ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17

ಭಗವದ್ಗೀತೆ ಭಾರತೀಯರು ಗೌರವ ಮತ್ತು ಭಕ್ತಿಗಳಿಂದ ಓದುವ ಕೃತಿ. ಕೃಷ್ಣ -ಅರ್ಜುನರ ನಡುವೆ ನಡೆಯುವ ಸಂಭಾಷಣೆ ಮೂಲಕ ಬದುಕಿನ ಹಲವು ವಿಚಾರಗಳನ್ನು ಚರ್ಚಿಸುತ್ತದೆ. ಈ ಕೃತಿಯನ್ನು ಭಕ್ತಿಯಿಂದ ಓದುವುದಕ್ಕಿಂತ, ವಿಚಾರವಂತಿಕೆ ಮೂಲಕ ನೋಡುವ ಅಗತ್ಯವನ್ನು ಈ ಜಾನುಲಿ ಸರಣಿ ಪ್ರತಿಪಾದಿಸುತ್ತದೆ

ಈ ಕಂತಿನಲ್ಲಿ

ಸತ್ಯ, ರಜಸ್ಸು, ತಮಸ್ಸು ಗುಣಗಳಿರುವರು ಹೇಗಿರುತ್ತಾರೆ? ಅದರ ಪರಿಣಾಮಗಳು ಏನಾಗಿರುತ್ತವೆ? ಯಾವ ವರ್ಣದವರಲ್ಲಿ ಯಾವ ಗುಣಗಳು ಹೆಚ್ಚಿರುತ್ತವೆ?ಶ್ರಮಜೀವಿಗಳು ಎನಿಸಿಕೊಂಡ ಮೂರು ಮತ್ತು ನಾಲ್ಕನೇ ವರ್ಣದವರಲ್ಲಿ ಅಂದರೆ ಶೂದ್ರರಲ್ಲಿ ಆಲಸ್ಯವಿದೆ ಎಂದು ಹೇಳುತ್ತದೆ ಭಗವದ್ಗೀತೆ. ಈ ವೈರುಧ್ಯವೇ ವಿಚಿತ್ರ. ಸತ್ತ ಮೇಲೆ ಏನಾಗುತ್ತದೆ ಎಂದು ಎಲ್ಲಾ ಹೇಳುವ ಗೀತೆ, ಪುರಾವೆಗಳೇ ಇಲ್ಲದ ತೀರ್ಮಾನಗಳನ್ನು ಹೇಳುತ್ತದೆ. ಮೇಲೆ ಹೇಳಿದ ಗುಣಗಳಿರುವವರು ಸತ್ತ ಮೇಲೆ ಏನಾಗುತ್ತದೆ ಎಂದು ಪ್ರತಿಪಾದಿಸುವ ಗೀತೆ ಅದಕ್ಕೆ ಪುರಾವೆಗಳಿರುವ ಬಗ್ಗೆ ಸ್ಪಷ್ಟವಾಗಿ ಹೇಳುವುದಿಲ್ಲ.

ವಿಚಾರವಂತರಿಗೆ ಭಗವದ್ಗೀತೆ

ಭಾರತಿಯರೆಲ್ಲರೂ ಗೌರವಿಸುವ ಕೃತಿ ಭಗವದ್ಗೀತೆ. ಶತಮಾನಗಳಿಂದ ಜೀವನಾದರ್ಶವನ್ನು ಬೋಧಿಸುತ್ತಾ ಬಂದಿರುವ ಗೀತೆಯ ಶ್ಲೋಕಗಳನ್ನು ಧಾರ್ಮಿಕ ಚೌಕಟ್ಟಿನಲ್ಲಿ ಓದಿದ್ದು,ಕೇಳಿದ್ದೇ ಹೆಚ್ಚು. ಜಿಆರ್ “ಜಾನುಲಿ’ಯಲ್ಲಿ (ಪಾಡ್’ಕಾಸ್ಟ್) ಭಗವದ್ಗೀತೆಯನ್ನು ಸಮಕಾಲೀನಗೊಳಿಸುತ್ತಾ, ವಿಚಾರವಂತರಿಗೆ ತಲುಪಿಸಲಿದ್ದಾರೆ.

ಜಿ ರಾಮಕೃಷ್ಣ

ಕನ್ನಡದ ಪ್ರಖರ ವಿಚಾರವಾದಿ, ಚಿಂತಕ, ಸಾಹಿತಿ. ವೇಲ್ಸ್ ವಿವಿ ಯಿಂದ ಪೋಸ್ಟ್ ಗ್ರಾಜ್ಯುಯೇಟ್ ಡಿಪ್ಲೋಮಾ. ಉಸ್ಮಾನಿಯಾ ವಿವಿ, ಮಹಾರಾಷ್ಟ್ರದ ಅಂಬೇಡ್ಕರ್ ಕಾಲೇಜು, ಬೆಂಗಳೂರಿನ ಬಸವನಗುಡಿ ನ್ಯಾಷನಲ್ ಕಾಲೇಜಿನಲ್ಲಿ ಇಂಗ್ಲಿಷ್ ಪ್ರಾಧ್ಯಾಪಕರಾಗಿ, ಹಂಪಿ ವಿವಿಯಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ಈ ಕಂತಿನಲ್ಲಿ

ಕಂತು 16

ಕಂತು 15

ಕಂತು 14

ಕಂತು 13

ಕಂತು ೧೨

ಕಂತು ೧೧

ಕಂತು 10

ಕಂತು ೯

ಕಂತು ೮

ಕಂತು ೭

ಕಂತು ೬

ಕಂತು 5

ಕಂತು ೪

ಕಂತು ೩

ಕಂತು 2

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ| ಕಂತು 9
Editor’s Pick More