಸ್ಥಗಿತಗೊಳಿಸಲು ತಾನು ಸಿದ್ಧ ಎಂದು ಕಿಮ್ ತಿಳಿಸಿದ್ದಾರೆ ಎನ್ನುವುದು ಯಾಂಗ್ ಅವರ ಮಾತು.

ಕಿಮ್ ಅವರ ಈ ಸಲಹೆ ಜಗತ್ತಿನಲ್ಲಿ ಆಶ್ಚರ್ಯ ಹುಟ್ಟಿಸಿದಂತೆ ಸಂಶಯವನ್ನೂ ಹುಟ್ಟಿಸಿದೆ. ಪರಮಾಣು ತಂತ್ರಜ್ಞಾನ ಅಭಿವೃದ್ಧಿಯನ್ನು ಸ್ಥಗಿತಗೊಳಿಸುವುದಾಗಿ ಹಿಂದೆ ಉತ್ತರಕೊರಿಯಾ ನಾಯಕರು ಭರವಸೆ ನೀಡಿ ಮಾತುಕತೆಗೆ ಬರದೆ ಇದ್ದ, ಷರತ್ತುಗಳನ್ನು ವಿಧಿಸಿದ ಉದಾಹರಣೆಗಳಿವೆ. ೨೦೦೩ರಲ್ಲಿ ಚೀನಾ ಆರು ದೇಶಗಳ ಶೃಂಗಸಭೆಯೊಂದನ್ನು ಸಂಘಟಿಸಿತ್ತು. ಸಭೆಯಲ್ಲಿ ಭಾಗವಹಿಸುವ ಭರವಸೆಯನ್ನೂ ಉತ್ತರ ಕೊರಿಯಾ ನಾಯಕರು ನೀಡಿದ್ದರು. ಅಮೆರಿಕ, ಜಪಾನ್, ರಷ್ಯಾ, ಚೀನಾ ಮತ್ತು ಎರಡೂ ಕೊರಿಯಾಗಳ ನಡುವೆ ಈ ಸಭೆ ಸಂಘಟಿಸಲಾಗಿತ್ತು. ಆದರೆ ಕೊನೆ ಗಳಿಗೆಯಲ್ಲಿ ಉತ್ತರಕೊರಿಯಾ ಕೈಕೊಟ್ಟಿತು.

ಉತ್ತರ ಕೊರಿಯಾ ಮತ್ತು ಚೀನದ ನಡುವೆ ಮೊದಲಿನಿಂದಲೂ ಉತ್ತಮ ಬಾಂಧವ್ಯವಿದ್ದೂ ಇಂಥ ಬೆಳವಣಿಗೆಯಾಯಿತು. ೨೦೦೯ರಲ್ಲಿ ಮತ್ತೆ ಮಾತುಕತೆ ನಿಗದಿಯಾಗಿತ್ತು. ಆದರೆ ಅಮೆರಿಕ ಮಾತುಕತೆಗೆ ಅನೇಕ ಷರತ್ತುಗಳನ್ನು ವಿಧಿಸಿರುವುದಕ್ಕೆ ತನಗೆ ಒಪ್ಪಿಗೆ ಇಲ್ಲವೆಂದು ಉತ್ತರ ಕೊರಿಯಾ ದೂರ ಉಳಿಯಿತು. ೨೦೧೧ರಲ್ಲಿ ಕಿಮ್ ಜಾಂಗ್ ಉನ್ ಅಧಿಕಾರಕ್ಕೆ ಬಂದ ನಂತರ ಕೊರಿಯಾ ಬಿಕ್ಕಟ್ಟು ಉಲ್ಬಣಗೊಳಿಸಿತು. ಅನೇಕ ಕ್ಷಿಪಣಿಗಳ ಪ್ರಯೋಗ ನಡೆಯಿತು. ಅಮೆರಿಕದ ಮೇಲೆ ಪರಮಾಣು ಬಾಂಬ್ ದಾಳಿ ನಡೆಸಬಹುದಾದಂಥ ಸಾಮರ್ಥ್ಯದ ಕ್ಷಿಪಣಿಗಳನ್ನು ಪ್ರಯೋಗಾರ್ಥ ಪರೀಕ್ಷಿಸಿದ ನಂತರ ಅದರ ವಿರುದ್ಧ ಹೆಚ್ಚು ನಿರ್ಬಂಧಗಳನ್ನು ವಿಧಿಸಲಾಯಿತು

ಇದನ್ನೂ ಓದಿ : ಕಿಮ್ ಮಾತನಾಡಲು ಆರಂಭಿಸಿದರೆ ನಡುಗುತ್ತಾರೆ ವಿಶ್ವನಾಯಕರು, ಏಕೆ ಗೊತ್ತಾ?

ಈ ಸಂದರ್ಭದಲ್ಲಿ ದಕ್ಷಿಣ ಕೊರಿಯಾದಲ್ಲಿ ನಡೆಯಲಿದ್ದ ಚಳಿಗಾಲದ ಒಲಿಂಪಿಕ್ಸ್‌ಗೆ ತನ್ನ ತಂಡ ಕಳುಹಿಸುವುದಾಗಿ ಉತ್ತರ ಕೊರಿಯಾ ಹೇಳಿತು. ಅದಕ್ಕೆ ದಕ್ಷಿಣ ಕೊರಿಯಾ ಸಕಾರಾತ್ಮಕವಾಗಿ ಪ್ರತಿಕ್ರಿಯಿಸಿದ ಕಾರಣ ಒಲಿಂಪಿಕ್ಸ್‌ನಲ್ಲಿ ಉತ್ತರ ಕೊರಿಯಾ ಭಾಗವಹಿಸಿತು. ಈ ತಂಡದ ಜೊತೆ ಬಂದಿದ್ದ ಕಿಮ್ ಅವರ ಸೋದರಿ ಕಿಮ್ ಜಂಗ್ ಉನ್ ಎರಡೂ ದೇಶಗಳ ನಡುವೆ ಮಾತುಕತೆ ಆರಂಭಿಸಲು ಅಗತ್ಯವಾದ ವೇದಿಕೆ ನಿರ್ಮಾಣ ಮಾಡಿದರು. ಅದರ ಮುಂದುವರಿದ ಭಾಗವಾಗಿ ಎರಡೂ ಕೊರಿಯಾಗಳ ನಡುವೆ ಮಾತುಕತೆ ನಡೆದಿದೆ. ಎಲ್ಲವೂ ಸರಿಯಾಗಿ ನಡೆದರೆ ಏಪ್ರಿಲ್ ತಿಂಗಳಲ್ಲಿ ಕಿಮ್ ಅವರು ಎರಡೂ ಕೊರಿಯಾಗಳ ಮಧ್ಯಭಾಗದಲ್ಲಿ (ಮಿಲಿಟರಿ ಶಸ್ತ್ರಾಸ್ತ್ರ ಇಲ್ಲದ ಪ್ರದೇಶದಲ್ಲಿ) ದಕ್ಷಿಣ ಕೊರಿಯಾದ ಅಧ್ಯಕ್ಷ ಮೂನ್ ಅವರನ್ನು ಬೇಟಿ ಮಾಡುವ ಕಾರ್ಯಕ್ರಮ ಸಂಘಟಿಸುವ ಸಂಭವ ಇದೆ

ಅಮೆರಿಕದ ಜೊತೆ ಮಾತುಕತೆ ಮತ್ತು ಪರಮಾಣು ಕಾರ್ಯಕ್ರಮ ಕೈಬಿಡುವ ಕಿಮ್ ಅವರ ಘೋಷಣೆಯನ್ನು ವಿಶ್ವದ ನಾಯಕರು ಸ್ವಾಗತಿಸಿದ್ದಾರೆ. ಉತ್ತರ ಕೊರಿಯಾ ಬಗ್ಗೆ ಯಾರಿಗೂ ನಂಬಿಕೆಯಿಲ್ಲ. ಆದರೂ ಮಾತುಕತೆ ನಡೆಯುವುದಾದರೆ ನಡೆಯಲಿ ಎಂದು ಹೇಳುತ್ತಿದ್ದಾರೆ. ಇದೊಂದು ಸಕಾರಾತ್ಮಕ ಬೆಳವಣಿಗೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕಾಯ್ದು ನೋಡುವ ನಿಲುವು ಅವರದ್ದು. ಉತ್ತರ ಕೊರಿಯಾ ಜೊತೆ ಮಾತುಕತೆ ನಡೆಸುವ ವಿಚಾರವನ್ನು ಒಬ್ಬ ಉನ್ನತ ರಾಜತಾಂತ್ರಿಕರಿಗೆ ಒಪ್ಪಿಸುವ ಬಗ್ಗೆ ಅಮೆರಿಕ ಆಡಳಿತ ಯೋಚಿಸುತ್ತಿದೆ.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More