ಚೆಲುವರಾಯ ಸ್ವಾಮಿ ಮನದ ಮಾತು | ಜೆಡಿಎಸ್‌ ತೊರೆದ ಶೇಕಡ 90 ಮಂದಿ ಯಶಸ್ವಿ!

ಜೆಡಿಎಸ್‌ ಮುಖಂಡರೊಂದಿಗಿನ ವೈಮನಸ್ಸಿನಿಂದಾಗಿ ಪಕ್ಷದಿಂದ ದೂರಾಗಿರುವ ನಾಗಮಂಗಲ ಶಾಸಕ ಎನ್‌ ಚೆಲುವರಾಯ ಸ್ವಾಮಿ ಕಾಂಗ್ರೆಸ್‌ ಸೇರಲು ಕಾತರರಾಗಿದ್ದಾರೆ. ‘ದಿ ಸ್ಟೇಟ್‌’ಗೆ ಸಂದರ್ಶನ ನೀಡಿರುವ ಅವರು,‌ ಜೆಡಿಎಸ್‌‌ನಲ್ಲಿನ ಒಳರಾಜಕಾರಣದ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ

ಮುಖ್ಯಾಂಶಗಳು

  • ಕಾಂಗ್ರೆಸ್‌ನಲ್ಲಿ ಗೌರವ, ಸ್ವಾಭಿಮಾನದಿಂದ ನಡೆಸಿಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ. ಸ್ಥಾನಮಾನದ ನಿರೀಕ್ಷೆ, ಆಸೆ ಇಟ್ಟುಕೊಂಡು ಕಾಂಗ್ರೆಸ್‌ ಸೇರ್ಪಡೆಯಾಗುತ್ತಿಲ್ಲ
  • ಸಿದ್ದರಾಮಯ್ಯ ಅವರು ತಮ್ಮ ನಾಯಕತ್ವ ಗುಣ ಮತ್ತು ಹಣೆಬರಹದಿಂದ ಸಿಎಂ ಆಗಿದ್ದಾರೆ. ಮಲ್ಲಿಕಾರ್ಜುನ ಖರ್ಗೆ, ಡಿ ಕೆ ಶಿವಕುಮಾರ್‌, ಪರಮೇಶ್ವರ್‌ ಅವರಂಥ ಪ್ರಬಲ ನಾಯಕರ ನಡುವೆಯೂ ಸಿದ್ದರಾಮಯ್ಯನವರನ್ನು ಕಾಂಗ್ರೆಸ್‌ ಗುರುತಿಸಿದೆ
  • ಸಿಎಂ ಸಿದ್ದರಾಮಯ್ಯ ಅವರ ಆಡಳಿತದಿಂದಾಗಿ ಮೂಲ ಕಾಂಗ್ರೆಸ್‌ ಮತ್ತು ವಲಸೆ ಕಾಂಗ್ರೆಸ್ಸಿಗರು ಎಂಬ ಅಂತರ ಕಡಿಮೆಯಾಗಿದೆ
  • ಮಂಡ್ಯ ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಕಾಂಗ್ರೆಸ್‌, ಬಿಜೆಪಿ, ಜೆಡಿಎಸ್ ಸೇರಿದಂತೆ ಯಾವುದೇ ಪಕ್ಷ ಎಲ್ಲ ಸ್ಥಾನಗಳನ್ನು ಗೆದ್ದಿಲ್ಲ. ಎಸ್‌ ಎಂ ಕೃಷ್ಣ ಕಾಲಘಟ್ಟ ಸೇರಿದಂತೆ‌ ಮಂಡ್ಯದಲ್ಲಿ ಹಲವು ದಶಕಗಳಿಂದಲೂ ಕಾಂಗ್ರೆಸ್‌ ಪ್ರಬಲವಾಗಿದೆ
  • ಕಾಂಗ್ರೆಸ್‌ ಮತ್ತು ಜೆಡಿಎಸ್‌ ಎರಡಕ್ಕೂ ಶಕ್ತಿ ಇದೆ. ಆದರೆ ಜೆಡಿಎಸ್‌ಗಿಂತ ಕಾಂಗ್ರೆಸ್‌ ಒಂದು ಹೆಜ್ಜೆ ಮುಂದೆ ಇರಲಿದೆ
  • ಕುಮಾರಸ್ವಾಮಿ ಅವರು ಸಂತೋಷ್‌ ಲಾಡ್‌, ಜಮೀರ್‌ ಅಹ್ಮದ್‌, ನನ್ನನ್ನು ಸೇರಿದಂತೆ ಎಲ್ಲರನ್ನೂ ಕೆಟ್ಟದಾಗಿ ನಡೆಸಿಕೊಂಡಿದ್ದಾರೆ. ಕುಮಾರಸ್ವಾಮಿ ಸಿಎಂ ಅಭ್ಯರ್ಥಿಯಾಗಿರಲಿಲ್ಲ. ಆದರೂ ರಾಜ್ಯಕ್ಕೆ ಒಳ್ಳೆದಾಗುತ್ತದೆ ಎಂದು ಅವರನ್ನು ಮುಖ್ಯಮಂತ್ರಿ ಮಾಡಿದ್ದೆವು
  • ಬಿಜೆಪಿ-ಜೆಡಿಎಸ್‌ ಸಮ್ಮಿಶ್ರ ಸರ್ಕಾರದ ವಿಶ್ವಾಸಮತದಲ್ಲಿ ಪಾಲ್ಗೊಳ್ಳದ ರೇವಣ್ಣ, ಆನಂತರ ಇಂಧನ ಮತ್ತು ಲೋಕೋಪಯೋಗಿ ಖಾತೆಗೆ ಬೇಡಿಕೆ ಇಟ್ಟಿದ್ದರು
  • ಸಮ್ಮಿಶ್ರ ಸರ್ಕಾರದ ಸಂದರ್ಭದಲ್ಲಿ ಬಿಜೆಪಿ ನೀಡಿದ ಅವಕಾಶ ಪಡೆದು ದೇವೇಗೌಡರ ಕುಟುಂಬ ಆರ್ಥಿಕವಾಗಿ ಸಬಲವಾಗಿದೆ. ಆದರೆ, ಒಪ್ಪಂದದಂತೆ ಬಿಜೆಪಿಗೆ ಅಧಿಕಾರ ಬಿಟ್ಟುಕೊಡಲಿಲ್ಲ
  • ದೇವೇಗೌಡರು-ಕುಮಾರಸ್ವಾಮಿ ಮತ್ತು ನಮ್ಮ ನಡುವೆ ಬೆಟ್ಟದಷ್ಟು ವಿಶ್ವಾಸದ ಕೊರತೆ ಇದೆ. ದೇವೇಗೌಡರ ಇಬ್ಬಗೆ ನೀತಿ ಪ್ರಶ್ನಿಸಿದರೆ ಕೆಲವರಿಗೆ ಬೇಸರವಾಗುತ್ತದೆ. ಏನು ಮಾಡುವುದು?
  • ಕುಮಾರಸ್ವಾಮಿ ಪುಣ್ಯಾತ್ಮ. ಅವರಿಗೆ ನಮಸ್ಕಾರ. ದೇವರು ಅವರಿಗೆ ಆರೋಗ್ಯ ನೀಡಲಿ. ನಾನು ಮನೆ ಕಟ್ಟಿದ್ದರ ಬಗ್ಗೆ ಮಾತನಾಡುತ್ತಾರೆ. ಕುಮಾರಸ್ವಾಮಿ ಕುಟುಂಬದ ಹಿನ್ನಲೆ ಬಗ್ಗೆ ನಾನು ಮಾತನಾಡಬಹುದೇ?
ಇದನ್ನೂ ಓದಿ : ಕೋನರೆಡ್ಡಿ ಮನದ ಮಾತು | ಈ ಬಾರಿ ಕುಮಾರಸ್ವಾಮಿ ಸಿಎಂ ಆಗುವುದಂತೂ ಖರೆ
ವಿಕಾಸ ಪರ್ವದಲ್ಲಿ ಆನೆಬಲ ಪಡೆದ ಜೆಡಿಎಸ್‌ ಚುನಾವಣಾ ಲಾಭ ಗಳಿಸುವುದೇ?
ಕುತೂಹಲ ಮೂಡಿಸಿದ ಬಸನಗೌಡ ಪಾಟೀಲ್ ಯತ್ನಾಳರ ಬಿಜೆಪಿ ಮರು ಸೇರ್ಪಡೆ
ಬಹಮನಿಯ ನೈಜ ಇತಿಹಾಸವೇ ಬೇರೆ, ಬಿಜೆಪಿ ಹೇಳುತ್ತಿರುವ ಕತೆಯೇ ಬೇರೆ!
Editor’s Pick More