ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ| ಕಂತು 9

ನಾವು ನಿತ್ಯ ಬಳಸುವ ಬೈಗುಳಗಳಿಗೆ ಇರುವ ಸಾಂಸ್ಕೃತಿಕ ಚರಿತ್ರೆ ಮತ್ತು ಅವುಗಳಿಗೆ ಇರುವ ಮನೋವೈಜ್ಞಾನಿಕ ಸಂಬಂಧವನ್ನು ಈ ಜಾನುಲಿ ಸರಣಿ ಚರ್ಚಿಸುತ್ತದೆ

ಈ ಕಂತಿನಲ್ಲಿ

ಮಾತುಬಲ್ಲ ಮನುಷ್ಯ ಬಯ್ಯುವುದಕ್ಕೆ ಕಾರಣವೇನು? ಮನಸ್ಸಿನ ಭಾವನೆಗಳು ಮತ್ತು ಒಳಮಿಡಿತಗಳಿಗೂ ಬೈಗುಳಕ್ಕೂ ಏನು ಸಂಬಂಧ ಎಂಬುದನ್ನು ಮನೋವಿಜ್ಞಾನ ವಿವರಿಸುತ್ತದೆ. ಭಾಷಾ ವಿಜ್ಞಾನಿಗಳು ಮತ್ತು ಮನೋವಿಜ್ಞಾನಿಗಳು ಈ ಕುರಿತು ಸಂಶೋಧನೆ ನಡೆಸಿ, ಹಲವು ಮಹತ್ವದ ಸಂಗತಿಗಳನ್ನು ಕಂಡುಕೊಂಡಿದ್ದಾರೆ. ನರಮಂಡಲ, ಬೈಗುಳಗಳನ್ನು ಹೆಕ್ಕುವ ಅಥವಾ ಕಟ್ಟಿಕೊಳ್ಳುವ ಬಗೆ ಮತ್ತು ಭಾವನೆಗಳಿಗೆ ಸ್ಪಂದಿಸುವ ಬಗೆಯನ್ನು ಈ ಕಂತು ವಿವರಿಸುತ್ತದೆ.

ಬೈಗುಳ ಅಧ್ಯಯನ

ಬೈಗುಳ ನಮ್ಮ ದೈನಂದಿನ ಜೀವನದಲ್ಲಿ ಹಾಸು ಹೊಕ್ಕಾಗಿವೆ. ಮನರಂಜನೀಯವು, ಆಕ್ರೋಶವನ್ನು ಹೊರಹಾಕುವ ಮಾಧ್ಯಮವೆಂದು ಪರಿಗಣಿಸಲಾಗಿರುವ ಬೈಗುಳಗಳಿಗೆ ಇರುವ ಸಾಮಾಜಿಕ ಮತ್ತು ಸಾಂಸ್ಕೃತಿಕ ಆಯಾಮವನ್ನು ಈ ಪಾಡ್ಕಾಸ್ಟ್ ಬಿಚ್ಚಿಡಲಿದೆ.

ಸಿ ಪಿ ನಾಗರಾಜ

ರಾಮನಗರ ಜಿಲ್ಲೆಯವರಾದ ಇವರು, ಮಂಡ್ಯದ ಭಾರತಿ ಕಾಲೇಜು, ಬೆಂಗಳೂರು ಮಹಾರಾಣಿ ಅಮ್ಮಣ್ಣಿ ಕಾಲೇಜು ಸ್ನಾತಕೋತ್ತರ ಕೇಂದ್ರದಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ್ದಾರೆ. ನಾಟಕ, ಕನ್ನಡ ಭಾಷೆಯ ಅಧ್ಯಯನದಲ್ಲಿ ಸಕ್ರಿಯರಾಗಿದ್ದಾರೆ. ಬೈಗುಳ ವಿಷಯವೇ ಇವರ ಪಿಎಚ್‌ಡಿ ಮಹಾಪ್ರಬಂಧ.

ಹಿಂದಿನ ಕಂತುಗಳು

ಕಂತು ೮

ಕಂತು ೭

ಕಂತು ೬

ಕಂತು ೫

ಕಂತು ೪

ಕಂತು ೩

ಕಂತು ೨

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
Editor’s Pick More