ಜಾನುಲಿ | ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರಿಂದ ಶ್ರೀರಾಮಾಯಣ ದರ್ಶನಂ ಹೊಸ ಓದು | ಕಂತು -3

ಭಾರತದಲ್ಲಿ ಹಲವು ರಾಮಾಯಣಗಳು ಪ್ರಚಲಿತದಲ್ಲಿವೆ. ಕಾಲ ಮತ್ತು ನೆಲಕ್ಕೆ ತಕ್ಕಂತೆ ಬದಲಾಗಿರುವ ಈ ರಾಮಾಯಣ ಜನಮಾನಸದಲ್ಲಿ ತನ್ನದೇ ಆದ ಸ್ಥಾನ ಪಡೆದುಕೊಂಡಿದೆ. ಇವೆಲ್ಲವುಗಳಿಗೆ ಮೂಲವಾದ ವಾಲ್ಮೀಕಿ ರಾಮಾಯಣವನ್ನು ಆಧರಿಸಿ ಕುವೆಂಪು ‘ಶ್ರೀರಾಮಾಯಣ ದರ್ಶನಂ’ ಮಹಾಕಾವ್ಯವನ್ನು ರಚಿಸಿದ್ದಾರೆ. ಕನ್ನಡದ ಮಹತ್ವದ ಮಹಾಕಾವ್ಯಗಳಲ್ಲಿ ಒಂದೆನಿಸಿಕೊಂಡ ‘ಶ್ರೀರಾಮಾಯಣ ದರ್ಶನಂ’ ಕೃತಿಯ ಹೊಸ ಓದು ಈ ಹೊತ್ತಿನ ಅಗತ್ಯ

ಈ ಕಂತಿನಲ್ಲಿ

ವಾಲ್ಮೀಕಿ ತರುಣ ತಪಸ್ವಿ. ನಾರದರ ವೀಣೆಯಿಂದ ರಾಮಕಥೆಯನ್ನು ಕೇಳಿ ಕಣ್ಣು ತುಂಬಿಕೊಂಡಿದ್ದಾನೆ, ರೋಮಾಂಚಿತನಾಗಿದ್ದಾನೆ. ಅದರ ಗುಂಗಿನಲ್ಲೇ ತಮಸಾ ನದಿ ಬಳಿ ತೆರಳುತ್ತಾನೆ. ಹೀಗೆ ಪ್ರಾರಂಭವಾಗುತ್ತದೆ 'ಶ್ರೀರಾಮಾಯಣ ದರ್ಶನಂ'ನ ಮೊದಲ ಸಂಚಿಕೆ. ಮಹರ್ಷಿ ಇದ್ದಕ್ಕಿದ್ದಂತೆ ಕ್ರೌಂಚ ಪಕ್ಷಿ ದಂಪತಿಯನ್ನು ನೋಡುತ್ತಾನೆ. ಅದರಲ್ಲಿ ಗಂಡು ಪಕ್ಷಿ ಆಕಾಶದಿಂದ ಗಿರಗಿರ ತಿರುಗುತ್ತಾ ನೆಲಕ್ಕೆ ಬೀಳುತ್ತದೆ. ಅದರ ಎದೆಗೆ ಬಾಣ ನೆಟ್ಟಿತ್ತು. ಈ ದೃಶ್ಯವನ್ನು ನೋಡಿದ ವಾಲ್ಮೀಕಿಯ ಮನಸ್ಸು ಹೇಗೆ ಸ್ಪಂದಿಸಿತು? ಈ ಕಂತು ರಾಮಾಯಣ ಕರ್ತೃವಿನ ಮನೋಲೋಕವನ್ನು ಬಿಚ್ಚಿಡುತ್ತದೆ.

ಶ್ರೀ ರಾಮಾಯಣ ದರ್ಶನಂ

ಶ್ರೀ ರಾಮಾಯಣ ದರ್ಶನಂ ಮಹಾಕಾವ್ಯ ರಾಮಾಯಣವನ್ನು ಆಧರಿಸಿ ಕುವೆಂಪುರವರು ರಚಿಸಿದ ಆಧುನಿಕ ಕನ್ನಡ ಸಾಹಿತ್ಯದ ಮೇರು ಕೃತಿ. ಕೇಂದ್ರ ಸಾಹಿತ್ಯ ಅಕಾಡೆಮಿ ಮತ್ತು ೧೯೬೮ ರಲ್ಲಿ 'ಜ್ಞಾನಪೀಠ ಪ್ರಶಸ್ತಿ'ಯನ್ನು ಕುವೆಂಪುರವರಿಗೆ ತಂದೊದಗಿಸಿದೆ. ಮಹಾಕಾವ್ಯದ ಆರಂಭದಲ್ಲಿ, ಕವಿ ತಮ್ಮ ನೆಚ್ಚಿನ ಗುರುಗಳಾದ ಶ್ರೀ ವೆಂಕಣ್ಣಯ್ಯರವರಿಗೆ ಕಾವ್ಯದ ಅರ್ಪಣೆ ಮಾಡುವ ಮೂಲಕ ಕಾವ್ಯದ ಮೂಲ ನಿತ್ಯ ಸತ್ಯವನ್ನು ಸಾರುತ್ತ ಕಾವ್ಯೋದ್ದೇಶವನ್ನು ಇಲ್ಲಿ ಸ್ಪಷ್ಟಪಡಿಸಿದ್ದಾರೆ. ಶ್ರೀರಾಮಾಯಣ ದರ್ಶನಂ ಅಯೋಧ್ಯಾ ಸಂಪುಟಂ, ಕಿಷ್ಕಿಂದಾ ಸಂಪುಟಂ, ಲಂಕಾ ಸಂಪುಟಂ, ಶ್ರೀ ಸಂಪುಟಂ ಎಂಬ ನಾಲ್ಕು ಸಂಪುಟಗಳನ್ನು ಒಳಗೊಂಡಿದೆ. ರಾಮಾಯಣದ ಅನೇಕ ಪರಂಪರೆಗಳನ್ನು ಹೃದ್ಗತ ಮಾಡಿಕೊಂಡು ಈ ಕೃತಿ ರಚಿಸಿದ್ದಾರೆ.

ಎಚ್.ಎಸ್.ವೆಂಕಟೇಶಮೂರ್ತಿ

ಎಚ್.ಎಸ್.ವೆಂಕಟೇಶಮೂರ್ತಿ ಕನ್ನಡದ ಪ್ರಮುಖ ಕವಿ. ಕಾವ್ಯದೊಂದಿಗೆ ಸತತ ಸಾಂಗತ್ಯದಿಂದ ನಮ್ಮ ನಡುವಿನ ವಿಶಿಷ್ಟ ಕವಿ ಎನಿಸಿಕೊಂಡವರು. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕೃಷಿ ಮಾಡಿದ್ದಾರೆ. ಪ್ರೌಢಶಾಲಾ ಶಿಕ್ಷಕರಾಗಿ, ಅಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ. ೧೫ಕ್ಕೂ ಹೆಚ್ಚು ಕವನ ಸಂಕಲನ, ಎರಡು ಕಥಾ ಸಂಕಲನ, ನಾಲ್ಕು ಕಾದಂಬರಿಗಳು, ಏಳು ನಾಟಕಗಳು ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ.

ಹಿಂದಿನ ಕಂತು

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More