ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ: ಕಂತು-16

ವಿಶ್ವರೂಪ ದರ್ಶನ ಭಗವಾನನ ಅಗಾಧ ರೂಪವನ್ನು ವಿವರಿಸುತ್ತದೆ. ಆದರೆ ಈ ರೂಪವನ್ನು ಕಂಡು ವಿಸ್ಮಿತರಾಗಬೇಕಾದವರು ಬೆಚ್ಚಿ ಬೀಳುವಂತಾಗಿದ್ದೇಕೆ? ಅರ್ಜುನನಿಗೆ ಆದ ಅನುಭವ ಎಂಥದ್ದು? ವಿಶ್ವರೂಪದ ದರ್ಶನದ ಮೂಲಕ ಭಗವಾನ್‌ ಏನನ್ನು ಹೇಳಲು ಪ್ರಯತ್ನಿಸುತ್ತಾನೆ?

ಈ ಕಂತಿನಲ್ಲಿ

ಗೀತೆಯ ಮೇಲಿನ ವ್ಯಾಖ್ಯಾನಗಳನ್ನು ನೋಡಿದರೆ, ಗೀತೆಯ ಪದ್ಯಗಳನ್ನು ಪಕ್ಕಕ್ಕಿಟ್ಟು, ತಮ್ಮದೇ ಆದ ತತ್ವವನ್ನು ಭಾಷ್ಯಕಾರರು ಮಾಡುತ್ತಾ ಬಂದಿದ್ದಾರೆ. ಅವರ ವೇದಾಂತದ ಪ್ರಕ್ರಿಯೆಯ ಭಾವನೆಗಳನ್ನು ಗೀತೆಗೆ ಆರೋಪಿಸುವ, ವಿಸ್ತರಿಸುವ ವಿಧಾನವನ್ನು ಕಂಡಿದ್ದೇವೆ. ಗೀತೆಯಲ್ಲಿ ನಿಗೂಢವಾದದ್ದು ಏನೋ ಇದೆ, ಅದನ್ನು ಸುಲಭವಾಗಿ ತಿಳಿಯಲು ಸಾಧ್ಯವಿಲ್ಲ ಎಂದು ಪ್ರತಿಪಾದಿಸಿ, ಗೀತೆಯನ್ನು ಆದರಿಸುವಂತೆ ಮಾಡಿವೆ. ಆದರೆ ಭಗವದ್ಗೀತೆಯೂ ಒಂದು ಅಧ್ಯಯನ ಯೋಗ್ಯ ಗ್ರಂಥ. ಗೀತೆಯ ವಿಧಾನ ಮತ್ತು ಉದ್ದೇಶವನ್ನು ತಿಳಿಯುವುದು ಮುಖ್ಯ. ಭಾವೋದ್ವೇಗಕ್ಕೆ ಗುರಿಯಾಗಬಾರದು ಎಂಬುದನ್ನು ಇಲ್ಲಿಯವರೆಗೆ ಕಂಡಿದ್ದೇವೆ. ತರ್ಕವನ್ನು ಹಿಂದೆ ಸರಿಸಿ, ಭಾವವನ್ನು ಮುನ್ನೆಲೆಗೆ ತರುವುದು ಗೀತೆಯ ಪದ್ಧತಿ. ಗುಣತ್ರಯ ವಿಭಾಗ ಯೋಗಗಳು ಕುರಿತು ಈ ಕಂತಿನಲ್ಲಿ ಚರ್ಚಿಸಲಾಗಿದೆ.

ವಿಚಾರವಂತರಿಗೆ ಭಗವದ್ಗೀತೆ

ಭಾರತಿಯರೆಲ್ಲರೂ ಗೌರವಿಸುವ ಕೃತಿ ಭಗವದ್ಗೀತೆ. ಶತಮಾನಗಳಿಂದ ಜೀವನಾದರ್ಶವನ್ನು ಬೋಧಿಸುತ್ತಾ ಬಂದಿರುವ ಗೀತೆಯ ಶ್ಲೋಕಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಓದಿದ್ದು,ಕೇಳಿದ್ದೇ ಹೆಚ್ಚು. ಜಿಆರ್ “ಜಾನುಲಿ’ಯಲ್ಲಿ (ಪಾಡ್’ಕಾಸ್ಟ್) ಭಗವದ್ಗೀತೆಯನ್ನು ಸಮಕಾಲೀನಗೊಳಿಸುತ್ತಾ, ವಿಚಾರವಂತರಿಗೆ ತಲುಪಿಸಲಿದ್ದಾರೆ.

ಜಿ ರಾಮಕೃಷ್ಣ

ಕನ್ನಡದ ಪ್ರಖರ ವಿಚಾರವಾದಿ, ಚಿಂತಕ, ಸಾಹಿತಿ. ವೇಲ್ಸ್ ವಿವಿ ಯಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ. ಉಸ್ಮಾನಿಯಾ ವಿವಿ, ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಕಂತಿನಲ್ಲಿ

ಕಂತು 15

ಕಂತು 14

ಕಂತು 13

ಕಂತು ೧೨

ಕಂತು ೧೧

ಕಂತು 10

ಕಂತು ೯

ಕಂತು ೮

ಕಂತು ೭

ಕಂತು ೬

ಕಂತು 5

ಕಂತು ೪

ಕಂತು ೩

ಕಂತು 2

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More