ತೆಲಂಗಾಣ ಸಿಎಂ ಕೆ ಚಂದ್ರಶೇಖರ್ ರಾವ್ ಮತ್ತು ದೇವೇಗೌಡರ ಭೇಟಿಯ ೧೨ ಮುಖ್ಯಾಂಶ

ತೆಲಂಗಾಣ ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರನ್ನು ಬೆಂಗಳೂರಿನಲ್ಲಿ ಭೇಟಿ ಮಾಡಿ ‘ಫೆಡರಲ್ ಫ್ರಂಟ್’ ಬಗ್ಗೆ ಸುದೀರ್ಘವಾಗಿ ಚರ್ಚಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ಈ ಭೇಟಿಯ ಹನ್ನೆರಡು ಮುಖ್ಯ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ

 • ಫೆಡರಲ್ ಒಕ್ಕೂಟ ವ್ಯವಸ್ಥೆಯ ಮಾದರಿಯಲ್ಲಿ ಚುನಾವಣೆಯನ್ನು ಎದುರಿಸಲು ‘ಫೆಡರಲ್ ಫ್ರಂಟ್’ ರಚನೆಗೆ ಶಕ್ತಿ ತುಂಬುವ ಪ್ರಯತ್ನ
 • ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿಯನ್ನು ಬರುವ ಲೋಕಸಭಾ ಚುನಾವಣೆಯಲ್ಲಿ ಅಧಿಕಾರಕ್ಕೆ ಬರದಂತೆ ತಡೆಯೊಡ್ಡಲು ತೆಲಂಗಾಣ ಮುಖ್ಯಮಂತ್ರಿ ಕೆಸಿಆರ್ ಮೂಲಕ ಕರ್ನಾಟಕಕ್ಕೂ ಕಾಲಿಟ್ಟ ಫೆಡರಲ್ ಫ್ರಂಟ್
 • ತೆಲಂಗಾಣ ಮುಖ್ಯಮಂತ್ರಿ ಅವರು 2019ರ ಲೋಕಸಭೆ ಚುನಾವಣೆಯಲ್ಲಿ ಪ್ರಮುಖ ಪಾತ್ರ ವಹಿಸುವ ಸಾಧ್ಯತೆ ಇದ್ದು, ಈ ಹಿನ್ನೆಲೆಯಲ್ಲಿ ಮಹತ್ವ ಪಡೆದುಕೊಂಡ ಭೇಟಿ
 • ಫೆಡರಲ್ ಫ್ರಂಟ್ ರೂಪುರೇಷೆ ಬಗ್ಗೆ ರಾಜಧಾನಿಯ ಪದ್ಮನಾಭ ನಗರದಲ್ಲಿರುವ ದೇವೇಗೌಡರ ನಿವಾಸದಲ್ಲಿ ದೇವೇಗೌಡರೊಂದಿಗೆ ಸುದೀರ್ಘವಾಗಿ ಚರ್ಚಿಸಿದ ಕೆಸಿಆರ್ ಅವರಿಂದ, ಪ್ರಾದೇಶಿಕ ಆಶೋತ್ತರಗಳನ್ನು ಎತ್ತಿಹಿಡಿಯುವ ಫೆಡರಲ್ ಸರ್ಕಾರದ ಕನಸಿನ ಬಗ್ಗೆ ಸುದೀರ್ಘ ಚರ್ಚೆ
 • ಫೆಡರಲ್ ಫ್ರಂಟ್‌ಗೆ ಬೆಂಬಲ ನೀಡುವಂತೆ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಎಚ್ ಡಿ ದೇವೇಗೌಡರನ್ನು ಕೋರಿದ ತೆಲಂಗಾಣ ಸಿಎಂ
 • “ದೇಶದ ಜ್ವಲಂತ ಸಮಸ್ಯೆಗಳನ್ನು ಪರಿಹರಿಸುವಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಸೋತಿವೆ. ರಾಷ್ಟ್ರೀಯ ರಾಜಕಾರಣದಲ್ಲಿ ಗುಣಾತ್ಮಕ ಬದಲಾವಣೆಗಳ ಅಗತ್ಯವಿದ್ದು ಜನರು ಕೂಡ ಬೆಂಬಲ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಫೆಡರಲ್ ಫ್ರಂಟ್ ಹೋರಾಟದ ರೂಪುರೇಷೆಗಳ ಸಿದ್ಧತೆಯ ಭಾಗವಾಗಿ ದೇವೇಗೌಡರನ್ನು ಭೇಟಿ ಮಾಡಿದ್ದೇನೆ,” ಎಂದ ಕೆಸಿಆರ್.
 • ಥರ್ಡ್ ಫ್ರಂಟ್ ವಿಫಲ ಕಸರತ್ತಿನ ಮಧ್ಯೆಯೇ ಮಮತಾ ಬ್ಯಾನರ್ಜಿ ಬಿತ್ತಿದ ‘ಫೆಡರಲ್ ಫ್ರಂಟ್’ ಕನಸಿಗೆ ಜೆಡಿಎಸ್ ನೀರೆರೆಯುವ ಸಾಧ್ಯತೆ
 • ಫೆಡರಲ್ ಫ್ರಂಟ್ ಹೋರಾಟಕ್ಕೆ ರಾಷ್ಟ್ರೀಯ ಪಕ್ಷಗಳಿಂದ ಪ್ರಾದೇಶಿಕ ಪಕ್ಷಗಳು ಹೊರಬಂದು ಕೈಜೋಡಿಸಲು ಮನವಿ ಮಾಡುವ ಮೂಲಕ ಮಾಜಿ ಪ್ರಧಾನಿ ದೇವೇಗೌಡ ಅವರು ‘ಫೆಡರಲ್ ಫ್ರಂಟ್’ಗೆ ಕೈ ಜೋಡಿಸು ಸುಳಿವು
ಇದನ್ನೂ ಓದಿ : ತೃತೀಯ ರಂಗದ ವಿಫಲ ಕಸರತ್ತಿನ ನಡುವೆ ಫೆಡರಲ್ ಫ್ರಂಟ್‌ನ ಕನಸು ಬಿತ್ತಿದ ಮಮತಾ
 • ಮುಂಬರುವ ಲೋಕಸಭೆ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳಾದ ಬಿಜೆಪಿ ಮತ್ತು ಕಾಂಗ್ರೆಸ್ ಅನ್ನು ಹೊರತುಪಡಿಸಿ ಎಲ್ಲ ಪ್ರಾದೇಶಿಕ ಪಕ್ಷಗಳನ್ನು ಒಗ್ಗೂಡಿಸಿಕೊಂಡು ‘ಫೆಡರಲ್ ಫ್ರಂಟ್‌’ ಸ್ಥಾಪಿಸುವ ಆಶಯ.
 • ಇದೇ ಸಂದರ್ಭದಲ್ಲಿ ಕೆಸಿಆರ್, ಎಚ್ ಡಿ ಕುಮಾರಸ್ವಾಮಿ ಅವರೊಂದಿಗೂ ಚರ್ಚಿಸಿ ಜೆಡಿಎಸ್‌ಗೆ ಬೆಂಬಲ ಸೂಚಿಸಿ, ೨೦೧೮ರ ರಾಜ್ಯ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಬೆಂಬಲಿಸಿ ಎಚ್ ಡಿ ಕುಮಾರಸ್ವಾಮಿ ಅವರನ್ನು ಮುಖ್ಯಮಂತ್ರಿ ಮಾಡಲು ಜನತೆಯನ್ನು ಕೋರಿದರು
 • ಅಲ್ಲದೆ, ಜೆಡಿಎಸ್ ಚುನಾವಣಾ ಪ್ರಚಾರದ ಸಭೆಗಳಲ್ಲಿ ಪಾಲ್ಗೊಳ್ಳುವ ಇಂಗಿತ ವ್ಯಕ್ತಪಡಿಸಿ, ಹೈದರಾಬಾದ್ ಕರ್ನಾಟಕದ ಭಾಗದಲ್ಲಿ ಜೆಡಿಎಸ್ ಪರವಾಗಿ ಪ್ರಚಾರ ನಡೆಸುವ ಬಗ್ಗೆ ಭರವಸೆ
 • ಕೋಲಾರ ಮತ್ತು ಚಿಕ್ಕಬಳ್ಳಾಪುರ ಭಾಗದಲ್ಲಿ ತೆಲುಗು ಭಾಷಿಕರು ಅಧಿಕವಾಗಿರುವುದರಿಂದ ತೆಲಂಗಾಣ ಸಿಎಂ ಚಂದ್ರಶೇಖರ್ ರಾವ್ ಭೇಟಿ ಕುಮಾರಸ್ವಾಮಿಗೆ ವರವಾಗುವ ಸಾಧ್ಯತೆ
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More