ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-13

ಪಂಪನಿಂದ ಮೊದಲುಗೊಂಡು, ಕಾವ್ಯಕಥನ ಎಂದರೆ ಶ್ರವಣಾಮೃತ ಎಂದೇ ಹೇಳಿದ್ದಾರೆ. ಪುರಾಣ ಮಾದರಿ, ಕಲ್ಪನೆ ಅಂತಾದರೂ ಕಥನಾಂತ್ಯದಲ್ಲಿ ಬದುಕಿನ ಬಹುದೊಡ್ಡ ಸತ್ಯ ಹೇಳುತ್ತವೆ ಎಂಬ ಕಾರಣದಿಂದಾಗಿ ಕಾವ್ಯ ಕಥನಗಳು ಇಂದಿಗೂ ಉಳಿದಿವೆ. ಓದಲ್ಪಡುತ್ತಿವೆ, ಕೇಳಲ್ಪಡುತ್ತಿವೆ

ಈ ಕಂತಿನಲ್ಲಿ

ಹಿಡಿಂಬೆಯನ್ನು ಮದುವೆಯಾದ ಭೀಮ ಏಕಚಕ್ರನಗರದಲ್ಲಿ ವಿವಾಹ ಭೋಜನ ಮಾಡುತ್ತಾರೆ. ಮುಂದೆ ಇಲ್ಲೇ ಬಕಾಸುರರನ್ನೂ ಕೊಂದು ಹಾಕುತ್ತಾನೆ. ರಾಜಾಭೋಗದಲ್ಲಿ ಬೆಳೆದವರು ಈ ವನವಾಸದಲ್ಲಿ ಭಿಕ್ಷೆ ಬೇಡುತ್ತಾ ಬದುಕುತ್ತಿದ್ದಾರೆ. ಇಲ್ಲಿ ಕುಮಾರವ್ಯಾಸ ವಿಧಿಯಾಟವೆಂಬಂತೆ ಪಾಂಡವರ ಕಷ್ಟಗಳನ್ನು ನೋಡುತ್ತಾನೆ. ಭೀಮನ ಭೋಜನವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸುವ ಕುಮಾರವ್ಯಾಸ ಉಳಿದ ಪಾತ್ರಗಳು ಹೇಗೆ ವರ್ತಿಸುವುದನ್ನೂ ವಿವರಿಸುತ್ತಾನೆ. ಆದರೆ ಕುಂತಿಯು ಭೀಮನು ರಕ್ಕಸನನ್ನು ಕೊಲ್ಲಲು ಹೋಗುವ ಬಗ್ಗೆ ಆತಂಕ ವ್ಯಕ್ತಪಡಿಸದಿದ್ದರೂ ಭೀಮನು ಬಕಾಸುರರನ್ನು ಹುಲ್ಲಿನಿಂದಲೇ ಕೊಲ್ಲಬಲ್ಲೆನೆಂದು ಸಮಾಧಾನಿಸುವುದು ಕುಮಾರವ್ಯಾಸ ಕಟ್ಟುವ ಬಗೆಯನ್ನು ನೀವೇ ಕೇಳಿ ಆನಂದಿಸಬೇಕು.

ಗದುಗಿನ ಭಾರತ ೨.೦

“ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’’ ಎಂದು ಕುವೆಂಪು ಕುಮಾರವ್ಯಾಸ ಕಾವ್ಯ ಶಕ್ತಿಯನ್ನು ಹೊಗಳಿಸಿದ್ದಾರೆ. ಗದುಗಿನ ಭಾರತ, ಕನ್ನಡ ಭಾರತ ಎಂದು ಕರೆಸಿಕೊಳ್ಳುವ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕನ್ನಡದ ಜನಪದವಾಗಿ ಹಾಸುಹೊಕ್ಕಾಗಿರುವ ಕೃತಿ. ಗಮಕಗಳ ಮೂಲಕ ಚಿರಪರಿಚಿತವಾಗಿರುವ ಈ ಕನ್ನಡ ಭಾರತದ ಭಿನ್ನ ಓದನ್ನು ಹೊಸತಲೆಮಾರಿಗೆ ಹನೂರರು ತಲುಪಿಸಲಿದ್ದಾರೆ.

ಕೃಷ್ಣಮೂರ್ತಿ ಹನೂರು

ಕನ್ನಡದ ಪ್ರಮುಖ ಜಾನಪದ ತಜ್ಞ. ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸುಮಾರು ೧೩ ವರ್ಷಗಳ ಕಾಲ ಹಳೆಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ಜನಪದ ಅಧ್ಯಯನಕ್ಕೊಂದು ಶಿಸ್ತಿನ ಚೌಕಟ್ಟು ತಂದವರು.

ಹಿಂದಿನ ಕಂತುಗಳು

ಕಂತು ೧೨

ಕಂತು 11

ಕಂತು 10

ಕಂತು 9

ಕಂತು 8

ಕಂತು 7

ಕಂತು 6

ಕಂತು ೫

ಕಂತು 4

ಕಂತು 3

ಕಂತು 2

ಕಂತು ೧

ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-14
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-14
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-7
Editor’s Pick More