ಜಾನುಲಿ | ಮಣ್ಣಿನ ಮಗನ ಮನದ ಮಾತು: ಕಂತು 3 ಮತ್ತು 4

ರಾಜಕೀಯ ಗುರು ಎ ಜಿ ರಾಮಚಂದ್ರರಾಯರ ಪ್ರೋತ್ಸಾಹದಲ್ಲಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು ಹೊಳೆನರಸೀಪುರದಲ್ಲಿ ರಾಜಕೀಯ ಜೀವನ ಆರಂಭಿಸಿ, ಚುನಾವಣೆ ಸ್ಪರ್ಧಿಸುವ ಉಮೇದಿನಲ್ಲಿದ್ದರು. ಆದರೆ ಕಾಂಗ್ರೆಸ್ ಟಿಕೆಟು ಸಿಗದೆ, ಪಕ್ಷೇತರರಾಗಿ ಮೊದಲ ಬಾರಿ ವಿಧಾನಸೌಧ ಪ್ರವೇಶಿಸಿದರು

ಈ ಕಂತುಗಳಲ್ಲಿ

ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಹೊಳೆನರಸೀಪುರದಲ್ಲಿ ತಮ್ಮ ರಾಜಕೀಯ ಜೀವನ ಆರಂಭಿಸಿದ ಸಂದರ್ಭ ಮತ್ತು ವಿವರಗಳಿವೆ. ಎ ಜಿ ರಾಮಚಂದ್ರರಾಯರು ರಾಜಕೀಯ ಗುರುವಾಗಿ ನೀಡಿದ ಪ್ರೋತ್ಸಾಹಗಳನ್ನುವಿವರಿಸಿದ್ದಾರೆ. ಮೊದಲ ಬಾರಿ ಚುನಾವಣೆಗೆ ಸ್ಪರ್ಧಿಸುವ ಉಮೇದಿನಲ್ಲಿದ್ದ ಸಂದರ್ಭದಲ್ಲಿ ಕಾಂಗ್ರೆಸ್ನಿಂದ ಟಿಕೆಟು ನಿರಾಕರಣೆಯಾಗಿರುವುದು ಮತ್ತು ಪಕ್ಷೇತರರಾಗಿ ಸ್ಪರ್ಧಿಸಿ ಗೆದ್ದ ವಿವರಗಳನ್ನು ಇಲ್ಲಿ ಹೇಳಿಕೊಂಡಿದ್ದಾರೆ. ಮೊದಲ ಬಾರಿಗೆ ವಿಧಾನಸೌಧ ಪ್ರವೇಶಿಸಿರುವುದು ಮತ್ತು ಶಾಸಕನಾಗಿ ರಾಜಕೀಯ ವೃತ್ತಿ ಜೀವನ ಆರಂಭವಾದ ರೋಮಾಂಚಕ ಅನುಭವಗಳನ್ನೂ ತಿಳಿಸಿದ್ದಾರೆ.

ಮಣ್ಣಿನ ಮಗನ ಮನದ ಮಾತು

ತಮ್ಮ ಸುದೀರ್ಘ ರಾಜಕೀಯ ಯಾನ, ವೈಯಕ್ತಿಕ ಬದುಕಿನ ಏರಿಳಿತಗಳ ಕುರಿತು ಎಚ್ ಡಿ ದೇವೇಗೌಡರು ಆತ್ಮಚರಿತ್ರೆ ಬರೆದಿದ್ದಾರೆ. ಇನ್ನಷ್ಟೇ ಬಿಡುಗಡೆಯಾಗಲಿರುವ ಈ ಕೃತಿಯಿಂದ ಅವರ ಸಾರ್ವಜನಿಕ ಬದುಕಿನ ಭಾಗದ ಧ್ವನಿ ಅವತರಣಿಕೆಯನ್ನು ಶಾಸಕ ವೈ ಎಸ್ ವಿ ದತ್ತ ಅವರ ಧ್ವನಿಯಲ್ಲಿ “ಜಾನುಲಿ’ಯಲ್ಲಿ ‘ದಿ ಸ್ಟೇಟ್’ ನಿಮ್ಮೆದುರು ಪ್ರಸ್ತುತಪಡಿಸುತ್ತಿದೆ.

ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ಕರ್ನಾಟಕದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಅಲ್ಲಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಅವರದ್ದು ಗಮನಾರ್ಹ ಅಧ್ಯಾಯ. ಸರಿಸುಮಾರು ಆರೂವರೆ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಅವರು ಈ ಹೊತ್ತಿಗೂ, ಈ ಕ್ಷಣಕ್ಕೂ ಪ್ರಸ್ತುತ. ಸಾಮಾನ್ಯರೂ ಈ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಬಹುದಾದ ಅವಕಾಶವನ್ನು ಕಲ್ಪಿಸಿಕೊಟ್ಟ ಹೆಗ್ಗಳಿಕೆ ಭಾರತದ ಪ್ರಜಾಪ್ರಭುತ್ವದ್ದಾದರೆ, ಅದನ್ನು ಸಾಧಿಸಿ ತೋರಿಸಿದ ಶ್ರೇಯ ಮಣ್ಣಿನ ಮಗ ದೇವೇಗೌಡರದ್ದು. ಹಾಸನದ ಸಣ್ಣ ಹಳ್ಳಿಯಿಂದ ಬಂದ ಗೌಡರು ದೇಶದ ಹಲವು ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಮಂತ್ರಿಯಾಗಿದ್ದು ಇತಿಹಾಸ. ಕರ್ನಾಟಕದಿಂದ ಪ್ರಧಾನಿಯಾದ ಏಕೈಕ ನೇತಾರ ಹೆಗ್ಗಳಿಕೆಯೂ ಇವರದ್ದು. ತಮ್ಮ ರಾಜಕೀಯ ಜೀವನದುದ್ದಕ್ಕೂ ಹತ್ತು ಹಲವು ನಾಯಕರನ್ನು ಬೆಳೆಸಿದ ಶ್ರೇಯ ಗೌಡರಿಗೆ ಸಲ್ಲುತ್ತದೆ. ಉತ್ತಮ ಸಂಸದೀಯ ಪಟುವಾದ ದೇವೇಗೌಡರು ತಮ್ಮ ತೀಕ್ಷ್ಣ ಮಾತುಗಳು, ತಂತ್ರಗಾರಿಕೆಯ ಮೂಲಕ ಸರ್ಕಾರಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದಾರೆ. ನೀರಾವರಿ ಮತ್ತು ಕೃಷಿ ಕ್ಷೇತ್ರದ ಬಗೆಗಿನ ಅಗಾಧ ಜ್ಞಾನದಿಂದ ನಿಬ್ಬೆರಗುಗೊಳಿಸಿದ್ದಾರೆ. ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸುವ ಯಾರಿಗೇ ಆದರೂ ದೇವೇಗೌಡರ ರಾಜಕೀಯ ಜೀವನ ಒಂದು ಅಧ್ಯಯನಾರ್ಹ ವಿಷಯ.

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More