ಲೈವ್ ವಿತ್ ಸಂಧ್ಯಾ | ಹ್ಯಾಟ್ರಿಕ್ ವಿಜಯ ಸಾಧಿಸುವರೇ ಕೃಷ್ಣ ಬೈರೇ ಗೌಡ?

ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬ್ಯಾಟರಾಯನಪುರದಲ್ಲಿ ಎರಡು ಭಾರಿ ಗೆಲುವು ಸಾಧಿಸಿರುವ ಹಾಲಿ ಶಾಸಕ ಕೃಷ್ಣ ಬೈರೇ ಗೌಡರು ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ. ಆದರೆ, ಈ ಬಾರಿ ಅವರಿಗೆ ಗೆಲುವು ಅಷ್ಟೊಂದು ಸಲೀಸಾಗಿದೆಯೇ?

ಬೆಂಗಳೂರಿನ ಅತಿ ದೊಡ್ಡ ವಿಧಾನಸಭಾ ಕ್ಷೇತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಬ್ಯಾಟರಾಯನಪುರ ಸದ್ಯ ಕಾಂಗ್ರೆಸ್ ವಶದಲ್ಲಿದೆ. ಕ್ಷೇತ್ರ ಪುನರ್ ವಿಂಗಡನೆ ಬಳಿಕ ಇಲ್ಲಿ ನಡೆಯುತ್ತಿರುವ ಮೂರನೇ ಚುನಾವಣೆ ಇದು. ಹಾಲಿ ಶಾಸಕ ಕೃಷ್ಣ ಬೈರೇ ಗೌಡರು ಈ ಕ್ಷೇತ್ರದಲ್ಲಿ ಎರಡು ಬಾರಿ ಗೆಲುವು ಸಾಧಿಸಿ, ಇದೀಗ ಹ್ಯಾಟ್ರಿಕ್ ಗೆಲುವಿನ ನಿರೀಕ್ಷೆಯಲ್ಲಿದ್ದಾರೆ.

ಸರಳ ವ್ಯಕ್ತಿತ್ವ ಹಾಗೂ ನೇರವಂತಿಕೆ ಕೃಷ್ಣ ಬೈರೇ ಗೌಡರ ಪ್ಲಸ್ ಪಾಯಿಂಟ್. ಪತ್ನಿ ಸಮೇತರಾಗಿ ಮನೆಮನೆ ಪ್ರಚಾರ ಕೈಗೊಂಡಿರುವ ಅವರು, ಸರಣಿ ಸಭೆಗಳನ್ನು ನಡೆಸುವ ಮೂಲಕ ಕಾರ್ಯಕರ್ತರನ್ನು ಹುರಿದುಂಬಿಸುವ ಕಾರ್ಯವನ್ನೂ ಕೈಗೊಂಡಿದ್ದಾರೆ. ಕಾಂಗ್ರೆಸ್ ವಶದಲ್ಲಿರುವ ಈ ಕ್ಷೇತ್ರವನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳಲು ಬಿಜೆಪಿ ಅಭ್ಯರ್ಥಿ ರವಿ ಕೂಡ ನಿರಂತರ ಪ್ರಯತ್ನದಲ್ಲಿದ್ದು, ಮತದಾರರ ಮನವೊಲಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಬ್ಯಾಟರಾಯನಪುರ ವಿಧಾನಸಭಾ ಕ್ಷೇತ್ರವು ವಾರ್ಡ್ ಹಾಗೂ ಗ್ರಾಮ ಪಂಚಾಯಿತಿ ಎರಡನ್ನೂ ಒಳಗೊಂಡಿರುವ ಕ್ಷೇತ್ರ. 7 ವಾರ್ಡ್‌ಗಳು ಹಾಗೂ 8 ಗ್ರಾಮ ಪಂಚಾಯಿತಿಗಳನ್ನು ಬ್ಯಾಟರಾಯನಪುರ ಮತಕ್ಷೇತ್ರ ಹೊಂದಿದೆ. ಅಭಿವೃದ್ಧಿಯ ವಿಚಾರಕ್ಕೆ ಬಂದರೆ, ಶಾಸಕರೇ ಹೇಳುವಂತೆ ಕ್ಷೇತ್ರದಲ್ಲಿ ಶೇ.70ರಷ್ಟು ಅಭಿವೃದ್ಧಿ ಕಾರ್ಯಗಳಾಗಿದ್ದು, ಶೇ.30ರಷ್ಟು ಬಾಕಿ ಇದೆ.

“ಕ್ಷೇತ್ರ ದೊಡ್ಡದಾಗಿರುವುದರಿಂದ ಸಹಜವಾಗಿಯೇ ಸಮಸ್ಯೆಗಳು ಕೂಡ ಇವೆ. ಅದರಲ್ಲೂ, ಗ್ರಾಮ ಪಂಚಾಯತ್ ವ್ಯಾಪ್ತಿಗೆ ಬರುವ ಪ್ರದೇಶದಲ್ಲಿ ನೀರಿನ ವ್ಯವಸ್ಥೆ, ರಸ್ತೆ ಸೌಲಭ್ಯ, ವಿದ್ಯುತ್ ಸಂಪರ್ಕದ ಕೊರತೆ ಇದೆ. ಈ ಬಗ್ಗೆ ಮುಂದಿನ ದಿನಗಳಲ್ಲಿ ಪರಿಹಾರ ನೀಡಲಾಗುವುದು,” ಎನ್ನುತ್ತಾರೆ ಶಾಸಕರು. ಆದರೆ, “ರಸ್ತೆ ಸಮಸ್ಯೆ ಕುರಿತಂತೆ ಹಲವು ಬಾರಿ ಶಾಸಕರಿಗೆ ಮನವಿ ಮಾಡಿದರೂ ಪ್ರಯೋಜನವಿಲ್ಲ. ಕಳೆದ 10 ವರ್ಷಗಳಿಂದ ಈ ಕ್ಷೇತ್ರದಲ್ಲಿ ರಸ್ತೆ ಅಭಿವೃದ್ಧಿಗೆ ಶಾಸಕರು ಮನಸ್ಸು ಮಾಡಿಲ್ಲ,” ಎಂದು ಬೇಸರ ವ್ಯಕ್ತಪಡಿಸುತ್ತಾರೆ ಮತದಾರರು.

ಕಾವೇರಿ ನೀರಿನ ಪೂರೈಕೆ ಇಲ್ಲದ ಈ ಕ್ಷೇತ್ರಕ್ಕೆ, ಶಾಸಕರ ನಿರಂತರ ಪ್ರಯತ್ನದಿಂದ ಇದೀಗ ಕಾವೇರಿ ನೀರು ಪೂರೈಕೆಯಾಗುತ್ತಿದೆ. "ಇನ್ನೂ ಕೆಲವು ವಾರ್ಡ್‌ಗಳಿಗಷ್ಟೇ ನೀರಿನ ಸಂಪರ್ಕ ಕಲ್ಪಿಸಬೇಕಿದೆ. ಈಗಾಗಲೇ ಕಾಮಗಾರಿ ಪ್ರಗತಿಯಲ್ಲಿದ್ದು, ಕೆಲವೇ ದಿನಗಳಲ್ಲಿ ಆ ಭಾಗದ ಜನರು ಕೂಡ ಕಾವೇರಿ ನೀರಿನ ಸಂಪರ್ಕ ಪಡೆಯಲಿದ್ದಾರೆ,” ಎನ್ನುತ್ತಾರೆ ಕೃಷ್ಣ ಬೈರೇ ಗೌಡ.

ಇದನ್ನೂ ಓದಿ : ಲೈವ್ ವಿತ್ ಸಂಧ್ಯಾ | ಮಹಾಲಕ್ಷ್ಮೀ ಲೇಜೌಟ್ ಜನರ ಸಮಸ್ಯೆಗಳಿಗೆ ಪರಿಹಾರವಿಲ್ಲ

ಮತದಾರರು ಕೂಡ ಶಾಸಕರ ಸಾಧನೆ ಕುರಿತಂತೆ ಮೇಲ್ನೋಟಕ್ಕೆ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದು, "ಕೃಷ್ಣ ಬೈರೇ ಗೌಡರು ಕ್ಷೇತ್ರದಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳಿಂದಾಗಿ ಇದೀಗ ಈ ಭಾಗದಲ್ಲಿ ಭೂಮಿಗೆ ಚೆನ್ನಾಗಿ ಬೆಲೆ ಬಂದಿದೆ,” ಎನ್ನುತ್ತಿದ್ದಾರೆ.

ಇನ್ನೊಂದೆಡೆ, ಬಿರುಸಿನ ಪ್ರಚಾರ ಕೈಗೊಂಡಿರುವ ಬಿಜೆಪಿ ಅಭ್ಯರ್ಥಿ ರವಿ ಅವರು, ಕ್ಷೇತ್ರದಲ್ಲಿ ಬಾಕಿ ಉಳಿದಿರುವ ಅಭಿವೃದ್ಧಿ ಕಾರ್ಯಗಳನ್ನೇ ಅಸ್ತ್ರವನ್ನಾಗಿಸಿಕೊಂಡು, ಮತದಾರರ ಗಮನ ಸೆಳೆಯುವ ಪ್ರಯತ್ನ ಮಾಡುತ್ತಿದ್ದಾರೆ. ಅಷ್ಟೇ ಅಲ್ಲದೆ, ರವಿ ಅವರ ಬೆನ್ನಿಗೆ ನಿಂತಿರುವ ಕೆಲ ಯುವಕರು ಕೂಡ, “ಈ ಬಾರಿ ಬ್ಯಾಟರಾಯನಪುರದ ಜನತೆ ಬದಲಾವಣೆ ಬಯಸಿದ್ದು, ನಾವೆಲ್ಲ ಬಿಜೆಪಿಗೆ ಬೆಂಬಲ ನೀಡುತ್ತಿದ್ದೇವೆ,” ಎನ್ನುತ್ತಿದ್ದಾರೆ.

ಉಪಚುನಾವಣೆಗೂ ಮುನ್ನ ದೇವೇಗೌಡ, ಸಿದ್ದರಾಮಯ್ಯ ರವಾನಿಸಿದ ಸಂದೇಶವೇನು?
ಶಿವಮೊಗ್ಗ ಲೋಕಸಭಾ ಉಪ ಚುನಾವಣೆ | ಒಲ್ಲದ ಮದುವೆ ಕಣದಲ್ಲಿ ಬಳುವಳಿಗಳ ಮೇಲಾಟ!
ಲಿಂಗಾಯತ ಧರ್ಮ ಕುರಿತ ಸಚಿವ ಡಿಕೆಶಿ ಕ್ಷಮಾಪಣೆ ಹಿಂದಿನ ಒಳಗುಟ್ಟುಗಳೇನು?
Editor’s Pick More