ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-16

ಪಂಪನಿಂದ ಮೊದಲುಗೊಂಡು, ಕಾವ್ಯಕಥನ ಎಂದರೆ ಶ್ರವಣಾಮೃತ ಎಂದೇ ಹೇಳಿದ್ದಾರೆ. ಪುರಾಣ ಮಾದರಿ, ಕಲ್ಪನೆ ಅಂತಾದರೂ ಕಥನಾಂತ್ಯದಲ್ಲಿ ಬದುಕಿನ ಬಹುದೊಡ್ಡ ಸತ್ಯ ಹೇಳುತ್ತವೆ ಎಂಬ ಕಾರಣದಿಂದಾಗಿ ಕಾವ್ಯ ಕಥನಗಳು ಇಂದಿಗೂ ಉಳಿದಿವೆ. ಓದಲ್ಪಡುತ್ತಿವೆ, ಕೇಳಲ್ಪಡುತ್ತಿವೆ

ಈ ಕಂತಿನಲ್ಲಿ

ದ್ರೌಪದಿ ಸ್ವಯಂವರದಲ್ಲಿದ ತಮ್ಮ ಶತ್ರುತ್ವ ಬಿಟ್ಟುಕೊಟ್ಟು ಪಾಂಚಾಲ ದೇಶದಲ್ಲಿ ಅನೇಕ ರಾಜರು ಬಿಡಾರ ಹೂಡುತ್ತಾರೆ. ರಾಜಕೀಯ ಶತ್ರುತ್ವವನ್ನು ಕೈಬಿಟ್ಟರೂ, ದ್ರೌಪದಿಯ ಕಾರಣಕ್ಕೆ ಶತ್ರುತ್ವವೊಂದು ಎಲ್ಲರ ನಡುವೆ ತಲೆ ಎತ್ತುತ್ತದೆ. ಅವಳ ಸೌಂದರ್ಯ ಸಿರಿಯಿಂದ ಮಾರುಹೋದ ರಾಜರು ತಾನೇ ಹೊಂದಬೇಕೆಂದು ಹಂಬಲಿಸುತ್ತಾರೆ. ಆದರೆ ಮತ್ಸ್ಯಯಂತ್ರ ಬೇಧಿಸಲಾಗದೆ ಸೋಲುತ್ತಾರೆ. ಕುಮಾರವ್ಯಾಸನು ಈ ಸಂದರ್ಭವನ್ನು ಕಟ್ಟಿಕೊಡುವ ಬಗೆಯೇ ಅದ್ವಿತೀಯ. ಕೃಷ್ಣ, ಅರ್ಜುನ ಮತ್ತು ದ್ರೌಪದಿಯ ನಡುವಿನ ಮನೋಲೋಕವನ್ನು ಕುಮಾರವ್ಯಾಸ ಅದ್ಭುತವಾಗಿ ವಿವರಿಸುತ್ತಾರೆ.

ಗದುಗಿನ ಭಾರತ ೨.೦

“ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’’ ಎಂದು ಕುವೆಂಪು ಕುಮಾರವ್ಯಾಸ ಕಾವ್ಯ ಶಕ್ತಿಯನ್ನು ಹೊಗಳಿಸಿದ್ದಾರೆ. ಗದುಗಿನ ಭಾರತ, ಕನ್ನಡ ಭಾರತ ಎಂದು ಕರೆಸಿಕೊಳ್ಳುವ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕನ್ನಡದ ಜನಪದವಾಗಿ ಹಾಸುಹೊಕ್ಕಾಗಿರುವ ಕೃತಿ. ಗಮಕಗಳ ಮೂಲಕ ಚಿರಪರಿಚಿತವಾಗಿರುವ ಈ ಕನ್ನಡ ಭಾರತದ ಭಿನ್ನ ಓದನ್ನು ಹೊಸತಲೆಮಾರಿಗೆ ಹನೂರರು ತಲುಪಿಸಲಿದ್ದಾರೆ.

ಕೃಷ್ಣಮೂರ್ತಿ ಹನೂರು

ಕನ್ನಡದ ಪ್ರಮುಖ ಜಾನಪದ ತಜ್ಞ. ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸುಮಾರು ೧೩ ವರ್ಷಗಳ ಕಾಲ ಹಳೆಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ಜನಪದ ಅಧ್ಯಯನಕ್ಕೊಂದು ಶಿಸ್ತಿನ ಚೌಕಟ್ಟು ತಂದವರು.

ಹಿಂದಿನ ಕಂತುಗಳು

ಕಂತು ೧೫

ಕಂತು ೧೪

ಕಂತು ೧೩

ಕಂತು ೧೨

ಕಂತು 11

ಕಂತು 10

ಕಂತು 9

ಕಂತು 8

ಕಂತು 7

ಕಂತು 6

ಕಂತು ೫

ಕಂತು 4

ಕಂತು 3

ಕಂತು 2

ಕಂತು ೧

ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-15
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ : ಕಂತು-8
ಜಾನುಲಿ | ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರಿಂದ ಶ್ರೀರಾಮಾಯಣ ದರ್ಶನಂ ಹೊಸ ಓದು | ಕಂತು -6
Editor’s Pick More