ಸುಗತ ಸಂಪಾದಕೀಯ | ಚುನಾವಣಾ ರಾಜಕಾರಣಕ್ಕೆ ಧರ್ಮ ಗುರುಗಳು ಬರಬೇಕೆ?

ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ, ಧರ್ಮ ಮತ್ತು ರಾಜಕಾರಣ, ಹಾಗೂ ಧರ್ಮ ಮತ್ತು ಉದ್ಯಮವನ್ನು ಬೆರೆಸಬಾರದು ಎಂಬುದು ಸಾಮಾನ್ಯ ತಿಳಿವಳಿಕೆ. ರಾಜಕೀಯ ಪಕ್ಷಗಳು ತಾವು ಉಳಿಯಬೇಕಾದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ನಮ್ಮ ಪರಿಸರದಲ್ಲಿ ಇದು ಮತ್ತೆ ಮತ್ತೆ ಉಲ್ಲಂಘನೆ ಆಗುತ್ತಿದೆ. ಈ ಬಗ್ಗೆ ಎಷ್ಟು ಆತಂಕ ಪಡಬೇಕು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ಈ ಸ್ಟೇಟ್‌ಮೆಂಟ್‌ನಲ್ಲಿರುವ ಮುಖ್ಯಾಂಶಗಳು

 • ಚುನಾವಣೆ ಹತ್ತಿರವಾಗುತ್ತಿದ್ದಂತೆ ಭಿನ್ನ ಭಿನ್ನ ಧ್ವನಿಗಳು ಕೇಳಿ ಬರುತ್ತವೆ
 • ಪ್ರಜಾಪ್ರಭುತ್ವ ಪ್ರಕ್ರಿಯೆಯಲ್ಲಿ ಇದು ಸಹಜ ಹಾಗೂ ಆರೋಗ್ಯಕರ ವಿಚಾರ
 • ಕೆಲ ಧರ್ಮಗುರುಗಳು ಚುನಾವಣೆಗೆ ಸ್ಪರ್ಧಿಸುವ ಪ್ರಸ್ತಾಪ ಇಟ್ಟಿರುವುದು ಆತಂಕದ ವಿಷಯ
 • ಧರ್ಮಗುರುಗಳ ಈ ರೀತಿಯ ಯೋಚನೆಗೆ ಉತ್ತರಪ್ರದೇಶ ಪ್ರೇರಣೆಯಾಗಿರಬಹುದು ಎಂಬುದು ನನ್ನ ಅನಿಸಿಕೆ
 • ಕಾವಿಧಾರಿಯಾಗಿರುವ ಯೋಗಿ ಆದಿತ್ಯನಾಥ ಅವರು ಮುಖ್ಯಮಂತ್ರಿಯಾಗಿದ್ದಾರೆ. ಇದನ್ನು ಬಿಜೆಪಿಯನ್ನು ಸಮರ್ಥಿಸಿಕೊಳ್ಳುವವರು, ಪತ್ರಕರ್ತರು 'ಯೋಗಿ ಮಾದರಿ' ಎಂದು ಪ್ರಚಾರಕ್ಕೆ ತಂದಿದ್ದಾರೆ
 • ಈ ಮಾದರಿ ಉತ್ತರ ಪ್ರದೇಶದಲ್ಲಿ ಯಶಸ್ವಿಯಾದಂತೆ ಇತರೆ ರಾಜ್ಯಗಳಲ್ಲಿ ಯಶಸ್ವಿಯಾಗುತ್ತದೆ ಎಂದು ಹೇಳಲಾಗದು
 • ಮಠಾಧೀಶರು ರಾಜಕೀಯಕ್ಕೆ ಬರುವ ವಿಚಾರವನ್ನು ಪ್ರಸ್ತಾಪಿಸುತ್ತಾರೆ ಅಂದರೆ ಅದಕ್ಕೆ ಒಂದು ವಾತಾರವಣ ಸೃಷ್ಟಿಸಲಾಗಿದೆ
 • ನನಗೆ ತಿಳಿದ ಮಟ್ಟಿಗೆ ಧರ್ಮ ಮತ್ತು ರಾಜಕಾರಣ ಬೆರೆಯಬಾರದು ಎಂದು ಸಂವಿಧಾನದಲ್ಲಿ ಎಲ್ಲಿಯೂ ಸ್ಪಷ್ಟವಾಗಿ ನಮೂದಿಸಿಲ್ಲ
 • ಧರ್ಮ ಮತ್ತು ರಾಜಕೀಯ ವಿಷಯದಲ್ಲಿ ಅಮೆರಿಕದ ಸಂವಿಧಾನದಲ್ಲಿ ಸ್ಪಷ್ಟತೆ ಇದೆ. ಅಲ್ಲಿ ರಾಜಕಾರಣದಲ್ಲಿ ಧರ್ಮ ಸುಳಿಯಲೇಬಾರದು ಎಂಬ ನೇರ ಪ್ರಸ್ತಾಪ ಇದೆ. ಬ್ರಿಟಿಷ್‌ ಪ್ರಜಾಪ್ರಭುತ್ವದ ಪರಂಪರೆಯಲ್ಲಿ ಇದರ ಸ್ಥೂಲ ಪ್ರಸ್ತಾಪವಿದೆ
 • ಸಂವಿಧಾನ ಗ್ರಂಥ ಮತ್ತು ಧರ್ಮ ಗ್ರಂಥ ಸಂಘರ್ಷಕ್ಕೆ ಒಳಗಾದರೆ, ಎಲ್ಲಾ ಕಾಲಕ್ಕೂ ಸಂವಿಧಾನ ಗ್ರಂಥ ಗೆಲ್ಲಬೇಕು
 • ಧರ್ಮ ಗುರುಗಳು ಚುನಾವಣಾ ಅಖಾಡಕ್ಕೆ ಇಳಿದಾಗ ಅವರಿಗೆ ಸಂವಿಧಾನ ಗ್ರಂಥ ಮುಖ್ಯವೋ ಅಥವಾ ಅವರ ಧರ್ಮ ಗ್ರಂಥ ಮುಖ್ಯವೋ ಎಂಬುದನ್ನು ಸ್ಪಷ್ಟಪಡಿಸಬೇಕು
 • ಎರಡು ದೋಣಿಯಲ್ಲಿ ಕಾಲಿಟ್ಟು ಸಾಗುವವರ ಬಗ್ಗೆ ನಾವು ಎಚ್ಚರದಿಂದ ಇರಬೇಕು
 • ಮಠಾಧೀಶರು ಆಧ್ಯಾತ್ಮ ದಾರಿಯನ್ನು ಜನರಿಗೆ ಬೋಧಿಸಲಿ
 • ಅಮೆರಿಕದ ನಾಗರಿಕ ಹಕ್ಕು ಚಳವಳಿ ಮುನ್ನಡೆಸಿದ ಗಾಂಧೀಜಿ ಅವರಿಂದ ಪ್ರೇರಿತರಾಗಿದ್ದ ಮಾರ್ಟಿನ್‌ ಲೂಥರ್‌ ಕಿಂಗ್‌ ಅವರೂ ಕೂಡ ಧರ್ಮಪ್ರಚಾರಕರು. ಇಂದಿನ ರಾಜಕಾರಣಿಗಳಿಗೂ ಮಾದರಿಯಾದ ಅವರು ಎಂದಿಗೂ ರಾಜಕೀಯಕ್ಕೆ ಬರಲಿಲ್ಲ
 • ಧರ್ಮ ಮತ್ತು ರಾಜಕಾರಣದ ವಿಷಯದಲ್ಲಿ ಅಮೆರಿಕದ ಮಾದರಿಯನ್ನು ನಾವು ದಕ್ಷಿಣ ಆಫ್ರಿಕಾದಲ್ಲಿ ನೋಡಬಹುದು. ನೆಲ್ಸನ್‌ ಮಂಡೆಲಾ ಅವರು ಕಾರಾಗೃಹದಿಂದ ಹೊರಬಂದಾಗ ಅವರನ್ನು ಅಧ್ಯಕ್ಷರನ್ನಾಗಿ ಮಾಡಲು ಬೇಕಾದ ತಯಾರಿ ಮಾಡಿದ್ದು ಆರ್ಚ್‌ ಬಿಷಪ್‌ ಡೆಸ್ಮಂಡ್‌ ಟುಟು.
 • ನಮ್ಮ ಧರ್ಮ ಗುರುಗಳು ಈ ಮಾದರಿ ಅನುಸರಿಸಬೇಕು
 • ಸ್ವಾಮಿ ವಿವೇಕಾನಂದ, ವಿನೋಬಾ ಭಾವೆ ಅವರಂತಹ ಸಮಾಜ ಸುಧಾರಕ ಧರ್ಮಗುರುಗಳು ನಮ್ಮಲ್ಲಿ ಹಲವರಿದ್ದಾರೆ.
 • ಧರ್ಮ ಗುರುಗಳು ರಾಜಕಾರಣಿಗಳಿಗೆ ಮಾರ್ಗದರ್ಶನ ನೀಡಬೇಕೆ ವಿನಾ ಅವರೇ ರಾಜಕಾರಣಕ್ಕೆ ಇಳಿಯಬಾರದು
 • ರಾಜಕಾರಣಿಗಳು ಕೂಡ ಸ್ವಾಮೀಜಿಗಳಿಂದ ಆಶೀರ್ವಚನ, ಮಾರ್ಗದರ್ಶನ ಪಡೆಯಬೇಕು. ಆದರೆ, ಯಾವುದೇ ಕಾರಣಕ್ಕೂ ಸ್ವಾಮೀಜಿಗಳಿಗೆ ಟಿಕೆಟ್‌ ಮಾತ್ರ ನೀಡಬಾರದು
 • ಕರ್ನಾಟಕ ಮತದಾರರು ತುಂಬಾ ವಿವೇಕವಂತರು.
 • ಧರ್ಮ ಮತ್ತು ರಾಜಕಾರಣ ಕುರಿತು ಅಮೆರಿಕದ ಮೂರನೇ ಅಧ್ಯಕ್ಷ ಥಾಮಸ್‌ ಜೆಫರ್‌ಸನ್‌ ಅವರ ಮಾತನ್ನು ನಾವು ಮನನ ಮಾಡಬೇಕು, “In every country and in every age, the priest has been hostile to liberty. He is always in alliance with the despot, abetting his abuses in return for protection to his own”
ಇದನ್ನೂ ಓದಿ : ಸುಗತ ಸಂಪಾದಕೀಯ | ನಮ್ಮ ಧ್ವನಿಯನ್ನೇ ಪ್ರತಿಧ್ವನಿಸುವ ಕೋಣೆಗಳಲ್ಲಿ ಮತ್ತು ಇತರೆ ಸಂಪಾದಕೀಯಗಳು
ಸ್ಟೇಟ್ ಆಫ್ ದಿ ನೇಶನ್ | ವಾಸ್ತವವನ್ನೇ ಅಣಕಿಸತೊಡಗಿವೆ ಸರ್ಕಾರ ಸೃಷ್ಟಿಸಿದ ಸುಳ್ಳುಗಳು
ಹಗೇವು | ಪುಣ್ಯಕೋಟಿ ಎಂಬ ಗೋವು ಮತ್ತು ಗೋ ರಾಜಕಾರಣದ ಮನುಷ್ಯನ ವಿಕೃತಿ
ಈ ಕಾಲ | ಲಂಡನ್, ನ್ಯೂಯಾರ್ಕ್, ಮುಂಬೈ ಮೆಚ್ಚಿನ ಮಹಾನಗರಗಳು ಎನಿಸಿದ್ದೇಕೆ?
Editor’s Pick More