ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-೫

ಪಂಪನಿಂದ ಮೊದಲುಗೊಂಡು, ಕಾವ್ಯಕಥನ ಎಂದರೆ ಶ್ರವಣಾಮೃತ ಎಂದೇ ಹೇಳಿದ್ದಾರೆ. ಪುರಾಣ ಮಾದರಿ, ಕಲ್ಪನೆ ಅಂತಾದರೂ ಕಥನಾಂತ್ಯದಲ್ಲಿ ಬದುಕಿನ ಬಹುದೊಡ್ಡ ಸತ್ಯ ಹೇಳುತ್ತವೆ ಎಂಬ ಕಾರಣದಿಂದಾಗಿ ಕಾವ್ಯ ಕಥನಗಳು ಇಂದಿಗೂ ಉಳಿದಿವೆ. ಓದಲ್ಪಡುತ್ತಿವೆ, ಕೇಳಲ್ಪಡುತ್ತಿವೆ

ಈ ಕಂತಿನಲ್ಲಿ

ಗ್ರಾಮೀಣರು ಮತ್ತು ಅಕ್ಷರ ಬಲ್ಲವರ ನಡುವೆ ಜೈನ ಕವಿಗಳ ಭಾರತಕ್ಕಿಂತ ಕುಮಾರವ್ಯಾಸನ ಭಾರತ ಹೆಚ್ಚು ಜನಪ್ರಿಯ. ಯಾವಾಗಲೂ ಬೇಟೆಯೇ ಮುಂದಿನ ಕಥನವನ್ನು ಬೆಳೆಸುವಂತೆಯೇ ಇರುತ್ತದೆ. ಶಂತನು ರಾಜ ಅರಣ್ಯ ಮಾರ್ಗವಾಗಿ ಬೇಟೆಗೆ ಬಂದಾಗ ಸುಂದರಿಯನ್ನು ಭೇಟಿಯಾಗುತ್ತಾನೆ. ಆಕೆಗೆ ಮರುಳಾಗುತ್ತಾನೆ. ಹೀಗೆ ಮರುಳಾದ ರಾಜನ ಚಿಂತೆಯನ್ನು ಹೇಗೆ ಪರಿಹಾರ ಕಂಡುಕೊಳ್ಳುತ್ತಾನೆ ಎಂಬುದನ್ನು ಮಹಾಭಾರತ ಬಿಚ್ಚಿಡುತ್ತದೆ. ಇಂಥ ಸಂಘರ್ಷಗಳೇ ಮತ್ತೆ ಮತ್ತೆ ಕಂಡುಬರುತ್ತೇವೆ. ಮನುಷ್ಯನ ಮೋಹ, ಅದರಿಂದ ಉಂಟಾಗುವ ಭಗ್ನವ್ರತಗಳನ್ನು ಮನೋಜ್ಞಾವಾಗಿ ವಿವರಿಸುತ್ತಾನೆ.

ಗದುಗಿನ ಭಾರತ ೨.೦

“ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’’ ಎಂದು ಕುವೆಂಪು ಕುಮಾರವ್ಯಾಸ ಕಾವ್ಯ ಶಕ್ತಿಯನ್ನು ಹೊಗಳಿಸಿದ್ದಾರೆ. ಗದುಗಿನ ಭಾರತ, ಕನ್ನಡ ಭಾರತ ಎಂದು ಕರೆಸಿಕೊಳ್ಳುವ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕನ್ನಡದ ಜನಪದವಾಗಿ ಹಾಸುಹೊಕ್ಕಾಗಿರುವ ಕೃತಿ. ಗಮಕಗಳ ಮೂಲಕ ಚಿರಪರಿಚಿತವಾಗಿರುವ ಈ ಕನ್ನಡ ಭಾರತದ ಭಿನ್ನ ಓದನ್ನು ಹೊಸತಲೆಮಾರಿಗೆ ಹನೂರರು ತಲುಪಿಸಲಿದ್ದಾರೆ.

ಕೃಷ್ಣಮೂರ್ತಿ ಹನೂರು

ಕನ್ನಡದ ಪ್ರಮುಖ ಜಾನಪದ ತಜ್ಞ. ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸುಮಾರು ೧೩ ವರ್ಷಗಳ ಕಾಲ ಹಳೆಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ಜನಪದ ಅಧ್ಯಯನಕ್ಕೊಂದು ಶಿಸ್ತಿನ ಚೌಕಟ್ಟು ತಂದವರು.

ಕಂತು 4

ಕಂತು ೩

ಕಂತು ೨

ಕಂತು ೧

ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ| ಕಂತು 9
ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು ೧
Editor’s Pick More