ಸಂಕಲನ | ಗುಜರಾತ್‌ ಚುನಾವಣೆ | ಎಲ್ಲ ವಿಶ್ಲೇಷಣಾ ವರದಿಗಳ ಮಾಹಿತಿ ಕೊಂಡಿ

ಗುಜರಾತ್‌ ವಿಧಾನಸಭೆ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿಜೆಪಿ ಅಧಿಕಾರದ ಗದ್ದುಗೆ ಹಿಡಿದಿದೆ. ಗುಜರಾತ್‌ ಚುನಾವಣೆಯ ಆರಂಭದಿಂದ ಹಿಡಿದು, ಪ್ರಚಾರ, ಫಲಿತಾಂಶದವರೆಗೆ, ಒಟ್ಟಾರೆ ಪರಿಣಾಮಗಳ ಬಗ್ಗೆ ‘ದಿ ಸ್ಟೇಟ್‌’ ಹಲವು ವಿಶ್ಲಷೇಣಾ ವರದಿಗಳನ್ನು ಪ್ರಕಟಿಸಿದೆ. ಅದರ ಸಂಕಲನ ಇಲ್ಲಿದೆ

ಕೇಂದ್ರ ಸರ್ಕಾರದ ಎದುರು ಸಮರ್ಥವಾಗಿ ನಿಲ್ಲಬಲ್ಲ ವ್ಯಕ್ತಿಯನ್ನು ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸುವಲ್ಲಿ ಕಾಂಗ್ರೆಸ್ ವಿಫಲವಾಯಿತು. ಒಂದು ವೇಳೆ, ಸಮರ್ಥ ಅಭ್ಯರ್ಥಿಯನ್ನು ಮುಂದಿಟ್ಟುಕೊಂಡು ಪ್ರಚಾರ ನಡೆಸಿದ್ದರೆ, ಫಲಿತಾಂಶವು ಖಂಡಿತ ಬಿಜೆಪಿಗೆ ಮರ್ಮಾಘಾತ ನೀಡುತ್ತಿತ್ತು.

ಆಡಳಿತಾರೂಢ ಮತ್ತು ವಿರೋಧ ಪಕ್ಷಗಳ ಆರೋಪ, ಪ್ರತ್ಯಾರೋಪಗಳು ಏನೇ ಇರಲಿ, ಗುಜರಾತ್ ಚುನಾವಣೆ ಫಲಿತಾಂಶವು ಮುಂಬರುವ ಕರ್ನಾಟಕ, ರಾಜಸ್ಥಾನ ಮತ್ತು ಮಧ್ಯಪ್ರದೇಶ ರಾಜ್ಯಗಳ ವಿಧಾನಸಭೆ ಚುನಾವಣೆಗಳ ಮೇಲೆ ಪ್ರಭಾವ ಬೀರುವುದು ನಿಶ್ಚಿತ ಎಂಬುದಂತೂ ಸಾಬೀತಾದಂತಾಗಿದೆ.

ಗುಜರಾತ್‌ ವಿಧಾನಸಭಾ ಚುನಾವಣಾ ಫಲಿತಾಂಶ ಹೊರಬಿದ್ದಿದೆ. ರಾಷ್ಟ್ರಮಟ್ಟದಲ್ಲಿ ಹಲವು ಆಯಾಮಗಳ ಚರ್ಚೆಗಳು ಶುರುವಾಗಿವೆ. ಆದರೆ ಇನ್ನು ಕೆಲವೇ ತಿಂಗಳಲ್ಲಿ ಚುನಾವಣೆಗೆ ಸಿದ್ಧವಾಗುತ್ತಿರುವ ರಾಜ್ಯದ ಮುಖ್ಯಮಂತ್ರಿಗಳು ಈ ಫಲಿತಾಂಶವನ್ನು ಹೇಗೆ ನೋಡಬೇಕು. ವಿಶ್ಲೇಷಣೆಗಾಗಿ ಈ ವಿಡಿಯೋ ನೋಡಿ.

ರಾಹುಲ್ ಗಾಂಧಿಗೆ ಗುಜರಾತ್ ಚುನಾವಣೆಯ ಕುರಿತ ಯಾವುದೇ ಶ್ರೇಯಸ್ಸನ್ನೂ ಕೊಡಲು ಬಿಜೆಪಿ ಸಿದ್ಧವಿಲ್ಲದೆ ಇರುವುದನ್ನು ನೋಡಿದಾಗ, ಹೊಸದಾಗಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಅವರನ್ನು ಕೇಸರಿ ಪಕ್ಷ ತನ್ನ ದೊಡ್ಡ ಆತಂಕವಾಗಿ ಗುರುತಿಸಿದೆ ಎಂಬ ಸತ್ಯದ ಅರಿವಾಗುತ್ತದೆ!

ಗುಜರಾತ್ ಚುನಾವಣಾ ಫಲಿತಾಂಶವು ಕಾಂಗ್ರೆಸ್‌ನ ಅಧ್ಯಕ್ಷ ರಾಹುಲ್ ಗಾಂಧಿಯವರಿಗೆ ಜವಾಹರಲಾಲ್ ನೆಹರು ಅವರ ನೆಚ್ಚಿನ ಸಾಲುಗಳನ್ನು ನೆನಪಿಸಿರಬಹುದು; ರಾಬರ್ಟ್‌ ಫ್ರಾಸ್ಟ್‌ನ, ‘ಅಂಡ್ ಮೈಲ್ಸ್‌ ಟು ಗೋ ಬಿಫೋರ್ ಐ ಸ್ಲೀಪ್‌’ ಸಾಲು ಅವರ ಮನದಲ್ಲೀಗ ರಿಂಗಣಿಸುತ್ತಿರಬಹುದು.

ಗುಜರಾತ್ ಚುನಾವಣಾ ಫಲಿತಾಂಶದ ಮೂಲಕ ಕಾಂಗ್ರೆಸ್ ರಾಷ್ಟ್ರ ರಾಜಕಾರಣಕ್ಕೆ ಅಚ್ಚರಿಯ ಹೊಸ ತಿರುವು ನೀಡಿದೆ ಎಂಬುದಂತೂ ಈಗ ನಿಜ. ಈವರೆಗೆ ಮೋದಿ ಮತ್ತು ಬಿಜೆಪಿಯ ಆಟವಷ್ಟೇ ಎಂದುಕೊಂಡಿದ್ದ ಮುಂದಿನ ಲೋಕಸಭಾ ಚುನಾವಣೆ, ಇನ್ನು ಹಾಗಿರುವುದಿಲ್ಲ ಎಂಬುದೇ ಆ ತಿರುವು.

ಅಪನಗದೀಕರಣ, ಸರಕು ಮತ್ತು ಸೇವಾ ತೆರಿಗೆ ಜಾರಿಯಿಂದ ತೀವ್ರ ಸಂಕಷ್ಟಕ್ಕೆ ಒಳಗಾದವರು ಸೂರತ್ ನಾಗರಿಕರು. ಇದನ್ನೇ ಮನದಲ್ಲಿಟ್ಟುಕೊಂಡು ಮೋದಿ-ಅಮಿತ್ ಶಾ ಅವರಿಗೆ ಅಲ್ಲಿನ ಜನ ಕೈಕೊಟ್ಟಿದ್ದರೆ? ಹಾಗಾಗಲಿಲ್ಲ. ಅಸಲಿಗೆ, ಹಾಗಾಗದಂತೆ ಚಾಣಾಕ್ಷತೆ ಮೆರೆದಿದ್ದು ಮೋದಿ-ಶಾ ಜೋಡಿ.

ಗುಜರಾತ್ ನಂತರ ಕರ್ನಾಟಕ ಎಂದುಕೊಂಡಿದೆ ಬಿಜೆಪಿ. ಆದರೆ ಇಬ್ಬರು ಬಲಾಢ್ಯ ನಾಯಕರು, ಅವರದ್ದೇ ಆದ ಪ್ರಭಾವಳಿಯನ್ನು ಹೊಂದಿದ ತವರು ಗುಜರಾತ್‌ನಲ್ಲೇ ಬಿಜೆಪಿ ಅಲ್ಲಾಡಿಹೋಗಿದೆ. ಅಲ್ಲಿನ ವ್ಯಕ್ತ ಸ್ಥಿತಿಗೆ ಹೋಲಿಸಿದರೆ ಕರ್ನಾಟಕದ ಕಮಲ ಪಾಳೆಯದ ಸದ್ಯದ ಸ್ಥಿತಿಗತಿ ಭಿನ್ನವೇನೂ ಅಲ್ಲ.

ಗುಜರಾತಿನಲ್ಲಿ ಸ್ವಲ್ಪವೇ ಎಚ್ಚರ ತಪ್ಪಿದ್ದರೂ ಸೋಲು ಎದುರಾಗುತ್ತಿತ್ತು ಎಂಬ ಸಂಗತಿ ಬಿಜೆಪಿಗೆ ಈಗ ಅರಿವಾದಂತಿದೆ. ಆದರೆ ಸಾಕಷ್ಟು ಚಾಣಾಕ್ಷತೆ ಮೆರೆದರೂ ಹಿಮಾಚಲದಲ್ಲಿ ಸಿಎಂ ಅಭ್ಯರ್ಥಿ ಸೇರಿದಂತೆ ಪ್ರಮುಖ ನಾಯಕರು ಸೋಲುಂಡಿರುವುದು ತಲೆನೋವಾಗಿದೆ. ಆದರೆ ಕಾಂಗ್ರೆಸ್ ಮಿಶ್ರಭಾವದಲ್ಲಿದೆ.

ಜಾತಿ, ಜನಾಂಗ, ಧರ್ಮ ಮತ್ತು ಜನರ ನಿತ್ಯದ ಬಿಕ್ಕಟ್ಟುಗಳು ಗುಜರಾತಿನ ಚುನಾವಣೆಯಲ್ಲಿ ಚರ್ಚೆಗೆ ಬಂದವು. ಆದರೆ ರಾಹುಲ್, ಮೇವಾನಿ, ಅಲ್ಪೇಶ್ ಮತ್ತು ಹಾರ್ದಿಕ್ ಒಡ್ಡಿದ ಸವಾಲುಗಳಿಗೆ ಪ್ರತಿತಂತ್ರ ಹೆಣೆದು ಪರಿಸ್ಥಿತಿಯನ್ನು ತಲೆಕೆಳಗು ಮಾಡುವಲ್ಲಿ ಮೋದಿ-ಶಾ ಜೋಡಿ ಯಶಸ್ವಿಯಾಗಿದೆ.

ಗುಜರಾತ್‌ ಚುನಾವಣೆಯಲ್ಲಿ ಮತ್ತೆ ಗೆಲ್ಲುವ ಮೂಲಕ ಬಿಜೆಪಿ ಜಯದ ಯಾತ್ರೆ ಮುಂದುವರಿಸಿದೆ. ಮೋದಿ ಜಯದ ಕುದುರೆಯನ್ನು ಕಟ್ಟಿಹಾಕುವಲ್ಲಿ ಯುವನಾಯಕರಾದ ಅಲ್ಪೇಶ್‌, ಜಿಗ್ನೇಶ್‌, ಹಾರ್ದಿಕ್‌ ಸೋತಿರಬಹುದು. ಆದರೆ ಮೂವರ ಪ್ರಭಾವ ಮತ ಹಂಚಿಕೆಯಲ್ಲಿ ಎದ್ದುಕಾಣುತ್ತಿದೆ.

ಗುಜರಾತ್ ಚುನಾವಣಾ ಫಲಿತಾಂಶವು ಸದ್ಯಕ್ಕೆ ರಾಜ್ಯದ ಮೇಲೆ ನೇರ ಪರಿಣಾಮ ಬೀರದಿದ್ದರೂ ಪರೋಕ್ಷವಾಗಿ ಕಾಂಗ್ರೆಸ್ಸಿಗರಲ್ಲಿ ಉತ್ಸಾಹ ಮೂಡಿಸುವಲ್ಲಿ ಸಫಲವಾಗಿದೆ. ರಾಹುಲ್ ಗಾಂಧಿ ಅವರು ಮತದಾರರನ್ನು ಸೆಳೆಯುವಲ್ಲಿ ಗುಜರಾತಿನಲ್ಲಿ ಯಶಸ್ವಿಯಾಗಿರುವುದೇ ಇದಕ್ಕೆ ಕಾರಣ.

ಗುಜರಾತ್ ಚುನಾವಣಾ ಫಲಿತಾಂಶ ಹೊರಬೀಳಲು ಇನ್ನು ಮೂರು ದಿನವಷ್ಟೇ ಬಾಕಿ. ಬಹುತೇಕ ಮತಗಟ್ಟೆ ಸಮೀಕ್ಷೆಯಲ್ಲಿ ಬಿಜೆಪಿ ಮತ್ತೆ ಅಧಿಕಾರಕ್ಕೆ ಬರಲಿದೆ ಎಂಬ ಭವಿಷ್ಯ ನುಡಿಯಲಾಗಿದೆ. ಆದರೆ, ಮತದಾನಕ್ಕೂ ಮುನ್ನ ರಾಜ್ಯದ ಜನರ ಆಲೋಚನೆ ನಿಜಕ್ಕೂ ಹೇಗಿತ್ತು? ಇಲ್ಲಿದೆ ಗ್ರೌಂಡ್ ರಿಪೋರ್ಟ್.

ಗುಜರಾತ್, ಹಿಮಾಚಲ ಪ್ರದೇಶದ ಮತಗಟ್ಟೆ ಸಮೀಕ್ಷೆಗಳು ಹೊರಬಿದ್ದಿವೆ. ಎರಡೂ ರಾಜ್ಯದಲ್ಲಿ ಬಿಜೆಪಿ ಗೆಲ್ಲುವ ಸೂಚನೆ ಸಿಕ್ಕಿದೆ. ಅಬ್ಬರದ ಪ್ರಚಾರದಿಂದ ಗಮನ ಸೆಳೆದಿದ್ದ ಗುಜರಾತ್‌ನಲ್ಲಿ ಎರಡು ಹಂತದಲ್ಲಿ ಚುನಾವಣೆಗಳು ನಡೆದಿದ್ದರೆ, ಹಿಮಾಚಲದಲ್ಲಿ ಒಂದೇ ಹಂತದ ಚುನಾವಣೆ ನಡೆದಿತ್ತು.

ನರೇಂದ್ರ ಮೋದಿ ದೇಶದ ಪ್ರಧಾನಿ. ಅದಕ್ಕೂ ಹಿಂದೆ ಗುಜರಾತ್‌ನ ಸಿಎಂ ಆಗಿದ್ದವರು. ಆ ರಾಜ್ಯದಲ್ಲೀಗ ವಿಧಾನಸಭೆ ಚುನಾವಣೆ. ಚುನಾವಣೆ ಗೆಲ್ಲುವ ಪ್ರತಿಷ್ಠೆಯ ಹಠಕ್ಕೆ ಬಿದ್ದಿರುವ ಮೋದಿ ಅವರ ಈ ಹದಿನೈದು ದಿನಗಳ ಪ್ರಚಾರ ವೈಖರಿ ಗಮನಿಸಿದರೆ ಅವರು ಗುಜರಾತ್‌ಗೆ ಸೀಮಿತರಾದಂತೆ ಕಾಣಿಸುತ್ತಿದ್ದಾರೆ.

ಸಾಂಪ್ರದಾಯಿಕ ವೈರಿ ಎಂದು ಬಿಂಬಿಸಲ್ಪಟ್ಟಿರುವ ಪಾಕಿಸ್ತಾನ ನಮ್ಮ ದೇಶದ ಮಹತ್ವದ ಪ್ರಕ್ರಿಯೆಯಲ್ಲಿ ಕಾಂಗ್ರೆಸ್‌ ಮೂಲಕ ಹಸ್ತಕ್ಷೇಪ ಮಾಡುತ್ತಿದೆ ಎಂಬ ಆರೋಪ ಮಾಡಿದ್ದಾರೆ ಪ್ರಧಾನಿ ಮೋದಿ. ಆದರೆ ಈ ಆರೋಪಕ್ಕೆ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.

ಗುಜರಾತಿನ ಬಹುತೇಕ ಜಾತಿಗಳು ತಮ್ಮ ತಮ್ಮ ಬೇಡಿಕೆಗಳಿಗೆ ಅನುಗುಣವಾಗಿ ಬಿಜೆಪಿಯ ವಿರುದ್ಧ ಅಸಮಾಧಾನಗೊಂಡಿರುವುದು ಆ ಪಕ್ಷಕ್ಕೆ ತಲೆನೋವಾಗಿರುವ ಸಂಗತಿ. ಬಹುಶಃ ಇದೇ ಕಾರಣಕ್ಕೆ ಪ್ರಧಾನಿಯವರ ಚುನಾವಣಾ ಭಾಷಣಗಳಲ್ಲಿ ಅಭಿವೃದ್ಧಿಯ ವಿಷಯ ಚರ್ಚೆಯಾಗಲೇ ಇಲ್ಲ.

ಗುಜರಾತ್‌ ಚುನಾವಣೆಯ ಮೊದಲ ಹಂತದ ಮತದಾನ ಶನಿವಾರ ನಡೆದಿದೆ. ಹಾರ್ದಿಕ್‌-ಜಿಗ್ನೇಶ್‌-ಅಲ್ಪೇಶ್‌ರ ತ್ರಿವಳಿ ಕಾಂಬಿನೇಷನ್‌ ಗುಜರಾತಿನಲ್ಲಿ ಮೋದಿಯವರ ಪ್ರಾಬಲ್ಯ ಮತ್ತು ಗೆಲುವಿನ ಕುದುರೆಯ ಓಟವನ್ನು ಕಟ್ಟಿಹಾಕುತ್ತದಾ? ಮೂವರ ಪ್ರಭಾವ ಕಾಂಗ್ರೆಸ್‌ಗೆ ಲಾಭದಾಯಕವಾಗಬಹುದಾ?

ಗುಜರಾತ್ ವಿಧಾನಸಭೆಗೆ ಇದೇ ಡಿ ೯ ಮತ್ತು ಡಿ ೧೪ರಂದು ಎರಡು ಹಂತಗಳಲ್ಲಿ ಮತದಾನ ನಡೆಯಲಿದ್ದು ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಸಮಬಲದ ಪೈಪೋಟಿ ಉಂಟಾಗಲಿದೆ ಎಂದು ಚುನಾವಣಾ ಪೂರ್ವ ಸಮೀಕ್ಷೆಗಳು ತಿಳಿಸಿವೆ. ಬಿಜೆಪಿಯ ಜನಪ್ರಿಯತೆ ಕಳೆದ ೩ ತಿಂಗಳಲ್ಲಿ ಕುಂದಿದೆ ಎನ್ನಲಾಗಿದೆ.

ಡಿಸೆಂಬರ್ 9ರಂದು ಗುಜರಾತ್‌ನಲ್ಲಿ ಮೊದಲ ಹಂತದ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆ ಹತ್ತಿರವಾದಂತೆ ರಾಜಕೀಯ ಪಕ್ಷಗಳು ತಮ್ಮ ನೈಜ ಬಣ್ಣ ಪ್ರದರ್ಶಿಸುವುದು, ತಮ್ಮ ಮತ ಸಮುದಾಯಗಳತ್ತ ವಾಲುವುದು ವಾಡಿಕೆ. ಪ್ರಧಾನಿಯವರ ರಾಮ ಜಪ ಇದನ್ನೇ ಪುಷ್ಟೀಕರಿಸಿದೆ.

ಗುಜರಾತ್‍ನಲ್ಲಿ ಎರಡೂ ರಾಷ್ಟ್ರೀಯ ಪಕ್ಷಗಳು ಸಮ-ಸಮವಾಗಿ ಓಡುತ್ತಿದ್ದು, ಬಹುಮತದ ಗೆರೆ ದಾಟಿ ಯಾರು ಮೇಲುಗೈ ಸಾಧಿಸುತ್ತಾರೆನ್ನುವ ಕುತೂಹಲ ಹೆಚ್ಚಿದೆ. ಅಂತಿಮ ಫಲಿತಾಂಶ ಫೋಟೋ ಫಿನಿಶ್ ರೂಪದಲ್ಲಿರಬಹುದು ಎನ್ನುತ್ತದೆ ಲೋಕನೀತಿ-ಸಿಎಸ್‌ಡಿಎಸ್‌-ಎಬಿಪಿ ನ್ಯೂಸ್ ಸಮೀಕ್ಷೆ.

ಕನ್ನಡ ಮತ್ತು ಗುಜರಾತಿ ಅಸ್ಮಿತೆಯ ಚರ್ಚೆಗಳು ಸದ್ಯ ಮುನ್ನೆಲೆಗೆ ಬಂದಿವೆ. ಎರಡೂ ರಾಜ್ಯಗಳಲ್ಲಿ ಚುನಾವಣೆಗಳು ಹತ್ತಿರದಲ್ಲಿರುವುದೇ ಇದಕ್ಕೆ ಕಾರಣವೆಂದು ವಿವರಿಸಿ ಹೇಳಬೇಕಾಗಿಲ್ಲ. ‘ಐಡೆಂಟಿಟಿ ಪಾಲಿಟಿಕ್ಸ್‌’ ಎನ್ನುವ ‘ಹುಲಿ ಸವಾರಿ’ಯ ಸುತ್ತಲಿನ ಚರ್ಚೆಯನ್ನು ಇಲ್ಲಿ ಕಟ್ಟಿಕೊಡಲಾಗಿದೆ.

ಗುಜರಾತಿನಲ್ಲಿ ರಾಹುಲ್ ಕೈಗೊಂಡ ಪ್ರಚಾರದ ವೈಖರಿಯು ಯೋಜಿತ ತಂತ್ರಗಾರಿಕೆಯ ಭಾಗದಂತಿತ್ತು. ರಾಹುಲ್ ಅವರನ್ನು ಸರಳ, ಜನಸ್ನೇಹಿ ನಾಯಕನನ್ನಾಗಿ ಬಿಂಬಿಸುವ ಆ ತಂತ್ರಗಾರಿಕೆ ಮೊದಲ ಸುತ್ತಿನಲ್ಲಿ ಯಶಸ್ವಿಯೂ ಆಗಿದೆ. ಹಾಗಾದರೆ ಆ ತಂತ್ರ ಕಾಂಗ್ರೆಸ್‌ನ ಕೈ ಹಿಡಿಯಬಲ್ಲದೇ?.

ಮೋದಿ ವಿಚಾರ ಬದಿಗಿಟ್ಟು ನೋಡುವುದಾದರೆ, ಈ ಬಾರಿ ಕಾಂಗ್ರೆಸ್ ಪಕ್ಷ ಅನಾಯಾಸವಾಗಿ ಗೆಲ್ಲುತ್ತದೆ ಎಂಬ ವಿಶ್ಲೇಷಣೆ ಚಾಲ್ತಿಯಲ್ಲಿದೆ. ಈ ತರ್ಕಕ್ಕೆ ಮುಖ್ಯ ಕಾರಣ, ಬಿಜೆಪಿಯು ತನ್ನ ಮತಬ್ಯಾಂಕ್‌ಗಳಾದ ನಗರ ಮಧ್ಯಮ ವರ್ಗ ಮತ್ತು ಪಾಟೀದಾರ್ ಸಮುದಾಯವನ್ನು ಎದುರು ಹಾಕಿಕೊಂಡಿರುವುದು.

ಮೋದಿ ಸಭೆಗಳಿಗೆ ಜನಬೆಂಬಲ ಕಾಣಲಿಲ್ಲ ಎಂಬ ಕಾರಣಕ್ಕೆ ಬಿಜೆಪಿ ಈ ಬಾರಿ ಸೋಲಲಿದೆ ಅಥವಾ ಕಾಂಗ್ರೆಸ್ ಜಯ ಶತಸಿದ್ಧ ಎಂದುಕೊಳ್ಳುವುದು ಅವಸರದ ತೀರ್ಮಾನ. ಆದರೆ ಸೌರಾಷ್ಟ್ರದಲ್ಲಿ ಮಾತ್ರ ಈ ಮೊದಲಿನಂತೆ ಪ್ರಧಾನಿ ಮೋದಿಯ ಮೋಡಿ ನಡೆಯದಿರುವುದು ಇತ್ತೀಚಿನ ಗಮನಾರ್ಹ ಸಂಗತಿ

ರಾಹುಲ್‌ ಗಾಂಧಿ ಸೋಮನಾಥ ದೇವಾಲಯಕ್ಕೆ ಭೇಟಿ ನೀಡಿದ ಘಟನೆ ಸುತ್ತ ಬಿಜೆಪಿ ಎತ್ತಿದ ಪ್ರಶ್ನೆಗಳಿಗೆ ಕಾಂಗ್ರೆಸ್‌ ಪ್ರಬುದ್ಧತೆಯಿಂದ ಉತ್ತರಿಸಬೇಕಿತ್ತು. ಬಿಜೆಪಿಯ ಕುತಂತ್ರ ಬಯಲಿಗೆಳೆದು ಸೆಕ್ಯುಲರ್ ರಾಜಕಾರಣದ ಮೌಲ್ಯ ಎತ್ತಿಹಿಡಿಯುವ ಅನನ್ಯ ಮಾದರಿ ಅದರದಾಗಬೇಕಿತ್ತು. ಆದರೆ...

ಗುಜರಾತ್‌ ಚುನಾವಣಾ ಕಣ ದಿನ ಕಳೆದಂತೆ ರಂಗೇರುತ್ತಿದೆ. ಅಭಿವೃದ್ಧಿ ವಿಷಯ ಹಿಂದೆ ಸರಿದು ಇತಿಹಾಸವನ್ನು ಕೆದಕುವ ಕೆಲಸಗಳು ಆರಂಭ ಆಗಿವೆ. ಸ್ವತಃ ಪ್ರಧಾನಿ ಮೋದಿಯವರೇ ಇದರಲ್ಲಿ ಮುಂಚೂಣಿಯಲ್ಲಿ ಇದ್ದಾರೆ. ಒಂದೇ ದಿನ ಮೋದಿ, ರಾಹುಲ್, ಹಾರ್ದಿಕ್ ಸಮಾವೇಶ ಇದ್ದದ್ದು ಬುಧವಾರದ ವಿಶೇಷವಾಗಿತ್ತು.

ಗುಜರಾತ್‌ ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಪ್ರಧಾನಿ ಮೋದಿಯವರ ಪ್ರಚಾರ ಭರದಿಂದ ಸಾಗಿದೆ. ಕಾಂಗ್ರೆಸ್‌ ಮತ್ತು ಬಿಜೆಪಿ ಎರಡೂ ರಾಷ್ಟ್ರೀಯ ಪಕ್ಷಗಳಿಗಿದು ಪ್ರತಿಷ್ಠೆಯ ಕಣವಾಗಿದ್ದು, ಮೋದಿ ಭಾವಾವೇಶಕ್ಕೆ ಮೊರೆಹೋಗಿದ್ದಾರೆ. ಭಾಷಣದಲ್ಲಿನ ಸ್ವಾರಸ್ಯಗಳ ಕುರಿತು ಇಲ್ಲಿದೆ ಒಳನೋಟ.

ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More