ಮಣ್ಣಿನ ಮಗನ ಮನದ ಮಾತು: ಕಂತು 1 ಮತ್ತು 2

ಗೋಕಾಕ್ ಚಳವಳಿ ಮತ್ತು ರೈತ ಚಳವಳಿ ವ್ಯಾಪಕವಾಗಿ ವಿಸ್ತರಿಸಲು ಆರಂಭವಾದಾಗ ಅದರ ಲಾಭ ಪಡೆದು ಉತ್ಸಾಹದಿಂದ ಚುನಾವಣಾ ಕಣಕ್ಕೆ ಇಳಿದ ಜನತಾ ಪಕ್ಷ ನಿಧಾನವಾಗಿ ರಾಜ್ಯ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದಿರುವ ವಿವರಗಳು ಈ ಕಂತುಗಳಲ್ಲಿವೆ

ಈ ಕಂತುಗಳಲ್ಲಿ

ಗೋಕಾಕ್ ಚಳವಳಿ ಮತ್ತು ರೈತ ಚಳವಳಿ ವ್ಯಾಪಕವಾಗಿ ವಿಸ್ತರಿಸುತ್ತಿದ್ದ ಸಂದರ್ಭದಲ್ಲಿ ಅದರ ಶಕ್ತಿ ಸಂಚಯಿಸಿಕೊಂಡು ಉತ್ಸಾಹದಿಂದ ಚುನಾವಣಾ ಕಣಕ್ಕೆ ಇಳಿದ ಜನತಾ ಪಕ್ಷ ಕ್ರಮೇಣ ರಾಜ್ಯ ರಾಜಕಾರಣದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದು ಮತ್ತು ಚುನಾವಣೆಯಲ್ಲಿ ಬಹುಮತ ಸಾಧಿಸಿದ ನಂತರ ಪಕ್ಷದ ನಾಯಕರ ನಡುವೆ ಉದ್ಭವಿಸಿದ ಭಿನ್ನಾಭಿಪ್ರಾಯ, ಅದನ್ನು ನಿವಾರಿಸಲು ತಾವು ನಡೆಸಿದ ಪ್ರಯತ್ನಗಳ ಬಗ್ಗೆ ಎಚ್ ಡಿ ದೇವೇಗೌಡರು ಇಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

ಮಣ್ಣಿನ ಮಗನ ಮನದ ಮಾತು

ತಮ್ಮ ಸುದೀರ್ಘ ರಾಜಕೀಯ ಯಾನ, ವೈಯಕ್ತಿಕ ಬದುಕಿನ ಏರಿಳಿತಗಳ ಕುರಿತು ಎಚ್ ಡಿ ದೇವೇಗೌಡರು ಆತ್ಮಚರಿತ್ರೆ ಬರೆದಿದ್ದಾರೆ. ಇನ್ನಷ್ಟೇ ಬಿಡುಗಡೆಯಾಗಲಿರುವಈ ಕೃತಿಯಿಂದ ಅವರ ಸಾರ್ವಜನಿಕ ಬದುಕಿನ ಭಾಗದ ಧ್ವನಿ ಅವತರಣಿಕೆಯನ್ನು ಶಾಸಕ ವೈ ಎಸ್ ವಿ ದತ್ತ ಅವರ ಧ್ವನಿಯಲ್ಲಿ “ಜಾನುಲಿ’ಯಲ್ಲಿ ‘ದಿ ಸ್ಟೇಟ್’ ನಿಮ್ಮೆದುರು ಪ್ರಸ್ತುತಪಡಿಸುತ್ತಿದೆ.

ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ಕರ್ನಾಟಕದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಅಲ್ಲಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಅವರದ್ದು ಗಮನಾರ್ಹ ಅಧ್ಯಾಯ. ಸರಿಸುಮಾರುಆರೂವರೆ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಅವರು ಈ ಹೊತ್ತಿಗೂ, ಈ ಕ್ಷಣಕ್ಕೂ ಪ್ರಸ್ತುತ. ಸಾಮಾನ್ಯರೂ ಈ ದೇಶದ ಅತ್ಯುನ್ನತ ಹುದ್ದೆಅಲಂಕರಿಸಬಹುದಾದ ಅವಕಾಶವನ್ನು ಕಲ್ಪಿಸಿಕೊಟ್ಟ ಹೆಗ್ಗಳಿಕೆ ಭಾರತದ ಪ್ರಜಾಪ್ರಭುತ್ವದ್ದಾದರೆ, ಅದನ್ನು ಸಾಧಿಸಿ ತೋರಿಸಿದ ಶ್ರೇಯ ಮಣ್ಣಿನ ಮಗ ದೇವೇಗೌಡರದ್ದು.ಹಾಸನದ ಸಣ್ಣ ಹಳ್ಳಿಯಿಂದ ಬಂದ ಗೌಡರು ದೇಶದ ಹಲವು ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಮಂತ್ರಿಯಾಗಿದ್ದು ಇತಿಹಾಸ. ಕರ್ನಾಟಕದಿಂದಪ್ರಧಾನಿಯಾದ ಏಕೈಕ ನೇತಾರ ಎನ್ನುವ ಹೆಗ್ಗಳಿಕೆಯೂ ಇವರದ್ದು. ತಮ್ಮ ರಾಜಕೀಯ ಜೀವನದುದ್ದಕ್ಕೂ ಹತ್ತು ಹಲವು ನಾಯಕರನ್ನು ಬೆಳೆಸಿದ ಶ್ರೇಯ ಗೌಡರಿಗೆಸಲ್ಲುತ್ತದೆ. ಉತ್ತಮ ಸಂಸದೀಯ ಪಟುವಾದ ದೇವೇಗೌಡರು ತಮ್ಮ ತೀಕ್ಷ್ಣ ಮಾತುಗಳು, ತಂತ್ರಗಾರಿಕೆಯ ಮೂಲಕ ಸರ್ಕಾರಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದಾರೆ,ನೀರಾವರಿ ಮತ್ತು ಕೃಷಿ ಕ್ಷೇತ್ರದ ಬಗೆಗಿನ ಅಗಾಧ ಜ್ಞಾನದಿಂದ ನಿಬ್ಬೆರಗುಗೊಳಿಸಿದ್ದಾರೆ. ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸುವ ಯಾರಿಗೇ ಆದರೂದೇವೇಗೌಡರ ರಾಜಕೀಯ ಜೀವನ ಒಂದು ಅಧ್ಯಯನಾರ್ಹ ವಿಷಯ.

ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-14
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-14
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-7
Editor’s Pick More