ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18

ಪಂಪನಿಂದ ಮೊದಲುಗೊಂಡು, ಕಾವ್ಯಕಥನ ಎಂದರೆ ಶ್ರವಣಾಮೃತ ಎಂದೇ ಹೇಳಿದ್ದಾರೆ. ಪುರಾಣ ಮಾದರಿ, ಕಲ್ಪನೆ ಅಂತಾದರೂ ಕಥನಾಂತ್ಯದಲ್ಲಿ ಬದುಕಿನ ಬಹುದೊಡ್ಡ ಸತ್ಯ ಹೇಳುತ್ತವೆ ಎಂಬ ಕಾರಣದಿಂದಾಗಿ ಕಾವ್ಯ ಕಥನಗಳು ಇಂದಿಗೂ ಉಳಿದಿವೆ. ಓದಲ್ಪಡುತ್ತಿವೆ, ಕೇಳಲ್ಪಡುತ್ತಿವೆ

ಈ ಕಂತಿನಲ್ಲಿ

ದ್ರೌಪದಿ ಸ್ವಯಂವರದ ವೇಳೆ ಅತಿಥಿಯಾಗಿ ಉಪಸ್ಥಿತರಿರುವ ಕೃಷ್ಣ-ಬಲರಾಮರ ನಡುವೆ ನಡೆಯುವ ಸಂವಾದವನ್ನು ಕುಮಾರವ್ಯಾಸ ಕಟ್ಟಿಕೊಡುವ ಬಗೆಯೇ ಬೇರೆ. ಬಲರಾಮನಿಗೆ ಕೃಷ್ಣ, ಕುಂತಿಯ ಮಕ್ಕಳೇ ದ್ರೌಪದಿಯ ಪತಿಯರು ಎಂದು ಭವಿಷ್ಯ ನುಡಿಯುತ್ತಾನೆ. ಪಾಂಡವರು ಸತ್ತು ಹೋಗಿದ್ದಾರೆಂದು ಲೋಕದಂತೆ ತಾನೂ ತಿಳಿದಿರುವ ಬಲರಾಮನಿಗೆ ಕೃಷ್ಣ ಸತ್ಯವನ್ನು ಹೇಳುತ್ತಾನೆ. ಪಾಂಡವರು ಬದುಕಿದ್ದು, ಇಲ್ಲೇ ಕುಳಿತಿದ್ದಾರೆ ಎಂದೂ ಹೇಳುತ್ತಾನೆ. ಇನ್ನೊಂದೆಡೆ ವಿಪ್ರ ವೇಷರಲ್ಲಿ ಬಂದ ಪಾಂಡವರ ನಡುವೆಯೂ ಮಾತುಕತೆಗಳೂ ವಿಶೇಷ. ಈ ಕಂತಿನಲ್ಲಿ ಸ್ವಯಂವರದ ವೇಳೆಯ ನಡೆಯುವ ಸ್ವಾರಸ್ಯಕರ ಮಾತುಗಳನ್ನು ವಿವರಿಸುತ್ತದೆ.

ಗದುಗಿನ ಭಾರತ ೨.೦

“ಕುಮಾರವ್ಯಾಸ ಹಾಡಿದನೆಂದರೆ ಕಲಿಯುಗ ದ್ವಾಪರವಾಗುವುದು’’ ಎಂದು ಕುವೆಂಪು ಕುಮಾರವ್ಯಾಸ ಕಾವ್ಯ ಶಕ್ತಿಯನ್ನು ಹೊಗಳಿಸಿದ್ದಾರೆ. ಗದುಗಿನ ಭಾರತ, ಕನ್ನಡ ಭಾರತ ಎಂದು ಕರೆಸಿಕೊಳ್ಳುವ ಕುಮಾರವ್ಯಾಸನ ಕರ್ಣಾಟ ಭಾರತ ಕಥಾಮಂಜರಿ ಕನ್ನಡದ ಜನಪದವಾಗಿ ಹಾಸುಹೊಕ್ಕಾಗಿರುವ ಕೃತಿ. ಗಮಕಗಳ ಮೂಲಕ ಚಿರಪರಿಚಿತವಾಗಿರುವ ಈ ಕನ್ನಡ ಭಾರತದ ಭಿನ್ನ ಓದನ್ನು ಹೊಸತಲೆಮಾರಿಗೆ ಹನೂರರು ತಲುಪಿಸಲಿದ್ದಾರೆ.

ಕೃಷ್ಣಮೂರ್ತಿ ಹನೂರು

ಕನ್ನಡದ ಪ್ರಮುಖ ಜಾನಪದ ತಜ್ಞ. ಕರ್ನಾಟಕದ ವಿವಿಧ ಕಾಲೇಜುಗಳಲ್ಲಿ ಅಧ್ಯಾಪಕರಾಗಿ ಸೇವೆ. ಮೈಸೂರು ವಿವಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಸುಮಾರು ೧೩ ವರ್ಷಗಳ ಕಾಲ ಹಳೆಗನ್ನಡ ಪಠ್ಯಗಳನ್ನು ವಿದ್ಯಾರ್ಥಿಗಳಿಗೆ ಬೋಧಿಸಿದ್ದಾರೆ. ಜನಪದ ಅಧ್ಯಯನಕ್ಕೊಂದು ಶಿಸ್ತಿನ ಚೌಕಟ್ಟು ತಂದವರು.

ಹಿಂದಿನ ಕಂತುಗಳು

ಕಂತು 17

ಕಂತು 16ಕಂತು 16

ಕಂತು 15

ಕಂತು ೧೪

ಕಂತು ೧೩

ಕಂತು ೧೨

ಕಂತು 11

ಕಂತು 10

ಕಂತು 9

ಕಂತು 8

ಕಂತು 7

ಕಂತು 6

ಕಂತು ೫

ಕಂತು 4

ಕಂತು 3

ಕಂತು 2

ಕಂತು ೧

ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ| ಕಂತು 9
Editor’s Pick More