ಸುಗತ ಸಂಪಾದಕೀಯ | ನಮ್ಮ ಧ್ವನಿಯನ್ನೇ ಪ್ರತಿಧ್ವನಿಸುವ ಕೋಣೆಗಳಲ್ಲಿ ಮತ್ತು ಇತರೆ ಸಂಪಾದಕೀಯಗಳು

ನಮ್ಮ ತಾಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಅನಂತ ನಾಗ್ ಅವರ ಸಂದರ್ಶನ ಪ್ರಕಟಿಸಿದಾಗ ಕೆಲ ಪ್ರಗತಿಪರರಿಂದ ಟೀಕೆಗಳು ವ್ಯಕ್ತವಾದವು. ಆದರೆ, ನಿಮ್ಮ ಧ್ವನಿಗೆ ವಿರುದ್ಧವಾದ ಆಲೋಚನೆ ಹೊಂದಿರುವ ಧ್ವನಿಯೊಂದಿಗೆ ಸಂಭಾಷಣೆ ನಡೆಸದಿದ್ದರೆ ಸಮಾಜದ ಏರುಪೇರನ್ನು ಹೋಗಲಾಡಿಸಲು ಸಾಧ್ಯವೇ?

ಈ ಸ್ಟೇಟ್‌ಮೆಂಟ್‌ನಲ್ಲಿರುವ ಮುಖ್ಯಾಂಶಗಳು

 • ನಮ್ಮ ವೆಬ್‌ತಾಣದಲ್ಲಿ ನಾವು ಹಲವು ಪ್ರಮುಖರ ಸಂದರ್ಶನಗಳನ್ನು ಪ್ರಕಟಿಸಿದ್ದೇವೆ
 • ಕಲ್ಲಡ್ಕ ಪಭಾಕರ ಭಟ್, ಅನಂತ ನಾಗ್ ಅವರ ಸಂದರ್ಶನ ಪ್ರಕಟಿಸಿದಾಗ ಅದಕ್ಕೆ ಕೆಲ ಪ್ರಗತಿಪರರಿಂದ ಟೀಕೆಗಳು ವ್ಯಕ್ತವಾದವು
 • ನಾವು ಸಂದರ್ಶನವನ್ನು ವೃತ್ತಿಪರವಾಗಿ ಮಾಡಿದ್ದೇವೆ, ಅದಕ್ಕೆ ಅವರು ಅವರ ವಿಚಾರ ಮಂಡಿಸಿದ್ದಾರೆ
 • ಅಮೆರಿಕ ಚುನಾವಣೆ ನಂತರ 'ಎಕೋ ಚೇಂಬರ್ಸ್’ ಪದ ಹೆಚ್ಚು ಬಳಕೆಗೆ ಬಂದಿದೆ
 • ನಿಮ್ಮ ಧ್ವನಿಗೆ ವಿರುದ್ಧವಾದ ಆಲೋಚನೆ ಹೊಂದಿರುವ ಧ್ವನಿಯೊಂದಿಗೆ ಸಂಭಾಷಣೆ ನಡೆಸದಿದ್ದರೆ ಸಮಾಜದ ಏರುಪೇರನ್ನು ಹೋಗಲಾಡಿಸಲು ಹೇಗೆ ಸಾಧ್ಯ?
 • ಯಾವುದೇ ಸ್ಥಳದಲ್ಲಿ ಸಮಸ್ಯೆ ಸೃಷ್ಟಿಸಿದ ಕಾರಣಕರ್ತರೊಂದಿಗೆ ಸಂಭಾಷಣೆ ನಡೆಸದಿದ್ದರೆ ಸಮಸ್ಯೆ ಬಗೆಹರಿಸಲು ಸಾಧ್ಯವಾಗುವುದಿಲ್ಲ
 • ಪರಸ್ಪರ ಮಾತುಕತೆ ಆಗದಿದ್ದರೆ ಭಾರತ-ಪಾಕಿಸ್ತಾನ ಸಮಸ್ಯೆ ಕೂಡ ಬಗೆಹರಿಯುವುದಾದರೂ ಹೇಗೆ?
 • ಕೊಡು-ಕೊಳ್ಳುವಿಕೆ, ಹೊಂದಾಣಿಕೆ ಇದ್ದಾಗ ಮಾತ್ರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸಾಧ್ಯ
 • ಅಂತಹ ಪ್ರಯತ್ನಕ್ಕೆ ಮುಂದಾದವರ ಕಾಲನ್ನು ಎಳೆಯುವವರೇ ಇಂದು ಸಮಾಜದಲ್ಲಿ ಹೆಚ್ಚಿದ್ದಾರೆ
 • ಭಗವದ್ಗೀತೆ ಕೂಡ ಅಂದಿನ ಸಮಸ್ಯೆಗಳಿಗೆ ಸ್ಪಂದಿಸಿ ಬರೆದ ಮಹಾಗ್ರಂಥ
 • ಎಲ್ಲ ಕಾಲದಲ್ಲೂ ಬೇರೆ ಬೇರೆ ತರಹದ ಸಮಸ್ಯೆಗಳು, ಬದಲಾವಣೆಗಳು ಇರುತ್ತವೆ. ಅದಕ್ಕೆ ನಾವು ಬೇರೆ ಬೇರೆ ರೀತಿ ಸ್ಪಂದಿಸುತ್ತೇವೆ
 • 2014ರ ಚುನಾವಣೆಯಲ್ಲಿ ಬಿಜೆಪಿ ಬಹುಮತದೊಂದಿಗೆ ಅಧಿಕಾರ ಹಿಡಿದಾಗ ಎಲ್ಲರೂ ಅವಾಕ್ಕಾದರು
 • ಆ ಸಂದರ್ಭದಲ್ಲಾಗಲೇ ನಾವು ಒಂದು ರೀತಿಯಲ್ಲಿ ಈ ‘ಎಕೋ ಚೇಂಬರ್ಸ್’ನೊಳಗೆ ಸಿಲುಕಿಕೊಂಡುಬಿಟ್ಟಿದ್ದೆವು
 • ಒಂದು ಕಾಲದಲ್ಲಿ ಹಾಡಿ ಹೊಗಳಿದ ಸಾಮಾಜಿಕ ಮಾಧ್ಯಮವನ್ನು ಅಮೆರಿಕ ಚುನಾವಣೆ ನಂತರ ತೆಗಳಲು ಆರಂಭಿಸಿದರು
 • ಮನುಷ್ಯ ಸೃಷ್ಟಿಯ ತಾಂತಿಕತೆಯನ್ನು ನಾವು ಹೇಗೆ ಬಳಸುತ್ತೇವೆ ಎಂಬುದರ ಮೇಲೆ ಅದರ ಒಳಿತು-ಕೆಡಕು ಇದೆ
 • ನಾವು ಕೇವಲ ನಮ್ಮ ಧ್ವನಿಗಳೇ ಪತಿಧ್ವನಿಸುವ ಕೋಣೆಗಳಲ್ಲಿ ಬಂಧಿಯಾಗಿರುವುದು ಅಪಾಯಕಾರಿ

ಗುಜರಾತ್‌ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಷ್ಟ್ರಮಟ್ಟದಲ್ಲಿ ಹಲವು ಆಯಾಮಗಳ ಚರ್ಚೆಗಳು ಶುರುವಾಗಿವೆ. ಆದರೆ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆಗೆ ಸಿದ್ಧವಾಗುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಈ ಫಲಿತಾಂಶವನ್ನು ಹೇಗೆ ನೋಡಬೇಕು. ವಿಶ್ಲೇಷಣೆಗಾಗಿ ಈ ವಿಡಿಯೋ ನೋಡಿ.

ಪದ್ಮಾವತಿ ಚಿತ್ರವನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವ ಸಂಸ್ಕೃತಿ ಮತ್ತು ರಾಜಕೀಯ ಚರ್ಚೆಗಳ ವಿಶ್ಲೇಷಣೆ ಇಲ್ಲಿದೆ. ವಾಸ್ತವದಲ್ಲಿ ನಂಬಬೇಕಿರುವ ಸಂವಿಧಾನದ ಪಠ್ಯವನ್ನು ಬಿಟ್ಟು ಸಾಹಿತ್ಯಕ ಮತ್ತು ಪುರಾಣದ ಕೃತಿಗಳನ್ನು ಅಕ್ಷರಶಃ ಸ್ವೀಕರಿಸುತ್ತಿರುವುದು ಸಮಾಜದ ಒಡಕಿಗೆ ಕಾರಣವಾಗುತ್ತಿದೆ.

ಕನ್ನಡದ ಮೊತ್ತಮೊದಲ ಡಿಜಿಟಲ್‌ ನೇಟಿವ್‌ ಜಾಲತಾಣ ದಿ ಸ್ಟೇಟ್‌. ಇಲ್ಲಿ ಸುದ್ದಿಯನ್ನು ಓದುವ ಜೊತೆಗೆ, ಕೇಳಬಹುದು, ನೋಡಬಹುದು. ವಿಭಿನ್ನ ಅನುಭವ ನೀಡಲು ಸಿದ್ಧವಾಗಿರುವ ಈ ತಾಣದೊಳಗೆ ಈಜಾಡಲು ಬಯಸುವವರ ನೆರವಿಗೆ ಈ ವಿಡಿಯೋ

ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೋದ್ಯಮದ ಮುಖ್ಯವಾಹಿನಿಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸುಗತ ಶ್ರೀನಿವಾಸರಾಜು ಡಿಜಿಟಲ್‌ ಮಾಧ್ಯಮದ ಕನಸು ಕಂಡು ಒಂದು ವರ್ಷ ಉರುಳಿರಬಹುದು. ಕಳೆದೊಂದು ವರ್ಷದಿಂದ ನಡೆಸಿದ ತಾಲೀಮು, ಡಿಜಿಟಲ್‌ ಮಾಧ್ಯಮವನ್ನು ಅರಿತುಕೊಂಡ ರೀತಿ, ಸಾಂಪ್ರದಾಯಿಕ ಮಾಧ್ಯಮ ಮತ್ತು ಈ ಕಾಲದ ಡಿಜಿಟಲ್‌ ಮಾಧ್ಯಮಕ್ಕಿರುವ ವ್ಯತ್ಯಾಸ, ಚಾಲೆಂಜ್‌, ಅದ್ಭುತ, ವಿಶಿಷ್ಟತೆಗಳು ಮತ್ತು ಹೆಗಲ ಮೇಲಿರುವ ಜವಾಬ್ದಾರಿಗಳ ಬಗ್ಗೆ ‘ದಿ ಸ್ಟೇಟ್‌’ನ ಸಂಪಾದಕೀಯ ನಿರ್ದೇಶಕರಾದ ಸುಗತ ‘ದಿ ಸ್ಟೇಟ್‌ಮೆಂಟ್‌’ನಲ್ಲಿ ವಿವರಿಸಿದ್ದಾರೆ. ಅದರ ಮುಖ್ಯಾಂಶ ಇಲ್ಲಿದೆ.

ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More