ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-6

ಮಹಾನ್‌ ನಾಯಕ ಎನಿಸಿಕೊಂಡವನ ಲಕ್ಷಣಗಳೇನು? ಅವತಾರ ಪುರುಷ ಎಲ್ಲವನ್ನೂ ಮಾಡಿಬಿಡಲು ಸಾಧ್ಯವೇ? ಸಮುದಾಯದ ಪಾಲ್ಗೊಳ್ಳುವಿಕೆ ಇಲ್ಲದೇ ಯಾವುದಾದರೂ ಮಹತ್ವದ ಬದಲಾವಣೆಗಳು ಸಾಧ್ಯವೆ?

ಈ ಕಂತಿನಲ್ಲಿ

ಯಾವುದೇ ಮಹತ್‌ ಕಾರ್ಯವನ್ನು ಒಬ್ಬರೇ ಮಾಡಲಾಗದು. ಆದರೆ ಭಗವದ್ಗೀತೆಯಲ್ಲಿ ಭಗವಾನ್‌ ಎಲ್ಲವನ್ನೂ ಮಾಡುತ್ತಾನೆ ಎಂದೇ ಹೇಳಲಾಗುತ್ತದೆ. ಮಹಾನ್‌ ನಾಯಕ ಎನ್ನಿಸಿಕೊಂಡವನು ಜನರ ನಾಡಿಮಿಡಿತ ಅರಿತು ಸಂಘಟಿಸುತ್ತಾನೆ. ಆದರೆ ಹೀಗೆ ಸಂಘಟಿಸುವ ವ್ಯಕ್ತಿಯನ್ನು ಅವತಾರೆಂಬಂತೆ ಆರಾಧಿಸಬಾರದು. ಅದೊಂದು ಸಮೂಹ ಸನ್ನಿಯಾಗುವ ಅವಕಾಶವಿರುತ್ತದೆ ಎಂಬುದನ್ನು ಈ ಕಂತು ವಿವರಿಸುತ್ತದೆ. ಆರನೇ ಅಧ್ಯಾಯದಲ್ಲಿ ಬರುವ ಧ್ಯಾನಯೋಗದ ಕುರಿತು ಚರ್ಚಿಸುತ್ತದೆ.

ವಿಚಾರವಂತರಿಗೆ ಭಗವದ್ಗೀತೆ

ಭಾರತಿಯರೆಲ್ಲರೂ ಗೌರವಿಸುವ ಕೃತಿ ಭಗವದ್ಗೀತೆ. ಶತಮಾನಗಳಿಂದ ಜೀವನಾದರ್ಶವನ್ನು ಬೋಧಿಸುತ್ತಾ ಬಂದಿರುವ ಗೀತೆಯ ಶ್ಲೋಕಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಓದಿದ್ದು,ಕೇಳಿದ್ದೇ ಹೆಚ್ಚು. ಜಿಆರ್ “ಜಾನುಲಿ’ಯಲ್ಲಿ (ಪಾಡ್’ಕಾಸ್ಟ್) ಭಗವದ್ಗೀತೆಯನ್ನು ಸಮಕಾಲೀನಗೊಳಿಸುತ್ತಾ, ವಿಚಾರವಂತರಿಗೆ ತಲುಪಿಸಲಿದ್ದಾರೆ.

ಜಿ ರಾಮಕೃಷ್ಣ

ಕನ್ನಡದ ಪ್ರಖರ ವಿಚಾರವಾದಿ, ಚಿಂತಕ, ಸಾಹಿತಿ. ವೇಲ್ಸ್ ವಿವಿ ಯಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ. ಉಸ್ಮಾನಿಯಾ ವಿವಿ, ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಹಿಂದಿನ ಕಂತುಗಳು

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಈ ಎಲ್ಲ ಕಂತುಗಳನ್ನು ಸೌಂಡ್‌ಕ್ಲೌಡ್‌ನಿಂದ ಡೌನ್‌ಲೋಡ್‌ ಮಾಡಿಕೊಂಡು ಕೇಳಬಹುದು

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More