ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-15

ವಿಶ್ವರೂಪ ದರ್ಶನ ಭಗವಾನನ ಅಗಾಧ ರೂಪವನ್ನು ವಿವರಿಸುತ್ತದೆ. ಆದರೆ ಈ ರೂಪವನ್ನು ಕಂಡು ವಿಸ್ಮಿತರಾಗಬೇಕಾದವರು ಬೆಚ್ಚಿ ಬೀಳುವಂತಾಗಿದ್ದೇಕೆ? ಅರ್ಜುನನಿಗೆ ಆದ ಅನುಭವ ಎಂಥದ್ದು? ವಿಶ್ವರೂಪದ ದರ್ಶನದ ಮೂಲಕ ಭಗವಾನ್‌ ಏನನ್ನು ಹೇಳಲು ಪ್ರಯತ್ನಿಸುತ್ತಾನೆ?

ಈ ಕಂತಿನಲ್ಲಿ

ಗೀತೆಯ ವ್ಯಾಪ್ತಿಯನ್ನು ವಿಸ್ತರಿಸುವುದಕ್ಕೆ ಸಾಮಾಜಿಕ ಮತ್ತು ಸಾಮುದಾಯಿಕ ನೆಲೆಯ ನೀತಿಶಾಸ್ತ್ರ ನೆರವಾಗುತ್ತದೆ. ಅದನ್ನು ಪರಿಗಣಿಸುವುದು ಸ್ವಾಗತಾರ್ಹವಾದುದು ಕೂಡ. ಈ ಭಾಗದಲ್ಲಿ ಮನಸ್ಸಿನ ನಿಯಂತ್ರಣದ ಕುರಿತು ಚರ್ಚಿಸಲಾಗುತ್ತದೆ. ಮನಸ್ಸನ್ನು ಹಿಂಸೆಯಿಂದ ನಿಗ್ರಹಿಸಲು ಸಾಧ್ಯವಿಲ್ಲ. ಮಗುವಿನಂತೆ ಸಂತೈಸುತ್ತಾ, ನಿಮಗೆ ಬೇಕಾದಂತೆ ಬೆಳೆಸುತ್ತೀರೋ ಅದೇ ರೀತಿಯ ಪ್ರಯತ್ನವನ್ನು ಮಾಡಬೇಕಾಗುತ್ತದೆ. ಭಕ್ತಿ, ಕರ್ಮ ಮಾರ್ಗಗಳು ಅಂಥವೇ ಪ್ರಯತ್ನಗಳು. ಭಕ್ತಿ ಕಷ್ಟ ಎನ್ನುವವರು ಕರ್ಮ ಮಾರ್ಗವನ್ನು ಅನುಸರಿಸಲಿ ಎನ್ನುತ್ತಾನೆ ಭಗವಾನ್‌. ಭಗವದ್ಗೀತೆಯ ಬಗ್ಗೆ ಅತಿಶಯದಿಂದ ಮಾತಾಡುವ ಎಲ್ಲರೂ , ಯಾರನ್ನೂ ದ್ವೇಷಸದೇ ಇರುವುದು, ಸ್ನೇಹ ಬೆಳೆಸುವುದು, ಕಾರುಣ್ಯಮೂರ್ತಿಯಾಗಿರುವುದು, ಅಹಂಕಾರಿ ಇಲ್ಲದಿರುವುದು, ಕ್ಷಮಾಗುಣ ಹೊಂದುವುದು ಎಂಬಗೀತೆಯ ಗುಣಗಳನ್ನು ಅಂತರ್ಗತ ಮಾಡಿಕೊಂಡರೆ ಎಷ್ಟು ಒಳಿತಗಾಗುತ್ತದೆ ಎಂಬುದನ್ನು ವಿವರಿಸುತ್ತದೆ.

ವಿಚಾರವಂತರಿಗೆ ಭಗವದ್ಗೀತೆ

ಭಾರತಿಯರೆಲ್ಲರೂ ಗೌರವಿಸುವ ಕೃತಿ ಭಗವದ್ಗೀತೆ. ಶತಮಾನಗಳಿಂದ ಜೀವನಾದರ್ಶವನ್ನು ಬೋಧಿಸುತ್ತಾ ಬಂದಿರುವ ಗೀತೆಯ ಶ್ಲೋಕಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಓದಿದ್ದು,ಕೇಳಿದ್ದೇ ಹೆಚ್ಚು. ಜಿಆರ್ “ಜಾನುಲಿ’ಯಲ್ಲಿ (ಪಾಡ್’ಕಾಸ್ಟ್) ಭಗವದ್ಗೀತೆಯನ್ನು ಸಮಕಾಲೀನಗೊಳಿಸುತ್ತಾ, ವಿಚಾರವಂತರಿಗೆ ತಲುಪಿಸಲಿದ್ದಾರೆ.

ಜಿ ರಾಮಕೃಷ್ಣ

ಕನ್ನಡದ ಪ್ರಖರ ವಿಚಾರವಾದಿ, ಚಿಂತಕ, ಸಾಹಿತಿ. ವೇಲ್ಸ್ ವಿವಿ ಯಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ. ಉಸ್ಮಾನಿಯಾ ವಿವಿ, ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಹಿಂದಿನ ಕಂತುಗಳು

ಕಂತು 14ಕಂತು 14

ಕಂತು 13

ಕಂತು ೧೨

ಕಂತು ೧೧

ಕಂತು 10

ಕಂತು ೯ಕಂತು ೯

ಕಂತು ೮

ಕಂತು ೭

ಕಂತು ೬ಕಂತು ೬

ಕಂತು 5

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-15
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-8
ಜಾನುಲಿ | ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರಿಂದ ಶ್ರೀರಾಮಾಯಣ ದರ್ಶನಂ ಹೊಸ ಓದು | ಕಂತು -6
Editor’s Pick More