ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು ೧

ನಮ್ಮದು ಗಣರಾಜ್ಯವಾಗಿದ್ದು, ಪ್ರಜೆಗಳೇ ಇಲ್ಲಿ ಪ್ರಭುಗಳು ಎಂದು ಹೇಳುವ, ಪ್ರತಿಯೊಬ್ಬ ನಾಗರಿಕನಿಗೆ ನಾಲ್ಕು ಮಹತ್ವದ ಹಕ್ಕುಗಳನ್ನು ನೀಡುವ ಸಂವಿಧಾನದ ಕುರಿತು ಮಹತ್ವದ ತಿಳಿವು ಮತ್ತು ಒಳನೋಟಗಳನ್ನು ನೀಡುವ, ದೇಶದ ಸಂವಿಧಾನದೊಂದಿಗೆ ಹೊಸ ಅನುಸಂಧಾನ ನಡೆಸುವ ಜಾನುಲಿ ಸರಣಿ

ಈ ಕಂತಿನಲ್ಲಿ

ಭಾರತ ಸಂವಿಧಾನ ಹೇಗೆ ಸಿದ್ಧವಾಯಿತು? ಅದರ ಮೂಲ ಆಶಯಗಳೇನು? ಪ್ರತಿಯೊಬ್ಬರ ಹಕ್ಕುಗಳನ್ನು ಎತ್ತಿಹಿಡಿಯುವ ಸಂವಿಧಾನದ ಸಾರ್ವಭೌಮತ್ವ ನಮಗೇನು ಹೇಳುತ್ತದೆ? ದೇಶದ ಪ್ರತಿಯೊಬ್ಬ ಪ್ರಜೆಯೂ ಸಂವಿಧಾನವನ್ನು ಯಾಕೆ ಅರ್ಥ ಮಾಡಿಕೊಳ್ಳಬೇಕು ಮತ್ತು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ಈ ಕಂತು ವಿವರಿಸುತ್ತದೆ. ಸಂವಿಧಾನದ ಪೀಠಿಕೆಯಲ್ಲಿ ವಿವರಿಸಲಾಗಿರುವ ಅಂಶಗಳು ಸಮಾನತೆ, ವ್ಯಕ್ತಿ ಗೌರವ, ದೇಶದ ಏಕತೆ ಮತ್ತು ಸಮಗ್ರತೆ ಕುರಿತು ತಿಳಿಸಿಕೊಡುತ್ತವೆ.

ನಮ್ಮದೇ ಸಂವಿಧಾನ

ಜನವರಿ ೨೬, ೧೯೫೦ರಲ್ಲಿ ಜಾರಿಗೆ ಬಂದ ಸಂವಿಧಾನ ಈ ದೇಶದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹೇಗಿರಬೇಕು? ದೇಶದ ಪ್ರಜೆಯ ಹಕ್ಕುಗಳೇನು? ಎಂಬುದನ್ನು ತಿಳಿಸುತ್ತದೆ. ಯಾವುದೇ ಬಗೆಯ ತಾರತಮ್ಯಕ್ಕೂ ಅವಕಾಶವಿಲ್ಲದ, ಮಹತ್ವದ ಆಶಯಗಳೊಂದಿಗೆ ರಚನೆಯಾದ ಸಂವಿಧಾನ ಕಳೆದ ಕೆಲ ಕಾಲದಿಂದ ಸುದ್ದಿಯಲ್ಲಿದೆ. ಸಂವಿಧಾನ ಬದಲಾಗಬೇಕೆಂದು ಕೆಲವರು ವಾದಿಸುತ್ತಿದ್ದಾರೆ. ಸಂವಿಧಾನ ಹೇಳುವ ಮೂಲಭೂತ ಹಕ್ಕುಗಳೇ ಸಂಕಷ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವ ಪ್ರಯತ್ನವೇ ಈ ಪಾಡ್‌ಕಾಸ್ಟ್‌.

ಹರೀಶ್‌ ನರಸಪ್ಪ

ಸುಪ್ರೀಂ ಕೋರ್ಟ್‌ ನ್ಯಾಯವಾದಿ. ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾದಲ್ಲಿ ಕಾನೂನು ವ್ಯಾಸಂಗ ಮಾಡಿ ಪಿಎಚ್‌ಡಿ ಪಡೆದಿರುವ ಇವರು, ಸಾರ್ವಜನಿಕ ಕ್ಷೇತ್ರದಲ್ಲಿ ಸಾಂವಿಧಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ನಿಂದ ಇವರ 'ರೂಲ್‌ ಆಫ್‌ ಲಾ ಇನ್‌ ಇಂಡಿಯಾ' ಕೃತಿ ಪ್ರಕಟವಾಗಿದ್ದು, ಇದು ಭಾರತದ ಕಾನೂನು ಮತ್ತು ರಾಜಕೀಯ ವ್ಯವಸ್ಥೆಯ ಕುರಿತು ಅತ್ಯುತ್ತಮವಾದ ಒಳನೋಟಗಳನ್ನು ನೀಡುತ್ತದೆ.

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More