ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-8

ನಾವು ನಿತ್ಯ ಬಳಸುವ ಬೈಗುಳಗಳಿಗೆ ಇರುವ ಸಾಂಸ್ಕೃತಿಕ ಚರಿತ್ರೆ ಮತ್ತು ಅವುಗಳಿಗೆ ಇರುವ ಮನೋವೈಜ್ಞಾನಿಕ ಸಂಬಂಧವನ್ನು ಈ ಕಂತಿನಲ್ಲಿ ಚರ್ಚಿಸಲಾಗಿದೆ

ಈ ಕಂತಿನಲ್ಲಿ

ಮನೋ ಆರೋಗ್ಯ ಮತ್ತು ಬೈಗುಳ ಪರಸ್ಪರ ಹೇಗೆ ಸಂಬಂಧ ಹೊಂದಿರುತ್ತವೆ? ಮಿದುಳಿನ ಯಾವ ಭಾಗ, ಹೇಗೆ ಕೆಲಸ ಮಾಡುತ್ತದೆ ಮತ್ತು ಅದು ಹೇಗೆ ಬೈಗುಳಿಗೆ ಕಾರಣವಾಗುತ್ತದೆ ಎಂಬುದನ್ನು ನರತಜ್ಞರು, ಭಾಷಾ ತಜ್ಞರು ಮತ್ತು ಮನೋ ವಿಜ್ಞಾನಿಗಳು ಅರಿಯುವ ಪ್ರಯತ್ನ ಮಾಡಿದ್ದಾರೆ. ಮಾನಸಿಕ ರೋಗಿಗಳೂ ಬೈಗುಳಗಳನ್ನು ಬಳಸುವುದಕ್ಕೆ ಕಾರಣವೇನು? ಒಂದು ವಾಕ್ಯವನ್ನು ಸ್ಪಷ್ಟವಾಗಿ ಕಟ್ಟಲಾಗದಿದ್ದರೂ ಈ ಬೈಗುಳಗಳು ಮನಸ್ಸಲ್ಲಿ ಹೇಗೆ ಉಳದಿರುತ್ತವೆ? ತರ್ಕ, ಪದಗಳನ್ನು ಜೋಡಿಸಿಕೊಳ್ಳುವ ಶಕ್ತಿ, ಸಾಮಾನ್ಯ ಹಾಗೂ ಮನೋರೋಗಕ್ಕೆ ತುತ್ತಾದ ವ್ಯಕ್ತಿಯ ನಡುವೆ ಬೈಗುಳ ಹೇಗೆ ಕ್ರಿಯಾಶೀಲವಾಗುತ್ತದೆ ಎಂಬುದನ್ನು ವಿವರಿಸುತ್ತದೆ.

ಬೈಗುಳ ಅಧ್ಯಯನ

ಬೈಗುಳ ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಮನರಂಜನೀಯವು, ಆಕ್ರೋಶವನ್ನು ಹೊರಹಾಕುವ ಮಾಧ್ಯಮವೆಂದು ಪರಿಗಣಿಸಲಾಗಿರುವ ಬೈಗುಳಗಳಿಗೆ ಇರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮವನ್ನು ಈ ಪಾಡ್ಕಾಸ್ಟ್ ಬಿಚ್ಚಿಡಲಿದೆ.

ಸಿ ಪಿ ನಾಗರಾಜ

ರಾಮನಗರ ಜಿಲ್ಲೆಯವರಾದ ಇವರು, ಮಂಡ್ಯದ ಭಾರತಿ ಕಾಲೇಜು, ಬೆಂಗಳೂರು ಮಹಾರಾಣಿ ಅಮ್ಮಣ್ಣಿ ಕಾಲೇಜು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಟಕ, ಕನ್ನಡ ಭಾಷೆಯ ಅಧ್ಯಯನದಲ್ಲಿ ಸಕ್ರಿಯರಾಗಿದ್ದಾರೆ. ಬೈಗುಳ ವಿಷಯವೇ ಇವರ ಪಿಎಚ್‌ಡಿ ಮಹಾಪ್ರಬಂಧ.

ಹಿಂದಿನ ಕಂತುಗಳು

ಕಂತು ೭

ಕಂತು ೬

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More