ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-೬

ನಾವು ನಿತ್ಯ ಬಳಸುವ ಬೈಗುಳಗಳಿಗೆ ಇರುವ ಸಾಂಸ್ಕೃತಿಕ ಚರಿತ್ರೆ ಮತ್ತು ಅವುಗಳಿಗೆ ಇರುವ ಮನೋವೈಜ್ಞಾನಿಕ ಸಂಬಂಧವನ್ನು ಈ ಕಂತಿನಲ್ಲಿ ಚರ್ಚಿಸಲಾಗಿದೆ

ಈ ಕಂತಿನಲ್ಲಿ

ಸಾರ್ಜನಿಕವಾಗಿ ಬೈದಾಡುವುದು ನಮ್ಮ ಸಾರ್ವಜನಿಕ ಅಂತಸ್ತನ್ನು ಕಡಿಮೆ ಮಾಡುತ್ತದೆ ಎಂದು ಒಂದು ಕಾಲದಲ್ಲಿ ಭಾವಿಸಲಾಗುತ್ತಿತ್ತು. ಆದರೆ ಈಗ ಅದು ಸಾರ್ವಜನಿಕ ಪ್ರತಿಷ್ಠೆಯಾಗಿಬಿಟ್ಟಿದೆ. ಮಾಧ್ಯಮಗಳಲ್ಲಿ, ರಾಜಕೀಯ ಭಾಷಣಗಳಲ್ಲಿ ಬೈಗುಳಗಳು ನಿರಾಯಾಸವಾಗಿ ಕಾಣಿಸುತ್ತವೆ. ಹೀಗೆ ಬೈದಾಡುವ ಜನರ ಮನೋಲೋಕವೇ ವಿಸ್ಮಯವುಂಟು ಮಾಡುತ್ತದೆ. ಈ ಕುರಿತು ಈ ಕಂತು ಚರ್ಚೆ ನಡೆದಿದೆ.

ಬೈಗುಳ ಅಧ್ಯಯನ

ಬೈಗುಳ ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಮನರಂಜನೀಯವು, ಆಕ್ರೋಶವನ್ನು ಹೊರಹಾಕುವ ಮಾಧ್ಯಮವೆಂದು ಪರಿಗಣಿಸಲಾಗಿರುವ ಬೈಗುಳಗಳಿಗೆ ಇರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮವನ್ನು ಈ ಪಾಡ್ಕಾಸ್ಟ್ ಬಿಚ್ಚಿಡಲಿದೆ.

ಸಿ ಪಿ ನಾಗರಾಜ

ರಾಮನಗರ ಜಿಲ್ಲೆಯವರಾದ ಇವರು, ಮಂಡ್ಯದ ಭಾರತಿ ಕಾಲೇಜು, ಬೆಂಗಳೂರು ಮಹಾರಾಣಿ ಅಮ್ಮಣ್ಣಿ ಕಾಲೇಜು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಟಕ, ಕನ್ನಡ ಭಾಷೆಯ ಅಧ್ಯಯನದಲ್ಲಿ ಸಕ್ರಿಯರಾಗಿದ್ದಾರೆ. ಬೈಗುಳ ವಿಷಯವೇ ಇವರ ಪಿಎಚ್‌ಡಿ ಮಹಾಪ್ರಬಂಧ.

ಹಿಂದಿನ ಕಂತುಗಳು

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More