ಸುಗತ ಸಂಪಾದಕೀಯ | ಮಾರಿಕೊಳ್ಳಲು ಇಚ್ಛಿಸಲಿಲ್ಲ ನಾವು ಎಂದರು ನಾಲ್ವರು ಜಡ್ಜ್‌ಗಳು; ಹಾಗಾದರೆ ವ್ಯಾಪಾರಕ್ಕೆ ಇಳಿದದ್ದಾರು?

ನ್ಯಾಯಾಂಗದ ಮೇಲೆ ಜನಸಾಮಾನ್ಯರಿಗೆ ಇಂದಿಗೂ ನಂಬಿಕೆ ಇದೆ. ಆದರೆ ಅಲ್ಲಿ ನ್ಯಾಯ ನೀಡುವವರೇ ಅಸಹಾಯಕತೆ ತೋಡಿಕೊಂಡರೆ ಸಾಮಾನ್ಯರ ಸ್ಥಿತಿ ಏನಾಗಬಹುದು? ಸುಪ್ರೀಂ ಕೋರ್ಟ್‌ ನ್ಯಾಯಾಧೀಶರ ಪತ್ರಿಕಾಗೋಷ್ಠಿ ಹಿನ್ನೆಲೆಯಲ್ಲಿ ನ್ಯಾಯಾಂಗ ವ್ಯವಸ್ಥೆ ಕುರಿತು ಈ ಸಂಪಾದಕೀಯ ಚರ್ಚಿಸಿದೆ

ಹಿಂದಿನ ಸಂಪಾದಕೀಯ ವಿಡಿಯೋಗಳು

ಪ್ರಜಾಪ್ರಭುತ್ವದ ಆರೋಗ್ಯದ ದೃಷ್ಟಿಯಿಂದ, ಧರ್ಮ ಮತ್ತು ರಾಜಕಾರಣ, ಹಾಗೂ ಧರ್ಮ ಮತ್ತು ಉದ್ಯಮವನ್ನು ಬೆರೆಸಬಾರದು ಎಂಬುದು ಸಾಮಾನ್ಯ ತಿಳಿವಳಿಕೆ. ರಾಜಕೀಯ ಪಕ್ಷಗಳು ತಾವು ಉಳಿಯಬೇಕಾದರೆ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸಬೇಕು. ಆದರೆ ನಮ್ಮ ಪರಿಸರದಲ್ಲಿ ಇದು ಮತ್ತೆ ಮತ್ತೆ ಉಲ್ಲಂಘನೆ ಆಗುತ್ತಿದೆ. ಈ ಬಗ್ಗೆ ಎಷ್ಟು ಆತಂಕ ಪಡಬೇಕು ಎಂಬುದನ್ನು ಇಲ್ಲಿ ಚರ್ಚಿಸಲಾಗಿದೆ.

ನಮ್ಮ ತಾಣದಲ್ಲಿ ಕಲ್ಲಡ್ಕ ಪ್ರಭಾಕರ ಭಟ್, ಅನಂತ ನಾಗ್ ಅವರ ಸಂದರ್ಶನ ಪ್ರಕಟಿಸಿದಾಗ ಕೆಲ ಪ್ರಗತಿಪರರಿಂದ ಟೀಕೆಗಳು ವ್ಯಕ್ತವಾದವು. ಆದರೆ, ನಿಮ್ಮ ಧ್ವನಿಗೆ ವಿರುದ್ಧವಾದ ಆಲೋಚನೆ ಹೊಂದಿರುವ ಧ್ವನಿಯೊಂದಿಗೆ ಸಂಭಾಷಣೆ ನಡೆಸದಿದ್ದರೆ ಸಮಾಜದ ಏರುಪೇರನ್ನು ಹೋಗಲಾಡಿಸಲು ಸಾಧ್ಯವೇ?

ಗುಜರಾತ್‌ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಷ್ಟ್ರಮಟ್ಟದಲ್ಲಿ ಹಲವು ಆಯಾಮಗಳ ಚರ್ಚೆಗಳು ಶುರುವಾಗಿವೆ. ಆದರೆ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆಗೆ ಸಿದ್ಧವಾಗುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಈ ಫಲಿತಾಂಶವನ್ನು ಹೇಗೆ ನೋಡಬೇಕು. ವಿಶ್ಲೇಷಣೆಗಾಗಿ ಈ ವಿಡಿಯೋ ನೋಡಿ.ತ

ಪದ್ಮಾವತಿ ಚಿತ್ರವನ್ನು ಕೇಂದ್ರವಾಗಿಟ್ಟುಕೊಂಡು ನಡೆಯುತ್ತಿರುವ ಸಂಸ್ಕೃತಿ ಮತ್ತು ರಾಜಕೀಯ ಚರ್ಚೆಗಳ ವಿಶ್ಲೇಷಣೆ ಇಲ್ಲಿದೆ. ವಾಸ್ತವದಲ್ಲಿ ನಂಬಬೇಕಿರುವ ಸಂವಿಧಾನದ ಪಠ್ಯವನ್ನು ಬಿಟ್ಟು ಸಾಹಿತ್ಯಕ ಮತ್ತು ಪುರಾಣದ ಕೃತಿಗಳನ್ನು ಅಕ್ಷರಶಃ ಸ್ವೀಕರಿಸುತ್ತಿರುವುದು ಸಮಾಜದ ಒಡಕಿಗೆ ಕಾರಣವಾಗುತ್ತಿದೆ.

ಕನ್ನಡದ ಮೊತ್ತಮೊದಲ ಡಿಜಿಟಲ್‌ ನೇಟಿವ್‌ ಜಾಲತಾಣ ದಿ ಸ್ಟೇಟ್‌. ಇಲ್ಲಿ ಸುದ್ದಿಯನ್ನು ಓದುವ ಜೊತೆಗೆ, ಕೇಳಬಹುದು, ನೋಡಬಹುದು. ವಿಭಿನ್ನ ಅನುಭವ ನೀಡಲು ಸಿದ್ಧವಾಗಿರುವ ಈ ತಾಣದೊಳಗೆ ಈಜಾಡಲು ಬಯಸುವವರ ನೆರವಿಗೆ ಈ ವಿಡಿಯೋ

ಇಂಗ್ಲಿಷ್ ಮತ್ತು ಕನ್ನಡ ಪತ್ರಿಕೋದ್ಯಮದ ಮುಖ್ಯವಾಹಿನಿಗಳಲ್ಲಿ ತಮ್ಮದೇ ಛಾಪು ಮೂಡಿಸಿದ್ದ ಸುಗತ ಶ್ರೀನಿವಾಸರಾಜು ಡಿಜಿಟಲ್‌ ಮಾಧ್ಯಮದ ಕನಸು ಕಂಡು ಒಂದು ವರ್ಷ ಉರುಳಿರಬಹುದು. ಕಳೆದೊಂದು ವರ್ಷದಿಂದ ನಡೆಸಿದ ತಾಲೀಮು, ಡಿಜಿಟಲ್‌ ಮಾಧ್ಯಮವನ್ನು ಅರಿತುಕೊಂಡ ರೀತಿ, ಸಾಂಪ್ರದಾಯಿಕ ಮಾಧ್ಯಮ ಮತ್ತು ಈ ಕಾಲದ ಡಿಜಿಟಲ್‌ ಮಾಧ್ಯಮಕ್ಕಿರುವ ವ್ಯತ್ಯಾಸ, ಚಾಲೆಂಜ್‌, ಅದ್ಭುತ, ವಿಶಿಷ್ಟತೆಗಳು ಮತ್ತು ಹೆಗಲ ಮೇಲಿರುವ ಜವಾಬ್ದಾರಿಗಳ ಬಗ್ಗೆ ‘ದಿ ಸ್ಟೇಟ್‌’ನ ಸಂಪಾದಕೀಯ ನಿರ್ದೇಶಕರಾದ ಸುಗತ ‘ದಿ ಸ್ಟೇಟ್‌ಮೆಂಟ್‌’ನಲ್ಲಿ ವಿವರಿಸಿದ್ದಾರೆ. ಅದರ ಮುಖ್ಯಾಂಶ ಇಲ್ಲಿದೆ.

ಇಲಾಜು | ಆರೋಗ್ಯ ಸೇವೆ ಕೊರತೆಯಿಂದ 2016ರಲ್ಲಿ 25 ಲಕ್ಷ ಭಾರತೀಯರ ಪ್ರಾಣಹರಣ
ಚಿತ್ತವಿತ್ತ | ಮುಂದೊಂದು ದಿನ ಮನುಷ್ಯರೇ ಅತ್ಯಂತ ನಿರುಪಯುಕ್ತ ಆಗಿಬಿಡಬಹುದು!
ಮೂಡಲ್ಮಾತು | ‘ದಲಿತ’ ಕಂಡರೆ ಯಾಕೆ ಹೊಟ್ಟೆನೋವು?
Editor’s Pick More