ಜಾನುಲಿ | ಹರೀಶ್‌ ಬಿ ನರಸಪ್ಪ ಅವರಿಂದ ‘ನಮ್ಮದೇ ಸಂವಿಧಾನ’ | ಕಂತು 2

ನಮ್ಮದು ಗಣರಾಜ್ಯವಾಗಿದ್ದು, ಪ್ರಜೆಗಳೇ ಇಲ್ಲಿ ಪ್ರಭುಗಳು ಎಂದು ಹೇಳುವ, ಪ್ರತಿಯೊಬ್ಬ ನಾಗರಿಕನಿಗೆ ನಾಲ್ಕು ಮಹತ್ವದ ಹಕ್ಕುಗಳನ್ನು ನೀಡುವ ಸಂವಿಧಾನದ ಕುರಿತು ಮಹತ್ವದ ತಿಳಿವು ಮತ್ತು ಒಳನೋಟಗಳನ್ನು ನೀಡುವ, ದೇಶದ ಸಂವಿಧಾನದೊಂದಿಗೆ ಹೊಸ ಅನುಸಂಧಾನ ನಡೆಸುವ ಜಾನುಲಿ ಸರಣಿ

ಈ ಕಂತಿನಲ್ಲಿ

ಸಂವಿಧಾನದ ಆಶಯಗಳು ವಿಶಾಲವಾದವು. ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ಮೌಲ್ಯಗಳನ್ನು ಎತ್ತಿಹಿಡಿಯುವ ಸದಾಶಯಗಳೊಂದಿಗೆ ರೂಪುಗೊಂಡಿದ್ದು ಸಂವಿಧಾನ. ಅದು ಬರಿ ಕಾನೂನಲ್ಲ, ಕಾನೂನು ತಜ್ಞರಿಗಾಗಿ ರಚನೆಯಾಗಿದ್ದೂ ಅಲ್ಲ.  ವಿಶ್ವಮಾನವ ಆಶಯಗಳನ್ನು ಹೊಂದಿರುವ ಕ್ರಾಂತಿಕಾರಿ ದಾಖಲೆ. ಸಂವಿಧಾನದ ಸ್ವರೂಪದ ಬಗ್ಗೆ ಅನೇಕ ತಕರಾರು ಟೀಕೆಗಳು ಬಂದಿವೆ. ಅದನ್ನು ನಕಲು ಎಂದು ಅನೇಕರು ದೂಷಿಸುವುದೂ  ಉಂಟು. ಆದರೆ ದೇಶದ ಜನರ ಹಿತಕ್ಕಾಗಿ ಉತ್ತಮವಾದದ್ದನ್ನು ಎಲ್ಲೆಡೆಯಿಂದ ತಂದು ಸಂವಿಧಾನ ರಚಿಸಲಾಗಿದೆ ಎಂಬ ಅಂಶಗಳನ್ನು ಈ ಕಂತು ವಿವರಿಸುತ್ತದೆ.

ನಮ್ಮದೇ ಸಂವಿಧಾನ

ಜನವರಿ ೨೬, ೧೯೫೦ರಲ್ಲಿ ಜಾರಿಗೆ ಬಂದ ಸಂವಿಧಾನ ಈ ದೇಶದಲ್ಲಿ ಶಾಸಕಾಂಗ, ನ್ಯಾಯಾಂಗ, ಕಾರ್ಯಾಂಗ ಹೇಗಿರಬೇಕು? ದೇಶದ ಪ್ರಜೆಯ ಹಕ್ಕುಗಳೇನು? ಎಂಬುದನ್ನು ತಿಳಿಸುತ್ತದೆ. ಯಾವುದೇ ಬಗೆಯ ತಾರತಮ್ಯಕ್ಕೂ ಅವಕಾಶವಿಲ್ಲದ, ಮಹತ್ವದ ಆಶಯಗಳೊಂದಿಗೆ ರಚನೆಯಾದ ಸಂವಿಧಾನ ಕಳೆದ ಕೆಲ ಕಾಲದಿಂದ ಸುದ್ದಿಯಲ್ಲಿದೆ. ಸಂವಿಧಾನ ಬದಲಾಗಬೇಕೆಂದು ಕೆಲವರು ವಾದಿಸುತ್ತಿದ್ದಾರೆ. ಸಂವಿಧಾನ ಹೇಳುವ ಮೂಲಭೂತ ಹಕ್ಕುಗಳೇ ಸಂಕಷ್ಟದಲ್ಲಿವೆ. ಈ ಹಿನ್ನೆಲೆಯಲ್ಲಿ, ಸಂವಿಧಾನದ ಮಹತ್ವವನ್ನು ಪ್ರತಿಯೊಬ್ಬರಿಗೂ ತಿಳಿಸುವ ಪ್ರಯತ್ನವೇ ಈ ಪಾಡ್‌ಕಾಸ್ಟ್‌.

ಹರೀಶ್‌ ನರಸಪ್ಪ

ಸುಪ್ರೀಂ ಕೋರ್ಟ್‌ ನ್ಯಾಯವಾದಿ. ಬೆಂಗಳೂರಿನ ನ್ಯಾಷನಲ್‌ ಲಾ ಸ್ಕೂಲ್‌ ಆಫ್‌ ಇಂಡಿಯಾದಲ್ಲಿ ಕಾನೂನು ವ್ಯಾಸಂಗ ಮಾಡಿ ಪಿಎಚ್‌ಡಿ ಪಡೆದಿರುವ ಇವರು, ಸಾರ್ವಜನಿಕ ಕ್ಷೇತ್ರದಲ್ಲಿ ಸಾಂವಿಧಾನಿಕ ವಿಷಯಗಳಿಗೆ ಸಂಬಂಧಿಸಿದಂತೆ ವಿವಿಧ ರೀತಿಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದಾರೆ. ಇತ್ತೀಚೆಗೆ, ಆಕ್ಸ್‌ಫರ್ಡ್‌ ಯೂನಿವರ್ಸಿಟಿ ಪ್ರೆಸ್‌ನಿಂದ ಇವರ 'ರೂಲ್‌ ಆಫ್‌ ಲಾ ಇನ್‌ ಇಂಡಿಯಾ' ಕೃತಿ ಪ್ರಕಟವಾಗಿದ್ದು, ಇದು ಭಾರತದ ಕಾನೂನು ಮತ್ತು ರಾಜಕೀಯ ವ್ಯವಸ್ಥೆಯ ಕುರಿತು ಅತ್ಯುತ್ತಮವಾದ ಒಳನೋಟಗಳನ್ನು ನೀಡುತ್ತದೆ.

ಹಿಂದಿನ ಕಂತು

ಕಂತು ೧

ದಿ ಸ್ಟೇಟ್‌ ಜಾನುಲಿಗಳನ್ನು ಐಟ್ಯೂನ್‌, ಗೂಗಲ್‌ ಪಾಡ್‌ಕಾಸ್ಟ್‌ನಲ್ಲೂ ಕೇಳಿ

ಇನ್ನು ಐಫೋನ್‌ ಹಾಗೂ ಆಂಡ್ರಾಯ್ಡ್‌ ಬಳಕೆದಾರರು, ' ದಿ ಸ್ಟೇಟ್‌'ನ ಜಾನುಲಿಗಳನ್ನು ಐಟ್ಯೂನ್ಸ್‌ ಮತ್ತು ಗೂಗಲ್‌ ಪಾಡ್‌ಕಾಸ್ಟ್‌ಗಳಲ್ಲಿ 'ದಿ ಸ್ಟೇಟ್‌' ಎಲ್ಲ ಜಾನುಲಿಗಳನ್ನು ಕೇಳಬಹುದು. ಇದಕ್ಕಾಗಿ ನೀವು ಮಾಡಬೇಕಿರುವುದಿಷ್ಟೆ, ಐಫೋನ್‌ ಬಳಸುವವರು 'ಐಟ್ಯೂನ್ಸ್‌' ಡೌನ್‌ಲೋಡ್‌ ಮಾಡಿಕೊಂಡು, ಅದರಲ್ಲಿ 'The State Kannada' ಎಂದು ಟೈಪ್‌ ಮಾಡಿ, ಸರ್ಚ್‌ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ. ಆಂಡ್ರಾಯ್ಡ್‌ ಫೋನ್‌ ಬಳಕೆದಾರರು ಪ್ಲೇ ಸ್ಟೋರ್‌ನಲ್ಲಿ ಲಭ್ಯವಿರುವ ಗೂಗಲ್‌ ಪಾಡ್‌ಕಾಸ್ಟ್‌ ಮೊಬೈಲ್‌ ಅಪ್ಲಿಕೇಷನ್‌ ಡೌನ್‌ಲೋಡ್‌ ಮಾಡಿಕೊಂಡು, ಅದರಲ್ಲಿ 'The State Kannada' ಎಂದು ಟೈಪ್‌ ಮಾಡಿ, ಸರ್ಚ್‌ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ.

ಜಾನುಲಿ | ಕೃಷ್ಣಮೂರ್ತಿ ಹನೂರರಿಂದ ಹೊಸ ತಲೆಮಾರಿಗೆ ಗದುಗಿನ ಭಾರತ 2.0: ಕಂತು-18
ಜಾನುಲಿ | ಜಿ ರಾಮಕೃಷ್ಣ ಅವರಿಂದ ವಿಚಾರವಂತರಿಗೆ ಭಗವದ್ಗೀತೆ| ಕಂತು-17
ಜಾನುಲಿ | ಸಿ ಪಿ ನಾಗರಾಜ ಅವರಿಂದ ಬೈಗುಳ ಲೋಕದ ಅನಾವರಣ| ಕಂತು 9
Editor’s Pick More