ರಾಜ್ಯಕ್ಕೆ ವಿದ್ಯುತ್ ಕೊಡುವ ರಾಯಚೂರಲ್ಲಿ ಬೆಳಕು ಇಲ್ಲದಂತಾಗಿದೆ; ಮೋದಿ ಟೀಕೆ

ಭಾನುವಾರ ಪ್ರಧಾನಿ ನರೇಂದ್ರ ಮೋದಿ ರಾಯಚೂರಿನಲ್ಲಿ ಚುನಾವಣಾ ಪ್ರಚಾರ ನಡೆಸಿದರು. ತುಂಗಭದ್ರಾ ಹೂಳೆತ್ತುವ ವಿಚಾರ ಮಾತನಾಡಿದ ಮೋದಿ, ಕಾಂಗ್ರೆಸ್ ಪಕ್ಷ ಸುಳ್ಳು ಹೇಳುತ್ತಿದೆ ಎಂದು ವಾಗ್ದಾಳಿ ನಡೆಸಿದರು.  ಪ್ರಧಾನಿಯವರ ರಾಯಚೂರು ಭಾಷಣದ ಪ್ರಮುಖ ಅಂಶಗಳು ಇಲ್ಲಿವೆ

  • ೧೯೯೧ರಲ್ಲಿ ನಾನು ರಾಯಚೂರಿಗೆ ಆಗಮಿಸಿದ್ದೆ. ಆಗ ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ೩ ಗಂಟೆಗೆ ಭಾಷಣ ಮಾಡಿದ್ದೆ. ಅಂದು ಅಪಾರ ಜನ ನನಗೆ ಬೆಂಬಲ ವ್ಯಕ್ತಪಡಿಸಿದ್ದರು. ರಾಯಚೂರಿನಲ್ಲಿ ಕಾಂಗ್ರೆಸ್ ಪಕ್ಷ ಏನೂ ಕೆಲಸ ಮಾಡಿಲ್ಲ. ಇಲ್ಲಿ ಜಾತಿ, ಭಾಷೆಯ ಹೆಸರಿನಲ್ಲಿ ರಾಜಕೀಯ ಮಾಡುತ್ತಿದ್ದಾರೆ.
  • ಚುನಾವಣೆಯಲ್ಲಿ ಯಾರು ಗೆಲ್ಲುತ್ತಾರೆ, ಯಾರು ಶಾಸಕರಾಗುತ್ತಾರೆ ಎಂಬುದು ಮುಖ್ಯವಲ್ಲ. ಯಾರು ಹೆಣ್ಣುಮಕ್ಕಳ ರಕ್ಷಣೆ ಮಾಡುತ್ತಾರೆ, ಯಾರು ಯುವಜನರಿಗೆ ಉದ್ಯೋಗ ನೀಡುತ್ತಾರೆ ಎಂಬುದು ಮುಖ್ಯ.
  • ಒಂದು ಕಡೆ ಭ್ರಷ್ಟಾಚಾರಿಗಳಿಗೆ ರಕ್ಷಣೆ ನೀಡುವ ಸರಕಾರ, ಇನ್ನೊಂದೆಡೆ ಭ್ರಷ್ಟಾಚಾರ ವಿರೋಧಿ ಸರಕಾರ. ೨೦೧೪ರ ನಂತರ ಕಾಂಗ್ರೆಸ್ ಸೋಲು ಕಾಣುತ್ತಲೇ ಬಂದಿದೆ. ಉತ್ತರಾಖಂಡ, ಉತ್ತರ ಪ್ರದೇಶ, ತ್ರಿಪುರಾ ಹೀಗೆ ದೇಶದ ಎಲ್ಲೆಡೆ ಕಮಲ ಅರಳಿದೆ.
  • ಈಗ ಕಾಂಗ್ರೆಸ್ ಹೊಸ ತಂತ್ರದೊಂದಿಗೆ ಹೊರಟಿದೆ; ಅದು ಸುಳ್ಳು ಹೇಳುವುದು. ಸಿಕ್ಕ ಸಿಕ್ಕಿಲ್ಲಿ ಸುಳ್ಳು ಹೇಳುವುದು, ಅವಕಾಶ ಸಿಕ್ಕಲ್ಲೆಲ್ಲ ಸುಳ್ಳು, ಹೊಸ ಹೊಸ ಸುಳ್ಳುಗಳು, ಜೋರಾಗಿ, ರಾಜರೋಷವಾಗಿ ಸುಳ್ಳನ್ನೇ ಆಡುತ್ತಿದ್ದಾರೆ. ಅನ್ನಭಾಗ್ಯ ಧಾನ್ಯಕ್ಕೆ ೧,೦೦೦ ಕೋಟಿ ನೀಡಿದ್ದೇವೆ. ಕಾಂಗ್ರೆಸ್ ಬಡವರ ಲೂಟಿ ಮಾಡುತ್ತಿದೆ. ರೇಷನ್ ಕಾರ್ಡಿನಲ್ಲಿ ೨.೫೦ ಕೋಟಿ ನಕಲಿ ಹೆಸರು ಸೇರಿಸಿ ಹಣ ಹೊಡೆಯುತ್ತಿದೆ.
  • ಕಾಂಗ್ರೆಸ್‌ನವರು ಸಂಸತ್‌ ಅಧಿವೇಶನ ನಡೆಯಲು ಬಿಡುತ್ತಿಲ್ಲ. ಮೋದಿ ಕೆಲಸ ಮಾಡಿ ದೇಶದ ಜನರ ವಿಶ್ವಾಸ ಗೆದ್ದರೆ ಎಂಬ ಭಯದಲ್ಲಿ ಕಾಂಗ್ರೆಸಿನವರು ಅಧಿವೇಶನ ಸರಿಯಾಗಿ ನಡೆಯಲು ಬಿಡುವುದೇ ಇಲ್ಲ. ಬಿಜೆಪಿ ಸಬ್ ಕಾ ಸಾತ್ ಎನ್ನುತ್ತಿದ್ದರೆ ಕಾಂಗ್ರೆಸ್ ಒಂದೇ ಕುಟುಂಬ ಎನ್ನುತ್ತಿದೆ.
  • ಒಬಿಸಿ ಜನರಿಗೆ ಅವರ ಹಕ್ಕುಗಳನ್ನು ನೀಡಲು ಒತ್ತಾಯಿಸುತ್ತಲೇ ಬಂದಿದ್ದಾರೆ. ಆದರೆ, ಯಾರೂ ಇದನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ನಮ್ಮ ಸರಕಾರ ಅವರಿಗಾಗಿ ಹಲವು ಯೋಜನೆಗಳನ್ನು ಜಾರಿಗೊಳಿಸಿದೆ. ಲೋಕಸಭೆಯಲ್ಲಿ ನಾವು ವಿಧೇಯಕ ಅನುಮೋದಿಸಿದರೂ ರಾಜ್ಯಸಭೆಯಲ್ಲಿ ಕಾಂಗ್ರೆಸಿಗರು ಇದನ್ನು ತಡೆಯುತ್ತಿದ್ದಾರೆ.
  • ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಮನೆಯಲ್ಲಿ ಕರೆಂಟ್ ಇರುತ್ತದೆ. ಉತ್ಪಾದನೆ ಮಾಡುವ ರಾಯಚೂರಿನಲ್ಲಿ ಇಲ್ಲ. ಆದರೆ ನಾವು ಸೌರಶಕ್ತಿಯ ಮೂಲಕ ವಿದ್ಯುತ್ ಉತ್ಪಾದಿಸುವ ಕನಸನ್ನು ಹೊತ್ತು ಸಾಗುತ್ತಿದ್ದೇವೆ. 40-50 ರುಪಾಯಿಗೆ ಎಲ್ಇಡಿ ಬಲ್ಬ್‌ ನೀಡುತ್ತಿದ್ದೇವೆ. ಆದರೆ ಕಾಂಗ್ರೆಸ್ ಸರಕಾರ ೩೫೦ ರುಪಾಯಿಗೆ ಬಲ್ಬ್‌ ನೀಡುತ್ತಿತ್ತು. ಹಾಗಾದರೆ ಉಳಿದ ೩೦೦ ರುಪಾಯಿ ಎಲ್ಲಿ ಹೋಗುತ್ತಿತ್ತು?
  • ರೈತಬಂಧು ಯೋಜನೆಗಾಗಿ ನಾನು ಕರ್ನಾಟಕ ಬಿಜೆಪಿ ಹಾಗೂ ಯಡಿಯೂರಪ್ಪ ಅವರನ್ನು ಅಭಿನಂದಿಸುತ್ತೇನೆ. ಯಡಿಯೂರಪ್ಪ ವಚನ ಪತ್ರದಲ್ಲಿ ರೈತ ಬಂಧು ಮಾರುಕಟ್ಟೆ ಯೋಜನೆ ಜಾರಿಗೊಳಿಸಲಿದ್ದಾರೆ. ಬಿಜೆಪಿಯಿಂದ ತುಂಗಭದ್ರಾ ಹೂಳು ತೆಗೆಸುವ ನಿರ್ಧಾರ ಮಾಡಿದೆ. ಮಹಾರಾಷ್ಟ್ರದ ಜಲಾಶಯದಲ್ಲಿ ಹೂಳೆತ್ತುವ ಮೂಲಕ ಹೆಚ್ಚು ನೀರು ಸಂಗ್ರಹವಾಗುವಂತೆ ಮಾಡಲಾಗುತ್ತಿದೆ. ಕರ್ನಾಟಕ ಹೂಳೆತ್ತಲು ಯಾವ ಕ್ರಮ ಕೈಗೊಂಡಿದೆ ? ಹಟ್ಟಿ ಚಿನ್ನದ ಗಣಿ ಅಭಿವೃದ್ಧಿಗೆ ಏನು ಮಾಡಿದೆ?
  • ಇಂದು ಜಾಗತಿಕವಾಗಿ ಭಾರತ ಪ್ರಶಂಸೆಗೊಳಗಾಗಿದೆ. ಶ್ರೀಲಂಕಾ, ಬಾಂಗ್ಲಾದೇಶ, ಅಮೆರಿಕ, ಜರ್ಮನಿ ವಿಶ್ವಾದ್ಯಂತ ಪ್ರಮುಖ ನಾಯಕರು ಭಾರತವನ್ನು ಹೊಗಳುತ್ತಿದ್ದಾರೆ. ವಿದೇಶಗಳಲ್ಲಿ ಭಾರತದ ಗಂಟೆ ಮೊಳಗುತ್ತಿದೆ. ಇದಕ್ಕೆ ನೀವೇ ಕಾರಣ.
  • ಕಾಂಗ್ರೆಸಿಗರು ಸ್ವಾಮಿನಾಥನ್ ಆಯೋಗವನ್ನು ಅಲಮಾರಿನಲ್ಲಿ ಇಟ್ಟಿದ್ದರು. ನಾನು ಆಯೋಗ ಜಾರಿ ಮಾಡಿದ್ದೇನೆ.
ಇದನ್ನೂ ಓದಿ : ನಿಂತಲ್ಲೇ ನಿಂತ ಮಹದಾಯಿ, ಸುಳ್ಳಿಗೆ ಸಿಕ್ಕ ಕಪ್ಪತಗುಡ್ಡ; ಮೋದಿ ಮಾತಿಗೆ ಜನಾಕ್ರೋಶ
ಚಾಣಕ್ಯಪುರಿ | ದೇವೇಗೌಡ ಮತ್ತು ಸಿದ್ದರಾಮಯ್ಯ ಗುರು-ಶಿಷ್ಯರಲ್ಲ!
ಕೋರ್ಟ್‌ ಕದನ ಗೆದ್ದ ತಮಿಳುನಾಡು ಸಿಎಂ ಪಳನಿಸ್ವಾಮಿ ಮುಂದಿರುವ ಸವಾಲುಗಳೇನು?
ದಕ್ಷಿಣದಲ್ಲಿ ಬಿಜೆಪಿಗೆ ಬಾಗಿಲು ಮುಚ್ಚುವ ಗೌಡರ ಹೇಳಿಕೆ ನೆನಪಿಸಿದ ಕಹಿಸತ್ಯ
Editor’s Pick More