ಜಾನುಲಿ | ಮಣ್ಣಿನ ಮಗನ ಮನದ ಮಾತು | ಕಂತು 8 | ಅರಸು ಸೂಟ್‌ಕೇಸ್ ಕೈಗಿಟ್ಟು ಹೇಳಿದ್ದೇನು?

ಮಾಜಿ ಪ್ರಧಾನಿ ದೇವೇಗೌಡರ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆದಾಗ ಪಕ್ಷದ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದ ಪಟ್ಟಿ ಕೊನೇಕ್ಷಣದಲ್ಲಿ ಬದಲಾವಣೆಯಾಗಿ ಅವರಿಗೆ ಅಪಖ್ಯಾತಿ ಬಂದಿತ್ತು. ಆದರೆ, ಪಟ್ಟಿ ಬದಲಾಯಿಸಿದ್ದು ರಾಮಕೃಷ್ಣ ಹೆಗಡೆ. ಆದರೆ ಅಷ್ಟೊತ್ತಿಗಾಗಲೇ ದೇವೇಗೌಡ ಅಪರಾಧಿ ಆಗಿಬಿಟ್ಟಿದ್ದರು!

ಈ ಕಂತಿನಲ್ಲಿ

ಆಗಿನ ಮುಖ್ಯಮಂತ್ರಿ ದೇವರಾಜ ಅರಸು ಅವರ ಜೊತೆಗಿನ ಮಾಜಿ ಪ್ರಧಾನಿ ದೇವೇಗೌಡರ ಸಂಬಂಧ, ರಾಜಕೀಯ ಚರ್ಚೆ-ಮಾತುಕತೆ, ರಾಷ್ಟ್ರ ರಾಜಕಾರಣದಲ್ಲಿ ಆಗುತ್ತಿದ್ದ ಬದಲಾವಣೆಗಳು ರಾಜ್ಯದ ಮೇಲೆ ಬೀರುತ್ತಿದ್ದ ಪರಿಣಾಮದ ಬಗ್ಗೆ ಈ ಕಂತಿನಲ್ಲಿ ವಿವರಗಳಿವೆ. ಜನತಾಪಕ್ಷದ ಆಂತರಿಕ ಕಲಹಗಳು, ರಾಮಕೃಷ್ಣ ಹೆಗಡೆಯವರ ಜೊತೆಗಿನ ಭಿನ್ನಾಭಿಪ್ರಾಯ, ಪಕ್ಷದ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿ ಹೊಣೆಗಾರಿಕೆ ನಿರ್ವಹಿಸಿದರೂ ಬಂದ ಅಪಕೀರ್ತಿಗಳ ಬಗ್ಗೆಯೂ ತಮ್ಮ ನೋವನ್ನು ಇಲ್ಲಿ ಹಂಚಿಕೊಂಡಿದ್ದಾರೆ.

ಮಣ್ಣಿನ ಮಗನ ಮನದ ಮಾತು

ತಮ್ಮ ಸುದೀರ್ಘ ರಾಜಕೀಯ ಯಾನ, ವೈಯಕ್ತಿಕ ಬದುಕಿನ ಏರಿಳಿತಗಳ ಕುರಿತು ಎಚ್ ಡಿ ದೇವೇಗೌಡರು ಆತ್ಮಚರಿತ್ರೆ ಬರೆದಿದ್ದಾರೆ. ಇನ್ನಷ್ಟೇ ಬಿಡುಗಡೆಯಾಗಲಿರುವ ಈ ಕೃತಿಯಿಂದ ಅವರ ಸಾರ್ವಜನಿಕ ಬದುಕಿನ ಭಾಗದ ಧ್ವನಿ ಅವತರಣಿಕೆಯನ್ನು ಶಾಸಕ ವೈ ಎಸ್ ವಿ ದತ್ತ ಅವರ ಧ್ವನಿಯಲ್ಲಿ ‘ಜಾನುಲಿ’ಯಲ್ಲಿ ‘ದಿ ಸ್ಟೇಟ್’ ನಿಮ್ಮೆದುರು ಪ್ರಸ್ತುತಪಡಿಸುತ್ತಿದೆ.

ಎಚ್ ಡಿ ದೇವೇಗೌಡ, ಮಾಜಿ ಪ್ರಧಾನಿ

ಕರ್ನಾಟಕದ ರಾಜಕೀಯ ಇತಿಹಾಸವನ್ನು ಅವಲೋಕಿಸಿದರೆ ಅಲ್ಲಿ ಮಾಜಿ ಪ್ರಧಾನಮಂತ್ರಿ ಎಚ್ ಡಿ ದೇವೇಗೌಡ ಅವರದ್ದು ಗಮನಾರ್ಹ ಅಧ್ಯಾಯ. ಸರಿಸುಮಾರು ಆರೂವರೆ ದಶಕಗಳಿಂದ ರಾಜಕೀಯದಲ್ಲಿ ಸಕ್ರಿಯರಾಗಿರುವ ಅವರು ಈ ಹೊತ್ತಿಗೂ, ಈ ಕ್ಷಣಕ್ಕೂ ಪ್ರಸ್ತುತ. ಸಾಮಾನ್ಯರೂ ಈ ದೇಶದ ಅತ್ಯುನ್ನತ ಹುದ್ದೆ ಅಲಂಕರಿಸಬಹುದಾದ ಅವಕಾಶವನ್ನು ಕಲ್ಪಿಸಿಕೊಟ್ಟ ಹೆಗ್ಗಳಿಕೆ ಭಾರತದ ಪ್ರಜಾಪ್ರಭುತ್ವದ್ದಾದರೆ, ಅದನ್ನು ಸಾಧಿಸಿ ತೋರಿಸಿದ ಶ್ರೇಯ ಮಣ್ಣಿನ ಮಗ ದೇವೇಗೌಡರದ್ದು. ಹಾಸನದ ಸಣ್ಣ ಹಳ್ಳಿಯಿಂದ ಬಂದ ಗೌಡರು ದೇಶದ ಹಲವು ರಾಜಕೀಯ ಪಕ್ಷಗಳ ಬೆಂಬಲದೊಂದಿಗೆ ಪ್ರಧಾನಮಂತ್ರಿಯಾಗಿದ್ದು ಇತಿಹಾಸ. ಕರ್ನಾಟಕದಿಂದ ಪ್ರಧಾನಿಯಾದ ಏಕೈಕ ನೇತಾರ ಎನ್ನುವ ಹೆಗ್ಗಳಿಕೆಯೂ ಇವರದ್ದು. ತಮ್ಮ ರಾಜಕೀಯ ಜೀವನದುದ್ದಕ್ಕೂ ಹತ್ತು ಹಲವು ನಾಯಕರನ್ನು ಬೆಳೆಸಿದ ಶ್ರೇಯ ಗೌಡರಿಗೆ ಸಲ್ಲುತ್ತದೆ. ಉತ್ತಮ ಸಂಸದೀಯ ಪಟುವಾದ ದೇವೇಗೌಡರು ತಮ್ಮ ತೀಕ್ಷ್ಣ ಮಾತುಗಳು, ತಂತ್ರಗಾರಿಕೆಯ ಮೂಲಕ ಸರ್ಕಾರಗಳನ್ನು ತುದಿಗಾಲಿನಲ್ಲಿ ನಿಲ್ಲಿಸಿದ್ದಾರೆ. ನೀರಾವರಿ ಮತ್ತು ಕೃಷಿ ಕ್ಷೇತ್ರದ ಬಗೆಗಿನ ಅಗಾಧ ಜ್ಞಾನದಿಂದ ನಿಬ್ಬೆರಗುಗೊಳಿಸಿದ್ದಾರೆ. ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸುವ ಯಾರಿಗೇ ಆದರೂ ದೇವೇಗೌಡರ ರಾಜಕೀಯ ಜೀವನ ಒಂದು ಅಧ್ಯಯನಾರ್ಹ ವಿಷಯ.

ಹಿಂದಿನ ಕಂತುಗಳನ್ನು ಇಲ್ಲಿ ಕೇಳಿ:

ಕಂತು ೭

ಕಂತು ೬

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More