ಕಾಂಗ್ರೆಸ್ ಪಟ್ಟಿ ಪ್ರಕಟ; ಒಂದು ಕ್ಷೇತ್ರದಲ್ಲಿ ಮಾತ್ರ ಸಿದ್ದರಾಮಯ್ಯ ಸ್ಪರ್ಧೆ

ರಾಜ್ಯದ 224 ವಿಧಾನಸಭಾ ಕ್ಷೇತ್ರಗಳ ಪೈಕಿ 218ಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಅಭ್ಯರ್ಥಿಗಳ ಹೆಸರನ್ನು ಘೋಷಿಸಿದೆ. ಜೆಡಿಎಸ್ ಬಂಡಾಯ ಶಾಸಕರ ಸಹಿತ ಇತ್ತೀಚೆಗೆ ಪಕ್ಷ ಸೇರಿದ ಶಾಸಕರು ಟಿಕೆಟ್‌ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾರೆ. ಆರು ಕ್ಷೇತ್ರಗಳಿಗೆ ಟಿಕೆಟ್‌ ಘೋಷಣೆ ಬಾಕಿ ಇದೆ

ರಾಜ್ಯ ವಿಧಾನಸಭೆಗೆ ಸಾಕಷ್ಟು ಅಳೆದು ತೂಗಿದ ನಂತರ ಕಾಂಗ್ರೆಸ್‌, ೨೧೮ ಅಭ್ಯರ್ಥಿಗಳ ಪಟ್ಟಿಯನ್ನು ಭಾನುವಾರ ಬಿಡುಗಡೆಗೊಳಿಸಿದೆ. ಎರಡು ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದ ಸಿಎಂ ಸಿದ್ದರಾಮಯ್ಯ ಅವರು, ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಮಾತ್ರ ಸ್ಪರ್ಧೆ ಮಾಡುತ್ತಿರುವುದು ವಿಶೇಷ. ವರುಣಾ ಕ್ಷೇತ್ರದಲ್ಲಿ ಅವರ ಪುತ್ರ ಯತೀಂದ್ರ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಉಳಿದಂತೆ, ಹಾಲಿ ಶಾಸಕರ ಪೈಕಿ ನಾನಾ ಕಾರಣಗಳಿಂದ ೧೦ ಮಂದಿ ಟಿಕೆಟ್‌ ವಂಚಿತರಾಗಿದ್ದಾರೆ. ನಿಧನ, ಅನಾರೋಗ್ಯ ಹಾಗೂ ಹಾಲಿ ಶಾಸಕರು ಬೇರೆ ಕ್ಷೇತ್ರಗೆ ವಲಸೆ ಹೋದದ್ದರಿಂದ ನಾಲ್ಕು ಸ್ಥಾನಗಳಲ್ಲಿ ಅವರ ಮನೆಯವರಿಗೆ ಟಿಕೆಟ್‌ ಹಂಚಿಕೆ ಮಾಡಲಾಗಿದೆ. ಬೆಂಗಳೂರಿನ ಶಾಂತಿನಗರ ಮತ್ತು ಬೆಳಗಾವಿಯ ಕಿತ್ತೂರಿನಲ್ಲಿ ಕಾಂಗ್ರೆಸ್‌ ಶಾಸಕರಿದ್ದರೂ ಆ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳ ಹೆಸರು ಅಂತಿಮವಾಗಿಲ್ಲ. ದೇವರಹಿಪ್ಪರಗಿ, ಅಫಜಲಪುರ ಮತ್ತು ಚನ್ನಪಟ್ಟಣ ಕ್ಷೇತ್ರಗಳಲ್ಲಿನ ಶಾಸಕರು ಪಕ್ಷ ತೊರೆದಿದ್ದರಿಂದ ಅಲ್ಲಿಗೆ ಹೊಸ ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಉಳಿದೆಲ್ಲ ಶಾಸಕರು ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ.

ಬಾದಾಮಿಯಲ್ಲಿ ಬಿ ಬಿ ಚಿಮ್ಮನಕಟ್ಟಿ, ಕೊಳ್ಳೇಗಾಲದಲ್ಲಿ ಎಸ್‌ ಜಯಣ್ಣ, ವಿಜಯಪುರ ನಗರದಲ್ಲಿ ಮುಕ್ಬೂಲ್ ಭಗವಾನ್‌, ಹಾನಗಲ್‌ನಲ್ಲಿ ಮನೋಹರ್‌ ಹಾನಗಲ್‌, ಶಿರಗುಪ್ಪದಲ್ಲಿ ಬಿ ಎಂ ನಾಗರಾಜ, ಬಳ್ಳಾರಿಯಲ್ಲಿ ವೈ ಎನ್‌ ಗೋಪಾಲಕೃಷ್ಣ, ಜಗಳೂರಿನಲ್ಲಿ ಎಚ್‌ ಪಿ ರಾಜೇಶ್‌, ಮಾಯಕೊಂಡದಲ್ಲಿ ಕೆ ಶಿವಮೂರ್ತಿ, ತರೀಕೆರೆಯಲ್ಲಿ ಜಿ ಎಚ್‌ ಶ್ರೀನಿವಾಸ, ತಿಪಟೂರಿನಲ್ಲಿ ಕೆ ಷಡಕ್ಷರಿ ಅವರಿಗೆ ಕೊಕ್‌ ನೀಡಿರುವ ಕಾಂಗ್ರೆಸ್‌, ಅಲ್ಲಿ ಕ್ರಮವಾಗಿ ದೇವರಾಜ ಪಾಟೀಲ್‌, ಎ ಆರ್ ಕೃಷ್ಣಮೂರ್ತಿ, ಅಬ್ದುಲ್‌ ಹಮೀದ್‌ ಮುಶ್ರಿಫ್‌, ಶ್ರೀನಿವಾಸ ಮಾನೆ, ಮುರುಳಿ ಕೃಷ್ಣ, ಬಿ ನಾಗೇಂದ್ರ, ಎ ಎಲ್‌ ಪುಷ್ಪಾ, ಕೆ ಎಸ್‌ ಬಸವರಾಜ್‌, ಎಸ್‌ ಎಂ ನಾಗರಾಜ್‌ ಮತ್ತು ಬಿ ನಂಜಮರಿ ಅವರ ಹೆಸರನ್ನು ಅಖೈರುಗೊಳಿಸಿದೆ.

ಪುತ್ರ ಮೊಹಮ್ಮದ್‌ ನಲಪಾಡ್‌ ದಾಂಧಲೆ ಪ್ರಕರಣದಿಂದ ಸಾರ್ವಜನಿಕವಾಗಿ ಭಾರಿ ಮುಜುಗರ ಅನುಭವಿಸಿದ್ದ ಬೆಂಗಳೂರಿನ ಶಾಂತಿನಗರ ಕ್ಷೇತ್ರದ ಶಾಸಕ ಎನ್‌ ಎ ಹ್ಯಾರಿಸ್‌ ಅವರಿಗೆ ಟಿಕೆಟ್‌ ಖಚಿತವಾಗಿಲ್ಲ. ಕಿತ್ತೂರಿನಲ್ಲಿ ಕಾಂಗ್ರೆಸ್‌ನಿಂದ ಡಿ ಬಿ ಇನಾಂದಾರ್ ಆಯ್ಕೆಯಾಗಿದ್ದರು. ಆದರೆ, ಶಾಂತಿನಗರ ಮತ್ತು ಕಿತ್ತೂರಿಗೆ ಅಭ್ಯರ್ಥಿಗಳ ಹೆಸರನ್ನು ಅಂತಿಮಗೊಳಿಸಲಾಗಿಲ್ಲ. ಸಿಂದಗಿ, ನಾಗಠಾಣ, ರಾಯಚೂರು ಕ್ಷೇತ್ರಗಳಿಗೂ ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಪ್ರಕಟಿಸಿಲ್ಲ. ಮೇಲುಕೋಟೆ ಶಾಸಕರಾಗಿದ್ದ ರೈತ ನಾಯಕ ಕೆ ಎಸ್‌ ಪುಟ್ಟಣ್ಣಯ್ಯ ನಿಧನದ ಹಿನ್ನೆಲೆಯಲ್ಲಿ ಅವರ ಪುತ್ರ ದರ್ಶನ್‌‌ ಸ್ಪರ್ಧಿಸುತ್ತಿದ್ದು, ಅವರಿಗೆ ಬೆಂಬಲ ನೀಡಲಾಗುವುದು ಎಂದು ಈಚೆಗೆ ಸಿದ್ದರಾಮಯ್ಯ ಹೇಳಿದ್ದನ್ನು ಇಲ್ಲಿ ನೆನೆಯಬಹುದು.

ಸಚಿವರಾದ ಟಿ ಬಿ ಜಯಚಂದ್ರ ಪುತ್ರ ಸಂತೋಷ್‌, ರಾಮಲಿಂಗಾ ರೆಡ್ಡಿ ಪುತ್ರಿ ಸೌಮ್ಯಾ, ಸಂಸದ ಕೆ ಎಚ್‌ ಮುನಿಯಪ್ಪ ಪುತ್ರಿ ರೂಪಾ ಟಿಕೆಟ್ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಈಚೆಗೆ ಕಾಂಗ್ರೆಸ್‌ ಸೇರಿದ್ದ ಜೆಡಿಎಸ್‌ನ ಏಳು ರೆಬಲ್‌ ಮಾಜಿ ಶಾಸಕರು ಹಾಗೂ ವಿವಾದಾತ್ಮಕ ಉದ್ಯಮಿ ಅಶೋಕ್‌ ಖೇಣಿ, ಬಿಜೆಪಿಯಿಂದ ಕಾಂಗ್ರೆಸ್‌ಗೆ ಜಿಗಿದಿದ್ದ ಆನಂದ್‌ ಸಿಂಗ್‌, ಪಕ್ಷೇತರ ಶಾಸಕ ಬಿ ನಾಗೇಂದ್ರ ಕಾಂಗ್ರೆಸ್‌ ಟಿಕೆಟ್‌ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಲೈಂಗಿಕ ಪ್ರಕರಣವೊಂದರಲ್ಲಿ ಆರೋಪಕ್ಕೆ ಗುರಿಯಾಗಿ ಮುಜುಗರ ಅನುಭವಿಸಿದ್ದ ಹಿರಿಯ ನಾಯಕ ಎಚ್‌ ವೈ ಮೇಟಿ ಬಾಗಲಕೋಟೆಯಿಂದ ಸ್ಪರ್ಧೆ ಮಾಡುವುದು ಖಚಿತವಾಗಿದೆ.

ಇದನ್ನೂ ಓದಿ : ಎರಡು ಕ್ಷೇತ್ರದಲ್ಲಿ ಸಿಎಂ ಸ್ಪರ್ಧೆ ವಿಚಾರ; ನಿರ್ಧಾರ ವಿಳಂಬದಿಂದ ವರ್ಚಸ್ಸಿಗೆ ಧಕ್ಕೆ?

ಸಾರಿಗೆ ಸಚಿವ ಹಾಗೂ ಹಾಲಿ ವಿಧಾನ ಪರಿಷತ್‌ ಸದಸ್ಯ ಎಚ್‌ ಎಂ ರೇವಣ್ಣ ರಾಮನಗರ ಜಿಲ್ಲೆಯ ಚನ್ನಪಟ್ಟಣದಲ್ಲಿ ಕಣಕ್ಕಿಳಿಯುತ್ತಿದ್ದಾರೆ. ಚನ್ನಪಟ್ಟಣ ಮತ್ತು ರಾಮನಗರ ಎರಡೂ ಕ್ಷೇತ್ರಗಳಲ್ಲಿ ಜೆಡಿಎಸ್‌ನ ಎಚ್‌ ಡಿ ಕುಮಾರಸ್ವಾಮಿ ಸ್ಪರ್ಧೆ ಮಾಡುತ್ತಿರುವುದರಿಂದ ಚನ್ನಪಟ್ಟಣ ಕದನ ಕುತೂಹಲಕ್ಕೆ ಕಾರಣವಾಗಿದೆ. ಅಫಜಲಪುರದ ಶಾಸಕರಾಗಿದ್ದ ಮಾಲೀಕಯ್ಯ ಗುತ್ತೇದಾರ್‌ ಹಾಗೂ ದೇವರ ಹಿಪ್ಪರಗಿಯಿಂದ ಆಯ್ಕೆಯಾಗಿದ್ದ ಎ ಎಸ್‌ ಪಾಟೀಲ್‌ ನಡಹಳ್ಳಿ ಹಾಗೂ ಚನ್ನಪಟ್ಟಣ ಶಾಸಕ ಸಿ ಪಿ ಯೋಗೇಶ್ವರ್‌ ಅವರು ಬಿಜೆಪಿ ಸೇರಿದ್ದಾರೆ. ಆದ್ದರಿಂದ ಆ ಕ್ಷೇತ್ರಗಳಿಗೆ ನೂತನ ಅಭ್ಯರ್ಥಿಗಳ ಹೆಸರು ಘೋಷಿಸಲಾಗಿದೆ.

ಈಚೆಗೆ ನಿಧನ ಹೊಂದಿದ ಖಮರುಲ್ ಇಸ್ಲಾಂ ಅವರ ಬದಲಿಗೆ ಅವರ ಪತ್ನಿ ಫಾತಿಮಾ, ಬೇಲೂರು ಶಾಸಕ ರುದ್ರೇಗೌಡ ಅವರಿಗೆ ಪ್ರತಿಯಾಗಿ ಪತ್ನಿ ಕೀರ್ತನಾ, ಅನಾರೋಗ್ಯದಿಂದ ಬಳಲುತ್ತಿರುವ ಕಲಬುರ್ಗಿ ಗ್ರಾಮೀಣ ಶಾಸಕ ಜಿ ರಾಮಕೃಷ್ಣ ಅವರ ಬದಲಿಗೆ ಪುತ್ರ ವಿಜಯಕುಮಾರ್‌ ಅವರನ್ನು ಕಣಕ್ಕಿಳಿಸಲು ಕಾಂಗ್ರೆಸ್‌ ನಿರ್ಧರಿಸಿದೆ. ಬೆಂಗಳೂರಿನ ಸಿ ವಿ ರಾಮನ್‌ ನಗರ ಕ್ಷೇತ್ರದಲ್ಲಿ ಬೆಂಗಳೂರಿನ ಹಾಲಿ ಮೇಯರ್‌ ಸಂಪತ್‌ರಾಜ್‌ ಹಾಗೂ ರಾಜಾಜಿನಗರ ಕ್ಷೇತ್ರದಲ್ಲಿ ಮಾಜಿ ಮೇಯರ್‌ ಜಿ ಪದ್ಮಾವತಿ ಅವರ ಸ್ಪರ್ಧೆಗೆ ಸಮ್ಮತಿ ನೀಡಲಾಗಿದೆ. ಆಳಂದದಲ್ಲಿ ಕೆಜೆಪಿಯಿಂದ ಗೆದ್ದಿದ್ದ ಬಿ ಆರ್‌ ಪಾಟೀಲ್‌, ಪಕ್ಷೇತರರಾದ ಸತೀಶ್‌ ಸೈಲ್‌, ಮಂಕಾಳ ಸುಬ್ಬ ವೈದ್ಯ ಕಾಂಗ್ರೆಸ್‌ ಅಭ್ಯರ್ಥಿಗಳಾಗಿ ಅದೃಷ್ಟ ಪರೀಕ್ಷೆಗೆ ಇಳಿಯಲಿದ್ದಾರೆ. ಈ ಹಿಂದೆ ಮಲ್ಲೇಶ್ವರಂ ಕ್ಷೇತ್ರದಲ್ಲಿ ಪರಾಭವಗೊಂಡಿದ್ದ ಸಚಿವ ಎಂ ಆರ್‌ ಸೀತಾರಾಂ ಅವರನ್ನು ಮತ್ತೊಮ್ಮೆ ಅಲ್ಲಿಂದಲೇ ಕಣಕ್ಕಿಳಿಸಲು ಕಾಂಗ್ರೆಸ್‌ ಮುಂದಾಗಿದೆ. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಎಂ ಡಿ ಲಕ್ಷ್ಮಿನಾರಾಯಣ, ಹೊಳೆನರಸೀಪುರ ಕ್ಷೇತ್ರದಲ್ಲಿ ಮಂಜೇಗೌಡ ಸ್ಪರ್ಧೆ ಮಾಡುತ್ತಿರುವುದು ಕುತೂಹಲ ಹುಟ್ಟಿಸಿದೆ. ಲೋಕೋಪಯೋಗಿ ಸಚಿವ ಎಚ್‌ ಸಿ ಮಹದೇವಪ್ಪ ಅವರ ಪುತ್ರ ಸುನಿಲ್‌ ಬೋಸ್‌ ಕಣದಿಂದ ಹಿಂದೆ ಸರಿದಿರುವುದು ಅಚ್ಚರಿಗೆ ಕಾರಣವಾಗಿದೆ.

ಕಾಂಗ್ರೆಸ್‌ ಕಣದ ಕಲಿಗಳು

 • ನಿಪ್ಪಾಣಿ - ಕಾಕಾಸಾಹೇಬ್‌ ಪಾಟೀಲ್‌
 • ಚಿಕ್ಕೋಡಿ ಸದಲಗಾ - ಗಣೇಶ್‌ ಹುಕ್ಕೇರಿ
 • ಅಥಣಿ - ಮಹೇಶ ಈರನಗೌಡ ಕುಮಟಳ್ಳಿ
 • ಕಾಗವಾಡ - ಶ್ರೀಮಂತ ಬಾಳಾಸಾಹೇಬ್‌ ಪಾಟೀಲ್‌
 • ಕುಡಚಿ - ಅಮಿತ್‌ ಶಾಮ ಘಾಟ್ಗೆ
 • ರಾಯಬಾಗ - ಪ್ರದೀಪ್‌ ಕುಮಾರ್‌ ಮಾಳಗಿ
 • ಹುಕ್ಕೇರಿ - ಎ ಬಿ ಪಾಟೀಲ್
 • ಅರಭಾವಿ - ಅರವಿಂದ ಮಹದೇವ ರಾವ್‌ ದಳವಾಯಿ
 • ಗೋಕಾಕ - ರಮೇಶ ಜಾರಕಿಹೊಳಿ
 • ಯಮಕನಮರಡಿ - ಸತೀಶ ಜಾರಕಿಹೊಳಿ
 • ಬೆಳಗಾವಿ ಉತ್ತರ - ಫಿರೋಜ್‌ ಶೇಠ್‌
 • ಬೆಳಗಾವಿ ದಕ್ಷಿಣ - ಎಂ ಡಿ ಲಕ್ಷ್ಮಿನಾರಾಯಣ
 • ಬೆಳಗಾವಿ ಗ್ರಾಮೀಣ - ಲಕ್ಷ್ಮಿ ಹೆಬ್ಬಾಳ್ಕರ್‌
 • ಖಾನಾಪುರ - ಅಂಜಲಿ ನಿಂಬಾಳ್ಕರ್‌
 • ಸವದತ್ತಿ ಯಲ್ಲಮ್ಮ - ವಿಶ್ವಾಸ್‌ ವಸಂತ್‌ ವೈದ್ಯ
 • ರಾಮದುರ್ಗ - ಅಶೋಕ್‌ ಪಟ್ಟಣ
 • ಮುಧೋಳ - ಸತೀಶ ಚಿನ್ನಪ್ಪ ಬಂಡಿವಡ್ಡರ್‌
 • ತೇರದಾಳ - ಉಮಾಶ್ರೀ
 • ಜಮಖಂಡಿ - ಸಿದ್ದು ನ್ಯಾಮಗೌಡ
 • ಬೀಳಗಿ - ಜೆ ಟಿ ಪಾಟೀಲ್‌
 • ಬಾದಾಮಿ - ದೇವರಾಜ ಪಾಟೀಲ್‌
 • ಬಾಗಲಕೋಟೆ - ಎಚ್‌ ವೈ ಮೇಟಿ
 • ಹುನಗುಂದ - ವಿಜಯಾನಂದ ಕಾಶಪ್ಪನವರ್
 • ಮದ್ದೇಬಿಹಾಳ - ಅಪ್ಪಾಜಿ ನಾಡಗೌಡ
 • ದೇವರ ಹಿಪ್ಪರಗಿ - ಬಾಪುಗೌಡ ಪಾಟೀಲ್‌
 • ಬಸವನ ಬಾಗೇವಾಡಿ - ಶಿವಾನಂದ ಪಾಟೀಲ್‌
 • ಬಬಲೇಶ್ವರ - ಎಂ ಬಿ ಪಾಟೀಲ್‌
 • ವಿಜಯಪುರ ನಗರ - ಅಬ್ದುಲ್‌ ಹಮೀದ್‌ ಮುಶ್ರಿಫ್‌
 • ಇಂಡಿ - ಯಶವಂತರಾಯಗೌಡ ಪಾಟೀಲ್‌
 • ಅಫಜಲಪುರ - ಎಂ ವೈ ಪಾಟೀಲ್
 • ಜೇವರ್ಗಿ - ಅಜಯ್‌ ಸಿಂಗ್‌
 • ಸುರಪುರ - ರಾಜಾ ವೆಂಕಟಪ್ಪ ನಾಯಕ್‌
 • ಶಹಾಪುರ - ಶರಣಬಸಪ್ಪ ದರ್ಶನಾಪುರ
 • ಯಾದಗಿರಿ - ಎ ಬಿ ಮಾಲಕ ರೆಡ್ಡಿ
 • ಗುರುಮಠಕಲ್ ‌- ಬಾಬುರಾವ್‌ ಚಿಂಚನಸೂರ
 • ಚಿತ್ತಾಪುರ - ಪ್ರಿಯಾಂಕ್‌ ಖರ್ಗೆ
 • ಸೇಡಂ - ಶರಣಪ್ರಕಾಶ್‌ ಪಾಟೀಲ್‌
 • ಚಿಂಚೋಳಿ - ಉಮೇಶ್‌ ಜಾಧವ್‌
 • ಕಲಬುರ್ಗಿ ಗ್ರಾಮೀಣ - ವಿಜಯಕುಮಾರ್‌
 • ಕಲಬುರ್ಗಿ ದಕ್ಷಿಣ - ಅಲ್ಲಮ ಪ್ರಭು ಪಾಟೀಲ್‌
 • ಕಲಬುರ್ಗಿ ಉತ್ತರ - ಕೆ ಫಾತಿಮಾ
 • ಆಳಂದ - ಬಿ ಆರ್‌ ಪಾಟೀಲ್
 • ಬಸವಕಲ್ಯಾಣ - ಬಿ ನಾರಾಯಣ ರಾವ್‌
 • ಹುಮ್ನಾಬಾದ್ ‌- ರಾಜಶೇಖರ ಪಾಟೀಲ್‌
 • ಬೀದರ್‌ ದಕ್ಷಿಣ - ಅಶೋಕ್‌ ಖೇಣಿ
 • ಬೀದರ್ ‌- ರಹೀಂ ಖಾನ್‌
 • ಭಾಲ್ಕಿ - ಈಶ್ವರ್‌ ಖಂಡ್ರೆ
 • ಔರಾದ್ ‌- ವಿಜಯಕುಮಾರ್‌
 • ರಾಯಚೂರು ಗ್ರಾಮೀಣ - ಬಸನಗೌಡ
 • ಮಾನ್ವಿ - ಜಿ ಹಂಪಯ್ಯ ನಾಯಕ್‌
 • ದೇವದುರ್ಗ - ರಾಜಶೇಖರ ನಾಯಕ್‌
 • ಲಿಂಗಸುಗೂರು - ದುರ್ಗಪ್ಪ ಹೂಳಗೆರೆ
 • ಸಿಂಧನೂರು - ಹಂಪನಗೌಡ ಬಾದರ್ಲಿ
 • ಮಸ್ಕಿ - ಪ್ರತಾಪ್‌ಗೌಡ ಪಾಟೀಲ್‌
 • ಕುಷ್ಟಗಿ - ಅಮರೇಗೌಡ ಪಾಟೀಲ್‌
 • ಕನಕಗಿರಿ - ಶಿವರಾಜ ತಂಗಡಗಿ
 • ಗಂಗಾವತಿ - ಇಕ್ಬಾಲ್‌ ಅನ್ಸಾರಿ
 • ಯಲಬುರ್ಗಾ - ಬಸವರಾಜ ರಾಯರೆಡ್ಡಿ
 • ಕೊಪ್ಪಳ - ರಾಘವೇಂದ್ರ ಹಿಟ್ನಾಳ್‌
 • ಶಿರಹಟ್ಟಿ - ರಾಮಕೃಷ್ಣ ಸಿದ್ದಲಿಂಗಪ್ಪ ದೊಡ್ಡಮನಿ
 • ಗದಗ - ಎಚ್‌ ಕೆ ಪಾಟೀಲ್‌
 • ರೋಣ - ಜಿ ಎಸ್‌ ಪಾಟೀಲ್‌
 • ನರಗುಂದ - ಬಿ ಆರ್‌ ಯಾವಗಲ್‌
 • ನವಲಗುಂದ - ವಿನೋದ್‌ ಅಸೂಟಿ
 • ಕುಂದಗೋಳ - ಸಿ ಎಸ್‌ ಶಿವಳ್ಳಿ
 • ಧಾರವಾಡ - ವಿನಯ್‌ ಕುಲಕರ್ಣಿ
 • ಹುಬ್ಬಳ್ಳಿ ಧಾರವಾಡ ಪೂರ್ವ - ಪ್ರಸಾದ್‌ ಅಬ್ಬಯ್ಯ
 • ಹುಬ್ಬಳ್ಳಿ ಧಾರವಾಡ ಸೆಂಟ್ರಲ್ ‌- ಮಹೇಶ್‌ ನಾಲವಾಡ,
 • ಹುಬ್ಬಳ್ಳಿ ಧಾರವಾಡ ಪಶ್ಚಿಮ - ಮೊಹಮ್ಮದ್‌ ಇಸ್ಮಾಯಿಲ್‌ ತಮಟಗಾರ
 • ಕಲಘಟಗಿ - ಸಂತೋಷ್‌ ಲಾಡ್‌
 • ಹಳಿಯಾಳ - ಆರ್‌ ವಿ ದೇಶಪಾಂಡೆ
 • ಕಾರವಾರ - ಸತೀಶ್ ಶೈಲ್‌
 • ಕುಮಟಾ - ಶಾರದಾ ಶೆಟ್ಟಿ
 • ಭಟ್ಕಳ - ಮಂಕಾಳ್‌ ಸುಬ್ಬ ವೈದ್ಯ
 • ಶಿರಸಿ - ಭೀಮಣ್ಣ ನಾಯ್ಕ್‌
 • ಯಲ್ಲಾಪುರ - ಶಿವರಾಮ್‌ ಹೆಬ್ಬಾರ್‌
 • ಹಾನಗಲ್ - ಶ್ರೀನಿವಾಸ ಮಾನೆ
 • ಶಿಗ್ಗಾವಿ - ಸಯದ್‌ ಅಜೀಂಪೀರ್‌ ಖಾದ್ರಿ
 • ಹಾವೇರಿ - ರುದ್ರಪ್ಪ ಲಮಾಣಿ
 • ಬ್ಯಾಡಗಿ - ಎಸ್‌ ಆರ್‌ ಪಾಟೀಲ್‌
 • ಹಿರೇಕೆರೂರು - ಬಿ ಸಿ ಪಾಟೀಲ್‌
 • ರಾಣಿಬೆನ್ನೂರು - ಕೆ ಬಿ ಕೋಳಿವಾಡ
 • ಹಡಗಲಿ - ಪಿ ಟಿ ಪರಮೇಶ್ವರ್‌ ನಾಯ್ಕ್‌
 • ಹಗರಿಬೊಮ್ಮನಹಳ್ಳಿ - ಎಲ್‌ಬಿಪಿ ಭೀಮಾ ನಾಯ್ಕ್‌
 • ವಿಜಯನಗರ - ಆನಂದ್‌ ಸಿಂಗ್‌
 • ಕಂಪ್ಲಿ - ಜೆ ಎನ್‌ ಗಣೇಶ್‌
 • ಶಿರಗುಪ್ಪ - ಮುರಳಿ ಕೃಷ್ಣ
 • ಬಳ್ಳಾರಿ - ಬಿ ನಾಗೇಂದ್ರ
 • ಬಳ್ಳಾರಿ ನಗರ - ಅನಿಲ್‌ ಲಾಡ್‌
 • ಸಂಡೂರು - ತುಕಾರಾಂ
 • ಕೂಡ್ಲಿಗಿ - ರಘು ಗುಜ್ಜಾಳ್‌
 • ಮೊಳಕಾಲ್ಮೂರು - ಯೋಗೇಶ್‌ ಬಾಬು
 • ಚಳ್ಳಕೆರೆ - ಟಿ ರಘುಮೂರ್ತಿ,
 • ಚಿತ್ರದುರ್ಗ - ಎಚ್‌ ಎ ಷಣ್ಮುಖಪ್ಪ
 • ಹಿರಿಯೂರು - ಸುಧಾಕರ್‌
 • ಹೊಸದುರ್ಗ - ಬಿ ಜಿ ಗೋವಿಂದಪ್ಪ
 • ಹೊಳಲ್ಕೆರೆ - ಎಚ್‌ ಆಂಜನೇಯ
 • ಜಗಳೂರು - ಎ ಎಲ್‌ ಪುಷ್ಪಾ
 • ಹರಪನಹಳ್ಳಿ - ಎಂ ಪಿ ರವೀಂದ್ರ
 • ಹರಿಹರ - ಎಸ್‌ ರಾಮಪ್ಪ
 • ದಾವಣಗೆರೆ ಉತ್ತರ - ಎಸ್‌ ಎಸ್‌ ಮಲ್ಲಿಕಾರ್ಜುನ
 • ದಾವಣಗೆರೆ ದಕ್ಷಿಣ - ಶಾಮನೂರು ಶಿವಶಂಕರಪ್ಪ
 • ಮಾಯಕೊಂಡ - ಕೆ ಎಸ್‌ ಬಸವರಾಜ
 • ಚನ್ನಗಿರಿ - ವಡ್ನಾಳ್‌ ರಾಜಣ್ಣ
 • ಹೊನ್ನಾಳಿ - ಡಿ ಜಿ ಶಾಂತನಗೌಡ
 • ಶಿವಮೊಗ್ಗ ಗ್ರಾಮೀಣ - ಎಸ್‌ ಕೆ ಶ್ರೀನಿವಾಸ ಕರಿಯಣ್ಣ
 • ಭದ್ರಾವತಿ - ಬಿ ಕೆ ಸಂಗಮೇಶ್ವರ
 • ಶಿವಮೊಗ್ಗ - ಕೆ ಬಿ ಪ್ರಸನ್ನ ಕುಮಾರ್‌
 • ತೀರ್ಥಹಳ್ಳಿ - ಕಿಮ್ಮನೆ ರತ್ನಾಕರ
 • ಶಿಕಾರಿಪುರ - ಜಿ ಬಿ ಮಾಲತೇಶ್‌
 • ಸೊರಬ - ರಾಜು ತಲ್ಲೂರ್‌
 • ಸಾಗರ - ಕಾಗೋಡು ತಿಮ್ಮಪ್ಪ
 • ಬೈಂದೂರು - ಕೆ ಗೋಪಾಲ ಪೂಜಾರಿ
 • ಕುಂದಾಪುರ - ರಾಕೇಶ್‌ ಮಳ್ಳಿ
 • ಉಡುಪಿ - ಪ್ರಮೋದ್‌ ಮಧ್ವರಾಜ್‌
 • ಕಾಪು - ವಿನಯಕುಮಾರ್‌ ಸೊರಕೆ
 • ಕಾರ್ಕಳ - ಎಚ್‌ ಗೋಪಾಲ ಭಂಡಾರಿ
 • ಶೃಂಗೇರಿ - ಟಿ ಡಿ ರಾಜೇಗೌಡ
 • ಮೂಡಿಗೆರೆ - ಮೋಟಮ್ಮ
 • ಚಿಕ್ಕಮಗಳೂರು - ಬಿ ಎಲ್‌ ಶಂಕರ್‌
 • ತರೀಕೆರೆ - ಎಸ್ ಎಂ ನಾಗರಾಜು
 • ಕಡೂರು - ಕೆ ಎಸ್‌ ಆನಂದ್‌
 • ಚಿಕ್ಕನಾಯಕನಹಳ್ಳಿ - ಸಂತೋಷ್‌ ಜಯಚಂದ್ರ
 • ತಿಪಟೂರು - ಬಿ ನಂಜಮರಿ,
 • ತುರುವೇಕೆರೆ - ರಂಗಪ್ಪ ಚೌಧರಿ
 • ಕುಣಿಗಲ್ ‌- ಎಚ್‌ ಡಿ ರಂಗನಾಥ್‌
 • ತುಮಕೂರು ನಗರ - ರಫೀಕ್‌ ಅಹ್ಮದ್‌ ಎಸ್‌
 • ತುಮಕೂರು ಗ್ರಾಮೀಣ - ಆರ್ ಎಸ್‌ ರವಿಕುಮಾರ್‌
 • ಕೊರಟಗೆರೆ - ಜಿ ಪರಮೇಶ್ವ
 • ಗುಬ್ಬಿ - ಕುಮಾರ್‌ ಕೆ
 • ಶಿರಾ - ಟಿ ಬಿ ಜಯಚಂದ್ರ
 • ಪಾವಗಡ - ವೆಂಕಟರಮಣಪ್ಪ
 • ಮಧುಗಿರಿ - ಕೆ ಎನ್‌ ರಾಜಣ್ಣ
 • ಗೌರಿಬಿದನೂರು - ಎನ್‌ ಎಚ್ ಶಿವಶಂಕರ ರೆಡ್ಡಿ
 • ಬಾಗೇಪಲ್ಲಿ - ಎಸ್‌ ಎನ್‌ ಸುಬ್ಬಾರೆಡ್ಡಿ
 • ಚಿಕ್ಕಬಳ್ಳಾಪುರ - ಕೆ ಸುಧಾಕರ್‌
 • ಶಿಡ್ಲಘಟ್ಟ - ವಿ ಮುನಿಯಪ್ಪ
 • ಚಿಂತಾಮಣಿ - ವಾಣಿ ಕೃಷ್ಣಾರೆಡ್ಡಿ
 • ಶ್ರೀನಿವಾಸಪುರ - ಕೆ ಆರ್‌ ರಮೇಶ್‌ ಕುಮಾರ್‌
 • ಮುಳಬಾಗಿಲು - ಜಿ ಮಂಜುನಾಥ್‌
 • ಕೆಜಿಎಫ್ ‌- ರೂಪಾ ಶಶಿಧ
 • ಬಂಗಾರಪೇಟೆ - ಕೆ ಎಂ ನಾರಾಯಣ ಸ್ವಾಮಿ
 • ಕೋಲಾರ - ಸಯದ್‌ ಜಮೀರ್ ಪಾಷಾ
 • ಮಾಲೂರು - ಕೆ ವೈ ನಂಜೇಗೌಡ
 • ಯಲಹಂಕ - ಎಂ ಎನ್‌ ಗೋಪಾಲಕೃಷ್ಣ
 • ಕೆ ಆರ್‌ ಪುರಂ - ಬಿ ಎ ಬಸವರಾ
 • ಬ್ಯಾಟರಾಯನಪುರ - ಕೃಷ್ಣ ಬೈರೇ ಗೌಡ
 • ಯಶವಂತಪುರ - ಎಸ್‌ ಟಿ ಸೋಮಶೇಖರ್‌
 • ರಾಜರಾಜೇಶ್ವರಿ ನಗರ - ಮುನಿರತ್ನ
 • ದಾಸರಹಳ್ಳಿ - ಪಿ ಎನ್‌ ಕೃಷ್ಣಮೂರ್ತಿ
 • ಮಹಾಲಕ್ಷ್ಮಿ ಲೇಔಟ್ ‌- ಎಚ್‌ ಎಸ್‌ ಮಂಜುನಾಥ್‌,
 • ಮಲ್ಲೇಶ್ವರಂ - ಎಂ ಆರ್‌ ಸೀತಾರಾಂ
 • ಹೆಬ್ಬಾಳ - ಬಿ ಎಸ್‌ ಸುರೇಶ್‌
 • ಪುಲಕೇಶಿ ನಗರ - ಅಖಂಡ ಶ್ರೀನಿವಾಸಮೂರ್ತಿ
 • ಸರ್ವಜ್ಞನಗರ - ಕೆ ಜೆ ಜಾರ್ಜ್‌
 • ಸಿ ವಿ ರಾಮನ್‌ ನಗರ - ಸಂಪತ್‌ರಾಜ್‌
 • ಶಿವಾಜಿನಗರ - ಆರ್‌ ರೋಶನ್‌ ಬೇಗ್‌
 • ಗಾಂಧಿನಗರ - ದಿನೇಶ್‌ ಗುಂಡೂರಾವ್‌
 • ರಾಜಾಜಿನಗರ - ಜಿ ಪದ್ಮಾವತಿ
 • ಗೋವಿಂದರಾಜ ನಗರ - ಪ್ರಿಯಕೃಷ್ಣ
 • ವಿಜಯನಗರ - ಎಂ ಕೃಷ್ಣಪ್ಪ
 • ಚಾಮರಾಜಪೇಟೆ - ಜಮೀರ್‌ ಅಹ್ಮದ್‌ ಖಾನ್‌
 • ಚಿಕ್ಕಪೇಟೆ - ಆರ್‌ ವಿ ದೇವರಾಜ್‌
 • ಬಸವನಗುಡಿ - ಎಂ ಬೋರೇಗೌಡ
 • ಪದ್ಮನಾಭನಗರ - ಬಿ ಗುರಪ್ಪ ನಾಯ್ಡು
 • ಬಿ ಟಿ ಎಂ ಲೇಔಟ್ ‌- ರಾಮಲಿಂಗಾ ರೆಡ್ಡಿ
 • ಜಯನಗರ - ಸೌಮ್ಯಾ ಆರ್‌
 • ಮಹದೇವಪುರ - ಎ ಸಿ ಶ್ರೀನಿವಾಸ್‌
 • ಬೊಮ್ಮನಹಳ್ಳಿ - ಸುಷ್ಮಾ ರಾಜಗೋಪಾಲ್‌ ರೆಡ್ಡಿ
 • ಬೆಂಗಳೂರು ದಕ್ಷಿಣ - ಆರ್‌ ಕೆ ರಮೇಶ್‌
 • ಆನೇಕಲ್ ‌- ಬಿ ಶಿವಣ್ಣ
 • ಹೊಸಕೋಟೆ - ಎನ್‌ ನಾಗರಾಜು (ಎಂಟಿಬಿ)
 • ದೇವನಹಳ್ಳಿ - ವೆಂಕಟಸ್ವಾಮಿ
 • ನೆಲಮಂಗಲ - ಆರ್‌ ನಾರಾಯಣಸ್ವಾಮಿ
 • ಮಾಗಡಿ - ಎಚ್‌ ಸಿ ಬಾಲಕೃಷ್ಣ
 • ರಾಮನಗರ - ಎಚ್‌ ಎ ಇಕ್ಬಾಲ್‌ ಹುಸೇನ್‌
 • ಕನಕಪುರ - ಡಿ ಕೆ ಶಿವಕುಮಾರ್‌
 • ಚನ್ನಪಟ್ಟಣ - ಎಚ್‌ ಎಂ ರೇವಣ್ಣ
 • ಮಳವಳ್ಳಿ - ಪಿ ಎಂ ನರೇಂದ್ರಸ್ವಾಮಿ
 • ಮದ್ದೂರು - ಜಿ ಎಂ ಮಧು
 • ಮಂಡ್ಯ - ಎಂ ಎಚ್‌ ಅಂಬರೀಷ್‌
 • ಶ್ರೀರಂಗಪಟ್ಟಣ - ರಮೇಶ್‌ ಬಂಡಿಸಿದ್ದೇಗೌಡ
 • ನಾಗಮಂಗಲ - ಚಲುವರಾಯಸ್ವಾಮಿ
 • ಕೃಷ್ಣರಾಜಪೇಟೆ - ಕೆ ಬಿ ಚಂದ್ರಶೇಖರ್‌
 • ಶ್ರವಣಬೆಳಗೊಳ - ಸಿ ಎಸ್‌ ಪುಟ್ಟೇಗೌಡ
 • ಅರಸೀಕೆರೆ - ಜಿ ಬಿ ಶಶಿಧರ
 • ಬೇಲೂರು - ಕೀರ್ತನಾ ರುದ್ರೇಗೌಡ
 • ಹಾಸನ - ಮಹೇಶ್ ಎಚ್ ಕೆ
 • ಹೊಳೆನರಸೀಪುರ - ಮಂಜೇಗೌಡ
 • ಅರಕಲಗೂಡು - ಎ ಮಂಜು
 • ಸಕಲೇಶಪುರ - ಸಿದ್ದಯ್ಯ
 • ಬೆಳ್ತಂಗಡಿ - ಕೆ ವಸಂತ ಬಂಗೇರಾ
 • ಮೂಡಬಿದರೆ - ಕೆ ಅಭಯ್ ಚಂದ್ರ ಜೈನ್
 • ಮಂಗಳೂರು ನಗರ ಉತ್ತರ - ಬಿ ಎ ಮೊಹಿದ್ದೀನ್ ಭಾವಾ
 • ಮಂಗಳೂರು ನಗರ ದಕ್ಷಿಣ - ಜೆ ಆರ್‌ ಲೋಬೋ
 • ಮಂಗಳೂರು - ಯು ಟಿ ಖಾದರ್
 • ಬಂಟ್ವಾಳ - ಬಿ ರಾಮನಾಥ್ ರೈ
 • ಪುತ್ತೂರು - ಶಕುಂತಲಾ ಶೆಟ್ಟಿ
 • ಸುಳ್ಯ - ಡಾ. ಬಿ ರಘು,
 • ಮಡಿಕೇರಿ - ಎಚ್ ಎಸ್ ಚಂದ್ರಮೌಳಿ
 • ವಿರಾಜಪೇಟೆ - ಸಿ ಎಸ್ ಅರುಣ್ ಮಾಚಯ್ಯ
 • ಪಿರಿಯಾಪಟ್ಟಣ - ಕೆ ವೆಂಕಟೇಶ್
 • ಕೃಷ್ಣರಾಜನಗರ - ಡಿ ರವಿಶಂಕರ್
 • ಹುಣಸೂರು - ಎಚ್ ಪಿ ಮಂಜುನಾಥ್
 • ಹೆಗ್ಗಡದೇವನಕೋಟೆ - ಅನಿಲ್ ಕುಮಾರ್ ಸಿ
 • ನಂಜನಗೂಡು - ಕಳಲೆ ಎನ್ ಕೇಶವಮೂರ್ತಿ
 • ಚಾಮುಂಡೇಶ್ವರಿ - ಸಿದ್ದರಾಮಯ್ಯ
 • ಕೃಷ್ಣರಾಜ - ಎನ್ ಕೆ ಸೋಮಶೇಖರ್
 • ಚಾಮರಾಜ - ವಾಸು
 • ನರಸಿಂಹರಾಜ - ತನ್ವೀರ್ ಸೇಠ್
 • ವರುಣಾ - ಯತೀಂದ್ರ
 • ಟಿ ನರಸೀಪುರ - ಎಚ್ ಸಿ ಮಹದೇವಪ್ಪ
 • ಹನೂರು - ಆರ್ ನರೇಂದ್ರ
 • ಕೊಳ್ಳೇಗಾಲ - ಎ ಆರ್ ಕೃಷ್ಣಮೂರ್ತಿ
 • ಚಾಮರಾಜನಗರ - ಪುಟ್ಟರಂಗಶೆಟ್ಟಿ ಸಿ
 • ಗುಂಡ್ಲುಪೇಟೆ - ಎಂ ಸಿ ಮೋಹನ್ ಕುಮಾರಿ (ಗೀತಾ ಮಹದೇವ ಪ್ರಸಾದ್).
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More