ಗುಹೆಯಿಂದ ಎಲ್ಲ ಬಾಲಕರನ್ನು ಹೊರತಂದ ಥಾಯ್‌ ನೌಕಾಪಡೆ; ಪ್ರಶಂಸೆಗಳ ಸುರಿಮಳೆ

ಥಾಯ್ಲೆಂಡ್‌ ಗುಹೆಯೊಂದರಲ್ಲಿ ಸಿಲುಕಿದ್ದ 12 ಜನ ಥಾಯ್‌ ಯುವ ಫುಟ್ಬಾಲ್‌ ಆಟಗಾರರು ಹಾಗೂ ತರಬೇತಿದಾರನನ್ನು ಸುರಕ್ಷಿತವಾಗಿ ರಕ್ಷಿಸಿ ಹೊರತರಲಾಗಿದೆ. ಈ ಮೂಲಕ, ಅರ್ಧ ತಿಂಗಳ ಮೇಲೆ ನಡೆದ ಸುದೀರ್ಘ ಕಾರ್ಯಚರಣೆ ಯಶಸ್ವಿಯಾಗಿ ಅಂತ್ಯಗೊಂಡಿದ್ದು, ಮೆಚ್ಚುಗೆ ಹರಿದುಬಂದಿದೆ

ಥಾಯ್ಲೆಂಡ್‌ ಗುಹೆಯೊಂದರಲ್ಲಿ ಸಿಲುಕಿದ್ದ 12 ಜನ ಥಾಯ್‌ ಯುವ ಫುಟ್ಬಾಲ್‌ ಆಟಗಾರರು ಹಾಗೂ ತರಬೇತಿದಾರನನ್ನು ಸುರಕ್ಷಿತವಾಗಿ ರಕ್ಷಿಸಿ ಹೊರತರಲಾಗಿದೆ. ಈ ಕುರಿತು ಮಾಹಿತಿ ನೀಡಿರುವ ಥಾಯ್‌ ನೌಕಾಪಡೆಯ ಅಧಿಕಾರಿಗಳು, 18 ದಿನಗಳಿಂದ ಗುಹೆಯಲ್ಲಿದ್ದ 13 ಜನರನ್ನು ರಕ್ಷಿಸಿದ ಬಗ್ಗೆ ತಿಳಿಸಿದ್ದಾರೆ. ಈ ಮೂಲಕ, ಅರ್ಧ ತಿಂಗಳ ಮೇಲೆ ನಡೆದ ಸುದೀರ್ಘ ಕಾರ್ಯಚರಣೆ ಯಶಸ್ವಿಯಾಗಿ ಅಂತ್ಯಗೊಂಡಿದೆ. ಥಾಯ್ ನೌಕಾಪಡೆಯ ಕಾರ್ಯಚರಣೆಯ ಬಗ್ಗೆ ಜಗತ್ತಿನಾದ್ಯಂತ ಪ್ರಶಂಸೆ ವ್ಯಕ್ತವಾಗಿದೆ.

ಇದನ್ನೂ ಓದಿ : 1 ಕಿಮೀ ಆಳದ ಗುಹೆಯಲ್ಲಿ 15 ದಿನ ಸಿಲುಕಿದ್ದ ಬಾಲಕರ ರಕ್ಷಣಾ ಕಾರ್ಯ ಹೇಗಿದೆ?

ಒಂದು ಕಿಮೀ ಆಳದ ದುರ್ಗಮ ಗುಹೆಯಲ್ಲಿ ಸಿಲುಕಿದ್ದ 4 ಜನರನ್ನು ಮಂಗಳವಾರ ಹೊರತರುವ ಮೂಲಕ ಕಾರ್ಯಾಚರಣೆಯನ್ನು ಅಂತ್ಯಗೊಳಿಸಿರುವುದನ್ನು ಥಾಯ್‌ ನೌಕಾಪಡೆ ತನ್ನ ಫೇಸ್‌ಬುಕ್‌ ಪೇಜ್‌ನಲ್ಲಿ ಬರೆದುಕೊಂಡಿದೆ. ಥಾಯ್‌ಲ್ಯಾಂಡ್‌ನ ಚಿಯಾಂಗ್‌ ರೈ ಪ್ರಾಂತ್ಯದಲ್ಲಿ ಥಾಮ್‌ ಲುವಾಂಗ್‌ ಹೆಸರಿನ ಗುಹೆಯಲ್ಲಿ ಭೀಕರ ಪ್ರವಾಹದ ಕಾರಣ ಕಳೆದ 18 ದಿನಗಳಿಂದ ಸಿಲುಕಿದ್ದ ಯುವ ಫುಟ್ಬಾಲ್‌ ಆಟಗಾರರನ್ನು ರಕ್ಷಿಸುವ ವಿಡಿಯೋಗಳು ಇತ್ತೀಚೆಗೆ ವೈರಲ್‌ ಆಗಿದ್ದವು.

ಶ್ರೀಲಂಕಾ ರಾಜಕೀಯ ಬಿಕ್ಕಟ್ಟು| ಪಕ್ಸೆ ಮತ್ತೆ ಪ್ರಧಾನಿ, ಭಾರತಕ್ಕೆ ಆಘಾತ
ಪತ್ರಕರ್ತ ಕಸೋಜಿ ಹತ್ಯೆ ಪೂರ್ವಯೋಜಿತ ಎಂದ ಟರ್ಕಿ ಅಧ್ಯಕ್ಷ ಎರ್ಡೋಗನ್
ಪತ್ರಕರ್ತ ಜಮಾಲ್ ಕಸ್ಸೋಜಿ ಹತ್ಯೆಯ ಹಿಂದೆ ಸೌದಿ ಅರೇಬಿಯಾ ದೊರೆ ಕುಟುಂಬ?
Editor’s Pick More