ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-14

ಪಂಪನಿಂದ ಮೊದಲುಗೊಂಡು, ಕಾವ್ಯಕಥನ ಎಂದರೆ ಶ್ರವಣಾಮೃತ ಎಂದೇ ಹೇಳಿದ್ದಾರೆ. ಪುರಾಣ ಮಾದರಿ, ಕಲ್ಪನೆ ಅಂತಾದರೂ ಕಥನಾಂತ್ಯದಲ್ಲಿ ಬದುಕಿನ ಬಹುದೊಡ್ಡ ಸತ್ಯ ಹೇಳುತ್ತವೆ ಎಂಬ ಕಾರಣದಿಂದಾಗಿ ಕಾವ್ಯ ಕಥನಗಳು ಇಂದಿಗೂ ಉಳಿದಿವೆ. ಓದಲ್ಪಡುತ್ತಿವೆ, ಕೇಳಲ್ಪಡುತ್ತಿವೆ

ಈ ಕಂತಿನಲ್ಲಿ

ಏಕಚಕ್ರದಲ್ಲಿದ್ದ ಪಾಂಡವರು ವಿಪ್ರರಲ್ಲ ಎಂಬ ಅನುಮಾನಕ್ಕೆ ಅವಕಾಶ ಮಾಡಿಕೊಡುತ್ತದೆ. ಬಕಾಸುರನ ವಧೆಯಿಂದ ಹುಟ್ಟಿದ ಈ ಅನುಮಾನ ಊರ ಚರ್ಚೆಗೆ ಕಾರಣವಾಗುತ್ತದೆ. ಆಗಲೇ ದ್ರೌಪದಿ ಸ್ವಯಂವರದ ವಿಷಯ ತಿಳಿದು ಬರುತ್ತದೆ. ದಶ ದಿಕ್ಕುಗಳ ರಾಜರಿಗೆ ಪತ್ರ ಬರೆದ ಆಹ್ವಾನಿಸಿದ ದ್ರುಪದ ರಾಜನಿಗೆ ಪಾಂಡವರ ನಿರೀಕ್ಷೆ. ಶಕ್ತಿ-ಯುಕ್ತಿ ಇದ್ದರೆ ನನ್ನ ವರಿಸು ಇಲ್ಲವಾದರೆ, ಇಲ್ಲವೆನ್ನುವ ಸ್ವಯಂವರ ಕಲ್ಪನೆಯೇ ಸ್ತ್ರೀಸ್ವಾತಂತ್ರ್ಯವನ್ನು ಎತ್ತಿಹಿಡಿಯುತ್ತದೆ. ಇದು ಮಹಾಭಾರತದ ಆದಿ ಪರ್ವದ ಅದ್ಭುತ ಪ್ರಸಂಗ. ಯಾತ್ರಾರ್ಥಿಯ ಮೂಲಕ ಈ ಪ್ರಸಂಗ ತಿಳಿದು, ತಾವು ಭಿಕ್ಷಾರ್ಥಿಗಳು ಎಂದು ಸ್ವಯಂ ವರಕ್ಕೆ ಹೋಗುವುದನ್ನು ನಿರಾಕರಿಸಿದರೂ, ಒಳಗೊಳಗೆ ಅಲ್ಲಿಗೆ ಹೋಗಲು ಬಯಸುತ್ತಾರೆ.

ಗದುಗಿನ ಭಾರತ ೨.೦

“ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’’ ಎಂದು ಕುವೆಂಪು ಕುಮಾರವ್ಯಾಸ ಕಾವ್ಯ ಶಕ್ತಿಯನ್ನು ಹೊಗಳಿಸಿದ್ದಾರೆ. ಗದುಗಿನ ಭಾರತ, ಕನ್ನಡ ಭಾರತ ಎಂದು ಕರೆಸಿಕೊಳ್ಳುವ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕನ್ನಡದ ಜನಪದವಾಗಿ ಹಾಸುಹೊಕ್ಕಾಗಿರುವ ಕೃತಿ. ಗಮಕಗಳ ಮೂಲಕ ಚಿರಪರಿಚಿತವಾಗಿರುವ ಈ ಕನ್ನಡ ಭಾರತದ ಭಿನ್ನ ಓದನ್ನು ಹೊಸತಲೆಮಾರಿಗೆ ಹನೂರರು ತಲುಪಿಸಲಿದ್ದಾರೆ.

ಕೃಷ್ಣಮೂರ್ತಿ ಹನೂರು

ಕನ್ನಡದ ಪ್ರಮುಖ ಜಾನಪದ ತಜ್ಞ. ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸುಮಾರು ೧೩ ವರ್ಷಗಳ ಕಾಲ ಹಳೆಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ಜನಪದ ಅಧ್ಯಯನಕ್ಕೊಂದು ಶಿಸ್ತಿನ ಚೌಕಟ್ಟು ತಂದವರು.

ಹಿಂದಿನ ಕಂತುಗಳು

ಕಂತು ೧೩

ಕಂತು ೧೨

ಕಂತು 11

ಕಂತು 10

ಕಂತು 9

ಕಂತು 8

ಕಂತು 7

ಕಂತು 6

ಕಂತು ೫

ಕಂತು 4

ಕಂತು 3

ಕಂತು 2

ಕಂತು ೧

ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ| ಕಂತು 9
ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು ೧
Editor’s Pick More